ಒಂದು ಚಿಟಿಕೆ ಇಂಗು ಈ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ, ಆದ್ರೆ ಯಾರು ಸೇವಿಸಬಾರದು?
ನಿಮ್ಮ ದೈನಂದಿನ ಆಹಾರದಲ್ಲಿ ಒಂದು ಚಿಟಿಕೆ ಇಂಗು ಸೇರಿಸುವುದರಿಂದ ಜೀರ್ಣಕ್ರಿಯೆ ಸುಧಾರಣೆ, ರಕ್ತದೊತ್ತಡ ನಿಯಂತ್ರಣ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ಸುಲಭ ಪರಿಹಾರ ಸಿಗುತ್ತದೆ.

ಇಂಗು ಸೇವನೆಯ ಅದ್ಭುತ ಆರೋಗ್ಯ ಪ್ರಯೋಜನಗಳು
ಕೇವಲ ಒಂದು ಚಿಟಿಕೆ ಇಂಗು ನಿಮ್ಮ ಅನೇಕ ಆರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ದೂರ ಮಾಡಬಲ್ಲದು.
ಇಂಗು ಕೇವಲ ರುಚಿಗಲ್ಲ, ಆರೋಗ್ಯಕ್ಕೂ ಸೈ
ಆಹಾರದ ರುಚಿ ಮತ್ತು ಘಮ ಹೆಚ್ಚಿಸಲು ನಾವು ಇಂಗು ಬಳಸುತ್ತೇವೆ. ಆದರೆ ಇದು ಕೇವಲ ಪರಿಮಳಕ್ಕೆ ಮಾತ್ರವಲ್ಲ, ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನೂ ಹೊಂದಿದೆ.
ಅಜೀರ್ಣ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗೆ ಪರಿಹಾರ
ದಿನನಿತ್ಯದ ಆಹಾರದಲ್ಲಿ ಇಂಗು ಬಳಸುವುದರಿಂದ ಅಜೀರ್ಣ, ಗ್ಯಾಸ್ಟ್ರಿಕ್ ಸಮಸ್ಯೆಗಳು ದೂರವಾಗುತ್ತವೆ. ಇದು ಹೊಟ್ಟೆಯ ಹುಳುಗಳ ಬಾಧೆ ಮತ್ತು ನೋವನ್ನು ಕಡಿಮೆ ಮಾಡುತ್ತದೆ.
ರಕ್ತದೊತ್ತಡ (BP) ನಿಯಂತ್ರಿಸುತ್ತದೆ
ಬಿಪಿ ರೋಗಿಗಳಿಗೆ ಇಂಗು ತುಂಬಾ ಒಳ್ಳೆಯದು. ಪ್ರತಿದಿನ ಇಂಗು ಸೇವಿಸುವುದರಿಂದ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದಿಲ್ಲ ಮತ್ತು ಬಿಪಿ ನಿಯಂತ್ರಣದಲ್ಲಿರುತ್ತದೆ.
ಕೆಮ್ಮಿನಿಂದ ತ್ವರಿತ ರಿಲೀಫ್
ಸಾಮಾನ್ಯ ಕೆಮ್ಮು, ನಾಯಿ ಕೆಮ್ಮು ಮತ್ತು ಅಸ್ತಮಾದಂತಹ ಸಮಸ್ಯೆಗಳಿಂದ ಶೀಘ್ರ ಪರಿಹಾರ ಪಡೆಯಲು ಹಾಲಿಗೆ ಸ್ವಲ್ಪ ಇಂಗು ಬೆರೆಸಿ ಕುಡಿಯಿರಿ.
ಮುಟ್ಟಿನ ನೋವು ಶಮನ
ಮುಟ್ಟಿನ ಸಮಯದಲ್ಲಿ ಕಾಡುವ ವಿಪರೀತ ಹೊಟ್ಟೆನೋವನ್ನು ಕಡಿಮೆ ಮಾಡಲು ಇಂಗು ಸಹಾಯ ಮಾಡುತ್ತದೆ. ಇದು ದೇಹದಲ್ಲಿ ರಕ್ತಸಂಚಾರವನ್ನು ಸುಗಮಗೊಳಿಸುತ್ತದೆ.
ತಲೆನೋವು ಕಡಿಮೆ ಮಾಡುತ್ತದೆ
ವಿಪರೀತ ತಲೆನೋವು ಇದ್ದರೆ, ಒಂದು ಲೋಟ ನೀರಿಗೆ 2 ಚಿಟಿಕೆ ಇಂಗು ಹಾಕಿ ಚೆನ್ನಾಗಿ ಕುದಿಸಿ. ಈ ಉಗುರುಬೆಚ್ಚಗಿನ ನೀರನ್ನು ದಿನಕ್ಕೆ ಎರಡು ಬಾರಿ ಕುಡಿಯಿರಿ.
'ಮಣ್ಣಾಗುವ ಮುನ್ನ ಒಮ್ಮೆಯಾದರೂ ಮೂರ್ತಿಯಾಗಿ ನಿಲ್ಲಬೇಕು'- ನಟ ಕಿರಣ್ ರಾಜ್ ಮಾತಿನ ಮರ್ಮವೇನು?
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.














