Gen Zಗಳಲ್ಲಿ ಹರಡುತ್ತಿದೆ ಹೊಸ ರೋಗ… ಆಫೀಸ್ ಹೆಸರು ಹೇಳುತ್ತಿದ್ದಂತೆ ಈ ಲಕ್ಷಣಗಳು ಕಾಣಿಸ್ತವೆ
ವರದಿಗಳ ಪ್ರಕಾರ, Gen Z ಗಳು ಕಚೇರಿಗೆ ಹೋದ ತಕ್ಷಣ, ತಮ್ಮ ಎನರ್ಜಿ ಕಡಿಮೆಯಾಗುತ್ತೆ ಎಂದು ಭಾವಿಸುತ್ತಾರಂತೆ. ಈ ಸಮಸ್ಯೆಯನ್ನು Gen Z ಬರ್ನ್ಔಟ್ ಎಂದು ಕರೆಯುತ್ತಾರೆ. Gen Z ಕಚೇರಿಗೆ ಹೋದ ತಕ್ಷಣ ಬರ್ನ್ಔಟ್ ಆಗೋದು ಯಾಕೆ ಅನ್ನೋದನ್ನು ನೋಡೋಣ.

Gen Z ಗೆ ಹರಡುತ್ತಿದೆ ಹೊಸ ರೋಗ
Gen Z ಟ್ರೆಂಡ್ ಇದೀಗ ಬದಲಾಗಿದೆ. ಅದೇ 9 ಟು 5 ವರ್ಕ್ ಕಲ್ಚರ್ ತಪ್ಪಿಸಿಕೊಳ್ಳಲು, ಸುಲಭವಾಗಿ ಕೆಲಸ ಮಾಡಲು ಸಾಧ್ಯವಾಗುವಂತಹ ಉದ್ಯೋಗಗಳು ಮತ್ತು ಕೋರ್ಸ್‌ಗಳನ್ನು ಹೆಚ್ಚಾಗಿ ಹುಡುಕುತ್ತಾರೆ. ಆದರೂ 9 ಟು 5 ಕೆಲಸಕ್ಕೆ ಒಗ್ಗಿಕೊಳ್ಳಲು ಸಾಧ್ಯವಾಗದೇ, ಜನರು ಹೊಸ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದಕ್ಕೆ Gen Z ಬರ್ನ್‌ಔಟ್ ಎಂದು ಹೆಸರಿಸಲಾಗಿದೆ.
ಬರ್ನ್ ಔಟ್ ಎಂದರೇನು?
ಉದ್ಯೋಗಿಯ ಕೆಲಸದ ನಿರೀಕ್ಷೆಗಳು ಮತ್ತು ಕೆಲಸದ ಸ್ಥಳದ ಬೇಡಿಕೆಗಳ ನಡುವೆ ಹೊಂದಿಕೆಯಾಗದಿದ್ದಾಗ ಬರ್ನ್ ಔಟ್ ಸಂಭವಿಸುತ್ತದೆ. ಇದು ಒಬ್ಬ ವ್ಯಕ್ತಿಗೆ ತನ್ನ ಕೆಲಸ ಮೇಲೆ ಮಾನಸಿಕವಾಗಿ ಗಮನ ಹರಿಸಲು ಸಾಧ್ಯವಾಗದೇ ಇರುವಂತಹ ಸ್ಥಿತಿಯನ್ನು ಬರ್ನ್ ಔಟ್ ಎನ್ನಲಾಗುತ್ತದೆ.
ಅತಿಯಾದ ಕೆಲಸದ ಹೊರೆ
ಕೆಲಸದ ಸ್ಥಳದಲ್ಲಿ ಅಸ್ಪಷ್ಟತೆ, ಅತಿಯಾದ ಕೆಲಸದ ಹೊರೆ, ಅಥವಾ ಪಾತ್ರವನ್ನು ನಿರ್ವಹಿಸಲು ಅಗತ್ಯವಾದ ಸಂಪನ್ಮೂಲಗಳು ಮತ್ತು ಕೌಶಲ್ಯಗಳ ಕೊರತೆಯಂತಹ ಹಲವು ಕಾರಣಗಳಿಂದಾಗಿ Gen Zಗಳಲ್ಲಿ ಬರ್ನ್ ಔಟ್ ಸಂಭವಿಸಬಹುದು.
Gen Zಗಳಿಗೆ ಹರಡುತ್ತಿರುವ ಕಾಯಿಲೆ
ಸಾಮಾನ್ಯವಾಗಿ Gen Z ಗಳಲ್ಲಿ, ಅದರಲ್ಲಿ ಹೆಚ್ಚಾಗಿ ಮಹಿಳೆಯರು ಮತ್ತು ಕಡಿಮೆ ಅನುಭವ ಹೊಂದಿರುವವರು ಬರ್ನ್ಔಟ್ ಗೆ ಹೆಚ್ಚು ಗುರಿಯಾಗುತ್ತಾರೆ ಎಂದು ಸಂಶೋಧನೆ ತೋರಿಸುತ್ತದೆ. ಇದು ಕೇವಲ ವೈಯಕ್ತಿಕ ಸಮಸ್ಯೆಯಲ್ಲ. ಕೆಲಸದ ಸ್ಥಳದಲ್ಲಿ ಒತ್ತಡ ಹೆಚ್ಚಾದಾಗ ಇದು ಖಂಡಿತವಾಗಿಯೂ ಸಂಭವಿಸುತದೆ.
ಮೂರು ಹಂತಗಳ ಬರ್ನ್ ಔಟ್
ಬರ್ನ್ ಔಟ್ ಇದು ದೇಹ ಮತ್ತು ಮನಸ್ಸಿನ ಮೇಲೆ ಮೂರು ಹಂತಗಳಲ್ಲಿ ಪರಿಣಾಮ ಬೀರುತ್ತದೆ. ಮೊದಲನೆಯದಾಗಿ, ಇದು ಆಯಾಸವನ್ನು ಉಂಟುಮಾಡುತ್ತದೆ. ನಂತರ, ಉದ್ಯೋಗಿ ನಿರಾಸಕ್ತಿ ಅಥವಾ ನಿರ್ಲಿಪ್ತತೆಯ ಭಾವನೆಯನ್ನು ಬೆಳೆಸಿಕೊಳ್ಳುತ್ತಾನೆ, ಇದರಿಂದ ಅವರು ಕೆಲಸದಿಂದ ಸಂಪೂರ್ಣ ಸಂಪರ್ಕ ಕಡಿತಗೊಳ್ಳುತ್ತಾರೆ. ಅಂತಿಮವಾಗಿ, ವ್ಯಕ್ತಿಯು ತಮ್ಮ ಸ್ವಂತ ಸಾಧನೆಗಳು ಮತ್ತು ಸಾಮರ್ಥ್ಯಗಳಲ್ಲಿ ವಿಶ್ವಾಸವನ್ನು ಕಳೆದುಕೊಳ್ಳುತ್ತಾನೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

