ಜೆನ್ ಜಿ ಉದ್ಯೋಗಿಯ ಚಾಟ್ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದ್ರಲ್ಲಿ ಉದ್ಯೋಗಿ ಟಾಕ್ಸಿಕ್ ಬಾಸ್ ಗೆ ಉತ್ತರ ನೀಡಿದ್ದಾರೆ. ಇದನ್ನು ನೋಡಿದ ಬಳಕೆದಾರರು ಇದು ಜೆನ್ ಜಿಗಳಿಂದ ಮಾತ್ರ ಸಾಧ್ಯ ಅಂತ ಕಮೆಂಟ್ ಮಾಡಿದ್ದಾರೆ.
ಜೆನ್ ಜಿ (Gen Z )ಗಳ ಆಲೋಚನೆ ಸಂಪೂರ್ಣ ಭಿನ್ನವಾಗಿದೆ. ಅವರು ಯಾವ್ದಕ್ಕೂತಲೆ ಕೆಡಿಸಿಕೊಳ್ಳೋದಿಲ್ಲ. ಒತ್ತಡದ ಕೆಲ್ಸವಾದ್ರೆ ಮುಂದೇನಾಗ್ಬಹುದು ಅನ್ನೋದನ್ನು ಆಲೋಚಿಸದೆ ನೇರವಾಗಿ ಕೆಲ್ಸಕ್ಕೆ ರಿಸೈನ್ ಮಾಡಿ ಬರ್ತಾರೆ. ಇದಕ್ಕೆ ಈಗ ಇನ್ನೊಂದು ಎಗ್ಸಾಂಪಲ್ ಸಿಕ್ಕಿದೆ.
ಜನರೇಷನ್ ಝಡ್ ಉದ್ಯೋಗಿ ಮತ್ತು ಅವರ ಮ್ಯಾನೇಜರ್ ನಡುವಿನ ವಾಟ್ಸಾಪ್ ಸಂಭಾಷಣೆ ವೈರಲ್ ಆಗುತ್ತಿದೆ. ಯುವ ಪೀಳಿಗೆ ಟಾಕ್ಸಿಕ್ ಕೆಲಸದ ಸಂಸ್ಕೃತಿಯನ್ನು ಸಹಿಸುವುದಿಲ್ಲ ಎಂಬುದನ್ನು ಇದು ಎತ್ತಿ ತೋರಿಸುತ್ತದೆ. ಉದ್ಯೋಗಿ ತನ್ನ ಚಿಕ್ಕಪ್ಪನ ಸಾವಿನ ವಿಷ್ಯವನ್ನು ಬಾಸ್ ಗೆ ಹೇಳಿದ್ದಾನೆ, ಕುಟುಂಬಸ್ಥರು ದುಃಖದಲ್ಲಿದ್ದು ಅವರ ಜೊತೆ ಸಮಯ ಕಳೆಯಬೇಕು ಅಂತ ಉದ್ಯೋಗಿ ಹೇಳಿದ್ದಾನೆ. ಇಂಥ ಸಂದರ್ಭದಲ್ಲಿ ಸಹಾನುಭೂತಿ ತೋರಿಸುವ ಬದಲು, ಮ್ಯಾನೇಜರ್, ಕ್ಲೈಂಟ್ ಮೀಟಿಂಗ್ ನೆನಪಿಸಿದ್ದಾರೆ. ಮೊದಲು ಅದಕ್ಕೆ ಹಾಜರಾಗಲು ಹೇಳಿದ್ದಾರೆ. ತನ್ನ ಚಿಕ್ಕಪ್ಪ ತನಗೆ ಎರಡನೇ ತಂದೆಯಂತೆ, ಮೀಟಿಂಗ್ ಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಉದ್ಯೋಗಿ ಹೇಳಿದ್ದಾನೆ. ಮ್ಯಾನೇಜರ್ ಪಟ್ಟು ಬಿಡಲಿಲ್ಲ. ಕೆಲಸಕ್ಕೆ ಆದ್ಯತೆ ನೀಡುವಂತೆ ಹೇಳಿದ್ದಾರೆ. ಆದರೆ ಉದ್ಯೋಗಿ ತಾನು ಈಗಾಗಲೇ ತಡರಾತ್ರಿ ಕೆಲಸ ಮಾಡಿದ್ದೇನೆ ಮತ್ತು ಶೋಕಾಚರಣೆ ಅಗತ್ಯ ಎಂದಿದ್ದಾರೆ. ವಾದ ಮುಂದುವರೆದಿದ್ದು, ಮ್ಯಾನೇಜರ್ ವೇತನವಿಲ್ಲದೆ ರಜೆ ನೀಡುವುದಾಗಿ ಮತ್ತು ಮರಣ ಪ್ರಮಾಣಪತ್ರವನ್ನು ನೀಡುವಂತೆ ಒತ್ತಾಯಿಸಿದ್ದು, ಆಗ ಪರಿಸ್ಥಿತಿ ಉಲ್ಬಣಿಸಿದೆ.
ವೈರಲ್ ಪೋಸ್ಟ್ ನಲ್ಲಿ ಏನಿದೆ? :
ಸ್ಕ್ರೀನ್ಶಾಟ್ ಪ್ರಕಾರ, ಜೆನ್ ಜಿ ಉದ್ಯೋಗಿ ತನ್ನ ಬಾಸ್ಗೆ, ಸರ್, ನನ್ನ ಚಿಕ್ಕಪ್ಪ ನಿನ್ನೆ ರಾತ್ರಿ ನಿಧನರಾದರು ಎಂದು ನಾನು ನಿಮಗೆ ತಿಳಿಸಿದ್ದೇನೆ. ನಾನು ಇಂದು ನನ್ನ ಕುಟುಂಬದೊಂದಿಗೆ ಇರಬೇಕು. ಇದಕ್ಕೆ ಮ್ಯಾನೇಜರ್, ಇಂದು ಕ್ಲೈಂಟ್ ಮೀಟಿಂಗ್ ಇದೆ. ವರ್ಟಿಗೋ ಮುಖ್ಯ. ನೀವು ಮೀಟಿಂಗ್ಗೆ ಹಾಜರಾಗಿ ನಂತ್ರ ಹೊರಡಬಹುದು. ಅವರು ನಿಮ್ಮ ಪಾಲಕರಲ್ಲ. ಅವರ ಮಾತುಗಳಿಂದ ಆಘಾತಕ್ಕೊಳಗಾದ ಉದ್ಯೋಗಿ, ಕ್ಷಮಿಸಿ. ಎಲ್ಲಾ ಗೌರವಗಳೊಂದಿಗೆ, ಕುಟುಂಬದಲ್ಲಿ ಸಾವು,ಸಾವೇ ಆಗಿರುತ್ತದೆ. ಅವರು ನನ್ನನ್ನು ಬೆಳೆಸಲು ಸಹಾಯ ಮಾಡಿದ್ದರು. ಅವರು ನನ್ನ ಎರಡನೇ ತಂದೆ ಇದ್ದಂತೆ. ನಾನು ಮೀಟಿಂಗ್ ನಲ್ಲಿ ಕುಳಿತು ಎಲ್ಲವೂ ಸಾಮಾನ್ಯವಾಗಿದೆ ಎಂದು ನಟಿಸುತ್ತೇನೆ ಅಂತ ನೀವು ನಿರೀಕ್ಷಿಸಲು ಸಾಧ್ಯವಿಲ್ಲ ಅಂತ ಉದ್ಯೋಗಿ ಪ್ರತಿಕ್ರಿಯೆ ನೀಡಿದ್ದಾನೆ.
ಕೆಲಸದಿಂದ ವಜಾಗೊಳಿಸುತ್ತಿರುವ ಟಿಸಿಎಸ್‌ಗೆ ಬಿಗ್ ಶಾಕ್: ಉದ್ಯೋಗಿಗಳ ದೂರಿನನ್ವಯ ಕಾರ್ಮಿಕ ಇಲಾಖೆಯಿಂದ ಸಮನ್ಸ್
ಚಾಟ್ ಮುಂದುವರೆಸಿದ ಉದ್ಯೋಗಿ, ನಾನು ವಾರಾಂತ್ಯದಲ್ಲಿ ತಡರಾತ್ರಿ ಕೆಲಸ ಮಾಡಿದ್ದೇನೆ. ಈ ಕೆಲಸಕ್ಕೆ ನನ್ನೆಲ್ಲವನ್ನೂ ನೀಡಿದ್ದೇನೆ. ಆದರೆ ಈಗ, ನಾನು ನನ್ನ ಕುಟುಂಬದೊಂದಿಗೆ ಒಂದು ದಿನ ಕಳೆಯಬೇಕಾಗಿದೆ. ಅದು ಸಮಸ್ಯೆಯಾಗಿದ್ದರೆ, ಬಹುಶಃ ನೀವು ನಿಮ್ಮ ಉದ್ಯೋಗಿಗಳೊಂದಿಗೆ ನಿಮ್ಮ ನಡವಳಿಕೆಯನ್ನು ಮರುಪರಿಶೀಲಿಸಬೇಕು ಅಂತ ಮೆಸ್ಸೇಜ್ ಮಾಡಿದ್ದಾರೆ.
ತನ್ನ ಜೂನಿಯರ್ನ ಪ್ರತಿಕ್ರಿಯೆಯಿಂದ ಸಿಟ್ಟಾದ ಬಾಸ್,ಅತಿಯಾಗಿ ಪ್ರತಿಕ್ರಿಯಿಸುತ್ತಿದ್ದೀರಿ ಎಂದಾಗ, ಇಲ್ಲ, ನಾನು ಹಾಗೆ ಮಾಡುತ್ತಿಲ್ಲ. ನಾನು ಮೂಲಭೂತ ಮಾನವ ಸಭ್ಯತೆಯನ್ನು ಬೆಂಬಲಿಸುತ್ತೇನೆ. ನೀವು ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ, ನಾನು ಬಹುಶಃ ತಪ್ಪು ವ್ಯಕ್ತಿಗಾಗಿ ಕೆಲಸ ಮಾಡುತ್ತಿದ್ದೇನೆ ಅಂತ ಉದ್ಯೋಗಿ ಕಮೆಂಟ್ ಮಾಡಿದ್ದಾರೆ.
ಅಜ್ಜ ತೀರಿಕೊಂಡಿದ್ದಾರೆ ರಜೆ ಬೇಕು ಎಂದ ಉದ್ಯೋಗಿ, ಲೀವ್ ಕೊಟ್ಟರೂ ಬಾಸ್ ಪ್ರತಿಕ್ರಿಯೆಗೆ ಭಾರಿ ಟೀಕೆ
ಬಹುಶಃ ನೀವು ಇನ್ನು ಮುಂದೆ ಕೆಲಸ ಮಾಡ್ದೆ ಇರಬಹುದು. ನಾಳೆ ಎಚ್ ಆರ್ ಜೊತೆ ಮಾತನಾಡಿ. ಇದು ಕಂಟ್ರೋಲ್ ತಪ್ಪುತ್ತಿದೆ. ನಾನು ನಿಮ್ಮೊಂದಿಗೆ ಮಾತನಾಡಲು ಬಯಸುವುದಿಲ್ಲ. ನೀವು ನಿಮ್ಮ ಮೇಲಧಿಕಾರಿಗಳನ್ನು ಗೌರವಿಸುವುದಿಲ್ಲ. ನಾನು ಇಂದು ಮತ್ತು ಸೋಮವಾರ ನಿಮಗೆ LWP ನೀಡುತ್ತಿದ್ದೇನೆ. ಈ ವಿಷಯ ಸ್ಪಷ್ಟವಾಗಲು ಮತ್ತು ನಿಮ್ಮನ್ನು PTO ಎಂದು ಗುರುತಿಸಲು ನಿಮ್ಮ ಚಿಕ್ಕಪ್ಪ ಅವರ ಮರಣ ಪ್ರಮಾಣಪತ್ರಗಳನ್ನು ತೋರಿಸಬೇಕು ಅಂತ ಬಾಸ್ ಮೆಸ್ಸೇಜ್ ಮಾಡಿದ್ದಾರೆ.
ಜನರೇಷನ್ ಝೆಡ್ ಮಾತ್ರ ಭಾರತೀಯ ಟಾಕ್ಸಿಕ್ ಕೆಲಸದ ಸಂಸ್ಕೃತಿಯನ್ನು ಬದಲಾಯಿಸಬಹುದು. ಈ ವ್ಯಕ್ತಿಗೆ ನಮಸ್ಕಾರ ಎನ್ನುವ ಶೀರ್ಷಿಕೆಯಲ್ಲಿ ಪೋಸ್ಟ್ ಮಾಡಲಾಗಿದ್ದು, ಇದಕ್ಕೆ ಅನೇಕ ಕಮೆಂಟ್ ಬಂದಿದೆ.
