MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಸ್ಕಿನ್ ಸ್ಟ್ರೀಮಿಂಗ್ ಟು ಸ್ಲಗ್ಗಿಂಗ್: ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು Gen Z ಮಾಡ್ತಿರೋ ವಿಭಿನ್ನ ಪ್ರಯೋಗಗಳಿವು!

ಸ್ಕಿನ್ ಸ್ಟ್ರೀಮಿಂಗ್ ಟು ಸ್ಲಗ್ಗಿಂಗ್: ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು Gen Z ಮಾಡ್ತಿರೋ ವಿಭಿನ್ನ ಪ್ರಯೋಗಗಳಿವು!

ಈಗಿನ ಜನರೇಷನ್‌ ಚರ್ಮದ ನ್ಯಾಚುರಲ್ ಸೌಂದರ್ಯವನ್ನು ಉಳಿಸಿಕೊಂಡು ಹೇಗೆ ಶೈನ್‌ ಆಗಬಹುದು ಅಂತ ಯೋಚಿಸ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸದ್ಯ 'ಸ್ಕಿನ್ ಸೈಕ್ಲಿಂಗ್'ನಂತಹ ವಿಚಿತ್ರ ಆದ್ರೂ ಎಫೆಕ್ಟಿವ್ ಆದ ಬ್ಯೂಟಿ ಹ್ಯಾಕ್‌ಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ. 

2 Min read
Author : Santosh Naik
Published : Feb 14 2026, 09:03 PM IST
Share this Photo Gallery
  • FB
  • TW
  • Linkdin
  • Whatsapp
19
ಝೆನ್‌ಝೀ ಬ್ಯೂಟಿ ಸೀಕ್ರೆಟ್ಸ್‌
Image Credit : Getty

ಝೆನ್‌ಝೀ ಬ್ಯೂಟಿ ಸೀಕ್ರೆಟ್ಸ್‌

ಈ ಕಾಲದಲ್ಲಿ ಸೌಂದರ್ಯ ಅಂದ್ರೆ ಬರೀ ಮೇಕಪ್ ಮಾಡ್ಕೊಳೋದಲ್ಲ, ಅದೊಂದು ಸ್ಟೇಟ್‌ಮೆಂಟ್. ಅದರಲ್ಲೂ ಝೆನ್‌ಝೀ (Gen Z) ಹುಡುಗಿಯರಂತೂ ಹೆವಿ ಮೇಕಪ್‌ಗಿಂತ ಚರ್ಮದ ಆರೋಗ್ಯಕ್ಕೆ ಹೆಚ್ಚು ಬೆಲೆ ಕೊಡ್ತಾರೆ. 'ಸ್ಕಿನ್-ಫಸ್ಟ್' ಅನ್ನೋದು ಇವರ ಮಂತ್ರ. ನಿಮ್ಮ ಸ್ಕಿನ್‌ಕೇರ್ ರೂಟೀನ್‌ ಅನ್ನು ಸುಲಭ ಮಾಡಿ, ಮುಖಕ್ಕೆ ಒಳ್ಳೆ ಗ್ಲೋ ತರೋಕೆ ಝೆನ್‌ಝೀ ಹುಡುಗಿಯುರು ಫಾಲೋ ಮಾಡೋ ಕೆಲವು ಬ್ಯೂಟಿ ಹ್ಯಾಕ್ಸ್‌ಗಳು ಇಲ್ಲಿವೆ.

29
ಸ್ಕಿನ್ ಸ್ಟ್ರೀಮಿಂಗ್
Image Credit : Getty

ಸ್ಕಿನ್ ಸ್ಟ್ರೀಮಿಂಗ್

ಹಿಂದೆಲ್ಲಾ 10-12 ಪ್ರಾಡಕ್ಟ್‌ಗಳನ್ನು ಬಳಸೋ 'ಮಲ್ಟಿ-ಸ್ಟೆಪ್ ಸ್ಕಿನ್‌ಕೇರ್' ರೂಟಿನ್ ಇತ್ತು. ಆದ್ರೆ ಝೆನ್‌ಝೀ ಇದನ್ನೆಲ್ಲಾ ಬಿಟ್ಟು 'ಸ್ಕಿನ್ ಸ್ಟ್ರೀಮಿಂಗ್' ಶುರು ಮಾಡಿದ್ದಾರೆ. ಅಂದ್ರೆ, ತುಂಬಾನೇ ಕಡಿಮೆ ಪ್ರಾಡಕ್ಟ್‌ಗಳನ್ನು ಬಳಸಿ ಸ್ಕಿನ್ ಕೇರ್ ಮಾಡೋದು. ಒಂದು ಕ್ಲೆನ್ಸರ್, ಒಂದು ಮಾಯಿಶ್ಚರೈಸರ್, ಮತ್ತು ಒಂದು ಸನ್‌ಸ್ಕ್ರೀನ್ - ಈ ಮೂರರ ಮೇಲೆ ಮಾತ್ರ ಗಮನ ಕೊಡೋದ್ರಿಂದ, ಚರ್ಮಕ್ಕೆ ಅನಾವಶ್ಯಕ ಕೆಮಿಕಲ್ಸ್ ಹಾಕೋದು ತಪ್ಪುತ್ತೆ.

Related Articles

Related image1
Gen Z Relationship Trend: ಜೆನ್ Zಗಳ ಹೊಸ ಟ್ರೆಂಡ್‌ ಗ್ರೀನ್‌ ಸೆಕ್ಸ್‌! ಪ್ರಣಯದಲ್ಲಿ ಪರಿಸರ ಕ್ರಾಂತಿ!
Related image2
Gen Z: ಪರ್ಫೆಕ್ಟ್ ಬಾಡಿಗಾಗಿ ಜಿಮ್ ಅಡಿಕ್ಷನ್! Instagram ಲೈಕ್ಸ್‌ಗಾಗಿ ಜೀವವನ್ನೇ ಪಣಕ್ಕಿಡುತ್ತಿದ್ದಾರೆ ಯುವಕರು!
39
ಗ್ಲಾಸ್ ಸ್ಕಿನ್ ಹ್ಯಾಕ್
Image Credit : wayhomestudio on Freepika

ಗ್ಲಾಸ್ ಸ್ಕಿನ್ ಹ್ಯಾಕ್

ಕೊರಿಯನ್ ಬ್ಯೂಟಿ ಟ್ರೆಂಡ್‌ಗಳಿಂದ ಬಂದಿರೋ ಐಡಿಯಾ ಇದು. ಮುಖ ಕನ್ನಡಿ ತರ ಹೊಳಿಬೇಕು ಅಂದ್ರೆ, ಫೌಂಡೇಶನ್ ಬಳಿಯೋ ಬದಲು ಚರ್ಮಕ್ಕೆ ಹೈಡ್ರೇಷನ್ ಕೊಡಬೇಕು. ಇದಕ್ಕಾಗಿ, ಮೊದಲು ಸೀರಮ್ ಹಚ್ಚಿ, ಅದರ ಮೇಲೆ ಮಾಯಿಶ್ಚರೈಸರ್ ಹಚ್ಚಬೇಕು. ಇದು ಚರ್ಮದ ಒಳಗೇ ತೇವಾಂಶವನ್ನು ಹಿಡಿದಿಡಲು ಸಹಾಯ ಮಾಡುತ್ತೆ.

49
ಸ್ಕಿನ್ ಸೈಕ್ಲಿಂಗ್
Image Credit : Getty

ಸ್ಕಿನ್ ಸೈಕ್ಲಿಂಗ್

ಚರ್ಮಕ್ಕೆ ರೆಸ್ಟ್ ಕೊಡುತ್ತಾ ಮಾಡುವ ಒಂದು ವಿಧಾನ ಇದು. ಇದೊಂದು ನಾಲ್ಕು ದಿನಗಳ ಸೈಕಲ್. ಮೊದಲನೇ ರಾತ್ರಿ ಎಕ್ಸ್‌ಫೋಲಿಯೇಷನ್ (ಚರ್ಮದ ಸತ್ತ ಜೀವಕೋಶ ತೆಗೆಯುವುದು), ಎರಡನೇ ರಾತ್ರಿ ರೆಟಿನಾಲ್, ಹಾಗೂ ಮೂರು ಮತ್ತು ನಾಲ್ಕನೇ ರಾತ್ರಿ ಚರ್ಮಕ್ಕೆ ಏನನ್ನೂ ಹಚ್ಚದೆ ಹಾಗೆಯೇ ಬಿಡಬೇಕು. ಇದರಿಂದ ಚರ್ಮದ ಕಿರಿಕಿರಿ ಕಡಿಮೆಯಾಗಿ, ನ್ಯಾಚುರಲ್ ಆಗಿ ಫ್ರೆಶ್ ಆಗಿರುತ್ತೆ.

59
ಮಲ್ಟಿ-ಯೂಸ್ ಪ್ರಾಡಕ್ಟ್‌ಗಳು
Image Credit : Getty

ಮಲ್ಟಿ-ಯೂಸ್ ಪ್ರಾಡಕ್ಟ್‌ಗಳು

ಲಿಪ್‌ಸ್ಟಿಕ್ ಅನ್ನೇ ಕೆನ್ನೆಗೆ ಬ್ಲಶ್ ಆಗಿ ಮತ್ತು ಕಣ್ಣುಗಳಿಗೆ ಐಶ್ಯಾಡೋ ಆಗಿ ಬಳಸೋದು ಈಗಿನ ಫ್ಯಾಷನ್. ಇದರಿಂದ ದುಡ್ಡು ಉಳಿಯುತ್ತೆ, ಜೊತೆಗೆ ಮುಖಕ್ಕೆ ಒಂದೇ ಟೋನ್‌ನ ಲುಕ್ ಸಿಗುತ್ತೆ. ಟಿಂಟೆಡ್ ಸನ್‌ಸ್ಕ್ರೀನ್‌ಗಳನ್ನು ಬಳಸೋದ್ರಿಂದ ಸನ್‌ಸ್ಕ್ರೀನ್‌ನ ಲಾಭವೂ ಸಿಗುತ್ತೆ, ಫೌಂಡೇಶನ್ ಫಿನಿಶಿಂಗ್ ಕೂಡ ಸಿಗುತ್ತೆ.

69
ಐಸ್ ವಾಟರ್ ಫೇಶಿಯಲ್
Image Credit : Getty

ಐಸ್ ವಾಟರ್ ಫೇಶಿಯಲ್

ಬೆಳಗ್ಗೆ ಎದ್ದಾಗ ಮುಖದಲ್ಲಿ ಕಾಣಿಸೋ ಊತವನ್ನು ಕಡಿಮೆ ಮಾಡಲು ಇದು ಬೆಸ್ಟ್ ದಾರಿ. ಒಂದು ಪಾತ್ರೆಯಲ್ಲಿ ಐಸ್ ಕ್ಯೂಬ್ಸ್ ಮತ್ತು ತಣ್ಣೀರು ಹಾಕಿ, ಅದರಲ್ಲಿ ಮುಖವನ್ನು ಸ್ವಲ್ಪ ಹೊತ್ತು ಮುಳುಗಿಸಿಡಿ. ಇದು ರಕ್ತ ಸಂಚಾರವನ್ನು ಹೆಚ್ಚಿಸುತ್ತೆ ಮತ್ತು ಚರ್ಮದ ರಂಧ್ರಗಳನ್ನು ಚಿಕ್ಕದಾಗಿಸಲು ಸಹಾಯ ಮಾಡುತ್ತೆ. ಸೆಲೆಬ್ರಿಟಿಗಳ ಮಧ್ಯೆಯೂ ಇದು ದೊಡ್ಡ ಟ್ರೆಂಡ್ ಆಗಿದೆ.

79
ಸ್ಲಗ್ಗಿಂಗ್
Image Credit : Getty

ಸ್ಲಗ್ಗಿಂಗ್

ಒಣ ಚರ್ಮ (dry skin) ಇರೋರಿಗೆ ಇದೊಂದು ಸೂಪರ್ ಹ್ಯಾಕ್. ರಾತ್ರಿ ಮಲಗುವ ಮುನ್ನ ಮಾಯಿಶ್ಚರೈಸರ್ ಹಚ್ಚಿ, ಅದರ ಮೇಲೆ ಸ್ವಲ್ಪ ಪೆಟ್ರೋಲಿಯಂ ಜೆಲ್ಲಿ ಹಚ್ಚಿಕೊಳ್ಳಿ. ಇದು ಚರ್ಮದ ತೇವಾಂಶ ಹೊರಹೋಗದಂತೆ ಲಾಕ್ ಮಾಡಲು ಸಹಾಯ ಮಾಡುತ್ತೆ. ಮರುದಿನ ಬೆಳಗ್ಗೆ ಎದ್ದಾಗ ನಿಮ್ಮ ಸ್ಕಿನ್ ತುಂಬಾನೇ ಸಾಫ್ಟ್ ಆಗಿರೋದನ್ನು ನೀವೇ ನೋಡಬಹುದು.

89
ಹೇರ್ ಕೇರ್: ನೋ-ಹೀಟ್ ಸ್ಟೈಲಿಂಗ್
Image Credit : Getty

ಹೇರ್ ಕೇರ್: ನೋ-ಹೀಟ್ ಸ್ಟೈಲಿಂಗ್

ಕೂದಲನ್ನು ಹಾಳು ಮಾಡುವ ಹೀಟ್ ಸ್ಟೈಲಿಂಗ್ ಟೂಲ್‌ಗಳ ಬದಲು, ಝೆನ್‌ಝೀ ಈಗ 'ನೋ-ಹೀಟ್' ಹ್ಯಾಕ್‌ಗಳನ್ನು ಫಾಲೋ ಮಾಡ್ತಿದ್ದಾರೆ. ರಾತ್ರಿ ಮಲಗುವಾಗ ಕೂದಲನ್ನು ಲೂಸ್ ಆಗಿ ಜಡೆ ಹಾಕಿಕೊಳ್ಳುವುದು ಅಥವಾ ರೇಷ್ಮೆ ಬಟ್ಟೆ ಬಳಸಿ ಕೂದಲು ಕಟ್ಟಿಕೊಂಡರೆ, ಬೆಳಗ್ಗೆ ಸುಂದರವಾದ ಕರ್ಲ್ಸ್ ಸಿಗುತ್ತೆ.

99
ಗಮನದಲ್ಲಿರಲಿ
Image Credit : Getty

ಗಮನದಲ್ಲಿರಲಿ

ಸೌಂದರ್ಯ ಅಂದ್ರೆ ಬರೀ ಹೊರಗಿನಿಂದ ಹಚ್ಚೋದು ಮಾತ್ರ ಅಲ್ಲ. ಚೆನ್ನಾಗಿ ನೀರು ಕುಡಿಯೋದು, ಸರಿಯಾಗಿ ನಿದ್ದೆ ಮಾಡೋದು ಮತ್ತು ಆರೋಗ್ಯಕರ ಊಟ ಮಾಡೋದು ಕೂಡ ದೊಡ್ಡ ಬ್ಯೂಟಿ ಹ್ಯಾಕ್‌ಗಳು ಅನ್ನೋದನ್ನು ಮರೀಬೇಡಿ. ನಿಮ್ಮ ಚರ್ಮಕ್ಕೆ ಸರಿಹೊಂದುವ ಪ್ರಾಡಕ್ಟ್‌ಗಳನ್ನೇ ಬಳಸಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಜೀವನಶೈಲಿ
ಆರೋಗ್ಯ
ಜೆನ್ ಝಡ್
ಸೌಂದರ್ಯ ಸಲಹೆಗಳು
ಸುದ್ದಿ

Latest Videos
Recommended Stories
Recommended image1
Turmeric Milk: ನಿಮ್ಮ ಮನೆಯಲ್ಲಿಯೇ ಈ 'ಅಮೃತದ ಹಾಲು' ರೆಡಿ ಮಾಡಬಹುದು, ಯಾಕೆ ಇನ್ನೂ ಈ ಬಗ್ಗೆ ತಿಳ್ಕೊಂಡಿಲ್ಲ?
Recommended image2
ಭೂಮಿ ಮೇಲಿನ ಬಂಗಾರ ಶುಂಠಿ.. ಹೀಗೆ ಸೇವಿಸಿ ನೋಡಿ, ನಿಮ್ಮ ದೇಹದ ವಯಸ್ಸು ಇಪ್ಪತು ವರ್ಷ ಕಡಿಮೆ ಆಗುತ್ತೆ!
Recommended image3
Constipation Relief: ಮಲಬದ್ಧತೆ ಕಾಡ್ತಿದ್ಯಾ? ಈ ಹೆಲ್ತಿ ಡ್ರಿಂಕ್ಸ್ ಕುಡಿದ್ರೆ ಸಾಕು, ಸಮಸ್ಯೆ ಮಾಯ!
Related Stories
Recommended image1
Gen Z Relationship Trend: ಜೆನ್ Zಗಳ ಹೊಸ ಟ್ರೆಂಡ್‌ ಗ್ರೀನ್‌ ಸೆಕ್ಸ್‌! ಪ್ರಣಯದಲ್ಲಿ ಪರಿಸರ ಕ್ರಾಂತಿ!
Recommended image2
Gen Z: ಪರ್ಫೆಕ್ಟ್ ಬಾಡಿಗಾಗಿ ಜಿಮ್ ಅಡಿಕ್ಷನ್! Instagram ಲೈಕ್ಸ್‌ಗಾಗಿ ಜೀವವನ್ನೇ ಪಣಕ್ಕಿಡುತ್ತಿದ್ದಾರೆ ಯುವಕರು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved