ಮೂವತ್ತು ವರ್ಷ ದಾಟಿದ ನಂತರ ಮಹಿಳೆಯರ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಈ ಸಮಯದಲ್ಲಿ ಕೆಲವು ಆರೋಗ್ಯ ತಪಾಸಣೆಗಳನ್ನು ಮಾಡಿಸುವುದು ಬಹಳ ಮುಖ್ಯ.
ಮಹಿಳಾ ದಿನದಂದು ಆರೋಗ್ಯದ ಬಗ್ಗೆ ಸಂಕಲ್ಪ ಮಾಡಿ. 30 ವರ್ಷ ದಾಟಿದ ಮೇಲೆ ಕೆಲವು ಟೆಸ್ಟ್ ತಪ್ಪದೇ ಮಾಡಿಸಿ. ಈ ವಯಸ್ಸಿನಲ್ಲಿ ಬಿಪಿ ಸಮಸ್ಯೆ ಹೆಚ್ಚಾಗಲು ಶುರುವಾಗುತ್ತದೆ. ಹಾಗಾಗಿ ವರ್ಷಕ್ಕೊಮ್ಮೆ ಚೆಕ್ ಮಾಡಿಸಿ.
ವಯಸ್ಸಾದಂತೆ ಮಧುಮೇಹದ ಅಪಾಯವೂ ಹೆಚ್ಚಾಗುತ್ತದೆ. ಮನೆಯಲ್ಲಿಯೇ ಬ್ಲಡ್ ಶುಗರ್ ಪರೀಕ್ಷೆ ಮಾಡಿಕೊಳ್ಳಿ. ಇದರಿಂದ ಭವಿಷ್ಯದಲ್ಲಿ ಎದುರಾಗಬಹುದಾದ ಅಪಾಯದಿಂದ ಪಾರಾಗಬಹುದು.
ತೂಕ ಹೆಚ್ಚಾಗುವುದು, ಸುಸ್ತು ಅಥವಾ ಕೂದಲು ಉದುರುವಿಕೆಯಂತಹ ಲಕ್ಷಣಗಳು ಕಂಡರೆ 30ರ ನಂತರ ಥೈರಾಯ್ಡ್ ಪರೀಕ್ಷೆ ಮಾಡಿಸುವುದು ಅಗತ್ಯ. ಇತ್ತೀಚೆಗೆ ಮಹಿಳೆಯರಲ್ಲಿ ಥೈರಾಯ್ಡ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಮಹಿಳೆಯರು 'ಲಿಪಿಡ್ ಪ್ರೊಫೈಲ್ ಟೆಸ್ಟ್' ಮೂಲಕ ಕೊಲೆಸ್ಟ್ರಾಲ್ ಮಟ್ಟವನ್ನು ತಿಳಿದುಕೊಳ್ಳಬಹುದು. ಒಂದು ವೇಳೆ ಕೊಲೆಸ್ಟ್ರಾಲ್ ಹೆಚ್ಚಾಗಿದ್ದರೆ, ಅದನ್ನು ನಿಯಂತ್ರಿಸಿ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯಬಹುದು.
ಮಹಿಳೆಯರು ಸ್ತನಗಳ ಆರೋಗ್ಯವನ್ನು ನಿರ್ಲಕ್ಷಿಸಬಾರದು. ಮನೆಯಲ್ಲಿಯೇ ನೀವು ಸ್ತನ ಪರೀಕ್ಷೆ ಮಾಡಿಕೊಳ್ಳಬಹುದು. ಏನಾದರೂ ಅನುಮಾನ ಬಂದರೆ, ತಕ್ಷಣ ವೈದ್ಯರ ಸಲಹೆ ಪಡೆದು ಪರೀಕ್ಷೆ ಮಾಡಿಸಿಕೊಳ್ಳಿ.
ಗರ್ಭಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳು, ಗರ್ಭಕಂಠದ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳನ್ನು ಪತ್ತೆ ಹಚ್ಚಲು ವೈದ್ಯರು 30 ವರ್ಷದ ನಂತ್ರ ಮಹಿಳೆಯರಿಗೆ ಈ ಟೆಸ್ಟ್ ಮಾಡಿಸಲು ಸಲಹೆ ನೀಡುತ್ತಾರೆ.
ದೌರ್ಬಲ್ಯ ಮತ್ತು ಮೂಳೆ ಸಂಬಂಧಿ ಸಮಸ್ಯೆಗಳನ್ನು ತಪ್ಪಿಸಲು, ಮಹಿಳೆಯರು 30 ವರ್ಷದ ನಂತರ ವಿಟಮಿನ್ ಡಿ ಮತ್ತು ಬಿ12 ಪರೀಕ್ಷೆಯನ್ನು ಖಂಡಿತವಾಗಿಯೂ ಮಾಡಿಸಬೇಕು.
ಸ್ಕ್ರೀನ್ ಮುಂದೆ ಕೆಲಸ ಮಾಡುತ್ತಿದ್ದರೆ ಪ್ರತಿ ವರ್ಷ ಕಣ್ಣಿನ ತಪಾಸಣೆ ಮಾಡಿಸಿ. ಇದರಿಂದ ಡ್ರೈ ಐ ಸಮಸ್ಯೆಯಿಂದ ಹಿಡಿದು ದೃಷ್ಟಿ ದೋಷದವರೆಗೆ ಸುಲಭವಾಗಿ ಪತ್ತೆ ಹಚ್ಚಬಹುದು. ಜೊತೆಗೆ ಹಲ್ಲುಗಳನ್ನೂ ಪರೀಕ್ಷಿಸಿಕೊಳ್ಳಿ.
30 ವರ್ಷ ದಾಟಿದ ಮಹಿಳೆಯರಿಗೆ ಲಿವರ್ ಮತ್ತು ಕಿಡ್ನಿ ಫಂಕ್ಷನ್ ಟೆಸ್ಟ್‌ಗಳು ಬಹಳ ಮುಖ್ಯವಾಗುತ್ತವೆ. ಈ ಬಗ್ಗೆ ನಿಮ್ಮ ವೈದ್ಯರೊಂದಿಗೆ ಸಮಾಲೋಚಿಸಿ ಮತ್ತು ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ.