ಜೆನ್ ಜೀಗಳ (gen z) ಬಗ್ಗೆ ಹೊಸ ಜೋಕ್‌ಗಳು, ಹೊಸ ಈಡಿಯಂಗಳು ಹೊಸ ಹೊಸತಾಗಿ ಹುಟ್ಟಿಕೊಳ್ತಾನೇ ಇವೆ. ಸೆಕ್ಸ್‌ನಲ್ಲೂ ಅವರು ಹೊಸ ಟ್ರೆಂಡ್ ಸೃಷ್ಟಿಸಿದ್ದಾರೆ. ಅದೇ ಗ್ರೀನ್ ಸೆಕ್ಸ್!
ಜೆನ್ ಜೀಗಳ ಬಗ್ಗೆ ಏಕಕಾಲಕ್ಕೆ ಮೆಚ್ಚುಗೆಯೂ, ಭಯವೂ, ಆತಂಕವೂ ಒಟ್ಟೊಟ್ಟಿಗೆ ಕ್ರಿಯೇಟ್ ಆಗಿದೆ. ಈಗ ಅವರು ಸೃಷ್ಟಿಸುತ್ತಿರೋ ಹೊಸ ಹೊಸ ಟ್ರೆಂಡ್‌ಗಳು ಸೋಷಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹೈಪ್ ಪಡೆದುಕೊಳ್ತಿದೆ. ಸದ್ಯಕ್ಕೆ ಹಾಗೆ ಫೇಮಸ್ ಆಗಿರೋ ಟ್ರೆಂಡ್ ಅಂದರೆ ಗ್ರೀನ್ ಸೆಕ್ಸ್. ಅರೆ, ಸೆಕ್ಸ್ ಅಂದರೆ ಸೆಕ್ಸ್. ಅದಕ್ಕೆ ಕಲರ್, ಫ್ಲೇವರ್ ಬೇರೆ ಇರುತ್ತಾ ಅಂತೆಲ್ಲ ಕೇಳಂಗಿಲ್ಲ. ಸದಾ ಹೊಸತನ್ನ ಬಯಸೋ ಜನರಿಗೆ ಇದೊಂದು ಹೊಸತು ಅನ್ನೋ ಹಾಗೂ ಇಲ್ಲ. ಅದಕ್ಕೊಂದು ಕಾರಣ ಇದೆ. ಜೆನ್ ಜೀಗಳನ್ನು ಅನೇಕ ಕಾರಣಕ್ಕೆ ತಾರಾಮಾರ ಬಯ್ಯೋ ಮಂದಿಯೂ ಅವರ ಈ ಒಂದು ಟ್ರೆಂಡ್ ಅನ್ನು ಕೊಂಚ ಅಭಿಮಾನದಿಂದ ನೋಡುತ್ತಿದ್ದಾರೆ. ಅಷ್ಟಕ್ಕೂ ಈ ಗ್ರೀನ್ ಸೆಕ್ಸ್ ಅನ್ನೋದು ಸಖತ್ ಇಂಟರೆಸ್ಟಿಂಗ್. ಆರೋಗ್ಯಕ್ಕೂ ಒಳ್ಳೆಯದಾಗಿರುವ ಕಾರಣ ಜೆನ್ ಜೀಗಳು ಸೃಷ್ಟಿಸಿರೋ ಈ ಟ್ರೆಂಡ್ ಅನ್ನು ಅವರ ಹಿಂದಿನ ತಲೆಮಾರು ಅಂದರೆ ಮಿಲೇನಿಯಲ್‌ಗಳೂ ಸ್ವಲ್ಪ ಮಟ್ಟಿಗೆ ಜೆನ್ ಎಕ್ಸ್‌ಗಳೂ ಫಾಲೋ ಮಾಡ್ತಿದ್ದಾರೆ. ಜೊತೆಗೆ ಅವರು ಗ್ರೀನ್ ಸೆಕ್ಸ್‌ನ ಬಗ್ಗೆ ಪಾಸಿಟಿವ್ ಆಗಿ ಮಾತನಾಡಲು ಶುರು ಮಾಡಿದ್ದಾರೆ. ಹೀಗಾಗಿ ಇದು ಹೆಚ್ಚೆಚ್ಚು ಜನರನ್ನು ರೀಚ್ ಆಗ್ತಿದೆ.
ಏನಿದು ಗ್ರೀನ್ ಸೆಕ್ಸ್?
ಸರಳವಾಗಿ ಹೇಳುವುದಾದರೆ, ಲೈಂಗಿಕ ಜೀವನದಲ್ಲಿ ಬಳಸುವ ಉತ್ಪನ್ನಗಳು ಪರಿಸರದ ಮೇಲೆ ಬೀರುವ ದುಷ್ಪರಿಣಾಮಗಳನ್ನು ಕಡಿಮೆ ಮಾಡುವುದೇ 'ಗ್ರೀನ್ ಸೆಕ್ಸ್'. ಹವಾಮಾನ ಬದಲಾವಣೆಯ ಬಗ್ಗೆ ಅತೀವ ಕಾಳಜಿ ಹೊಂದಿರುವ ಜೆನ್-ಜಿ ಯುವಕರು, ತಮ್ಮ ಪ್ರಣಯ ಜೀವನದಲ್ಲೂ ಕಾರ್ಬನ್ ಫುಟ್‌ಪ್ರಿಂಟ್ ತಗ್ಗಿಸಲು ಬಯಸುತ್ತಿದ್ದಾರೆ. ಅದರ ಮುಂದುವರಿಕೆಯಾಗಿ ಸೆಕ್ಸ್‌ನಲ್ಲೂ ಪರಿಸ್ನೇಹಿತನವನ್ನು ಮುನ್ನಲೆಗೆ ತರ್ತಿದ್ದಾರೆ.
ಪರಿಸರ ಸ್ನೇಹಿ ಉತ್ಪನ್ನಗಳ ಬಳಕೆ
ಸಾಂಪ್ರದಾಯಿಕ ಕಾಂಡೋಮ್‌ಗಳಲ್ಲಿ ಪ್ಲಾಸ್ಟಿಕ್ ಮತ್ತು ಪ್ರಾಣಿಜನ್ಯ ಪದಾರ್ಥಗಳಿರಬಹುದು. ಇದನ್ನು ವಿರೋಧಿಸುವ ಯುವಜನರು ಈಗ ಬಯೋಡಿಗ್ರೇಡಬಲ್ ಕಾಂಡೋಮ್‌ಗಳನ್ನು ಬಳಸುತ್ತಾರೆ. ಇವು ಪರಿಸರದಲ್ಲಿ ಸುಲಭವಾಗಿ ಕರಗುವ ಮತ್ತು ಸಸ್ಯಾಹಾರಿ (Vegan) ಲ್ಯಾಟೆಕ್ಸ್‌ನಿಂದ ತಯಾರಿಸಿದ ಉತ್ಪನ್ನಗಳು. ಜೊತೆಗೆ ಬ್ಯಾಟರಿ ಚಾಲಿತ ಪ್ಲಾಸ್ಟಿಕ್ ಸೆಕ್ಸ್ ಆಟಿಕೆಗಳ ಬದಲಿಗೆ, ರೀಚಾರ್ಜ್ ಮಾಡಬಹುದಾದ ಅಥವಾ ಪರಿಸರ ಸ್ನೇಹಿ ವಸ್ತುಗಳಿಂದ ತಯಾರಿಸಿದ ಸಾಧನಗಳಿಗೆ ಆದ್ಯತೆ ನೀಡುತ್ತಿದ್ದಾರೆ. ರಾಸಾಯನಿಕ ಮುಕ್ತ ಮತ್ತು ಸಾವಯವ ಪದಾರ್ಥಗಳಿಂದ ಕೂಡಿದ ಲ್ಯೂಬ್ರಿಕೆಂಟ್‌ಗಳ ಬಳಕೆ ಹೆಚ್ಚುತ್ತಿದೆ.
ಪ್ರಜ್ಞಾಪೂರ್ವಕ ಡೇಟಿಂಗ್
ಜೆನ್-ಜಿ ಪಾಲಿಗೆ ಸುಸ್ಥಿರತೆ ಎಂಬುದು ಆಕರ್ಷಣೆಯ ಒಂದು ಭಾಗವಾಗಿದೆ. ಡೇಟಿಂಗ್ ಆಪ್‌ಗಳಲ್ಲಿ ಪರಿಸರ ಪ್ರೇಮಿಗಳಿಗೆ ಹೆಚ್ಚಿನ ಆದ್ಯತೆ ಸಿಗುತ್ತಿದೆ. ದುಬಾರಿ ಗಿಫ್ಟ್ ಅಥವಾ ಪ್ಲಾಸ್ಟಿಕ್ ಬಳಕೆಯ ಹೋಟೆಲ್‌ಗಳ ಬದಲಿಗೆ ಪಾರ್ಕ್‌ಗಳಲ್ಲಿ ನಡಿಗೆ ಅಥವಾ ಸಸ್ಯಗಳನ್ನು ನೆಡುವಂತಹ ಇಕೋ-ಡೇಟ್ಸ್ ಜನಪ್ರಿಯವಾಗುತ್ತಿವೆ.
ನೈತಿಕ ಬ್ರ್ಯಾಂಡ್‌ಗಳಿಗೆ ಬೆಂಬಲ
ಕೇವಲ ಲಾಭಕ್ಕಾಗಿ ಪರಿಸರವನ್ನು ಹಾಳು ಮಾಡುವ ಕಂಪನಿಗಳ ಉತ್ಪನ್ನಗಳನ್ನು ಇಂದಿನ ಯುವಜನರು ತಿರಸ್ಕರಿಸುತ್ತಿದ್ದಾರೆ. ಕಾರ್ಮಿಕರಿಗೆ ಸರಿಯಾದ ವೇತನ ನೀಡುವ ಮತ್ತು ಪಾರದರ್ಶಕ ಉತ್ಪಾದನಾ ವ್ಯವಸ್ಥೆ ಹೊಂದಿರುವ ಬ್ರ್ಯಾಂಡ್‌ಗಳಿಗೆ ಅವರು ಬೆಂಬಲ ನೀಡುತ್ತಿದ್ದಾರೆ.
ಈ ಟ್ರೆಂಡ್ ಜೆನ್-ಜಿ ಯುವಜನರ ಪರ್ಪಸ್ ಫುಲ್ ಲೈಫ್ ಅಥವಾ ಅರ್ಥಪೂರ್ಣ ಬದುಕನ್ನು ಪ್ರತಿಬಿಂಬಿಸುತ್ತದೆ. ತಮ್ಮ ಪ್ರತಿಯೊಂದು ಕ್ರಿಯೆಯೂ ಭೂಮಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಅರಿವು ಅವರಲ್ಲಿದೆ. ಲೈಂಗಿಕ ಆರೋಗ್ಯದ ಜೊತೆಗೆ ಭೂಮಿಯ ಆರೋಗ್ಯವನ್ನೂ ಕಾಪಾಡುವುದು ಇಂದಿನ ತುರ್ತು ಅಗತ್ಯವಾಗಿರುವುದು ಈ ಜನರೇಶನ್‌ಗೆ ಮನದಟ್ಟಾಗಿದೆ.
ಇವರು ಬಳಸುವ ಕಾಂಡೋಮ್ ಗಳಲ್ಲಿ ಪ್ರಾಣಿಜನ್ಯ ಪ್ರೊಟೀನ್ (Casein) ಇರುವುದಿಲ್ಲ ಮತ್ತು ಇವು ನೈಸರ್ಗಿಕವಾಗಿ ಮಣ್ಣಿನಲ್ಲಿ ಕರಗುತ್ತವೆ. ಒಮ್ಮೆ ಬಳಸಿ ಎಸೆಯುವ ಸೆಕ್ಸ್ ಟಾಯ್ ಬ್ಯಾಟರಿಗಳ ಬದಲಿಗೆ USB ಮೂಲಕ ಚಾರ್ಜ್ ಮಾಡಬಹುದಾದ ಸಿಲಿಕಾನ್ ಸಾಧನಗಳನ್ನು ಬಳಸುವುದು ಪರಿಸರಸ್ನೇಹಿ ಗುಣ. ಅಲೋವೆರಾ ಅಥವಾ ನೀರಿನ ಅಂಶವಿರುವ, ಪೆಟ್ರೋಕೆಮಿಕಲ್ ಮುಕ್ತ ಉತ್ಪನ್ನಗಳನ್ನು ಲೂಬ್ರಿಕೆಂಟ್‌ಗಳಾಗಿ ಬಳಸುತ್ತಾರೆ. ಸೆಕ್ಸ್ ಮಾತ್ರವಲ್ಲ, ಇವರು ಬಳಸುವ ಮೆನ್ಸ್ಟ್ರುವಲ್ ಕಪ್ ಅಥವಾ ಪೀರಿಯಡ್ ಪಾಂಟಿಗಳ ಬಳಕೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಬೆಡ್‌ರೂಮ್‌ನ ಬೆಡ್‌ಶೀಟ್‌ಗಳ ವಿಚಾರದಲ್ಲೂ ಕಾನ್ಶಿಯಸ್ ಆಗಿದ್ದಾರೆ. ಹತ್ತಿಯ ಬೆಡ್‌ಶೀಟ್‌ಗಳನ್ನೇ ಬಳಸುತ್ತಾರೆ.


