- Home
- Entertainment
- Cine World
- ವಿದ್ಯಾರ್ಥಿಯನ್ನೇ ಲವ್ ಮಾಡಿ ಮದುವೆಯಾಗಿದ್ದ R Madhavan; ಸರಿತಾ ಕೇವಲ ಮ್ಯಾಡಿ ಪತ್ನಿ ಅಲ್ಲ, ಓರ್ವ ಸಾಧಕಿ!
ವಿದ್ಯಾರ್ಥಿಯನ್ನೇ ಲವ್ ಮಾಡಿ ಮದುವೆಯಾಗಿದ್ದ R Madhavan; ಸರಿತಾ ಕೇವಲ ಮ್ಯಾಡಿ ಪತ್ನಿ ಅಲ್ಲ, ಓರ್ವ ಸಾಧಕಿ!
ನಟ ಆರ್. ಮಾಧವನ್‌ರ ಪತ್ನಿ ಸರಿತಾ ಬಿರ್ಜೆ. ಮಾಧವನ್ ಅವರ ಅಭಿಮಾನಿಗಳಿಗೆ “ಮ್ಯಾಡಿ” ಎಂದೇ ಪರಿಚಿತರು. ಸರಿತಾ ಒಬ್ಬ ಖ್ಯಾತ ನಟನ ಪತ್ನಿ, ಅಷ್ಟೇ ಅಲ್ಲದೆ ಸರಿತಾ ಒಬ್ಬ ಪ್ರತಿಭಾವಂತ ಫ್ಯಾಷನ್ ಡಿಸೈನರ್, ಉದ್ಯಮಿ.

ಇನ್ನು ಮಾಧವನ್‌ರ ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಮಹಾರಾಷ್ಟ್ರದ ನಾಗಪುರದಲ್ಲಿ ಅಕ್ಟೋಬರ್ 14ರಂದು ಸರಿತಾ ಬಿರ್ಜೆ ಜನಿಸಿದರು. 1990ರ ದಶಕದ ಆರಂಭದಲ್ಲಿ ಸರಿತಾ ಗಗನಸಖಿ ಆಗುವ ಕನಸು ಹೊಂದಿದ್ದರು. ಹೀಗಾಗಿ ಅವರು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ವ್ಯಕ್ತಿತ್ವ ವಿಕಸನ ಮತ್ತು ಸಾರ್ವಜನಿಕ ಭಾಷಣ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು, ಅಲ್ಲಿ ಆರ್ ಮಾಧವನ್ ತರಗತಿಗಳನ್ನು ನಡೆಸುತ್ತಿದ್ದರು. 1991ರ ಇವರಿಬ್ಬರು ಆಕಸ್ಮಿಕ ಭೇಟಿಯಾದರು.
ಎಲೆಕ್ಟ್ರಾನಿಕ್ಸ್‌ನಲ್ಲಿ ಪದವಿ ಪಡೆದಿದ್ದ ಆರ್ ಮಾಧವನ್ ಅವರು, ಭಾರತದಾದ್ಯಂತ ಸಂವಾದ ಮತ್ತು ಸಾರ್ವಜನಿಕ ಭಾಷಣ ಕಾರ್ಯಾಗಾರಗಳನ್ನು ನಡೆಸುತ್ತಿದ್ದರು. 1991ರಲ್ಲಿ ಕೊಲ್ಹಾಪುರದಲ್ಲಿ ನಡೆದ ಒಂದು ಕಾರ್ಯಾಗಾರದಲ್ಲಿ, ಸರಿತಾ ಗಗನಸಖಿಯಾಗಲು ಸಂದರ್ಶನಕ್ಕಾಗಿ ತಮ್ಮ ಕೌಶಲ್ಯವನ್ನು ಹೆಚ್ಚಿಸಲು ಭಾಗವಹಿಸಿದ್ದರು. ಅಷ್ಟೇ ಅಲ್ಲದೆ ಜಾಬ್ ಇಂಟರ್‌ವ್ಯೂನಲ್ಲಿ ಪಾಸ್ ಆಗಿದ್ದರು. ಆಗ ಆರ್ ಮಾಧವನ್ ಅವರಿಗೆ ಕೃತಜ್ಞತೆಯ ಸಂಕೇತವಾಗಿ, ಭೋಜನಕ್ಕೆ ಆಹ್ವಾನ ಕೊಟ್ಟರು. ಅಲ್ಲಿಂದಲೇ ಇವರಿಬ್ಬರ ಸಂಬಂಧ ಶುರು ಆಯ್ತು.
ಎಂಟು ವರ್ಷಗಳ ಕಾಲ ಈ ಜೋಡಿ ಡೇಟಿಂಗ್ ಮಾಡಿತ್ತು. ಆಗಿನ್ನೂ ಮಾಧವನ್ ಇನ್ನೂ ಚಿತ್ರರಂಗಕ್ಕೆ ಪ್ರವೇಶಿಸಿರಲಿಲ್ಲ. 1999ರಲ್ಲಿ ತಮಿಳಿಗರಂತೆ ಸಾಂಪ್ರದಾಯಿಕವಾಗಿ ಮದುವೆಯಾದರು. ಇದಕ್ಕೆ ಆಪ್ತ ಸ್ನೇಹಿತರು, ಕುಟುಂಬದವರು ಸಾಕ್ಷಿಯಾದರು. ಮಣಿರತ್ನಂರ ಅಲೈಪಾಯುತೇ (2000) ಚಿತ್ರದೊಂದಿಗೆ ಅವರು ಸೂಪರ್ ಹಿಟ್ ನಟರಾದರು. ಈ ಜೋಡಿಗೆ 2005ರ ಆಗಸ್ಟ್ 21ರಂದು ಮಗ ವೇದಾಂತ್ ಜನಿಸಿದ್ದಾನೆ. ವೇದಾಂತ್ ಅಂತರರಾಷ್ಟ್ರೀಯ ಈಜುಗಾರ.
ಸರಿತಾ ಬಿರ್ಜೆ ಕೇವಲ ಸೆಲೆಬ್ರಿಟಿಯ ಪತ್ನಿಯಲ್ಲ, ಅವರು ಫ್ಯಾಷನ್ ಡಿಸೈನರ್. ಮಾಧವನ್‌ರ ಹಲವು ಸಿನಿಮಾಗಳಿಗೆ ಕಾಸ್ಟ್ಯೂಮ್ ಡಿಸೈನರ್ ಆಗಿದ್ದಾರೆ. ಸರಿತಾ ಆಸ್ಟ್ರಿಯಾದ ಕ್ಲಾಗೆನ್‌ಫರ್ಟ್‌ನಲ್ಲಿ ʼಸರಿತಾʼ ಎಂಬ ತಮ್ಮದೇ ಆದ ಬಟ್ಟೆ ಅಂಗಡಿಯನ್ನು ನಡೆಸುತ್ತಾರೆ. ಮನೆಯಲ್ಲಿ ಎಲ್ಲ ಲೆಕ್ಕವನ್ನು ಇಡೋದು ನನ್ನ ಪತ್ನಿ ಅಂತ ಮಾಧವನ್ ಹೇಳಿದ್ದಾರೆ. ಸರಿತಾ ಮತ್ತು ಮಾಧವನ್ ಲಿಯುಕೊ ಫಿಲ್ಮ್ಸ್ (ಹಿಂದೆ ಲಿಯುಕೊಸ್ ಫಿಲ್ಮ್ಸ್) ಎಂಬ ನಿರ್ಮಾಣ ಸಂಸ್ಥೆ ನಡೆಸುತ್ತಿದ್ದಾರೆ. ಇದು 2007ರ ಡ್ರಾಮಾ ಥ್ರಿಲ್ಲರ್ ʼಎವನೊ ಒರುವನ್ʼ ಮತ್ತು 2016ರ ದ್ವಿಭಾಷಾ ಕ್ರೀಡಾ ಡ್ರಾಮಾ ʼಇರುದಿ ಸುತ್ತರುʼ (ತಮಿಳು) ಮತ್ತು ʼಸಾಲಾ ಖಡೂಸ್ʼ (ಹಿಂದಿ) ಸಿನಿಮಾಗಳನ್ನು ನಿರ್ಮಿಸಿದೆ.
ಆರ್. ಮಾಧವನ್ ಅವರು 2001ರಲ್ಲಿ ʼರೆಹನಾ ಹೈ ತೇರೆ ದಿಲ್ ಮೇಂʼ ಸಿನಿಮಾ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಆಗ ಅವರಿಗೆ ದೊಡ್ಡ ಪ್ರಮಾಣದ ಮಹಿಳಾ ಫ್ಯಾನ್ಸ್ ಸೃಷ್ಟಿಯಾಗಿತ್ತು. ಇದನ್ನು ಸರಿತಾ ಅವರು ನೀಟ್ ಆಗಿ ಹ್ಯಾಂಡಲ್ ಮಾಡಿದ್ದರು.
ಬಾಲಿವುಡ್ ಪಾರ್ಟಿಗಳಿಂದ ಚಾರಿಟಿ ಫ್ಯಾಷನ್ ಶೋಗಳವರೆಗೆ ಈ ಜೋಡಿ ಒಟ್ಟಿಗೆ ಭಾಗವಹಿಸುತ್ತದೆ, ಮಾಧವನ್ ಶೂಟಿಂಗ್ ಸ್ಥಳದಲ್ಲಿ ಸರಿತಾ ಕಾಣಿಸಿಕೊಳ್ಳೋದುಂಟು. ಇನ್ನು ಈ ಜೋಡಿಗೆ ಒಟ್ಟಿಗೆ ಸಮಯ ಕಳೆಯುವುದು, ಹೀಗೆ ಇವರ ಸಂಬಂಧ ಗಟ್ಟಿಯಾಗಿದೆ.
2025ರ ಜೂನ್‌ನಲ್ಲಿ ತಮ್ಮ 26ನೇ ವಿವಾಹ ವಾರ್ಷಿಕೋತ್ಸವದಂದು, ಸರಿತಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ, “26 ವರ್ಷಗಳ ಹಿಂದೆ, ನಾನು ನನ್ನ ಜೀವನದ ಅತ್ಯುತ್ತಮ ನಿರ್ಧಾರವನ್ನು ತೆಗೆದುಕೊಂಡೆ. ನಿನ್ನನ್ನು ಮದುವೆಯಾಗುವುದು,” ಎಂದು ಬರೆದುಕೊಂಡಿದ್ದರು.
ಮಾಧವನ್ ಅವರು 2025ರಲ್ಲಿ ವಿವಾಹ ವಾರ್ಷಿಕೋತ್ಸವದಂದು, “ನನಗೆ ಬೇಕಾದ ಎಲ್ಲವನ್ನೂ ನೀಡಿದ ಮಹಿಳೆಗೆ… ಒಂದು ಕ್ಷಣವನ್ನೂ ಬದಲಾಯಿಸಲು ನಾನು ಬಯಸುವುದಿಲ್ಲ” ಎಂದು ಬರೆದುಕೊಂಡಿದ್ದರು.