ರಾತ್ರಿ ಉಗುರು ಕಟ್ ಮಾಡಬಾರದು.. ತಮಾಷೆ ವಿಷಯವಲ್ಲ, ವೈಜ್ಞಾನಿಕ ಕಾರಣವೂ ಇದೆ
Why not cut nails at night: ಯಾವತ್ತೂ ರಾತ್ರಿ ಉಗುರು ಕತ್ತರಿಸಬಾರದು ಎಂದಾಗ ನಮಗೆ ಕಿರಿಕಿರಿಯಾಗುತ್ತದೆ. ಅಷ್ಟೇ ಅಲ್ಲ, "ಏನಿದು ತಮಾಷೆ" ಎಂದು ನಗುತ್ತೇವೆ. ಆದರೆ ಇದರ ಹಿಂದೆ ವೈಜ್ಞಾನಿಕ ಕಾರಣವಿದ್ದು, ಅದೇನೆಂದು ನೋಡೋಣ ಬನ್ನಿ..

ಕೆಲವರಿಗೆ ಕಿರಿ ಕಿರಿಯಾಗುತ್ತೆ
ನಿಮಗೆ ತಿಳಿದೋ, ತಿಳಿಯದೆಯೋ ರಾತ್ರಿ ಮನೆಯಲ್ಲಿ ಉಗುರು ಕಟ್ ಮಾಡ್ತಿರಿ ಅಂತಿಟ್ಟುಕೊಳ್ಳಿ. ಆಗ ಮನೆಯವರು ಬೈಯ್ಯುತ್ತಾರೆ. ಯಾವತ್ತೂ ರಾತ್ರಿ ಉಗುರು ಕತ್ತರಿಸಬಾರದು ಅಂತಾರೆ. ಹಾಗೆಂದಾಗ ನಮಗೆ ಕಿರಿಕಿರಿಯಾಗುತ್ತದೆ. ಅಷ್ಟೇ ಅಲ್ಲ, "ಏನಿದು ತಮಾಷೆ" ಎಂದು ನಗುತ್ತೇವೆ. ಆದರೆ ಇದರ ಹಿಂದೆ ವೈಜ್ಞಾನಿಕ ಕಾರಣವಿದ್ದು, ಅದೇನೆಂದು ನೋಡೋಣ ಬನ್ನಿ..
ನಕಾರಾತ್ಮಕ ಶಕ್ತಿ ಆಕರ್ಷಿಸುತ್ತೆ
ವೈಜ್ಞಾನಿಕ ಕಾರಣ ಒಂದೆಡೆಯಾದರೆ, ಹಿರಿಯರು ಈ ನಿಯಮವನ್ನು ಮಾಡಲು ಕಾರಣವೇನೆಂದು ನೋಡೋಣ. ಮೊದಲನೆಯದಾಗಿ ಹಿಂದೂ ಪುರಾಣಗಳ ಪ್ರಕಾರ, ರಾತ್ರಿಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚು ಎಂದು ನಂಬಲಾಗಿದೆ. ಆ ಸಮಯದಲ್ಲಿ ನಮ್ಮ ದೇಹದಲ್ಲಿ ಸಂಭವಿಸುವ ಯಾವುದೇ ಬದಲಾವಣೆ ದೇಹವು ತಕ್ಷಣವೇ ಆ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂದು ಹೇಳಲಾಗುತ್ತದೆ.
ಧೂಳು, ಕೊಳಕು ಮತ್ತು ಬ್ಯಾಕ್ಟೀರಿಯಾಗಳು
ಇದು ಹಿರಿಯರು ಕೊಡುವ ಕಾರಣ. ಇವುಗಳನ್ನು ನಂಬುವುದು ಬಿಡುವುದು ನಿಮ್ಮ ವೈಯಕ್ತಿಕ ವಿಷಯ. ಆದರೆ ಈ ಮೊದಲೇ ಹೇಳಿದ ಹಾಗೆ ಇದರ ಹಿಂದೆ ಕೆಲವು ವೈಜ್ಞಾನಿಕ ಕಾರಣಗಳೂ ಇವೆ. ಕೆಲವರು ದಿನವಿಡೀ ತಿರುಗಾಡಿ ಮನೆಗೆ ಬಂದಿರುತ್ತಾರೆ. ಆಚೆ ಅನೇಕ ಕೆಲಸಗಳನ್ನು ಮಾಡಿರುತ್ತಾರೆ. ಆಗ ಉಗುರುಗಳಲ್ಲಿ ವಿವಿಧ ರೀತಿಯ ಧೂಳು, ಕೊಳಕು ಮತ್ತು ಬ್ಯಾಕ್ಟೀರಿಯಾಗಳು ಸೇರಿಕೊಳ್ಳುತ್ತವೆ.
ಯಾವುದೇ ಹಾನಿ ಇರಲ್ಲ
ಅಂತಹ ಸಮಯದಲ್ಲಿ ಉಗುರುಗಳನ್ನು ಕಟ್ ಮಾಡಿದರೆ ಆ ಎಲ್ಲಾ ಬ್ಯಾಕ್ಟೀರಿಯಾಗಳು ಹರಡುತ್ತವೆ. ಒಂದು ವೇಳೆ ನೀವು ಆ ಬೆರಳುಗಳನ್ನು ನಿಮ್ಮ ಬಾಯಿ ಮತ್ತು ಮೂಗಿನ ಮೇಲಿಟ್ಟರೆ ಬ್ಯಾಕ್ಟೀರಿಯಾಗಳು ಅಲ್ಲಿಯೂ ಹರಡುತ್ತವೆ. ಅದೇ ನಿಮ್ಮ ಕೈ ಅಥವಾ ಉಗುರುಗಳು ಸ್ವಚ್ಛವಾಗಿರುವಾಗ ಉಗುರುಗಳನ್ನು ಕಟ್ ಮಾಡುವುದರಿಂದ ಯಾವುದೇ ಹಾನಿ ಇರಲ್ಲ.
ಅದಕ್ಕಾಗೇ ತರಲಾಯ್ತು ಈ ನಿಯಮ
ಈಗ ಬಿಡಿ, ನಮ್ಮಲ್ಲಿ ಎಲ್ಲಾ ರೀತಿಯ ದೀಪಗಳು ಲಭ್ಯವಿದೆ. ಆದರೆ ಅವುಗಳು ಇಲ್ಲದ ಒಂದು ಕಾಲವಿತ್ತು. ಜನರು ರಾತ್ರಿಯಿಡೀ ದೀಪಗಳನ್ನು ಹಚ್ಚಿಕೊಂಡು ಮಲಗುತ್ತಿದ್ದರು. ಆ ಕತ್ತಲೆಯಲ್ಲಿ ನೀವು ನಿಮ್ಮ ಉಗುರುಗಳನ್ನು ಕತ್ತರಿಸಲು ಪ್ರಯತ್ನಿಸಿದರೆ ಆಕಸ್ಮಿಕವಾಗಿ ನಿಮ್ಮ ಬೆರಳುಗಳನ್ನು ಕಟ್ ಮಾಡಿಕೊಳ್ಳುವ ಅಪಾಯವಿರುತ್ತಿತ್ತು. ಅದಕ್ಕಾಗಿಯೇ ಈ ನಿಯಮವನ್ನು ಆಗ ತರಲಾಯಿತು.
ಇವೆಲ್ಲವೂ ಕಾರಣವಾಗಿದೆ
ಇದಲ್ಲದೆ ಸಂಜೆಯ ಹೊತ್ತಿಗೆ ದೇಹವು ಸಂಪೂರ್ಣವಾಗಿ ವಿಶ್ರಾಂತಿ ಪಡೆಯುತ್ತಿರುತ್ತದೆ. ಆ ಸಮಯದಲ್ಲಿ ನೀವು ನಿಮ್ಮ ಉಗುರುಗಳನ್ನು ಕಟ್ ಮಾಡುವಂತಹ ಕೆಲಸಗಳನ್ನು ಮಾಡಿದರೆ ಈ ವಿಶ್ರಾಂತಿಗೆ ಅನಗತ್ಯವಾಗಿ ಅಡ್ಡಿಯಾಗುತ್ತದೆ. ಬಹುಶಃ ರಾತ್ರಿ ವೇಳೆ ನಿಮ್ಮ ಉಗುರುಗಳನ್ನು ಕತ್ತರಿಸಬೇಡಿ ಎಂದು ಹೇಳಲು ಇವೆಲ್ಲಾ ಒಂದು ಕಾರಣವಾಗಿರಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

