ಕಿಚ್ಚ ಸುದೀಪ್ ಕುಡಿಯುವ ಬ್ಲ್ಯಾಕ್ ಕಾಫಿ, ಚಹಾಕ್ಕಿಂತ ಬೆಸ್ಟ್… ನಿಮ್ಮ ಆಯ್ಕೆ ಯಾವುದು?
Black Coffee Vs Tea: ಚಹಾಕ್ಕೆ ಹೋಲಿಕೆ ಮಾಡಿದರೆ, ಬ್ಲ್ಯಾಕ್ ಕಾಫಿ ಆರೋಗ್ಯಕ್ಕೆ ತುಂಬಾನೆ ಉತ್ತಮವಾದ ಪಾನೀಯವಾಗಿದೆ. ಚಹಾಕ್ಕಿಂತ, ಬ್ಲ್ಯಾಕ್ ಕಾಫಿ ಯಾಕೆ ಬೆಸ್ಟ್ ಅನ್ನೋದನ್ನು ಇಲ್ಲಿ ನೀಡಲಾಗಿದೆ. ಕಾಫಿ ಅಥವಾ ಚಹಾ ಇವೆರಡರಲ್ಲಿ ನಿಮ್ಮ ಆಯ್ಕೆ ಯಾವುದು?

ಬ್ಲ್ಯಾಕ್ ಕಾಫಿ Vs ಚಹಾ
ಚಹಾ ಅಥವಾ ಕಾಫಿ ಇಲ್ಲದೆ ನಿಮ್ಮ ಬೆಳಗಿನ ಆರಂಭ ಅಪೂರ್ಣವೆನಿಸಿದರೆ, ಹೀಗೆ ಅನಿಸುವವರಲ್ಲಿ ನೀವು ಒಬ್ಬರಲ್ಲ. ಭಾರತದಲ್ಲಿ ಹೆಚ್ಚಿನ ಜನರು ತಮ್ಮ ದಿನವನ್ನು ಚಹಾದೊಂದಿಗೆ ಪ್ರಾರಂಭಿಸುತ್ತಾರೆ, ಆದರೆ ಆರೋಗ್ಯ ತಜ್ಞರು ಈಗ ಬ್ಲ್ಯಾಕ್ ಕಾಫಿಯನ್ನು ಉತ್ತಮ ಪರ್ಯಾಯವೆಂದು ಹೇಳಿದ್ದಾರೆ. ಹೆಚ್ಚಿದ ಶಕ್ತಿ, ಸುಧಾರಿತ ಚಯಾಪಚಯ ಮತ್ತು ತೂಕ ನಷ್ಟ ಸೇರಿ ಹಲವಾರು ಆರೋಗ್ಯ ಪ್ರಯೋಜನಗಳನ್ನು ಬ್ಲ್ಯಾಕ್ ಕಾಫಿಯಿಂದ ಪಡೆಯಬಹುದು.
ಹೆಚ್ಚಿನ ಕೆಫೀನ್ ಮಟ್ಟಗಳು
ಕಿಚ್ಚ ಸುದೀಪ್ ಬಿಗ್ ಬಾಸ್ ಮನೆಯಲ್ಲಿ ಬ್ಲ್ಯಾಕ್ ಕಾಫಿ ಕುಡಿಯುತ್ತಿರುವುದನ್ನು ನೀವು ನೋಡಿರಬಹುದು. ಬ್ಲ್ಯಾಕ್ ಕಾಫಿ ಕುಡೀಯೋದು ತುಂಬಾನೆ ಉತ್ತಮ. ಬ್ಲ್ಯಾಕ್ ಕಾಫಿಯಲ್ಲಿ ಚಹಾಕ್ಕಿಂತ ಹೆಚ್ಚಿನ ಕೆಫೀನ್ ಅಂಶವಿದೆ. ಒಂದು ಕಪ್ ಬ್ಲ್ಯಾಕ್ ಕಾಫಿಯಲ್ಲಿ ಸರಿಸುಮಾರು 95 ಮಿಗ್ರಾಂ ಕೆಫೀನ್ ಇದ್ದರೆ, ಒಂದು ಕಪ್ ಚಹಾದಲ್ಲಿ ಕೇವಲ 26–48 ಮಿಗ್ರಾಂ ಮಾತ್ರ ಇರುತ್ತದೆ. ಈ ಹೆಚ್ಚಿನ ಕೆಫೀನ್ ಮಟ್ಟದಿಂದಾಗಿ, ಬ್ಲ್ಯಾಕ್ ಕಾಫಿ ಮಾನಸಿಕ ಜಾಗರೂಕತೆ ಮತ್ತು ಏಕಾಗ್ರತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ, ವಿಶೇಷವಾಗಿ ಬೆಳಿಗ್ಗೆ ಅಥವಾ ದೀರ್ಘ ಕೆಲಸದ ದಿನಗಳಲ್ಲಿ ಇದು ಮನಸನ್ನು ಆಕ್ಟೀವ್ ಆಗಿಡಲು ಸಹಾಯ ಮಾಡುತ್ತದೆ.
ಝೀರೋ ಕ್ಯಾಲೋರಿಗಳು
ಬ್ಲ್ಯಾಕ್ ಕಾಫಿಯಲ್ಲಿ ಸಕ್ಕರೆ ಅಥವಾ ಹಾಲು ಸೇರಿಸದ ಹೊರತು ಯಾವುದೇ ಕ್ಯಾಲೋರಿಗಳು ಇರುವುದಿಲ್ಲ. ತೂಕ ನಿರ್ವಹಣೆಗೆ ಇದು ಉತ್ತಮ ಆಯ್ಕೆಯಾಗಿದೆ. ಮತ್ತೊಂದೆಡೆ, ಚಹಾದಲ್ಲಿ ಹೆಚ್ಚಾಗಿ ಸಕ್ಕರೆ ಅಥವಾ ಹಾಲು ಇರುವುದರಿಂದ ಅದು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತದೆ.
ಆಂಟಿಆಕ್ಸಿಡೆಂಟ್ ಹೆಚ್ಚಾಗಿದೆ
ಬ್ಲ್ಯಾಕ್ ಕಾಫಿಯು ದೇಹವನ್ನು ದೀರ್ಘಕಾಲದ ಕಾಯಿಲೆಗಳಿಂದ ರಕ್ಷಿಸಲು ಸಹಾಯ ಮಾಡುವ ಆಂಟಿಆಕ್ಸಿಡೆಂಟ್ ಗಳಿಂದ ತುಂಬಿರುತ್ತದೆ. ಇದು ಕ್ಲೋರೊಜೆನಿಕ್ ಆಮ್ಲವನ್ನು ಹೊಂದಿರುತ್ತದೆ, ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಟೈಪ್ 2 ಮಧುಮೇಹ ಮತ್ತು ಹೃದ್ರೋಗದ ವಿರುದ್ಧ ರಕ್ಷಣೆ ನೀಡುತ್ತದೆ. ಚಹಾವು ಆಂಟಿಆಕ್ಸಿಡೆಂಟ್ ಗಳಲ್ಲಿಯೂ ಸಮೃದ್ಧವಾಗಿದೆ, ಆದರೆ ಕಾಫಿಯ ಪಾಲಿಫಿನಾಲ್‌ಗಳು ಹೆಚ್ಚು ವೈವಿಧ್ಯಮಯವಾಗಿದ್ದು, ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತವೆ.
ದೈಹಿಕ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ
ಅನೇಕ ಕ್ರೀಡಾಪಟುಗಳು ತಮ್ಮ ದೈಹಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಕೆಫೀನ್ ಅನ್ನು ಬಳಸುತ್ತಾರೆ. ಮಧ್ಯಮ ಪ್ರಮಾಣದಲ್ಲಿ ಕೆಫೀನ್ ಸೇವಿಸಿದಾಗ, ಸಹಿಷ್ಣುತೆ ಸುಧಾರಿಸುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ.
ತೂಕ ಇಳಿಸಿಕೊಳ್ಳಲು ಸಹಕಾರಿ
ಬ್ಲ್ಯಾಕ್ ಕಾಫಿ ತೂಕ ಇಳಿಸಿಕೊಳ್ಳಲು ಸಹಕಾರಿ. ಇದರಲ್ಲಿರುವ ಕೆಫೀನ್ ಕೊಬ್ಬಿನ ಕೋಶಗಳಲ್ಲಿನ ಕೊಬ್ಬನ್ನು ಒಡೆಯಲು ಸಹಾಯ ಮಾಡುತ್ತದೆ, ದೇಹದಲ್ಲಿ ಶಾಖ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಕೊಬ್ಬಿನ ಆಕ್ಸಿಡೀಕರಣವನ್ನು ಉತ್ತೇಜಿಸುತ್ತದೆ. ಇದು ತೂಕ ಇಳಿಕೆಯನ್ನು ವೇಗಗೊಳಿಸುತ್ತದೆ.
ಉತ್ತಮ ರುಚಿ
ಬ್ಲ್ಯಾಕ್ ಕಾಫಿಯು ಆಳವಾದ ಮತ್ತು ರಿಚ್ ಪರಿಮಳವನ್ನು ಹೊಂದಿದ್ದು, ಇದನ್ನು ಅನೇಕ ಜನರು ತುಂಬಾನೆ ಇಷ್ಟಪಡುತ್ತಾರೆ. ಪ್ರಪಂಚದಾದ್ಯಂತ ವಿವಿಧ ಮಿಶ್ರಣಗಳ ಮತ್ತು ಸುವಾಸನೆಯ ಬ್ಲ್ಯಾಕ್ ಕಾಫಿ ಲಭ್ಯವಿದೆ, ಇದು ಒಂದು ವಿಶಿಷ್ಟ ಅನುಭವ ನೀಡುತ್ತೆ. ಚಹಾ ರುಚಿ ಚೆನ್ನಾಗಿರಬಹುದು, ಆದರೆ ಬ್ಲ್ಯಾಕ್ ಕಾಫಿ ಆರೋಗ್ಯಕ್ಕೆ ಉತ್ತಮವಾಗಿದೆ.
ಬ್ಲ್ಯಾಕ್ ಕಾಫಿ ಸೆವಿಸಿ
ಕಾಫಿ ಮತ್ತು ಚಹಾ ಎರಡೂ ಆರೋಗ್ಯಕ್ಕೆ ಪ್ರಯೋಜನಕಾರಿ, ಆದರೆ ಬ್ಲ್ಯಾಕ್ ಕಾಫಿಯ ಹೆಚ್ಚಿನ ಕೆಫೀನ್ ಮಟ್ಟ ಮತ್ತು ಇತರ ಆರೋಗ್ಯ ಪ್ರಯೋಜನಗಳು ಅದನ್ನು ಉತ್ತಮ ಆಯ್ಕೆಯನ್ನಾಗಿ ಮಾಡುತ್ತವೆ. ಇದು ನಿಮ್ಮ ಆದ್ಯತೆಯನ್ನು ಅವಲಂಬಿಸಿರುತ್ತದೆ, ಆದರೆ ನೀವು ಹೆಚ್ಚಿನ ಶಕ್ತಿ ಮತ್ತು ಆರೋಗ್ಯ ಪ್ರಯೋಜನಗಳನ್ನು ಬಯಸಿದರೆ, ಸುದೀಪ್ ರಂತೆ ನೀವು ಕೂಡ ಪ್ರತಿದಿನ ಬ್ಲ್ಯಾಕ್ ಕಾಫಿ ಸೇವಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

