Summer Drinks ಬೇಸಿಗೆಯಲ್ಲಿ ದೇಹ ತಂಪಾಗಿಡಲು ಈ ಪಾನೀಯ ಕುಡಿಯಿರಿ, ಖರ್ಚು ಕಡಿಮೆ
Summer Drinks ಬೇಸಿಗೆಯಲ್ಲಿ ದೇಹ ತಂಪಾಗಿಡಲು ಈ ಪಾನೀಯ ಕುಡಿಯಿರಿ, ಖರ್ಚು ಕಡಿಮೆ, ಬಿಸಿಲಿನ ತಾಪ ಕಡಿಮೆ ಮಾಡಿ, ದೇಹವನ್ನು ತಂಪಾಗಿಡುವುದು ಅತ್ಯಂತ ಮುಖ್ಯ. ಹೀಗೆ ಹೆಚ್ಚಿನ ಖರ್ಚಿಲ್ಲದೆ ದೇಹ ತಂಪಾಗಿಡುವ ಪಾನೀಯ ಯಾವುದು

ಎಳನೀರು
ಎಳನೀರಿನಲ್ಲಿ ಎಲೆಕ್ಟ್ರೋಲೈಟ್‌ಗಳು ಇರುತ್ತವೆ. ಇದು ದೇಹಕ್ಕೆ ತಂಪು ನೀಡಿ, ನಿರ್ಜಲೀಕರಣವನ್ನು ತಡೆಯುತ್ತದೆ. ಪ್ರತಿದಿನ ಎಳನೀರು ಕುಡಿಯುವುದು ಒಳ್ಳೆಯದು.
ಕಲ್ಲಂಗಡಿ
ಕಲ್ಲಂಗಡಿ ಹಣ್ಣಿನಲ್ಲಿ ನೀರಿನಂಶ ಹೆಚ್ಚಾಗಿರುತ್ತದೆ. ಇದು ದೇಹಕ್ಕೆ ತಂಪು ನೀಡಿ, ನಿರ್ಜಲೀಕರಣ ಆಗದಂತೆ ನೋಡಿಕೊಳ್ಳುತ್ತದೆ.
ಕಬ್ಬಿನ ಜ್ಯೂಸ್
ದೇಹವನ್ನು ತಂಪಾಗಿಡಲು ಮತ್ತು ನಿರ್ಜಲೀಕರಣ ತಡೆಯಲು ಕಬ್ಬಿನ ಹಾಲು ಕುಡಿಯುವುದು ಉತ್ತಮ. ಇದು ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಐಸ್ ಆ್ಯಪಲ್
ಐಸ್ ಆ್ಯಪಲ್ ವಿಟಮಿನ್‌ಗಳು ಮತ್ತು ನೀರಿನಂಶ ಹೇರಳವಾಗಿದೆ. ಇದನ್ನು ತಿಂದರೆ ದೇಹಕ್ಕೆ ತಂಪು ಸಿಗುತ್ತದೆ ಮತ್ತು ಆಯಾಸ ಕಡಿಮೆಯಾಗುತ್ತದೆ.
ಮಜ್ಜಿಗೆ
ಮಜ್ಜಿಗೆಯಲ್ಲಿ ಲ್ಯಾಕ್ಟಿಕ್ ಆಸಿಡ್ ಇರುತ್ತದೆ. ಇದು ದೇಹಕ್ಕೆ ತಂಪು ನೀಡುವುದಲ್ಲದೆ, ಜೀರ್ಣಕ್ರಿಯೆಗೂ ತುಂಬಾ ಒಳ್ಳೆಯದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

