ಬೆಳಗಿನ ಉಪಾಹಾರಕ್ಕೆ ಏನಾದರೂ ವಿಶೇಷ ಮತ್ತು ಪೌಷ್ಟಿಕಾಂಶಭರಿತವಾಗಿ ತಿನ್ನಬೇಕೆಂದಿದ್ದರೆ 'ಪಾಲಕ್ ಇಡ್ಲಿ' ಉತ್ತಮ ಆಯ್ಕೆ. ರವಾ ಬಳಸಿ ಮಾಡುವ ಇಡ್ಲಿ ರೆಸಿಪಿಗಳು ಇಲ್ಲಿವೆ.
ಈ ಇಡ್ಲಿಗೆ 1 ಕಪ್ ರವೆ, ತಾಜಾ ಪಾಲಕ್ ಪ್ಯೂರಿ, ಮೊಸರು, ಉಪ್ಪು, ಶುಂಠಿ-ಮೆಣಸಿನಕಾಯಿ ಪೇಸ್ಟ್ ಮತ್ತು 1 ಚಮಚ ಈನೋ (Eno) ಬೇಕಾಗುತ್ತದೆ.
ಮೊದಲು ಒಂದು ಪ್ಯಾನ್‌ನಲ್ಲಿ ರವೆಯನ್ನು ಕೆಂಪಾಗಾಗದಂತೆ ಹದವಾಗಿ ಹುರಿದುಕೊಳ್ಳಿ. ಹುರಿದ ರವೆ ಇಡ್ಲಿಯನ್ನು ಸಾಫ್ಟ್ ಆಗಿ ಮಾಡಲು ಸಹಾಯ ಮಾಡುತ್ತದೆ.
ಹುರಿದ ರವೆಗೆ ಪಾಲಕ್ ಪ್ಯೂರಿ, ಮೊಸರು, ಉಪ್ಪು ಮತ್ತು ಶುಂಠಿ-ಮೆಣಸಿನಕಾಯಿ ಪೇಸ್ಟ್ ಸೇರಿಸಿ ಚೆನ್ನಾಗಿ ಕಲಸಿ. ಈ ಮಿಶ್ರಣವನ್ನು 20 ನಿಮಿಷ ನೆನೆಯಲು ಬಿಡಿ.
ಹಿಟ್ಟು ನೆನೆದ ನಂತರ ಈನೋ (Eno) ಸೇರಿಸಿ ಕಲಸಿ. ಎಣ್ಣೆ ಸವರಿದ ಇಡ್ಲಿ ತಟ್ಟೆಗಳಿಗೆ ಹಿಟ್ಟು ಹಾಕಿ, 15-20 ನಿಮಿಷ ಹಬೆಯಲ್ಲಿ ಬೇಯಿಸಿದರೆ ಪಾಲಕ್ ರವಾ ಇಡ್ಲಿ ಸಿದ್ಧ!
ಹೃದಯಾಘಾತ ಸೇರಿ ಇತರ ಸಮಸ್ಯೆ ತಡೆಯಲು 9 ಮೀನು ಆಹಾರ ನಿಮ್ಮ ಡಯಟ್‌ನಲ್ಲಿ ಇರಲಿ
ದುಬಾರಿ ವಾಲ್‌ಪೇಪರ್ ಯಾಕೆ ಬೇಕು? ಪುಟ್ಟಿಯಿಂದಲೇ ಲಿವಿಂಗ್ ರೂಮ್‌ಗೆ ಡಿಸೈನ್ ಮಾಡಿ
ಮಕ್ಕಳ ಹಳೆ ನೋಟ್‌ಬುಕ್ ರದ್ದಿಗೆ ಹಾಕಬೇಡಿ, 6 ಕ್ರಿಯೇಟಿವ್ ಕ್ರಾಫ್ಟ್ ಮಾಡಿಸಿ
ಗಾಜು, ಅರಗಿನ ಬಳೆಗಿಂತ ಈಗ ರೆಸಿನ್ ಬ್ಯಾಂಗಲ್ಸ್ ಟ್ರೆಂಡ್! ಮುರಿಯೋ ಚಿಂತೆಯೇ ಇಲ್ಲ