ಈ ವಿಶೇಷ ಫೇಸ್ ಪ್ಯಾಕ್ ಬಿಯರ್ಡ್ ಇರೋ ಪುರುಷರಿಗೆ 'ದಿ ಬೆಸ್ಟ್'
ಇತ್ತೀಚಿನ ದಿನಗಳಲ್ಲಿ ಪುರುಷರಲ್ಲಿ ಬಿಯರ್ಡ್ ಲುಕ್ ಸಾಕಷ್ಟು ಟ್ರೆಂಡಿಂಗ್ ನಲ್ಲಿದೆ. ಗಡ್ಡ ಇಷ್ಟಪಡುವ ಪುರುಷರು ಗಡ್ಡವನ್ನು ಸರಿಯಾಗಿ ನೋಡಿಕೊಳ್ಳೋದು ಸಹ ಮುಖ್ಯ. ನಿಮ್ಮ ಚರ್ಮದ ಆರೈಕೆಯಲ್ಲಿ ಕೆಲವು ವಿಶೇಷ ಫೇಸ್ ಪ್ಯಾಕ್ ಸೇರಿಸುವ ಮೂಲಕ, ನೀವು ಚರ್ಮ ಮತ್ತು ಗಡ್ಡದ ಬಗ್ಗೆ ಉತ್ತಮ ಕಾಳಜಿ ವಹಿಸ್ಬಹುದು.
ಬ್ಯುಸಿ ಲೈಫ್ ಸ್ಟೈಲಿಯಿಂದಾಗಿ, ಪುರುಷರು ಪ್ರಾಪರ್ ಸ್ಕಿನ್ ಕೇರ್ ರೂಟೀನ್ ಅನುಸರಿಸೋದು ಕಷ್ಟವಾಗುತ್ತೆ. ಚರ್ಮದ ನಂತರ ಗಡ್ಡ(Beard) ಕಾಪಾಡಿಕೊಳ್ಳಲು ಪುರುಷರಿಗೆ ಅಷ್ಟೊಂದು ಸಮಯ ಸಿಗೋದಿಲ್ಲ. ಹಾಗಿದ್ರೆ ಗಡ್ಡವನ್ನು ಕಾಪಾಡೋದು ಹೇಗೆ?
ಕೆಲವು ಫೇಸ್ ಪ್ಯಾಕ್ ಗ(Face pack) ನಿಮ್ಮ ಈ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಬಲ್ಲವು ಎಂದು ನಿಮಗೆ ತಿಳಿದಿದ್ಯಾ? ಹೌದು, ಚರ್ಮದ ಆರೈಕೆಯಲ್ಲಿ ಕೆಲವು ಫೇಸ್ ಪ್ಯಾಕ್ ಸೇರಿಸುವ ಮೂಲಕ, ನೀವು ನಿಮ್ಮ ಗಡ್ಡ ಮತ್ತು ಮುಖವನ್ನು ಒಟ್ಟಿಗೆ ಕೇರ್ ಮಾಡಬಹುದು.
ಮುಲ್ತಾನಿ ಮಿಟ್ಟಿ(Multani mitti) ಫೇಸ್ ಪ್ಯಾಕ್
ಮುಖ ಮತ್ತು ಗಡ್ಡ ಸ್ವಚ್ಛವಾಗಿಡಲು ಮತ್ತು ಸೈಡ್ ಎಫ್ಫೆಕ್ಟ್ಸ್ನಿಂದ ದೂರವಿಡಲು ಮುಲ್ತಾನಿ ಮಿಟ್ಟಿಯ ಫೇಸ್ ಪ್ಯಾಕ್ ಬೆಸ್ಟ್. ಇದನ್ನು ತಯಾರಿಸಲು, ಮುಲ್ತಾನಿ ಮಿಟ್ಟಿಯಲ್ಲಿ ರೋಸ್ ವಾಟರ್ ಬೆರೆಸಿ ಪೇಸ್ಟ್ ತಯಾರಿಸಿ. ಈಗ ಇದನ್ನು ಇಡೀ ಮುಖ ಮತ್ತು ಕುತ್ತಿಗೆಗೆ ಚೆನ್ನಾಗಿ ಹಚ್ಚಿ ಮತ್ತು ಒಣಗಿದ ನಂತರ, ಮುಖವನ್ನು ಶುದ್ಧ ನೀರಿನಿಂದ ತೊಳೆಯಿರಿ.
ಕಾಫಿ ಫೇಸ್ ಪ್ಯಾಕ್(Coffee face pack)
ಕಾಫಿ ಫೇಸ್ ಪ್ಯಾಕ್ ಆಂಟಿ-ಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿದೆ. ಇದನ್ನು ತಯಾರಿಸಲು ಕಾಫಿ ಪುಡಿಗೆ ಕೋಕೋ ಪುಡಿ ಸೇರಿಸಿ. ಈಗ ಅದಕ್ಕೆ ಹಾಲನ್ನು ಸೇರಿಸಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ. ಒಣಗಿದ ನಂತರ ಸ್ವಚ್ಛವಾದ ನೀರಿನಿಂದ ಮುಖ ತೊಳೆಯಿರಿ.
ನಿಂಬೆ ಮತ್ತು ಜೇನುತುಪ್ಪದ(Lemon and Honey) ಫೇಸ್ ಪ್ಯಾಕ್
ನಿಂಬೆ ಮತ್ತು ಜೇನುತುಪ್ಪದ ಫೇಸ್ ಪ್ಯಾಕ್ ಹಚ್ಚೋದು ಮುಖದ ಹೊಳಪನ್ನು ಉಳಿಸಿಕೊಳ್ಳಲು ಅತ್ಯುತ್ತಮ ವಿಧಾನವಾಗಿದೆ. ಇದಕ್ಕಾಗಿ, 1 ಟೀಸ್ಪೂನ್ ನಿಂಬೆ ರಸದಲ್ಲಿ 1 ಟೀಸ್ಪೂನ್ ಜೇನುತುಪ್ಪ ಬೆರೆಸಿ ಪೇಸ್ಟ್ ತಯಾರಿಸಿ. ಈಗ ಈ ಪೇಸ್ಟ್ ಮುಖಕ್ಕೆ ಹಚ್ಚಿ ಮತ್ತು ಒಣಗಿದ ನಂತರ ತಾಜಾ ನೀರಿನಿಂದ ಮುಖ ತೊಳೆಯಿರಿ.
ಈ ವಿಷಯಗಳ ಬಗ್ಗೆ ಕಾಳಜಿ ವಹಿಸಿ
ಪ್ರತಿದಿನ ಕ್ಲೆನ್ಸರ್ ನಿಂದ ಮುಖ ಸ್ವಚ್ಛಗೊಳಿಸಲು ಮರೆಯಬೇಡಿ. ಗಡ್ಡ ಸ್ವಚ್ಛಗೊಳಿಸುವ ಬಗ್ಗೆಯೂ ವಿಶೇಷ ಗಮನ ಹರಿಸಿ. ಇದಲ್ಲದೆ, ಫೇಸ್ ವಾಶ್(Face wash) ಮಾಡಿದ ನಂತರ, ಟೋನರ್ ಮತ್ತು ಮಾಯಿಶ್ಚರೈಸರ್ ಮುಖಕ್ಕೆ ಹಚ್ಚಿ. ಅಲ್ಲದೆ, ಅಟ್ಟ್ರಾಕ್ಟಿವ್ ಲುಕ್ ಪಡೆಯಲು ಬಿಯರ್ಡ್ ಆಯಿಲ್ ಹಚ್ಚಿ.