ತೂಕ ಇಳಿಸಿಕೊಳ್ಳಬೇಕಾ? ಈ 7 ಅಭ್ಯಾಸ ರೂಢಿಸಿಕೊಳ್ಳಿ
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನ ಮಾಡೋ ಕಂಪ್ಲೇಂಟ್ ಎಂದರೆ ತೂಕ ಹೆಚ್ಚದ್ದು. ಏನೆ ಮಾಡಿದ್ರು ತೂಕ ಇಳಿಯಲ್ಲ, ಯಾವ ಟಿಪ್ಸ್ ಫಾಲೋ ಮಾಡಿದ್ರೆ ತೂಕ ಇಳಿಯುತ್ತೆ ಅನ್ನೋದನ್ನೆಲ್ಲಾ ನೋಡುತ್ತಲೇ ಇರುತ್ತೇವೆ. ಈಗ ಇಲ್ಲಿ ನೀಡಲಾದ ಟಿಪ್ಸ್ ಸೇರಿಸಿ. ಒಂದು ಅಧ್ಯಯನದ ಪ್ರಕಾರ, ದೀರ್ಘ ಕಾಲದವರೆಗೆ ಆರೋಗ್ಯಕರ ಅಭ್ಯಾಸಗಳನ್ನು ಅನುಸರಿಸುವುದರಿಂದ ತೂಕ ಹೆಚ್ಚಳ (Weight Gain) ಮತ್ತು ಬೊಜ್ಜಿನಂತಹ (Obesity) ಅನೇಕ ಸಮಸ್ಯೆಗಳನ್ನು ಸುಲಭವಾಗಿ ಕಡಿಮೆ ಮಾಡಬಹುದು ಎನ್ನಲಾಗಿದೆ.
ನೀವು ಸಹ ತೂಕ ಕಳೆದುಕೊಳ್ಳಲು (Weightloss) ಬಯಸಿದರೆ, ನಿಮ್ಮ ಕೆಲವು ಅಭ್ಯಾಸಗಳನ್ನು ಬಿಡಬೇಕು ಮತ್ತು ಕೆಲವು ಹೊಸ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಹೆಚ್ಚಿದ ತೂಕವನ್ನು ನಿಯಂತ್ರಿಸಬೇಕು. ಆ ಹೊಸ ಅಭ್ಯಾಸಗಳು ಯಾವುವು ಎಂದು ತಿಳಿಯೋಣ -
ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಉಗುರು ಬೆಚ್ಚಗಿನ ನೀರಿನಲ್ಲಿ ಒಂದು ಅಥವಾ ಎರಡು ಹನಿ ನಿಂಬೆ(Lemon) ರಸ ಮತ್ತು ಒಂದು ಟೀ ಚಮಚ ಜೇನುತುಪ್ಪ ಸೇರಿಸಿ ಕುಡಿಯಿರಿ. ಇದು ನಿಮಗೆ ದಿನವಿಡೀ ಹಗುರ ಮತ್ತು ತಾಜಾತನವನ್ನು ನೀಡುತ್ತದೆ.
ಬೆಳಿಗ್ಗೆ ಮಾಡುವ 30-45 ನಿಮಿಷಗಳ ವ್ಯಾಯಾಮವು(Exercise) ತುಂಬಾ ಪ್ರಯೋಜನಕಾರಿ ಎಂದು ಆರೋಗ್ಯ ತಜ್ಞರು ನಂಬುತ್ತಾರೆ. ಹೀಗೆ ಮಾಡುವುದರಿಂದ, ತೂಕ ಕಡಿಮೆ ಆಗುತ್ತೆ ಮತ್ತು ಮಧುಮೇಹ ಮತ್ತು ಹೃದಯ ಸಂಬಂಧಿತ ಕಾಯಿಲೆಗ ಉಂಟಾಗುವ ಸಾಧ್ಯತೆ ಕೂಡ ಕಡಿಮೆ ಇರುತ್ತೆ.
ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯಬೇಡಿ. ಖಾಲಿ ಹೊಟ್ಟೆಯಲ್ಲಿ ಚಹಾ ಮತ್ತು ಕಾಫಿ (Coffee) ಕುಡಿಯುವುದರಿಂದ ಅಸಿಡಿಟಿ ಉಂಟಾಗುತ್ತದೆ ಮತ್ತು ಅಜೀರ್ಣ ಮತ್ತು ತಲೆನೋವಿನ ಸಮಸ್ಯೆಗಳನ್ನು ಸಹ ಉಂಟುಮಾಡಬಹುದು. ಇದನ್ನು ಸಾಧ್ಯವಾದಷ್ಟು ಅವೈಯ್ಡ್ ಮಾಡಿ.
ಒಂದು ಸಂಶೋಧನೆಯಲ್ಲಿ, ಹೆಚ್ಚಿನ ಪ್ರೋಟೀನ್ (Protein) ಉಪಾಹಾರ ಸೇವಿಸುವುದರಿಂದ ಹೊಟ್ಟೆ ತುಂಬುತ್ತದೆ ಮತ್ತು ಹೆಚ್ಚಿನ ಪ್ರೋಟೀನ್ ಉಪಾಹಾರವು ದೇಹದಲ್ಲಿ ಹಸಿವನ್ನು ಹೆಚ್ಚಿಸುವ ಹಾರ್ಮೋನುಗಳನ್ನು ಕಡಿಮೆ ಮಾಡುತ್ತೆ, ಇದು ತೂಕ ನಷ್ಟಕ್ಕೆ ಕಾರಣವಾಗುತ್ತದೆ.
ದೇಹದಲ್ಲಿನ ವಿಟಮಿನ್ ಡಿ (Vitamin D) ಕೊರತೆಯನ್ನು ಸರಿದೂಗಿಸಲು ಪೂರಕಗಳನ್ನು ಸೇವಿಸೋದಕ್ಕಿಂತ ಬಿಸಿಲಿನಲ್ಲಿ ಕುಳಿತುಕೊಳ್ಳುವುದು ಹೆಚ್ಚು ಪ್ರಯೋಜನಕಾರಿ. ಆದ್ದರಿಂದ ಬೆಳಿಗ್ಗೆ ಬೇಗನೆ ಎದ್ದ ನಂತರ, ಕನಿಷ್ಠ 15 ನಿಮಿಷಗಳ ಬಿಸಿಲಿನಲ್ಲಿ ನಿಂತುಕೊಳ್ಳಿ. ಇದು ಆರೋಗ್ಯಕ್ಕೆ ಉತ್ತಮ.
ಉತ್ತಮ ಆರೋಗ್ಯಕ್ಕೆ 8-10 ಗಂಟೆಗಳ ನಿದ್ರೆ (Sleep) ಬಹಳ ಮುಖ್ಯ. ಪೂರ್ಣ ನಿದ್ರೆಯನ್ನು ಪಡೆಯದಿದ್ದರೆ, ಚಯಾಪಚಯ ಕ್ರಿಯೆಯು ಸರಾಗವಾಗಿ ಕೆಲಸ ಮಾಡುವುದಿಲ್ಲ ಮತ್ತು ದೇಹದಲ್ಲಿನ ಹಾರ್ಮೋನುಗಳು ಅಸಮತೋಲನಗೊಳ್ಳುತ್ತವೆ. ಇದರಿಂದ ತೂಕ ಹೆಚ್ಚಾಗುವ ಸಾಧ್ಯತೆ ಇದೆ.
ದಿನವಿಡೀ ಯಾವುದಾದರೂ ಒಂದು ರೀತಿಯ ದೈಹಿಕ ಚಟುವಟಿಕೆಯಲ್ಲಿ ನಿರತರಾಗಿರಿ. ವಾಕಿಂಗ್, ಸೈಕ್ಲಿಂಗ್ (Cycling), ಡ್ಯಾನ್ಸ್ (Dance), ಜಂಪಿಂಗ್ ರೋಪ್ (Jumping Rope) ಇತ್ಯಾದಿ, ಇದು ತೂಕವನ್ನು ಕಡಿಮೆ ಮಾಡುತ್ತದೆ. ಜೊತೆಗೆ ನಿಮ್ಮನ್ನು ಆಕ್ಟಿವ್ ಆಗಿರಿಸಲು ಇದು ಸಹಾಯ ಮಾಡುತ್ತೆ.