ಮಾವಿನ ಹಣ್ಣು ತಿನ್ನೋದ್ರಿಂದ ಸಿಗುತ್ತೆ ಸಿಕ್ಕಾಪಟ್ಟೆ ಪ್ರಯೋಜನ
ಭಾರತದಲ್ಲಿ ನೀವು ಹಲವು ಬಗೆಯ ಮಾವಿನ ಹಣ್ಣುಗಳನ್ನು ಕಾಣಬಹುದು. ಮಾವು ಒಂದು ರಸಭರಿತವಾದ ರುಚಿಕರವಾದ ಹಣ್ಣಾಗಿದ್ದು, ಇದನ್ನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

ಕೆಲವರು ಬೇಸಿಗೆ ಕಾಲಕ್ಕಾಗಿ ಕಾಯುವುದು ತಿನ್ನಲು ಮಾವಿನಹಣ್ಣು (Mango) ಸಿಗುತ್ತದೆ ಎಂಬ ಕಾರಣಕ್ಕಾಗಿ ಮಾತ್ರ. ಮಾವಿನ ಹಣ್ಣು ಪ್ರಿಯರು ಈ ಋತುವನ್ನು ಇಷ್ಟಪಡುತ್ತಾರೆ ಏಕೆಂದರೆ ಈ ಋತುವಿನಲ್ಲಿ ತಾಜಾ ಮಾವಿನಹಣ್ಣು ತಿನ್ನುವ ಮಜಾನೇ ಬೇರೆಯಾಗಿರುತ್ತೆ. ನೀವು ಮಾವಿನಹಣ್ಣು ತಿನ್ನಲು ಇಷ್ಟಪಡುವವರಾಗಿದ್ದರೆ ಈ ಲೇಖನ ನಿಮಗಾಗಿ. ಮಾವು ರುಚಿಯಲ್ಲಿ ಮಾತ್ರವಲ್ಲದೆ ಆರೋಗ್ಯದ ದೃಷ್ಟಿಯಿಂದಲೂ ತುಂಬಾ ಒಳ್ಳೆಯದು. ಮಾವಿನ ಹಣ್ಣನ್ನು ಹಣ್ಣುಗಳ ರಾಜ ಎಂದು ಕರೆಯಲಾಗುತ್ತದೆ. ಮತ್ತು ಈ ಋತುವಿನಲ್ಲಿ ಲಭ್ಯವಿರುವ ತಾಜಾ ಮಾವಿನ ರುಚಿ ಕೂಡ ಬೇರೆಯದೇ ಆಗಿದೆ.
ಮಾವು ತಿನ್ನುವುದರ ಪ್ರಯೋಜನ (Benfits of Mango)
ಭಾರತದಲ್ಲಿ ನೀವು ಹಲವು ವಿಧದ ಮಾವಿನ ಹಣ್ಣುಗಳನ್ನು ಕಾಣಬಹುದು. ಮಾವು ಬಹುತೇಕ ಎಲ್ಲರೂ ತಿನ್ನಲು ಇಷ್ಟಪಡುವ ರಸಭರಿತವಾದ ರುಚಿಕರವಾದ ಹಣ್ಣು. ಮೆಗ್ನೀಸಿಯಮ್, ಪೊಟ್ಯಾಸಿಯಮ್, ಪ್ರೋಟೀನ್, ವಿಟಮಿನ್‌ಗಳು ಮತ್ತು ಫೋಲೇಟ್‌ನಂತಹ ಅನೇಕ ಪೋಷಕಾಂಶಗಳು ಮಾವಿನಲ್ಲಿ ಕಂಡುಬರುತ್ತವೆ, ಇದು ದೇಹವನ್ನು ಅನೇಕ ಸಮಸ್ಯೆಗಳಿಂದ ರಕ್ಷಿಸುವಲ್ಲಿ ಸಹಾಯ ಮಾಡುತ್ತದೆ. ಈವಾಗ ಪ್ರತಿದಿನ ಮಾವು ತಿನ್ನುವುದರ ಪ್ರಯೋಜನಗಳನ್ನು (benefits of eating mango) ತಿಳಿದುಕೊಳ್ಳೋಣ.
ರೋಗನಿರೋಧಕ ಶಕ್ತಿ (immunity power)
ಮಾವು ವಿಟಮಿನ್ ಸಿ ಯ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ. ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಬಲವಾದ ರೋಗನಿರೋಧಕ ಶಕ್ತಿ ದೇಹವನ್ನು ಅನೇಕ ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ನೀವು ಸಹ ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಬಯಸಿದರೆ, ನೀವು ಮಾವನ್ನು ಸೇವಿಸಬಹುದು.
mango cutting tricks
ಫೈಬರ್ ಇದೆ (Fiber)
ಜೀರ್ಣಕ್ರಿಯೆಯ ಆರೋಗ್ಯಕ್ಕೆ ಸಾಕಷ್ಟು ಫೈಬರ್ ತಿನ್ನುವುದು ಮುಖ್ಯ ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ಹೃದಯ ಕಾಯಿಲೆ ಮತ್ತು ಕೆಲವು ರೀತಿಯ ಕ್ಯಾನ್ಸರ್ ಸೇರಿದಂತೆ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಒಂದು ಕಪ್ ಮಾವಿನ ಹಣ್ಣಿನಲ್ಲಿ 3 ಗ್ರಾಂ ಫೈಬರ್ ಇರುತ್ತದೆ. ಇದು ಆರೋಗ್ಯಕ್ಕೆ ತುಂಬಾನೆ ಅಗತ್ಯ.
ಸ್ಮರಣಶಕ್ತಿ (memory Power)
ಮಾವಿನ ಹಣ್ಣಿನಲ್ಲಿ ಕಂಡುಬರುವ ಗ್ಲುಟಾಮಿನ್ ಆಮ್ಲವು ಸ್ಮರಣಶಕ್ತಿಯನ್ನು ಚುರುಕುಗೊಳಿಸಲು ಸಹಾಯ ಮಾಡುತ್ತದೆ. ನಿಮ್ಮ ಸ್ಮರಣಶಕ್ತಿ ದುರ್ಬಲವಾಗಿದ್ದರೆ, ನೀವು ನಿಮ್ಮ ಆಹಾರದಲ್ಲಿ ಮಾವನ್ನು ಸೇರಿಸಿಕೊಳ್ಳಬಹುದು.
ಮಧುಮೇಹ (diabetes)
ಮಧುಮೇಹದಲ್ಲಿ ಸಿಹಿ ಪದಾರ್ಥಗಳನ್ನು ತಿನ್ನುವುದನ್ನು ನಿಷೇಧಿಸಲಾಗಿದೆ. ಮಾವಿನ ಹಣ್ಣಿನಲ್ಲಿ ಆಂಥೋಸಯಾನಿಡಿನ್‌ಗಳು ಎಂಬ ಟ್ಯಾನಿನ್‌ಗಳಿವೆ, ಇದು ಮಧುಮೇಹ ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತದೆ.
ಚರ್ಮಕ್ಕೂ ಉತ್ತಮ (best for skin)
ಬೇಸಿಗೆಯಲ್ಲಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ. ನೀವು ನಿಮ್ಮ ಚರ್ಮವನ್ನು ಆರೋಗ್ಯವಾಗಿಡಲು ಬಯಸಿದರೆ, ನಿಮ್ಮ ಆಹಾರದಲ್ಲಿ ಮಾವನ್ನು ಸೇರಿಸಿಕೊಳ್ಳಬಹುದು.
ಕಣ್ಣುಗಳಿಗೂ ಬೆಸ್ಟ್ (best for eyes)
ಮಾವಿನಹಣ್ಣಿನಲ್ಲಿ ವಿಟಮಿನ್ ಎ ಕಂಡುಬರುತ್ತದೆ ಮತ್ತು ವಿಟಮಿನ್ ಎ ಕಣ್ಣುಗಳಿಗೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ದೃಷ್ಟಿ ಹೆಚ್ಚಿಸಲು ಮತ್ತು ಕಣ್ಣುಗಳನ್ನು ಆರೋಗ್ಯವಾಗಿಡಲು ನೀವು ಮಾವನ್ನು ಸೇವಿಸಬಹುದು.