ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಇದೀಗ ವಿಶ್ವದ ಅತೀ ದೊಡ್ಡ ರೈತ, 600 ಟನ್ ಫಸಲು
ಭಾರತದ ಶ್ರೀಮಂತ ಉದ್ಯಮಿ ಇದೀಗ ವಿಶ್ವದ ಅತೀ ದೊಡ್ಡ ರೈತನಾಗಿ ಹೊರಹೊಮ್ಮಿದ್ದಾರೆ. 600 ಎಕರೆ ಬರಡು ಭೂಮಿಯನ್ನು ಅತ್ಯುತ್ತಮ ಫಸಲು ಭೂಮಿಯಾಗಿ ಪರಿವರ್ತಿಸಿದ ಅಂಬಾನಿ ಇದೀಗ ಇದರ ಫಸಲನ್ನು ವಿದೇಶಗಳಿಗೆ ರಫ್ತು ಮಾಡಿ, ಅತೀ ದೊಡ್ಡ ರಫ್ತುದಾರನಾಗಿದ್ದಾರೆ.

ಮುಕೇಶ್ ಅಂಬಾನಿ ಉದ್ಯಮ ಸಾಮ್ರಾಜ್ಯ ಬಿಡಿಸಿ ಹೇಳಬೇಕಾಗಿಲ್ಲ. ರಿಲಯನ್ಸ್ ಗ್ರೂಪ್ ಮುಖ್ಯಸ್ಥನಾಗಿರುವ ಮುಕೇಶ್ ಅಂಬಾನಿ ಟೆಲಿಕಾಂ, ಪೆಟ್ರೋಲಿಯಂ, ಪವರ್, ರಿಫೈನರಿ, ದಿನಸಿ, ಟೆಕ್ಸ್‌ಟೈಲ್, ಪಾನೀಯ ಸೇರಿದಂತೆ ಹಲವು ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿ ದಿನ ಲಕ್ಷಾಂತರ ಕೋಟಿ ರೂಪಾಯಿ ವ್ಯವಹಾರ ನಡೆಸುತ್ತಾರೆ. ವಿಶ್ವದ ಶ್ರೀಮಂತರ ಪಟ್ಟಿಯಲ್ಲೂ ಮುಕೇಶ್ ಅಂಬಾನಿ ಸ್ಥಾನ ಪಡೆದಿದ್ದಾರೆ. ಹೀಗಿರುವ ಮುಕೇಶ್ ಅಂಬಾನಿ ಇದೀಗ ಅತೀ ದೊಡ್ಡ ರೈತನಾಗಿ ಹೊರಹೊಮ್ಮಿದ್ದಾರೆ ಎಂದರೇ ನಂಬಲೇ ಬೇಕು.
ಮುಕೇಶ್ ಅಂಬಾನಿ ಇದೀಗ ಭಾರತದ ಅತೀ ದೊಡ್ಡ ರೈತ. ಬರೋಬ್ಬರಿ 600 ಎಕರೆ ಬರಡು ಭೂಮಿಯಲ್ಲಿ ಬೆಳೆ ಬೆಳೆದು ಇದೀಗ ಫಸಲನ್ನು ವಿದೇಶಗಳಿಗೆ ರಫ್ತು ಮಾಡಿದ್ದಾರೆ. ವಿಶೇಷ ಅಂದರೆ ವಿಶ್ವದಲ್ಲೇ ಒಬ್ಬ ರೈತ ಮಾಡಿದ ಅತೀ ಹೆಚ್ಚಿನ ರಫ್ತು ಅನ್ನೋ ದಾಖಲೆ ಬರೆದಿದ್ದಾರೆ. ಹೌದು, ಮುಕೇಶ್ ಅಂಬಾನಿ ಅತೀ ಹೆಚ್ಚು ಮಾವಿನ ಹಣ್ಣಿನ ರಫ್ತುದಾರ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮುಕೇಶ್ ಅಂಬಾನಿ ಈ ವರ್ಷ ಈಗಾಗಲೇ ಬರೋಬ್ಬರಿ 600 ಟನ್ ಮಾವಿನ ಹಣ್ಣನ್ನು ರಫ್ತು ಮಾಡಿದ್ದಾರೆ. ಇದು ಒಬ್ಬ ರೈತ ರಫ್ತು ಮಾಡಿದ ಅತೀ ದೊಡ್ಡ ಫಸಲಾಗಿದೆ. ವಿಶೇಷ ಅಂದರೆ ಮುಕೇಶ್ ಅಂಬಾನಿಯ ಈ ಮಾವಿನ ತೋಟದಲ್ಲಿ 1.5 ಲಕ್ಷ ಮಾವಿನ ಮರಗಳಿದೆ. ಇದರಲ್ಲಿ 200ಕ್ಕೂ ಹೆಚ್ಚಿನ ಮಾವಿನ ಹಣ್ಣಿನ ತಳಿಗಳಿದೆ. ಈ ಮೂಲಕ 600 ಟನ್ ಮಾವಿನ ಹಣ್ಣನ್ನು ರಫ್ತು ಮಾಡಿದ್ದಾರೆ.
ಗುಜರಾತ್‌ನ ಜಾಮ್‌ನಗರದಲ್ಲಿ ಮುಕೇಶ್ ಅಂಬಾನಿಯ ಮಾವಿನ ತೋಟವಿದೆ. ಜಾಮ್‌ನಗರದಲ್ಲಿ ಮುಕೇಶ್ ಅಂಬಾನಿ ಆಯಿಲ್ ರಿಫೈನರಿ ಘಟಕ ಉದ್ಯಮ ಆರಂಭಿಸಿದ್ದರು. ಈ ವೇಳೆ ಪರಿಸರ ಇಲಾಖೆಯಿಂದ ಕಟ್ಟು ನಿಟ್ಟಿನ ಆದೇಶ ನೀಡಲಾಗಿತ್ತು. ಕಾರಣ ಈ ಘಟಕದಿಂದ ಮಾಲಿನ್ಯ ಹೆಚ್ಚಾಗುವ ಕಾರಣ ಪರಿಹಾರಕ್ಕೆ ಸೂಚಿಸಿತ್ತು. ಇದಕ್ಕೆ ಉಪಾಯ ಮಾಡಿ ಆರಂಭಿಸಿದ ತೋಟವೇ ಮಾವಿನ ತೋಟ.
ಜಾಮ್‌ನಗರ ಬರಡು ಭೂಮಿ. ಇಲ್ಲಿ ಏನು ಬೆಳೆಯಲು ಸಾಧ್ಯವಿಲ್ಲ ಅನ್ನೋ ಭೂಮಿ ಅದು. ತಂತ್ರಜ್ಞರು, ಅನುಭವಿಗಳು, ರೈತರು ಎಲ್ಲರನ್ನು ಕರೆಯಿಸಿ 1997ರಲ್ಲಿ ಈ ಭೂಮಿಯಲ್ಲಿ ಮಾವು ಬೆಳೆಯಲು ನಿರ್ಧರಿಸಿದ್ದರು. ವಿವಿಧ ತಳಿಗಳ ಮಾವು ತಂದು ಬೆಳೆಯಲಾಗಿತ್ತು. ಆರಂಭದಲ್ಲಿ ಹಲವು ಸವಾಲು ಎದುರಾಗಿತ್ತು. ಆದರೆ ಈ ಸವಾಲುಗಳನ್ನು ಮುಕೇಶ್ ಅಂಬಾನಿ ಮೆಟ್ಟಿ ನಿಂತು ಮಾವು ಬೆಳೆದಿದ್ದರು.
ಒಣ ಹವೆ ಹಾಗೂ ಉಪ್ಪು ಮಿಶ್ರಿತ ಮಣ್ಣಿನಲ್ಲಿ ಅತ್ಯಾಧುನಿತ ತಂತ್ರಜ್ಞಾನ ಬಳಕಿ ಮಾವು ಬೆಳೆಯಲಾಗಿತ್ತು. ಇದೀಗ ಸಂಪೂರ್ಣ ತೋಟದಲಲ್ಲಿ ಮಾವು ಫಸಲು ಬರುತ್ತಿದೆ. ಮಾವಿನ ಹಣ್ಣನ್ನು ವಿದೇಶಗಳಿಗೆ ರಫ್ತ ಮಾಡಲಾಗುತ್ತಿದೆ. ಸ್ಛಳೀಯ ಮಾರುಕಟ್ಟೆಗೂ ಈ ಮಾವುಗಳನ್ನು ಮಾರಾಟ ಮಾಡಲಾಗುತ್ತಿದೆ.