MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಅದ್ಭುತ.. ದಿನಾ ಒಂದು ತುಂಡು ತಿಂದ್ರು ಸಾಕು, ವಯಸ್ಸಾದರೂ ಡಯಾಬಿಟಿಸ್‌, ಬಿಪಿ ಮಿತಿ ಮೀರಲ್ಲ!

ಅದ್ಭುತ.. ದಿನಾ ಒಂದು ತುಂಡು ತಿಂದ್ರು ಸಾಕು, ವಯಸ್ಸಾದರೂ ಡಯಾಬಿಟಿಸ್‌, ಬಿಪಿ ಮಿತಿ ಮೀರಲ್ಲ!

Aloe Vera benefits: ಅಲೋವೆರಾ ಕೇವಲ ಸೌಂದರ್ಯಕ್ಕೆ ಮಾತ್ರವಲ್ಲ, ದೇಹವನ್ನು ಒಳಗಿನಿಂದ ಶುದ್ಧೀಕರಿಸುವ ಶಕ್ತಿಯನ್ನೂ ಹೊಂದಿದೆ. ದಿನಕ್ಕೊಂದು ತುಂಡು ಅಲೋವೆರಾ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುವುದಲ್ಲದೆ, ಚರ್ಮ, ಕೂದಲಿನ ಆರೋಗ್ಯವೂ ಸುಧಾರಿಸುತ್ತದೆ. ಈ ನೈಸರ್ಗಿಕ ಮದ್ದಿನ ಮಾಹಿತಿ ಇಲ್ಲಿದೆ. 

2 Min read
Author : Ashwini HR
Published : Feb 28 2026, 09:00 PM IST
Share this Photo Gallery
  • FB
  • TW
  • Linkdin
  • Whatsapp
110
ದೇಹವನ್ನು ಒಳಗಿನಿಂದ ಆರೋಗ್ಯವಾಗಿರಿಸುತ್ತೆ
Image Credit : Getty

ದೇಹವನ್ನು ಒಳಗಿನಿಂದ ಆರೋಗ್ಯವಾಗಿರಿಸುತ್ತೆ

ಇಂದಿನ ಬಿಡುವಿಲ್ಲದ ಜೀವನಶೈಲಿ, ಅನಿಯಮಿತ ಆಹಾರ ಮತ್ತು ಕೆಲಸದ ಒತ್ತಡದಿಂದಾಗಿ ಸಣ್ಣ ವಯಸ್ಸಿನಲ್ಲೇ ಬಿಪಿ, ಡಯಾಬಿಟಿಸ್‌ನಂತಹ ಗಂಭೀರ ಕಾಯಿಲೆಗಳು ಬರುತ್ತಿವೆ. ಅಂತಹ ಸಮಯದಲ್ಲಿ ಆಹಾರದಲ್ಲಿ ನೈಸರ್ಗಿಕ ಪೋಷಕಾಂಶಗಳನ್ನು ಸೇರಿಸಿಕೊಳ್ಳುವುದು ಬಹಳ ಮುಖ್ಯ. ಅದಕ್ಕೆ ಅಲೋವೆರಾ (ಲೋಳೆಸರ) ಉತ್ತಮ ಆಯ್ಕೆಯಾಗಿದೆ. ಇದು ದೇಹವನ್ನು ಒಳಗಿನಿಂದ ಆರೋಗ್ಯವಾಗಿರಿಸುತ್ತದೆ.

210
ರೋಗನಿರೋಧಕ ಶಕ್ತಿ ಹೆಚ್ಚಾಗುತ್ತೆ
Image Credit : Getty

ರೋಗನಿರೋಧಕ ಶಕ್ತಿ ಹೆಚ್ಚಾಗುತ್ತೆ

ಅಲೋವೆರಾದಲ್ಲಿ ನೀರು ಹೇರಳವಾಗಿರುವುದು ಮಾತ್ರವಲ್ಲದೆ, ಕ್ಯಾಲ್ಸಿಯಂ, ಸೋಡಿಯಂ, ವಿಟಮಿನ್ ಸಿ ಕೂಡ ಇರುತ್ತದೆ. ಇದು ದೇಹವನ್ನು ನಿರ್ವಿಷಗೊಳಿಸಲು (Detoxification) ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

Related Articles

Related image1
ಬೆಂಗಳೂರಿನ ತರಕಾರಿಗಳಲ್ಲಿ ಸೀಸ ಪತ್ತೆ: ಈ ವಿಷಕಾರಿ ಅಂಶದ ಪರಿಣಾಮ ಕಡಿಮೆ ಮಾಡಲು ಹೇಗೆ ತೊಳೆಯಬೇಕು?
Related image2
ಹುದುಗಿಸಿದ 'ಸೌತೆಕಾಯಿ ಕಾಂಜಿ' ಕರುಳಿನ ಆರೋಗ್ಯಕ್ಕೆ ವರದಾನ, ಮಾಡೋಕೆ ಹೆಚ್ಚು ಟೈಂ ಬೇಕಿಲ್ಲ
310
ಡಯಾಬಿಟಿಸ್‌ ಸಮಸ್ಯೆಗೆ ಪರಿಹಾರ
Image Credit : stockPhoto

ಡಯಾಬಿಟಿಸ್‌ ಸಮಸ್ಯೆಗೆ ಪರಿಹಾರ

ಅಲೋವೆರಾ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದರ ಜ್ಯೂಸ್‌ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಉಪಶಮನ ಸಿಗುತ್ತದೆ. ಇದರಲ್ಲಿರುವ ಕಿಣ್ವಗಳು ಮತ್ತು ಜೈವಿಕ ಸಕ್ರಿಯ ಸಂಯುಕ್ತಗಳು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ವೇಗಗೊಳಿಸುತ್ತವೆ. ಇದು ಡಯಾಬಿಟಿಸ್‌ನಂತಹ ಸಮಸ್ಯೆಗಳಿಂದಲೂ ಉಪಶಮನ ನೀಡುತ್ತದೆ.

410
ಗಂಭೀರ ಕಾಯಿಲೆಗಳ ವಿರುದ್ಧ ಹೋರಾಡಲು
Image Credit : stockPhoto

ಗಂಭೀರ ಕಾಯಿಲೆಗಳ ವಿರುದ್ಧ ಹೋರಾಡಲು

ಅಲೋವೆರಾದಲ್ಲಿ ಆ್ಯಂಟಿ-ಆಕ್ಸಿಡೆಂಟ್‌ಗಳು ಮತ್ತು ಖನಿಜಗಳು ಸಮೃದ್ಧವಾಗಿವೆ. ಇದು ದೇಹವನ್ನು ಹೈಡ್ರೀಕರಿಸಿದ ಸ್ಥಿತಿಯಲ್ಲಿ ಇಡುತ್ತದೆ ಮತ್ತು ಗಂಭೀರ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

510
ನೈಸರ್ಗಿಕ ಹೊಳಪಿಗೆ
Image Credit : Getty

ನೈಸರ್ಗಿಕ ಹೊಳಪಿಗೆ

ಚರ್ಮವು ನಿರ್ಜೀವವಾಗಿದ್ದರೆ ಅಂತಹವರಿಗೆ ಅಲೋವೆರಾ ಅತ್ಯುತ್ತಮವಾದುದು. ಇದರಲ್ಲಿರುವ ವಿಟಮಿನ್ ಸಿ ಮತ್ತು ವಿಟಮಿನ್ ಇ ಚರ್ಮವನ್ನು ಫ್ರೀ ರಾಡಿಕಲ್ ಹಾನಿಯಿಂದ ರಕ್ಷಿಸುತ್ತದೆ ಹಾಗೂ ನೈಸರ್ಗಿಕ ಹೊಳಪನ್ನು ನೀಡುತ್ತದೆ.

610
ಕೂದಲಿಗೂ ಪ್ರಯೋಜನಕಾರಿ
Image Credit : Getty

ಕೂದಲಿಗೂ ಪ್ರಯೋಜನಕಾರಿ

ಅಲ್ಲದೆ ಅಲೋವೆರಾದಲ್ಲಿನ ಪೋಷಕಾಂಶಗಳು ಕೂದಲಿಗೆ ತುಂಬಾ ಪ್ರಯೋಜನಕಾರಿ. ನಿಮಗೆ ಹೊಟ್ಟು (Dandruff) ಸಮಸ್ಯೆ ಇದ್ದರೆ ಅಲೋವೆರಾ ಬಳಸುವುದರಿಂದ ಫಲಿತಾಂಶ ಸಿಗುತ್ತದೆ. ಆದ್ದರಿಂದ ಆರೋಗ್ಯ ಸಮಸ್ಯೆಗಳಿಗೆ ಕೇವಲ ಔಷಧಿಗಳ ಮೇಲೆ ಅವಲಂಬಿತವಾಗದೆ, ನೈಸರ್ಗಿಕ ಪರಿಹಾರವಾಗಿ ಲೋಳೆಸರ ಅಥವಾ ಅಲೋವೆರಾ ಜ್ಯೂಸ್ ಬಳಸುವುದು ಒಳ್ಳೆಯದು.

710
ಎಷ್ಟು ಸೇವಿಸಬೇಕು?
Image Credit : Getty

ಎಷ್ಟು ಸೇವಿಸಬೇಕು?

ಅತಿಯಾದರೆ ಅಮೃತವೂ ವಿಷ ಎಂಬಂತೆ ಲೋಳೆಸರವು ಆರೋಗ್ಯಕ್ಕೆ ತುಂಬಾ ಒಳ್ಳೆಯದಾದರೂ, ಇದನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದು ಬಹಳ ಮುಖ್ಯ. ನೀವು ನೇರವಾಗಿ ಗಿಡದಿಂದ ತೆಗೆದ ಲೋಳೆಸರ ತಿನ್ನುವುದಾದರೆ, ದಿನಕ್ಕೆ 1 ರಿಂದ 2 ಇಂಚಿನಷ್ಟು ಸಣ್ಣ ತುಂಡು ಸಾಕಾಗುತ್ತದೆ.

810
ಆರೋಗ್ಯಕ್ಕೆ ಹಾನಿಕಾರಕ
Image Credit : Getty

ಆರೋಗ್ಯಕ್ಕೆ ಹಾನಿಕಾರಕ

ಲೋಳೆಸರವನ್ನು ಕತ್ತರಿಸಿದಾಗ ಮೊದಲು ಹಳದಿ ಬಣ್ಣದ ಜಿಗುಟಾದ ದ್ರವ (Latex) ಬರುತ್ತದೆ. ಇದನ್ನು ಪೂರ್ತಿಯಾಗಿ ತೊಳೆದು ತೆಗೆಯಬೇಕು. ಇದು ಹೊಟ್ಟೆ ನೋವು ಅಥವಾ ಭೇದಿಗೆ ಕಾರಣವಾಗಬಹುದು. ಕೇವಲ ಒಳಗಿನ ಬಿಳಿ ಬಣ್ಣದ ಜೆಲ್ ಮಾತ್ರ ಬಳಸಿ. ದಿನಕ್ಕೆ 50ml ಗಿಂತ ಹೆಚ್ಚು ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಇದು ಪೊಟ್ಯಾಶಿಯಂ ಮಟ್ಟ ಕಡಿಮೆ ಮಾಡಬಹುದು.

910
ಯಾರು ಸೇವಿಸಬಾರದು?
Image Credit : Getty

ಯಾರು ಸೇವಿಸಬಾರದು?

ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು.
12 ವರ್ಷದ ಒಳಗಿನ ಮಕ್ಕಳು.
ಮೂತ್ರಪಿಂಡದ (Kidney) ಸಮಸ್ಯೆ ಇರುವವರು ವೈದ್ಯರ ಸಲಹೆ ಇಲ್ಲದೆ ಸೇವಿಸಬಾರದು.

1010
ಗಮನಿಸಿ
Image Credit : Getty

ಗಮನಿಸಿ

ನೀವು ಯಾವುದೇ ದೀರ್ಘಕಾಲದ ಕಾಯಿಲೆಗೆ ಮದ್ದು ತೆಗೆದುಕೊಳ್ಳುತ್ತಿದ್ದರೆ, ಲೋಳೆಸರವನ್ನು ಆಹಾರದಲ್ಲಿ ಸೇರಿಸುವ ಮೊದಲು ಒಮ್ಮೆ ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಆರೋಗ್ಯ
ಜೀವನಶೈಲಿ

Latest Videos
Recommended Stories
Recommended image1
ಪಕ್ಕಾ ಹೊಟೆಲ್ ರುಚಿಯ ಮಸಾಲೆ ವಡೆ ಮಾಡೋದಕ್ಕೆ ಈ ಪದಾರ್ಥ ಬಳಸಿ, ಈ ಸೀಕ್ರೆಟ್ ನಿಮ್ಗೆ ಇನ್ಯಾರೂ ಹೇಳಿರಲ್ಲ!
Recommended image2
ಇಂದಿನಿಂದ ಗರ್ಭಕಂಠ ಕ್ಯಾನ್ಸರ್ ತಡೆಗೆ 14 ವರ್ಷ ಮೇಲ್ಪಟ್ಟ ಬಾಲಕಿಯರಿಗೆ HPV ಲಸಿಕಾ ಅಭಿಯಾನ ಆರಂಭ
Recommended image3
ಶಿವನ ಪೂಜೆಗಷ್ಟೇ ಅಲ್ಲ, ಬಿಲ್ವಪತ್ರೆ ಆರೋಗ್ಯಕ್ಕೂ ಉಪಕಾರಿ.. ತುಪ್ಪದ ಜೊತೆಗೆ ಗಟ್ಟಿ ಚಟ್ನಿ ತಿಂದರೆ ಆರೋಗ್ಯದಲ್ಲಿ ಮ್ಯಾಜಿಕ್ ಗ್ಯಾರಂಟಿ!
Related Stories
Recommended image1
ಬೆಂಗಳೂರಿನ ತರಕಾರಿಗಳಲ್ಲಿ ಸೀಸ ಪತ್ತೆ: ಈ ವಿಷಕಾರಿ ಅಂಶದ ಪರಿಣಾಮ ಕಡಿಮೆ ಮಾಡಲು ಹೇಗೆ ತೊಳೆಯಬೇಕು?
Recommended image2
ಹುದುಗಿಸಿದ 'ಸೌತೆಕಾಯಿ ಕಾಂಜಿ' ಕರುಳಿನ ಆರೋಗ್ಯಕ್ಕೆ ವರದಾನ, ಮಾಡೋಕೆ ಹೆಚ್ಚು ಟೈಂ ಬೇಕಿಲ್ಲ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved