Fenugreek Water: 11 ದಿನ ಮೆಂತ್ಯ ನೀರು ಕುಡಿದ್ರೆ ದೇಹದಲ್ಲಿ ಈ 5 ಬದಲಾವಣೆ ಆಗೋದು ಗ್ಯಾರಂಟಿ!
Fenugreek Water Benefits: ಮೆಂತ್ಯ ಕಾಳಿನಲ್ಲಿ ವಿಟಮಿನ್‌ಗಳು ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ಹೇರಳವಾಗಿವೆ. ರಾತ್ರಿಯಿಡೀ ನೀರಿನಲ್ಲಿ ನೆನೆಸಿ, ಮರುದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅಂತಾರೆ ತಜ್ಞರು.
16

Image Credit : Getty
ಮೆಂತ್ಯದಲ್ಲಿರುವ ಪೋಷಕಾಂಶಗಳು
ಮೆಂತ್ಯದಲ್ಲಿ ಕರಗುವ ಫೈಬರ್, ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ವಿಟಮಿನ್‌ಗಳು ಸಮೃದ್ಧವಾಗಿವೆ. ಇವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತವೆ. ತಜ್ಞರ ಪ್ರಕಾರ, 11 ದಿನಗಳ ಕಾಲ ತಪ್ಪದೆ ಮೆಂತ್ಯ ನೀರನ್ನು ಕುಡಿದರೆ ದೇಹದಲ್ಲಿ ಸ್ಪಷ್ಟ ಬದಲಾವಣೆಗಳು ಕಾಣಿಸುತ್ತವೆ. ಮೆಂತ್ಯ ನೀರು ಜೀರ್ಣಾಂಗ ವ್ಯವಸ್ಥೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಇದರಲ್ಲಿರುವ ಫೈಬರ್ ಗ್ಯಾಸ್, ಅಜೀರ್ಣ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ.
26
Image Credit : Getty
ಸಕ್ಕರೆ ಕಾಯಿಲೆಗೆ ಔಷಧಿ ತೆಗೆದುಕೊಳ್ಳುತ್ತಿರುವವರು
ಮೆಂತ್ಯ ನೀರು ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೂ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ರಕ್ತದಲ್ಲಿ ಸಕ್ಕರೆ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ ಮತ್ತು ಇನ್ಸುಲಿನ್ ಕಾರ್ಯವನ್ನು ಸುಧಾರಿಸುತ್ತದೆ. ಸತತ 11 ದಿನಗಳ ಕಾಲ ಮೆಂತ್ಯ ನೀರು ಕುಡಿದವರಲ್ಲಿ ಶುಗರ್ ಲೆವೆಲ್ಸ್ ಸ್ಥಿರವಾಗಿ ನಿಯಂತ್ರಣದಲ್ಲಿರುವುದು ಕಂಡುಬಂದಿದೆ ಎಂದು ತಜ್ಞರು ಹೇಳುತ್ತಾರೆ. ಆದರೆ, ಈಗಾಗಲೇ ಸಕ್ಕರೆ ಕಾಯಿಲೆಗೆ ಔಷಧಿ ತೆಗೆದುಕೊಳ್ಳುತ್ತಿರುವವರು ವೈದ್ಯರ ಸಲಹೆ ಪಡೆದ ನಂತರವೇ ಈ ಡ್ರಿಂಕ್ ಕುಡಿಯಬೇಕು.
36
Image Credit : stockPhoto
11 ದಿನ ಕುಡಿದಾಗ ಕಂಡುಬಂದಿರುವ ಸ್ಪಷ್ಟ ಬದಲಾವಣೆ
ಮೆಂತ್ಯ ನೀರು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಕಾರಿಯಾಗಿದೆ. ಇದರಲ್ಲಿರುವ ಫೈಬರ್ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ, ಹೃದಯದ ಆರೋಗ್ಯವನ್ನು ಸುಧಾರಿಸುತ್ತವೆ ಎಂದು ತಜ್ಞರು ಹೇಳುತ್ತಾರೆ. 11 ದಿನಗಳ ಕಾಲ ಸತತವಾಗಿ ಮೆಂತ್ಯ ನೀರು ಕುಡಿದವರಲ್ಲಿ ಈ ಬದಲಾವಣೆ ಸ್ಪಷ್ಟವಾಗಿ ಕಂಡುಬಂದಿದೆ ಎಂದು ವಿವರಿಸುತ್ತಾರೆ.
46
Image Credit : Getty
ದೇಹದಲ್ಲಿ ಹೆಚ್ಚುವರಿ ಶಾಖ ಕಡಿಮೆ ಮಾಡಲು
ಮೆಂತ್ಯ ನೀರು ದೇಹದಲ್ಲಿನ ಉರಿಯೂತ, ಊತ ಮತ್ತು ಕೀಲು ನೋವುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೆಂತ್ಯದಲ್ಲಿರುವ ನೈಸರ್ಗಿಕ ಆ್ಯಂಟಿ-ಇನ್‌ಫ್ಲಮೇಟರಿ ಗುಣಗಳು ಜೀರ್ಣಾಂಗ ವ್ಯವಸ್ಥೆಯನ್ನು ಶಾಂತಗೊಳಿಸಿ, ಗ್ಯಾಸ್ ಮತ್ತು ಅಸಿಡಿಟಿಯಿಂದ ಉಂಟಾಗುವ ಉರಿಯನ್ನು ಕಡಿಮೆ ಮಾಡುತ್ತದೆ. ಜೊತೆಗೆ, ಇದು ದೇಹದಲ್ಲಿನ ಹೆಚ್ಚುವರಿ ಶಾಖವನ್ನು ಕಡಿಮೆ ಮಾಡಿ, ಮೂತ್ರ ವಿಸರ್ಜನೆಯನ್ನು ಸುಧಾರಿಸುವ ಮೂಲಕ ಊತವನ್ನು ಕಡಿಮೆ ಮಾಡಲು ನೆರವಾಗುತ್ತದೆ.
56
Image Credit : Getty
ಹೈಡ್ರೇಟ್ ಆಗಿಡಲು ಸಹಕಾರಿ
ಮೆಂತ್ಯ ನೀರು ದೇಹಕ್ಕೆ ನೈಸರ್ಗಿಕ ಶಕ್ತಿ ಮತ್ತು ಹೈಡ್ರೇಶನ್ ಒದಗಿಸಲು ಸಹಾಯ ಮಾಡುತ್ತದೆ. ಮೆಂತ್ಯದಲ್ಲಿರುವ ವಿಟಮಿನ್‌ಗಳು, ಖನಿಜಗಳು ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ದೇಹದಲ್ಲಿ ಶಕ್ತಿ ಉತ್ಪಾದನೆಯನ್ನು ಉತ್ತೇಜಿಸಿ, ಆಯಾಸವನ್ನು ಕಡಿಮೆ ಮಾಡುತ್ತವೆ. ಅಲ್ಲದೆ, ಈ ನೀರು ದೇಹವನ್ನು ಚೈತನ್ಯದಿಂದ ಇರಿಸಿ, ಹೈಡ್ರೇಟ್ ಆಗಿಡಲು ಸಹಾಯ ಮಾಡುತ್ತದೆ.
66
Image Credit : Getty
ಇವರೆಲ್ಲಾ ವೈದ್ಯರ ಸಲಹೆ ಪಡೆದು ತೆಗೆದುಕೊಳ್ಳಿ
ಮೆಂತ್ಯ ನೀರು ಆರೋಗ್ಯಕ್ಕೆ ಒಳ್ಳೆಯದೇ ಆದರೂ, ಮಧುಮೇಹ ಇರುವವರು, ಗರ್ಭಿಣಿಯರು, ಥೈರಾಯ್ಡ್ ಸಮಸ್ಯೆ ಇರುವವರು ಅಥವಾ ವಿಶೇಷ ಔಷಧಿಗಳನ್ನು ತೆಗೆದುಕೊಳ್ಳುತ್ತಿರುವವರು ವೈದ್ಯರ ಸಲಹೆ ಪಡೆದ ನಂತರವೇ ಮೆಂತ್ಯ ನೀರನ್ನು ಕುಡಿಯುವುದು ಉತ್ತಮ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
Latest Videos

