ಬಾತ್‌ರೂಂನಲ್ಲಿ ನೀವು ಮಾಡುತ್ತಿರುವ ಈ ತಪ್ಪುಗಳು ಕಾಯಿಲೆಗೆ ದೂಡಬಹುದು, ಎಚ್ಚರ!
Healthy home habits: ನಮ್ಮ ಈ ಸಣ್ಣ ಅಭ್ಯಾಸವೇ ನಮಗೆ ತಿಳಿಯದಂತೆ ದೊಡ್ಡ ಅಪಾಯ ತಂದೊಡ್ಡಬಹುದು ಎಂಬುದು ನಿಮಗೆ ಗೊತ್ತೇ? ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಬಾತ್‌ರೂಂನಲ್ಲಿ ಯಾವೆಲ್ಲಾ ವಸ್ತು ಇಡಬಾರದು ಮತ್ತು ಅವುಗಳಿಂದ ಉಂಟಾಗುವ ಅಪಾಯಗಳೇನು ಎಂಬುದನ್ನು ಈ ಲೇಖನದಲ್ಲಿ ನೋಡೋಣ...
ವಸ್ತುಗಳೂ ಹಾಳು, ಆರೋಗ್ಯವೂ ಹಾಳು
ವಸ್ತುಗಳೂ ಹಾಳು, ಆರೋಗ್ಯವೂ ಹಾಳು
ಬಾತ್‌ರೂಂನಲ್ಲಿರುವ ತೇವಾಂಶ ಕೆಲವು ವಸ್ತುಗಳ ಮೇಲೆ ಬ್ಯಾಕ್ಟೀರಿಯಾ ಹಾಗೂ ಶಿಲೀಂಧ್ರಗಳು (Fungus) ಬೆಳೆಯಲು ಕಾರಣವಾಗುತ್ತದೆ. ಇದರಿಂದ ಸೋಂಕುಗಳು ಮತ್ತು ಅಲರ್ಜಿಯಂತಹ ಸಮಸ್ಯೆಗಳು ಉಂಟಾಗಬಹುದು. ಅಷ್ಟೇ ಅಲ್ಲದೆ, ಇಲ್ಲಿನ ಆರ್ದ್ರತೆಯು ಕೆಲವು ವಸ್ತುಗಳನ್ನು ಬೇಗನೆ ಹಾಳುಮಾಡುತ್ತದೆ. ಆದ್ದರಿಂದ ನಿಮ್ಮ ಆರೋಗ್ಯದ ದೃಷ್ಟಿಯಿಂದ ಈ ಕೆಳಗಿನ ವಸ್ತುಗಳನ್ನು ಬಾತ್‌ರೂಂನಲ್ಲಿ ಇಡುವುದನ್ನು ತಪ್ಪಿಸಿ.
ಟವೆಲ್ ಮತ್ತು ಕೊಳೆ ಬಟ್ಟೆಗಳು
ಟವೆಲ್ ಮತ್ತು ಕೊಳೆ ಬಟ್ಟೆಗಳು
ಟವೆಲ್‌ಗಳು ಮತ್ತು ಒಗೆಯಬೇಕಾದ ಕೊಳೆ ಬಟ್ಟೆಗಳನ್ನು ಬಾತ್‌ರೂಂನಲ್ಲಿ ಇಡಬಾರದು. ಇಲ್ಲಿನ ತೇವಾಂಶದ ವಾತಾವರಣವು ಬ್ಯಾಕ್ಟೀರಿಯಾ ಮತ್ತು ಫಂಗಸ್ ಬೆಳೆಯಲು ಉತ್ತಮ ತಾಣವಾಗುತ್ತದೆ. ವಿಶೇಷವಾಗಿ ಬಳಸಿದ ಒದ್ದೆ ಟವೆಲ್‌ಗಳನ್ನು ಬಾತ್‌ರೂಂನಲ್ಲಿಯೇ ಒಣಗಲು ಹಾಕಿದರೆ, ಅವುಗಳಲ್ಲಿ 'ಇ-ಕೋಲಿ'ಯಂತಹ ಅಪಾಯಕಾರಿ ಬ್ಯಾಕ್ಟೀರಿಯಾಗಳು ಸೇರಿಕೊಳ್ಳುತ್ತವೆ. ಇದು ಚರ್ಮದ ಅಲರ್ಜಿ, ಫಂಗಲ್ ಇನ್ಫೆಕ್ಷನ್ ಮತ್ತು ಮೊಡವೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ.
ಮೇಕಪ್ ಮತ್ತು ಚರ್ಮದ ಆರೈಕೆ ಉತ್ಪನ್ನಗಳು
ಮೇಕಪ್ ಮತ್ತು ಚರ್ಮದ ಆರೈಕೆ ಉತ್ಪನ್ನಗಳು
ಬಹಳಷ್ಟು ಮಹಿಳೆಯರು ಮೇಕಪ್ ಮತ್ತು ಸ್ಕಿನ್ ಕೇರ್ ಉತ್ಪನ್ನಗಳನ್ನು ಬಾತ್‌ರೂಂ ಕನ್ನಡಿಯ ಮುಂದೆ ಇಡುತ್ತಾರೆ. ಬಾತ್‌ರೂಂನಲ್ಲಿರುವ ಶಾಖ ಮತ್ತು ತೇವಾಂಶವು ಈ ಉತ್ಪನ್ನಗಳ ಗುಣಮಟ್ಟವನ್ನು ಹಾಳುಮಾಡಬಹುದು. ಲಿಕ್ವಿಡ್ ಫೌಂಡೇಶನ್ ಮತ್ತು ಲಿಪ್‌ಸ್ಟಿಕ್‌ಗಳಲ್ಲಿ ಬ್ಯಾಕ್ಟೀರಿಯಾ ಸೇರಿಕೊಳ್ಳುವ ಸಾಧ್ಯತೆ ಇರುತ್ತದೆ. ಇದರಿಂದ ಚರ್ಮದ ಸೋಂಕಿನ ಅಪಾಯ ಹೆಚ್ಚಾಗುತ್ತದೆ. ಆದ್ದರಿಂದ ಮೇಕಪ್ ವಸ್ತುಗಳನ್ನು ಬಾತ್‌ರೂಂನಲ್ಲಿ ಇಡಬೇಡಿ.
ಟೂತ್ ಬ್ರಷ್
ಟೂತ್ ಬ್ರಷ್
ಬಹುತೇಕ ಎಲ್ಲರೂ ತಮ್ಮ ಟೂತ್ ಬ್ರಷ್‌ಗಳನ್ನು ಬಾತ್‌ರೂಂನಲ್ಲಿಯೇ ಇಡುತ್ತಾರೆ. ಆದರೆ ಟೂತ್ ಬ್ರಷ್‌ಗಳನ್ನು ಯಾವಾಗಲೂ ಒಣಗಿರುವ ಜಾಗದಲ್ಲಿ ಇಡುವುದು ಒಳ್ಳೆಯದು. ಬಾತ್‌ರೂಂನ ತೇವಾಂಶದಿಂದಾಗಿ ಬ್ರಷ್‌ಗಳ ಮೇಲೆ ಬ್ಯಾಕ್ಟೀರಿಯಾಗಳು ವೃದ್ಧಿಯಾಗುತ್ತವೆ, ಇದು ಬಾಯಿಯ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.
ಔಷಧಿಗಳು
ಔಷಧಿಗಳು
ಮಾತ್ರೆ ಅಥವಾ ಸಿರಪ್‌ಗಳನ್ನು ಬಾತ್‌ರೂಂನಲ್ಲಿ ಸಂಗ್ರಹಿಸಿಡಬಾರದು. ಬಾತ್‌ರೂಂನ ತಾಪಮಾನವು ಪದೇ ಪದೇ ಬದಲಾಗುತ್ತಿರುತ್ತದೆ. ಇಲ್ಲಿನ ತೇವಾಂಶ ಮತ್ತು ಶಾಖದಿಂದಾಗಿ ಔಷಧಿಗಳು ತಮ್ಮ ಕಾರ್ಯಕ್ಷಮತೆಯನ್ನು ಕಳೆದುಕೊಂಡು ಹಾಳಾಗಬಹುದು. ಔಷಧಿಗಳನ್ನು ಯಾವಾಗಲೂ ಮಲಗುವ ಕೋಣೆಯ ಸುರಕ್ಷಿತ ಕ್ಯಾಬಿನೆಟ್‌ನಲ್ಲಿ ಇಡುವುದು ಉತ್ತಮ.
ಎಲೆಕ್ಟ್ರಾನಿಕ್ ಉಪಕರಣಗಳು
ಎಲೆಕ್ಟ್ರಾನಿಕ್ ಉಪಕರಣಗಳು
ಸಂಗೀತ ಕೇಳಲು ಫೋನ್ ಅಥವಾ ಸ್ಪೀಕರ್‌ಗಳನ್ನು ಬಾತ್‌ರೂಂಗೆ ತೆಗೆದುಕೊಂಡು ಹೋಗುವ ಅಭ್ಯಾಸ ಅನೇಕರಿಗಿದೆ. ವಾಟರ್‌ಪ್ರೂಫ್ ರೇಟಿಂಗ್ ಇಲ್ಲದ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ನೀರು ಬಿದ್ದರೆ ಅಥವಾ ಹಬೆ (Steam) ತಗುಲಿದರೆ ಅವುಗಳ ಒಳಗಿನ ಸರ್ಕ್ಯೂಟ್‌ಗಳು ಹಾಳಾಗಬಹುದು. ಇದರಿಂದ ಶಾರ್ಟ್ ಸರ್ಕ್ಯೂಟ್ ಆಗುವ ಅಪಾಯವೂ ಇರುತ್ತದೆ.
ರೇಜರ್ ಮತ್ತು ಬ್ಲೇಡ್‌ಗಳು
ರೇಜರ್ ಮತ್ತು ಬ್ಲೇಡ್‌ಗಳು
ಬಾತ್‌ರೂಂನಲ್ಲಿ ಇಟ್ಟಿರುವ ರೇಜರ್ ಮತ್ತು ಬ್ಲೇಡ್‌ಗಳು ತೇವಾಂಶದ ಕಾರಣದಿಂದ ಬೇಗನೆ ತುಕ್ಕು ಹಿಡಿಯುತ್ತವೆ. ಅಂತಹ ತುಕ್ಕು ಹಿಡಿದ ರೇಜರ್‌ನಿಂದ ಶೇವಿಂಗ್ ಮಾಡುವುದರಿಂದ ಚರ್ಮದ ಮೇಲೆ ಗಾಯಗಳಾಗಿ ಸೋಂಕು ಉಂಟಾಗಬಹುದು.
ಆಭರಣಗಳು
ಆಭರಣಗಳು
ಚಿನ್ನ, ಬೆಳ್ಳಿ ಅಥವಾ ಕೃತಕ ಆಭರಣಗಳನ್ನು ಬಾತ್‌ರೂಂನಲ್ಲಿ ಇಡುವುದರಿಂದ ಅವುಗಳ ಹೊಳಪು ಕಡಿಮೆಯಾಗುತ್ತದೆ. ತೇವಾಂಶವು ಲೋಹಗಳ ಆಕ್ಸಿಡೀಕರಣ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ, ಇದರಿಂದ ಆಭರಣಗಳು ತಮ್ಮ ಕಾಂತಿಯನ್ನು ಕಳೆದುಕೊಳ್ಳುತ್ತವೆ. ನಿಮ್ಮ ಬೆಲೆಬಾಳುವ ಆಭರಣಗಳನ್ನು ಯಾವಾಗಲೂ ಡ್ರೆಸ್ಸಿಂಗ್ ಟೇಬಲ್ ಅಥವಾ ಲಾಕರ್‌ನಲ್ಲಿ ಭದ್ರವಾಗಿಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
