ಪ್ರತಿ ದಿನ ಚಪಾತಿ ತಿನ್ನೋರು ಒಂದು ತಿಂಗಳು ರೂಟೀನ್ ಬದಲಿಸಿ, ಗೋಧಿ ಬಿಟ್ರೆ ಏನಾಗುತ್ತೆ ಗೊತ್ತಾ?
Wheat Chapati : ನಮ್ಮಲ್ಲಿ ಬಹುತೇಕ ಪ್ರತಿದಿನದ ಊಟ ಅಂದ್ರೆ ಗೋಧಿ ಚಪಾತಿ. ಆರೋಗ್ಯಕರ ಆಹಾರ ಅಂತಲೇ ನಾವು ಇದನ್ನು ನಂಬಿದ್ದೇವೆ. ಆದರೆ ಆರೋಗ್ಯ ತಜ್ಞರು, ಗೋಧಿ ಚಪಾತಿ ಬಗ್ಗೆ ಹೇಳೋದೇ ಬೇರೆ.

ಗೋಧಿ ಚಪಾತಿಯಿಂದ ಸಮಸ್ಯೆ
ಕೆಲವರಿಗೆ ಗೋಧಿಯಲ್ಲಿರುವ ಗ್ಲುಟನ್ ಎಂಬ ಪ್ರೋಟೀನ್ ಸುಲಭವಾಗಿ ಜೀರ್ಣವಾಗುವುದಿಲ್ಲ. ಇದರಿಂದ ಹೊಟ್ಟೆ ಉಬ್ಬರ, ಗ್ಯಾಸ್, ಅಸಿಡಿಟಿ ಅಥವಾ ಹೊಟ್ಟೆಯಲ್ಲಿ ಅಸ್ವಸ್ಥತೆ ಕಾಣಿಸಿಕೊಳ್ಳಬಹುದು. ಆದರೆ ಇದು ಎಲ್ಲರಲ್ಲೂ ಆಗುವುದಿಲ್ಲ. ಕೆಲವು ತಜ್ಞರ ಅಭಿಪ್ರಾಯದ ಪ್ರಕಾರ, ನೀವು 21 ರಿಂದ 30 ದಿನಗಳವರೆಗೆ ಗೋಧಿಯನ್ನು ಬಿಟ್ಟು, ಅದರ ಬದಲು ರಾಗಿ, ಜೋಳ, ಸಜ್ಜೆ ಅಥವಾ ಇತರ ಸಿರಿಧಾನ್ಯಗಳನ್ನು ಸೇವಿಸಿದರೆ, ದೇಹದಲ್ಲಿ ಕೆಲವು ಉತ್ತಮ ಬದಲಾವಣೆಗಳನ್ನು ಗಮನಿಸಬಹುದು.
ಗೋಧಿ ಬಿಟ್ಟರೆ ಏನಾಗುತ್ತೆ?
ನೀವು ಒಂದು ತಿಂಗಳ ಕಾಲ ಗೋಧಿ ಚಪಾತಿ, ಗೋಧಿ ದೋಸೆ ಸೇರಿದಂತೆ ಗೋಧಿ ಪದಾರ್ಥ ಸೇವನೆ ಬಿಟ್ಟಲ್ಲಿ ನಿಮ್ಮ ಜೀರ್ಣಕ್ರಿಯೆ ಸುಧಾರಿಸುತ್ತದೆ. ಹೊಟ್ಟೆ ಹಗುರವಾಗಿರುವ ಅನುಭವ ಕೆಲವರಿಗೆ ಸಿಗಬಹುದು.
ತೂಕ ನಿಯಂತ್ರಣ
ನೀವು ಗೋಧಿ ಬದಲು ಸಿರಿಧಾನ್ಯಗಳ ಚಪಾತಿ ಸೇವನೆ ಶುರು ಮಾಡಿದ್ರೆ ಸಿರಿಧಾನ್ಯಗಳಲ್ಲಿರುವ ನಾರಿನಾಂಶ ಹೆಚ್ಚು ಹೊತ್ತು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಹಾಗಾಗಿ ನೀವು ಪದೇ ಪದೇ ಆಹಾರ ಸೇವನೆ ಮಾಡುವ ಅಗತ್ಯ ಇರೋದಿಲ್ಲ. ಇದ್ರಿಂದ ತೂಕ ನಿಯಂತ್ರಣಕ್ಕೆ ಬರುತ್ತದೆ. ರಕ್ತದಲ್ಲಿನ ಸಕ್ಕರೆಯ ಮಟ್ಟ ಸ್ಥಿರವಾಗಿಡಲು ಸಹ ಇದು ನೆರವಾಗಬಹುದು. ಇದನ್ನು ನೀವು ಸಮತೋಲಿತ ಆಹಾರದ ಭಾಗವಾಗಿ ಸೇವಿಸಿದರೆ ಉತ್ತಮ.
ಆರೋಗ್ಯದಲ್ಲಿ ಬದಲಾವಣೆ
ನಿತ್ಯ ಗೋಧಿ ಸೇವನೆ ಮಾಡುವವರು ಒಂದು ತಿಂಗಳು ಗೋಧಿಯಿಂದ ದೂರವಿದ್ರೆ ಕೆಲವರ ದಿನಚರಿ ಬದಲಾಗುತ್ತದೆ. ಚೈತನ್ಯದಿಂದ ಇರ್ಬಹುದು. ಚರ್ಮದ ಆರೋಗ್ಯದಲ್ಲಿ ಸಣ್ಣ ಮಟ್ಟಿನ ಸುಧಾರಣೆಯನ್ನು ನೀವು ಗಮನಿಸಬಹುದು. ಇಲ್ಲಿ ಗಮನಿಸಬೇಕಾದ ವಿಷ್ಯ ಅಂದ್ರೆ ಗೋಧಿ ಎಲ್ಲರಿಗೂ ಹಾನಿಕಾರಕ ಆಹಾರವಲ್ಲ. ಹೆಚ್ಚಿನ ಜನರು ಯಾವುದೇ ತೊಂದರೆಯಿಲ್ಲದೆ ಗೋಧಿಯನ್ನು ಸೇವಿಸಬಹುದು. ವಿಶೇಷವಾಗಿ ಸಿಲಿಯಾಕ್ ಕಾಯಿಲೆ ಅಥವಾ ವೈದ್ಯರು ದೃಢಪಡಿಸಿದ ಗ್ಲುಟನ್ ಸಂವೇದನೆ ಇರುವವರು ಮಾತ್ರ ಗ್ಲುಟನ್ನ್ನು ತಪ್ಪಿಸಬೇಕಾಗುತ್ತದೆ. ಗೋಧಿಯನ್ನು ಸಂಪೂರ್ಣವಾಗಿ ಬಿಡುವ ಮೊದಲು ನಿಮ್ಮ ದೇಹವನ್ನು ಗಮನಿಸಿ. ಅಗತ್ಯವಿದ್ದರೆ ವೈದ್ಯರು ಅಥವಾ ಪೌಷ್ಟಿಕ ತಜ್ಞರ ಸಲಹೆ ಪಡೆಯಿರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
