ಈ ಬಿರು ಬಿಸಲಿಲ್ಲ ದ್ರಾಕ್ಷಿ ತಿನ್ನೋ ಮಜಾನೇ ಬೇರೆ, ಕ್ಲೀನ್ ಮಾತ್ರ ಹೀಗ್ ಮಾಡ್ದೇ ಇರ್ಬೇಡಿ
Grape cleaning tips : ಮಾರ್ಕೆಟ್ ಗೆ ದ್ರಾಕ್ಷಿ ಹಣ್ಣು ಲಗ್ಗೆ ಇಟ್ಟಿದೆ. ಖರೀದಿ ಮಾಡಿದ ದ್ರಾಕ್ಷಿಯನ್ನು ಹಾಗೆ ತಿನ್ಬೇಡಿ. ಸಿಂಪಲ್ ಟ್ರಿಕ್ಸ್ ಬಳಸಿ ದ್ರಾಕ್ಷಿ ಕ್ಲೀನ್ ಮಾಡಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ.

ದ್ರಾಕ್ಷಿ
ಬೇಸಿಗೆ ಬಿಸಿಯಲ್ಲಿ ತಂಪಾದ ಪಾನೀಯ, ಹಣ್ಣುಗಳ ಸೇವನೆ ಹೆಚ್ಚಾಗುತ್ತದೆ. ಈ ಟೈಂನಲ್ಲಿ ಮಾರ್ಕೆಟನ್ನು ದ್ರಾಕ್ಷಿ ಹಣ್ಣುಗಳು ಆಕ್ರಮಿಸಿವೆ. ಎಲ್ಲಿ ನೋಡಿದ್ರೂ ದ್ರಾಕ್ಷಿ ಹಾವಳಿ. ಆರೋಗ್ಯಕ್ಕೆ ಒಳ್ಳೇದು ಅಂತ ದ್ರಾಕ್ಷಿ ಮನೆಗೆ ತರ್ತೇವೆ. ಅದ್ರ ಮೇಲೆ ಬಿಳಿ ಬಿಳಿ ಕಲೆಗಳು ಕಾಣಿಸುತ್ವೆ. ಮಣ್ಣಿರಬೇಕು ಅಂತ ನೀರಿನಲ್ಲಿ ಒಮ್ಮೆ ಕ್ಲೀನ್ ಮಾಡಿ ಇಲ್ಲ ಕೈನಲ್ಲಿ ಹಾಗೇ ಹಣ್ಣನ್ನು ಉಜ್ಜಿ ತಿಂತೇವೆ. ಇನ್ಮುಂದೆ ಇಂಥ ತಪ್ಪು ಮಾಡೋಕೆ ಹೋಗ್ಬೇಡಿ.
ಬಿಳಿ ಬಣ್ಣ ಯಾವುದು?
ದ್ರಾಕ್ಷಿಯ ಮೇಲೆ ಗೋಚರಿಸುವ ತೆಳುವಾದ ಬಿಳಿ ಪದರವನ್ನು ನೈಸರ್ಗಿಕ ವ್ಯಾಕ್ಸ್ ಪದರ ಎಂದು ಕರೆಯಲಾಗುತ್ತದೆ. ಈ ಪದರವು ಹಣ್ಣನ್ನು ಹಾಳಾಗದಂತೆ ರಕ್ಷಿಸಲು ಸಹಾಯ ಮಾಡುತ್ತದೆ. ಆದ್ರೆ ಮಾರ್ಕೆಟ್ ಗೆ ಸಾಗಿಸುವ ವೇಳೆ ದ್ರಾಕ್ಷಿ ಹಾಳಾಗದಂತೆ ರಕ್ಷಿಸಲು ಅದಕ್ಕೆ ಕೀಟನಾಶಕ ಕೂಡ ಸಿಂಪಡಿಸಲಾಗುತ್ತದೆ. ಹಣ್ಣುಗಳನ್ನು ಸಂರಕ್ಷಿಸಲು ಸಲ್ಫರ್ ಡೈಆಕ್ಸೈಡ್ನಂತಹ ಪ್ರಿಜರ್ವೇಟಿವ್ ಬಳಸ್ತಾರೆ. ದ್ರಾಕ್ಷಿಯನ್ನು ನೀವು ಕ್ಲೀನ್ ಮಾಡ್ದೆ ತಿಂದಾಗ ಕೀಟನಾಶಕ ನಿಮ್ಮ ದೇಹ ಸೇರುತ್ತೆ. ಇದು ನಾನಾ ರೋಗಕ್ಕೆ ಕಾರಣವಾಗುತ್ತೆ. ಪ್ರತಿ ಬಾರಿಯೂ ದ್ರಾಕ್ಷಿಯನ್ನು ಮನೆಗೆ ತಂದಾಗ ಅದನ್ನು ಕ್ಲೀನ್ ಮಾಡಿ ಸೇವನೆ ಮಾಡ್ಬೇಕು.
ದ್ರಾಕ್ಷಿ ಕ್ಲೀನಿಂಗ್ ಟಿಪ್ಸ್
ಅನೇಕರು ದ್ರಾಕ್ಷಿ ಹಣ್ಣನ್ನು ನೀರಿನಲ್ಲಿ ಸ್ವಲ್ಪ ಸಮಯ ನೆನೆ ಹಾಕಿ ನಂತ್ರ ತೊಳೆದು ತಿಂತಾರೆ. ನೀವು ಇಷ್ಟೇ ಮಾಡಿದ್ರೆ ಹಣ್ಣಿನಲ್ಲಿರುವ ಕೀಟನಾಶಕ ಹೋಗೋದಿಲ್ಲ. ಅದಕ್ಕೆ ನೀವು ಅಡುಗೆ ಸೋಡಾ ಹಾಗೂ ಲಿಂಬೆ ರಸ ಬಳಸಬೇಕು. ಒಂದು ಪಾತ್ರೆಗೆ ನೀರನ್ನು ಹಾಕಿ. ಅದಕ್ಕೆ ಅರ್ಧ ಸ್ಪೂನ್ ಅಡುಗೆ ಸೋಡಾ ಮತ್ತು ಸ್ವಲ್ಪ ನಿಂಬೆ ಹನಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತ್ರ ಈ ನೀರಿಗೆ ದ್ರಾಕ್ಷಿ ಹಣ್ಣುಗಳನ್ನು ಹಾಕಿ ಕೆಲ ನಿಮಿಷ ನೆನೆಸಿಡಿ. ನಂತ್ರ ಶುದ್ಧ ನೀರಿನಲ್ಲಿ ಹಣ್ಣುಗಳನ್ನು ಕ್ಲೀನ್ ಮಾಡಿ. ನೀವು ಅಡುಗೆ ಸೋಡಾ ಹಾಗೂ ನಿಂಬೆ ಹನಿಯಿಂದ ದ್ರಾಕ್ಷಿಯನ್ನು ಸ್ವಚ್ಛಗೊಳಿಸಿದಾಗ, ದ್ರಾಕ್ಷಿ ಹಣ್ಣಿನ ಮೇಲಿರುವ ಕೀಟನಾಶಕಗಳು ಕ್ಲೀನ್ ಆಗುತ್ವೆ. ಆಗ ನೀವು ಯಾವುದೇ ಭಯವಿಲ್ದೆ ದ್ರಾಕ್ಷಿ ಹಣ್ಣನ್ನು ತಿನ್ನಬಹುದು.
ವಿನೇಗರ್ ಬಳಕೆ
ನೀವು ದ್ರಾಕ್ಷಿ ಹಣ್ಣನ್ನು ಕ್ಲೀನ್ ಮಾಡಲು ವಿನೇಗರ್ ಕೂಡ ಬಳಕೆ ಮಾಡಬಹುದು. ವಿನೇಗರ್, ದ್ರಾಕ್ಷಿ ಮೇಲ್ಮೈಗೆ ಅಂಟಿರುವ ಕೀಟನಾಶಕವನ್ನು ತೆಗೆಯುತ್ತದೆ. ಇದಕ್ಕೆ ವಿನೇಗರ್ ಹಾಗೂ ಉಪ್ಪಿನ ಅಗತ್ಯವಿದೆ. ಮೊದಲು ಒಂದು ಪಾತ್ರೆಗೆ ನೀರನ್ನು ಹಾಕಿ. ಅದಕ್ಕೆ ಅರ್ಧ ಸ್ಪೂನ್ ವಿನೇಗರ್ ಹಾಗೂ ಅರ್ಧ ಸ್ಪೂನ್ ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಸುಮಾರು ಹತ್ತು ನಿಮಿಷಗಳ ಕಾಲ ದ್ರಾಕ್ಷಿಯನ್ನು ಈ ನೀರಿನಲ್ಲಿ ನೆನೆಹಾಕಿ. ನಂತ್ರ ಶುದ್ಧ ನೀರಿನಿಂದ ಇದನ್ನು ಕ್ಲೀನ್ ಮಾಡಿ. ದ್ರಾಕ್ಷಿ ಹಣ್ಣಿನ ಮೇಲಿರುವ ಕೀಟನಾಶಕ ಹಾಗೂ ಮಣ್ಣನ್ನು ಈ ನೀರು ಸುಲಭವಾಗಿ ತೆಗೆದು ಹಾಕುತ್ತದೆ.
ಅಪಾಯಕಾರಿ
ದ್ರಾಕ್ಷಿಯನ್ನು ಸ್ವಚ್ಛಗೊಳಿಸದೆ ತಿನ್ನುವುದರಿಂದ ಹಲವಾರು ಹೊಟ್ಟೆ ಸಮಸ್ಯೆಗಳು ಉಂಟಾಗಬಹುದು. ಕೆಲವರಿಗೆ ಹೊಟ್ಟೆ ನೋವು, ವಾಂತಿ, ಅತಿಸಾರ ಅಥವಾ ಅಲರ್ಜಿ ಕಾಣಿಸಿಕೊಳ್ಳುತ್ತದೆ. ಮಕ್ಕಳು ಮತ್ತು ವೃದ್ಧರ ಆರೋಗ್ಯದ ಮೇಲೆ ಬೇಗನೆ ಪರಿಣಾಮ ಬೀರುತ್ತದೆ. ಈಗ ದ್ರಾಕ್ಷಿ ಮಾತ್ರವಲ್ಲ ಎಲ್ಲ ಹಣ್ಣುಗಳಿಗೆ ಕೀಟನಾಶಕ ಬಳಕೆ ಮಾಡಲಾಗುತ್ತೆ. ನೀವು ಯಾವುದೇ ಹಣ್ಣನ್ನು ಮನೆಗೆ ತಂದ್ರೂ ಅದನ್ನು ಕ್ಲೀನ್ ಮಾಡ್ದೆ ತಿನ್ನಬೇಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

