57ರ ಹರೆಯದಲ್ಲೂ ಎಂಟು ಪ್ಯಾಕ್ ಆಬ್ಸ್, ಸಖತ್ ಫಿಟ್; ಕಿಂಗ್ ಖಾನ್ ತಿನ್ನೋದೇನು?
'ಜವಾನ್' ಚಿತ್ರದಲ್ಲಿ ಕಿಂಗ್ ಖಾನ್ ಲುಕ್ ಅಭಿಮಾನಿಗಳನ್ನು ಮೋಡಿ ಮಾಡಿದೆ. ತೆಳ್ಳಗಿನ ಮೈಕಟ್ಟು ಹೊಂದಿರುವ ಶಾರುಖ್ ಖಾನ್, ಎಂಟು ಪ್ಯಾಕ್ ಆಬ್ಸ್ ಹೊಂದಿದ್ದಾರೆ. ಬಾಲಿವುಡ್ ಬಾದ್‌ಷಾ ಶಾರೂಕ್ ಖಾನ್ 57ರ ಹರೆಯದಲ್ಲೂ ಇನ್ನೂ ಇಪ್ಪತ್ತರ ಹರೆಯದಂತೆ ಫುಲ್ ಫಿಟ್ ಆಗಿದ್ದಾರೆ. ಈ ಫಿಟ್ನೆಸ್ ಹಿಂದಿರೋ ಸೀಕ್ರೆಟ್ ಏನು?
ಬಾಲಿವುಡ್ ಬಾದ್‌ಷಾ ಶಾರೂಕ್ ಖಾನ್ 57ರ ಹರೆಯದಲ್ಲೂ ಇನ್ನೂ ಇಪ್ಪತ್ತರ ಹರೆಯದಂತೆ ಫುಲ್ ಫಿಟ್ ಆಗಿದ್ದಾರೆ. ಕಳೆದ ವಾರ 'ಜವಾನ್' ಚಿತ್ರದಲ್ಲಿ ಕಿಂಗ್ ಖಾನ್ ಲುಕ್ ಅಂತೂ ಅಭಿಮಾನಿಗಳನ್ನು ಮೋಡಿ ಮಾಡಿದೆ. ತೆಳ್ಳಗಿನ ಮೈಕಟ್ಟು ಹೊಂದಿರುವ ಶಾರುಖ್ ಖಾನ್, ಎಂಟು ಪ್ಯಾಕ್ ಆಬ್ಸ್ ಹೊಂದಿದ್ದಾರೆ. ಇಷ್ಟೊಂದು ಫಿಟ್ ಆಗಿರೋ ದೇಹವನ್ನು ಪಡೆಯೋಕೆ ಅವರು ನಿಯಮಿತವಾಗಿ ಡಯೆಟ್ ಸಹ ಮಾಡ್ತಾರೆ. ಹಾಗಿದ್ರೆ ಶಾರೂಕ್ ಖಾನ್ ಫಿಟ್ನೆಸ್ ಡಯಟ್ ಏನು?
ಶಾರೂಕ್ ಖಾನ್ ತಮ್ಮ ಆಹಾರದಲ್ಲಿ ಕಡಿಮೆ ಕ್ಯಾಲೋರಿ ಅಥವಾ ಕ್ಯಾಲೋರಿ ರಹಿತ ಆಹಾರವನ್ನೇ ಹೆಚ್ಚು ಸೇವಿಸುತ್ತಾರೆ. ಅವರ ಆಹಾರವು ಪ್ರೋಟೀನ್ ಭರಿತವಾಗಿರುತ್ತದೆ. ವರ್ಕೌಟ್‌ಗೂ ಮುನ್ನ ಕಾರ್ಬೋಹೈಡ್ರೇಟ್ ಯುಕ್ತ ಆಹಾರ ಸೇವಿಸುತ್ತಾರೆ. ಕಠಿಣ ವರ್ಕೌಟ್ ಬಳಿಕ ಅವರು ಪ್ರೋಟೀನ್ ಶೇಕ್ ಅನ್ನು ಕುಡಿಯುತ್ತಾರೆ ಎಂದು ತಿಳಿದುಬಂದಿದೆ. ಅದಲ್ಲದೆ, ಶಾರೂಕ್ ಖಾನ್ ತಪ್ಪದೇ ತಿನ್ನೋ ಆಹಾರಗಳಿವು.
ಎಳನೀರು
ಶಾರೂಕ್ ಖಾನ್ ಯಾವಾಗಲೂ ತಮ್ಮ ದೇಹವನ್ನು ಹೈಡ್ರೇಟ್ ಆಗಿ ಇಟ್ಟುಕೊಳ್ಳಲು ಬಯಸುತ್ತಾರೆ. ಹೀಗಾಗಿ ಹೆಚ್ಚೆಚ್ಚು ನೀರು ಕುಡಿಯುತ್ತಾರೆ. ಮಾತ್ರವಲ್ಲ ಎಳನೀರು, ಫ್ರೆಶ್ ಜ್ಯೂಸ್‌ಗಳ ಸೇವನೆಗೆ ಆದ್ಯತೆ ನೀಡುತ್ತಾರೆ.
ಮೊಟ್ಟೆ
ಬ್ರೇಕ್‌ಫಾಸ್ಟ್ ಮುಖ್ಯವಾಗಿ ಮೊಟ್ಟೆಯನ್ನು ಒಳಗೊಂಡಿರುತ್ತದೆ. ಮೊಟ್ಟೆಯ ಬಿಳಿಭಾಗವನ್ನು ಶಾರೂಕ್, ಬೆಳಗ್ಗಿನ ಉಪಾಹಾರಕ್ಕೆ ತಪ್ಪದೇ ತಿನ್ನುತ್ತಾರೆ. ಮೊಟ್ಟೆ ಪ್ರೊಟೀನ್‌ನ ಆಗರವಾಗಿದೆ. ಇದು ಮಸಲ್ಸ್ ಬಿಲ್ಡ್ ಮಾಡಲು ನೆರವಾಗುವುದು ಮಾತ್ರವಲ್ಲದೆ, ತೂಕ ಇಳಿಕೆಗೂ ನೆರವಾಗುತ್ತದೆ.
ತಾಜಾ ಹಣ್ಣುಗಳು
ಶಾರೂಕ್ ಖಾನ್ ತಾಜಾ ಹಣ್ಣುಗಳನ್ನು ಹೆಚ್ಚು ತಿನ್ನಲು ಬಯಸುತ್ತಾರೆ. ಯಾವುದೇ ಆಹಾರ ಸೇವಿಸುವ ಮೊದಲು ಫ್ರೆಶ್ ಹಣ್ಣುಗಳನ್ನು ಮಿಸ್ ಮಾಡದೇ ತಿನ್ನುತ್ತಾರೆ. ಹೀಗೆ ಮಾಡುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಭರಿತ ಐಟಂ ಹಾಗೂ ಡೆಸರ್ಟ್‌ಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಕಿಂಗ್ ಖಾನ್ ತಿಳಿಸಿದ್ದಾರೆ.
ಗ್ರಿಲ್ಡ್ ತರಕಾರಿ
ಗ್ರಿಲ್ಡ್ ತರಕಾರಿಗಳನ್ನು ಶಾರೂಕ್ ಖಾನ್ ಹೆಚ್ಚೆಚ್ಚು ತಿನ್ನುತ್ತಾರೆ. ಇದರಲ್ಲಿ ಫ್ಯಾಟ್ ಕಡಿಮೆಯಿರುತ್ತದೆ. ಕಬ್ಬಿಣ, ಮೆಗ್ನೇಶಿಯಂ, ಪೊಟ್ಯಾಶಿಯಂ, ವಿಟಮಿನ್ ಇ, ಸಿ, ಕೆ ಅಧಿಕವಾಗಿರುತ್ತದೆ. ಇದು ದೇಹವನ್ನು ಸ್ಟ್ರಾಂಗ್ ಮತ್ತು ಹೆಲ್ದೀ ಆಗಿಡಲು ಸಹಾಯ ಮಾಡುತ್ತದೆ. ಗ್ರಿಲ್ಡ್ ಚಿಕನ್ ಸಹ ಇವರ ಆದ್ಯತೆಯಾಗಿದೆ.
ಡ್ರೈಫ್ರುಟ್ಸ್
ಶಾರೂಕ್ ಖಾನ್ ಪ್ರೊಟೀನ್‌ಗಳ ಮೂಲವಾದ ಬಾದಾಮಿ, ಪಿಸ್ತಾ, ಗೋಡಂಬಿಗಳನ್ನು ಪ್ರಿ ವರ್ಕೌಟ್ ಸ್ನ್ಯಾಕ್ಸ್ ಆಗಿ ತಿನ್ನುತ್ತಾರೆ. ಈ ನಟ್ಸ್ ಹೆಲ್ದೀ ಫ್ಯಾಟ್, ಪೈಬರ್, ವಿಟಮಿನ್ ಹಾಗೂ ಮಿನರಲ್‌ಗಳನ್ನು ದೇಹಕ್ಕೆ ನೀಡಲು ನೆರವಾಗುತ್ತದೆ.
ಗ್ರೀನ್ ಸಲಾಡ್
ಬಾಲಿವುಡ್ ನಟನ ಉಪಾಹಾರ ಯಾವಾಗಲೂ ಜೊತೆಯಲ್ಲಿ ಗ್ರೀನ್ ಸಲಾಡ್ ಒಳಗೊಂಡಿರುತ್ತದೆ. ಇದು ವಿಟಮಿನ್, ಮಿನರಲ್, ಕಬ್ಬಿಣ, ಮೆಗ್ನೀಶಿಯಂ, ಪೊಟ್ಯಾಶಿಯಂ, ಕ್ಯಾಲ್ಶಿಯಂ ಅಂಶಗಳನ್ನು ಒಳಗೊಂಡಿರುತ್ತದೆ. ಇದು ಕಣ್ಣಿನ ದೃಷ್ಟಿಯನ್ನು ಚುರುಕಾಗಿಸಲು ನೆರವಾಗುತ್ತದೆ. ಮಾತ್ರವಲ್ಲ, ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ.
ಶಾರುಕ್ ಖಾನ್ ವೈಯಕ್ತಿಕ ತರಬೇತುದಾರ ಪ್ರಶಾಂತ್ ಸಾವಂತ್ ಹೇಳುವ ಪ್ರಕಾರ, ಶಾರುಖ್ ಅವರ ವರ್ಕೌಟ್ 45 ನಿಮಿಷಗಳಿಗಿಂತ ಹೆಚ್ಚು ಸೆಷನ್‌ಗಳನ್ನು ಒಳಗೊಂಡಿಲ್ಲ. ಶಾರೂಕ್ ದಿನವಿಡೀ ಬಿಝಿಯಾಗಿರುವ ಕಾರಣ ಸಾಮಾನ್ಯವಾಗಿ ಸಂಜೆ ತಡವಾಗಿ ವರ್ಕೌಟ್ ಮಾಡುತ್ತಾರೆ. ಇದು ರಿಹ್ಯಾಬ್ ವರ್ಕೌಟ್‌ಗಳು, ಸೈಕ್ಲಿಂಗ್ ಮತ್ತು ಕಾರ್ಡಿಯೋಗಳನ್ನು ಒಳಗೊಂಡಿದೆ.