MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
CM DK Shivakumar vs HD Devegowda
CM Visits APMC
Today's Horoscope in Kannada
Mekedatu Project Cost
CWRC Meeting Today
KPSC Scam
Ganesh Idol Theft
Mandya Children Wedding
Swachh Vayu Survekshan
108 Ambulance Services
LPG Booking Rules
National Film Awards Ceremony
  • Home
  • Life
  • Food
  • ಸಲ್ಮಾನ್ ಖಾನ್ ಸಹೋದರಿಯ ರೆಸ್ಟೋರೆಂಟ್‌ನಲ್ಲಿ ₹5,000 ಪಾಸ್ತಾ… ₹1.35 ಲಕ್ಷದ ಮದ್ಯ! ಬೆಲೆ ಕೇಳಿ ಬೆಚ್ಚಿಬೀಳ್ತೀರಾ

ಸಲ್ಮಾನ್ ಖಾನ್ ಸಹೋದರಿಯ ರೆಸ್ಟೋರೆಂಟ್‌ನಲ್ಲಿ ₹5,000 ಪಾಸ್ತಾ… ₹1.35 ಲಕ್ಷದ ಮದ್ಯ! ಬೆಲೆ ಕೇಳಿ ಬೆಚ್ಚಿಬೀಳ್ತೀರಾ

Mercii Restaurant Mumbai: ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಶರ್ಮಾ ಅವರ ಐಷಾರಾಮಿ ರೆಸ್ಟೋರೆಂಟ್ ನಲ್ಲಿ ಆಹಾರ ಹಾಗೂ ಡ್ರಿಂಕ್ಸ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ. ಮದ್ಯದ ಬೆಲೆ ಲಕ್ಷಕ್ಕೆ ಮುಟ್ಟಿದ್ರೆ, ಪಾಸ್ತಾ ಬೆಲೆ 5000ಕ್ಕೂ ಅಧಿಕ. ಸೋಶಿಯಲ್ ಮೀಡಿಯಾದಲ್ಲಿ ಮೆನು ಬೆಲೆ ವೈರಲ್ ಆಗ್ತಿದೆ.

2 Min read
Author : Pavna Das
Published : Aug 22 2026, 06:23 PM IST
Share this Photo Gallery
  • FB
  • TW
  • Linkdin
  • Whatsapp
17
ಸಲ್ಮಾನ್ ಖಾನ್ ಸಹೋದರಿ ರೆಸ್ಟೋರೆಂಟ್ ಬಲು ದುಬಾರಿ
Image Credit : social media

ಸಲ್ಮಾನ್ ಖಾನ್ ಸಹೋದರಿ ರೆಸ್ಟೋರೆಂಟ್ ಬಲು ದುಬಾರಿ

ಸಲ್ಮಾನ್ ಖಾನ್ ಅವರ ಸಹೋದರಿ ಅರ್ಪಿತಾ ಖಾನ್ ಶರ್ಮಾ ಅವರು ಮುಂಬೈನ ಸಾಂತಾಕ್ರೂಜ್‌ನಲ್ಲಿ ತಮ್ಮದೇ ಆದ ರೆಸ್ಟೋರೆಂಟ್ ಹೊಂದಿದ್ದಾರೆ. ಈ ರೆಸ್ಟೋರೆಂಟ್‌ನ ಹೆಸರು Mercii. ಸುಮಾರು 9,000 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ Mercii ಯುರೋಪಿಯನ್ ಫೈನ್ ಡೈನಿಂಗ್ ರೆಸ್ಟೋರೆಂಟ್, ಬಾರ್ ಮತ್ತು ಲೌಂಜ್ ಆಗಿದೆ. 2024ರ ಡಿಸೆಂಬರ್‌ನಲ್ಲಿ ಅರ್ಪಿತಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಎಲ್ಲರಿಗೂ Mercii ರೆಸ್ಟೋರೆಂಟ್ ಬಗ್ಗೆ ಪರಿಚಯಿಸಿದ್ದರು. ಅರ್ಪಿತಾ ಅವರ ರೆಸ್ಟೋರೆಂಟ್ ನೋಡಲು ಎಷ್ಟು ಐಷಾರಾಮಿಯಾಗಿದೆಯೋ, ಇಲ್ಲಿನ ಆಹಾರ-ಡ್ರಿಂಕ್ಸ್ ಬೆಲೆಯೂ ಅಷ್ಟೇ ದುಬಾರಿಯಾಗಿದೆ. ಹಾಗಾದರೆ ಇಲ್ಲಿ ಯಾವ ಆಹಾರಕ್ಕೆ ಎಷ್ಟು ಬೆಲೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ಸಲಾಡ್‌ ಬೆಲೆ ಎಷ್ಟು?
Image Credit : Getty

ಸಲಾಡ್‌ ಬೆಲೆ ಎಷ್ಟು?

ಅರ್ಪಿತಾ ಅವರ ರೆಸ್ಟೋರೆಂಟ್‌ನಲ್ಲಿ ಹಲವು ಬಗೆಯ ಸಲಾಡ್‌ಗಳಿವೆ. ವಾಟರ್‌ಮೆಲನ್ ಮತ್ತು ಯುಜು ರೈಸ್ ವೈನ್ ಡ್ರೆಸ್ಸಿಂಗ್‌ನೊಂದಿಗೆ ಸಿಗುವ Crimson & Green Salad ಬೆಲೆ ₹650. ಸಿಟ್ರಸ್ ಗ್ರೂವ್ ಸಲಾಡ್ ₹850, ಸಾಂಗ್ ಆಫ್ ಸಮ್ಮರ್ ಫ್ರುಟ್ ಸಲಾಡ್ ₹680, ಸ್ಮೋಕಿ ಚಿಕನ್ ಸಲಾಡ್ ₹750 ಮತ್ತು ಫಿಗ್ ಮಶ್ರೂಮ್ ಬುರಾಟ ಸಲಾಡ್ ₹850 ಬೆಲೆಗೆ ಸಿಗುತ್ತದೆ.

Related Articles

Related image1
Salman Khan: 51 ವರ್ಷಗಳ ಬಳಿಕ ಮನೆ ಖಾಲಿ ಮಾಡ್ತಾರಂತೆ ಸಲ್ಮಾನ್ ಖಾನ್?: ಕಾರಣ ಕೇಳಿದ್ರೆ ಅಚ್ಚರಿಪಡ್ತೀರಾ!
Related image2
Salman Khan Secret Plan: 2027ರ 'ಈದ್'ಗೆ ಸುಲ್ತಾನ್ ಸಲ್ಮಾನ್ ಸೀಕ್ರೆಟ್ ಪ್ಲಾನ್; 'ಧುರಂಧರ್' ಟೀಮ್‌ ಜೊತೆಗೆ ಸಲ್ಲೂ ಮಾಡಲಿರೋದೇನು?
37
₹750ರಿಂದ ಆರಂಭವಾಗುತ್ತೆ ಡಿಮ್‌ಸಮ್
Image Credit : google

₹750ರಿಂದ ಆರಂಭವಾಗುತ್ತೆ ಡಿಮ್‌ಸಮ್

ಮೊಮೊಸ್‌ಗಿಂತ ವಿಭಿನ್ನವಾಗಿ, ಅರ್ಪಿತಾ ಅವರ ರೆಸ್ಟೋರೆಂಟ್‌ನಲ್ಲಿ ಡಿಮ್‌ಸಮ್ ಲಭ್ಯವಿದೆ. ಅತ್ಯಂತ ಕಡಿಮೆ ಬೆಲೆಯ Veg Crystal Dimsum ₹750. ನಂತರ Truffle Edamame Dimsum, ವ್ವಲ್ಡ್ ಮಶ್ರೂಮ್ ಡಿಮ್ಸಮ್, Asparagus & Water Chestnut Dimsum ಮತ್ತು Poached Peking Dumplings ತಲಾ ₹850ಕ್ಕೆ ಸಿಗುತ್ತವೆ. ಇಲ್ಲಿ ಅತ್ಯಂತ ದುಬಾರಿ ಸಿಗಡಿ ಡಿಮ್ಸಮ್, ಇದರ ಬೆಲೆ ₹950.

47
ಕ್ಲಾಸಿಕ್ ಮಾರ್ಗರಿಟಾ ಪಿಜ್ಜಾ ಎಷ್ಟು?
Image Credit : Gemini

ಕ್ಲಾಸಿಕ್ ಮಾರ್ಗರಿಟಾ ಪಿಜ್ಜಾ ಎಷ್ಟು?

Mercii ರೆಸ್ಟೋರೆಂಟ್‌ನಲ್ಲಿ ಕ್ಲಾಸಿಕ್ ಮಾರ್ಗರೆಟ್ ಪಿಜ್ಜಾಗೆ ₹850 ಪಾವತಿಸಬೇಕು. ಗಾರ್ಡನ್ ಪೆಸ್ತೋ ಪಿಜ್ಜಾ ₹900, ಕ್ರೀಮಿ ಬಿಯಾಂಕ ಪಿಜ್ಜಾ ₹900 ಮತ್ತು ಸ್ಪೈಸ್ಡ್ ಚಿಕನ್ ಪಿಜ್ಜಾ ವಿತ್ ರಾಂಚ್ ಸಾಸ್ ₹1,050 ಬೆಲೆಗೆ ಸಿಗುತ್ತದೆ.

57
₹5,000 ಬೆಲೆಯ ಪಾಸ್ತಾ!
Image Credit : Getty

₹5,000 ಬೆಲೆಯ ಪಾಸ್ತಾ!

Mercii ರೆಸ್ಟೋರೆಂಟ್‌ನ ಮೆನುದಲ್ಲಿ ಹಲವು ಬಗೆಯ ಪಾಸ್ತಾಗಳಿವೆ. Rosette Ravioli ₹1,250, ಪೆಸ್ತೋ ರಿಗಾಂಟೋನಿ ₹950 ಮತ್ತು Amaranth Cannelloni Pasta ₹1,050 ಬೆಲೆಗೆ ಸಿಗುತ್ತದೆ. ಆದರೆ ಇಲ್ಲಿನ ವಿಶೇಷ ವೀಲ್ ಟಫೆಲ್ ಪಾಸ್ತಾ ತಿನ್ನಬೇಕೆಂದರೆ ಬರೋಬ್ಬರಿ ₹5,000 ಪಾವತಿಸಬೇಕು. ಸ್ಪೈಸಿ ಪ್ರಾನ್ಸ್ ಉಡಾನ್ ನೂಡಲ್ಸ್ ತಿನ್ನಲು ₹1,050 ಖರ್ಚಾಗುತ್ತದೆ.

67
₹2,500 ಬೆಲೆಯ ಲ್ಯಾಂಬ್ ಚಾಪ್ಸ್
Image Credit : social media

₹2,500 ಬೆಲೆಯ ಲ್ಯಾಂಬ್ ಚಾಪ್ಸ್

ಹರ್ಬ್ ಕ್ರಸ್ಟೆಡ್ ಗ್ರಿಲ್ಡ್ ನ್ಯೂಝಿಲ್ಯಾಂಡ್ ಲಾಂಬ್ ಚಾಪ್ಸ್ ಒಂದು ಪ್ಲೇಟ್‌ಗೆ ₹2,500. ಇದು ಅರ್ಪಿತಾ ಅವರ ಫುಡ್ ಮೆನುದಲ್ಲಿರುವ ಅತ್ಯಂತ ದುಬಾರಿ ಖಾದ್ಯವಾಗಿದೆ. ಇದನ್ನು ಮ್ಯಾಶ್ಡ್ ಪೊಟೇಟೋ, ಬೇಬಿ ಕ್ಯಾರೆಟ್ಸ್, ಗ್ರಿಲ್ಡ್ ಬ್ರೊಕೊಲಿ ಮತ್ತು ರೆಡ್ ವೈನ್ ಜಸ್‌ನೊಂದಿಗೆ ಸರ್ವ್ ಮಾಡಲಾಗುತ್ತದೆ.

77
₹1.35 ಲಕ್ಷದ ಟಕೀಲಾ, ₹68 ಸಾವಿರದ ವೋಡ್ಕಾ!
Image Credit : social media

₹1.35 ಲಕ್ಷದ ಟಕೀಲಾ, ₹68 ಸಾವಿರದ ವೋಡ್ಕಾ!

ಅರ್ಪಿತಾ ಅವರ ರೆಸ್ಟೋರೆಂಟ್‌ನ ಬಾರ್ ಮೆನು ಕೂಡ ಲಕ್ಷ ರೂಪಾಯಿಗೂ ಮೀರಿದೆ. Grey Goose Altius ವೋಡ್ಕಾದ ಫ್ರಾನ್ಸ್ ಬಾಟಲಿಯ ಬೆಲೆ ₹46,000. ಇದರ 30 ಎಂಎಲ್ ಸರ್ವಿಂಗ್‌ಗೆ ₹2,000 ಪಾವತಿಸಬೇಕು. Clase Azul Plata NOM 1595 ಟಕೀಲಾ ಬೆಲೆ ₹1,22,000. ಇನ್ನು Clase Azul Reposado ಬಾಟಲಿಯ ಬೆಲೆ ಬರೋಬ್ಬರಿ ₹1,35,000.

ರೆಸ್ಟೋರೆಂಟ್‌ನಲ್ಲಿ Swiggy ಅಥವಾ Zomato ಮೂಲಕ ₹50ರವರೆಗೆ ಪಾವತಿಸಿ ಟೇಬಲ್ ಬುಕ್ ಮಾಡುವ ಆಯ್ಕೆಯೂ ಇದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಸಲ್ಮಾನ್ ಖಾನ್
ಬಾಲಿವುಡ್
ಮನರಂಜನಾ ಸುದ್ದಿ
ಆಹಾರ

Latest Videos
Recommended Stories
Recommended image1
ಗಣೇಶನಿಗೆ ಪ್ರಿಯವಾದ ಅವಲಕ್ಕಿ 'ಪಂಚಕಜ್ಜಾಯ'.. ಕೇವಲ 15 ನಿಮಿಷದಲ್ಲಿ ಮಾಡುವ ಸುಲಭ ವಿಧಾನ
Recommended image2
ರಾಗಿ ರೊಟ್ಟಿ ಸರಿಯಾಗಿ ಬರೋದೆ ಇಲ್ವಾ? ಈ ಟ್ರಿಕ್ಸ್ ಟ್ರೈ ಮಾಡಿ ಸಾಫ್ಟ್, ಫ್ಲಫಿ ರೊಟ್ಟಿ ರೆಡಿಯಾಗುತ್ತೆ
Recommended image3
Ghee: ಪ್ರತಿದಿನ ತುಪ್ಪ ತಿನ್ನುತ್ತೀರಾ? ಈ ಆರೋಗ್ಯ ಸಮಸ್ಯೆಗಳಿದ್ದರೆ ಹುಷಾರಾಗಿರಿ!
Related Stories
Recommended image1
Salman Khan: 51 ವರ್ಷಗಳ ಬಳಿಕ ಮನೆ ಖಾಲಿ ಮಾಡ್ತಾರಂತೆ ಸಲ್ಮಾನ್ ಖಾನ್?: ಕಾರಣ ಕೇಳಿದ್ರೆ ಅಚ್ಚರಿಪಡ್ತೀರಾ!
Recommended image2
Salman Khan Secret Plan: 2027ರ 'ಈದ್'ಗೆ ಸುಲ್ತಾನ್ ಸಲ್ಮಾನ್ ಸೀಕ್ರೆಟ್ ಪ್ಲಾನ್; 'ಧುರಂಧರ್' ಟೀಮ್‌ ಜೊತೆಗೆ ಸಲ್ಲೂ ಮಾಡಲಿರೋದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved