ದಿನವಿಡೀ ಸುಸ್ತು ಕಾಡ್ತಿದ್ಯಾ? ಕಾರಣ ತಿಳಿಯದೇ ಆತಂಕ ಆಗಿದ್ಯಾ..? ಹಾಗಿದ್ರೆ ಹೀಗ್ ಮಾಡಿ ಹಾಯಾಗಿರಿ!
ಕೇವಲ ನಿದ್ದೆ ಕೆಟ್ಟಾಗ ಮಾತ್ರವಲ್ಲ, ಆರೋಗ್ಯ ಸರಿಯಿಲ್ಲದಿದ್ದರೂ ನಮಗೆ ಪದೇ ಪದೇ ಸುಸ್ತು ಕಾಡುತ್ತದೆ. ನಾವು ಆರೋಗ್ಯವಾಗಿರಬೇಕು ಅಂದ್ರೆ ಮೊದಲು ನಮ್ಮ ಊಟದ ಕಡೆ ಗಮನ ಹರಿಸಬೇಕು. ದಿನವಿಡೀ ಆಯಾಸ ಕಾಡಲು ಮುಖ್ಯ ಕಾರಣಗಳು ಇಲ್ಲಿವೆ.

ನಾವು ಪೌಷ್ಟಿಕಾಂಶ ಇರುವ ಊಟ ಮಾಡದಿದ್ದರೆ ಆರೋಗ್ಯ ಹಾಳಾಗುತ್ತದೆ. ಬೆಳಗ್ಗಿನ ತಿಂಡಿ ಬಿಡುವುದು, ಖಾಲಿ ಹೊಟ್ಟೆಯಲ್ಲಿ ಟೀ ಅಥವಾ ಕಾಫಿ ಕುಡಿಯುವ ಅಭ್ಯಾಸಗಳನ್ನು ನಾವು ಮೊದಲು ಬಿಡಬೇಕು.
ಅತಿಯಾದ ಟೆನ್ಷನ್ ನಮ್ಮನ್ನು ಹೆಚ್ಚು ಸುಸ್ತಾಗುವಂತೆ ಮಾಡುತ್ತದೆ. ನಾವು ಒತ್ತಡಕ್ಕೆ ಒಳಗಾದಾಗ ದೇಹದಲ್ಲಿ ಸ್ಟ್ರೆಸ್ ಹಾರ್ಮೋನ್ಗಳು ಬಿಡುಗಡೆಯಾಗುತ್ತವೆ. ಇದರಿಂದ ನಮಗೆ ವಿಪರೀತ ಆಯಾಸವಾಗುತ್ತದೆ.
ದೇಹದಲ್ಲಿ ಐರನ್ (ಕಬ್ಬಿಣಾಂಶ) ಕಡಿಮೆಯಾದಾಗಲೂ ನಮಗೆ ಪದೇ ಪದೇ ಸುಸ್ತಾಗುತ್ತದೆ. ಇದು ಹೆಚ್ಚಾಗಿ ಮಹಿಳೆಯರಲ್ಲಿ ಕಂಡುಬರುತ್ತದೆ. ನಾವು ಐರನ್ ಅಂಶ ಹೆಚ್ಚಿರುವ ಆಹಾರಗಳನ್ನು ಚೆನ್ನಾಗಿ ತಿನ್ನಬೇಕು.
ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗಲೂ ನಮಗೆ ವಿಪರೀತ ಸುಸ್ತು ಕಾಡುತ್ತದೆ. ಹಾಗಾಗಿ ನಾವು ಆಗಾಗ ಸಾಕಷ್ಟು ನೀರು ಕುಡಿಯುತ್ತಿರಬೇಕು. ವಿಟಮಿನ್ ಡಿ ಕೊರತೆಯಿಂದ ನಮಗೆ ಸುಸ್ತು, ಸ್ನಾಯುಗಳ ದೌರ್ಬಲ್ಯ ಮತ್ತು ಒತ್ತಡ ಕಾಡುತ್ತದೆ. ಅದೇ ರೀತಿ ನಮ್ಮ ದೇಹಕ್ಕೆ ವಿಟಮಿನ್ ಬಿ12 ಕೂಡ ಬಹಳ ಮುಖ್ಯ.
ಕೇವಲ ನಿದ್ದೆ ಕೆಟ್ಟಾಗ ಮಾತ್ರವಲ್ಲ, ಆರೋಗ್ಯ ಸರಿಯಿಲ್ಲದಿದ್ದರೂ ನಮಗೆ ಪದೇ ಪದೇ ಸುಸ್ತು ಕಾಡುತ್ತದೆ. ನಾವು ಆರೋಗ್ಯವಾಗಿರಬೇಕು ಅಂದ್ರೆ ಮೊದಲು ನಮ್ಮ ಊಟದ ಕಡೆ ಗಮನ ಹರಿಸಬೇಕು. ದಿನವಿಡೀ ಆಯಾಸ ಕಾಡಲು ಮುಖ್ಯ ಕಾರಣಗಳು ಇಲ್ಲಿವೆ.
ಕಾಲಕ್ಕೆ, ವಾತಾವರಣಕ್ಕೆ ತಕ್ಕಂತೆ ಎಲ್ಲಾ ತರಹದ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ, ನಿಮ್ಮ ಆರೋಗ್ಯವನ್ನು ನಿರಂತರವಾಗಿ ಕಾಪಾಡಿಕೊಳ್ಳಿ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

