- Home
- Life
- Food
- ಇವೆರಡನ್ನು ಸೇರಿಸಿದ್ರೆ ಮುಗೀತು.. ಅರ್ಧದಷ್ಟಿದ್ದ ಹಿಟ್ಟಿನ ಪಾತ್ರೆ ಮೇಲಿನವರೆಗೆ ಉಬ್ಬಿ ಬರುತ್ತೆ, ಇಡ್ಲಿ ಬೆಣ್ಣೆಯಂತಿರುತ್ತೆ
ಇವೆರಡನ್ನು ಸೇರಿಸಿದ್ರೆ ಮುಗೀತು.. ಅರ್ಧದಷ್ಟಿದ್ದ ಹಿಟ್ಟಿನ ಪಾತ್ರೆ ಮೇಲಿನವರೆಗೆ ಉಬ್ಬಿ ಬರುತ್ತೆ, ಇಡ್ಲಿ ಬೆಣ್ಣೆಯಂತಿರುತ್ತೆ
Soft idli recipe tips Kannada: ಮನೆಯಲ್ಲಿ ಇಡ್ಲಿ ಮಾಡಿದರೆ ಹೋಟೆಲ್‌ನಂತೆ ಮೃದುವಾಗಿ ಬರುವುದಿಲ್ಲವೇ? ಚಿಂತಿಸಬೇಡಿ! ನಿಮ್ಮ ಅಡುಗೆಮನೆಯಲ್ಲಿರುವ ಕೇವಲ ಎರಡು ಪದಾರ್ಥಗಳನ್ನು ಬಳಸಿ, ಹತ್ತಿಯಂತೆ ಮೃದುವಾದ ಮತ್ತು ಬಾಯಲ್ಲಿಟ್ಟರೆ ಕರಗುವ ಇಡ್ಲಿಗಳನ್ನು ತಯಾರಿಸುವ ಸೀಕ್ರೆಟ್ ಇಲ್ಲಿದೆ.

ತಜ್ಞರು ಕೊಟ್ಟ ಟಿಪ್ಸ್
ಇಡ್ಲಿ ತಯಾರಿಸುವಾಗ ಅವು ಸರಿಯಾಗಿ ಉಬ್ಬುವುದಿಲ್ಲ ಎಂದು ಅನೇಕರು ದೂರುತ್ತಾರೆ. ಈ ಬಗ್ಗೆ ತಜ್ಞರೊಬ್ಬರು ಒಂದು ಉಪಯುಕ್ತ ಮಾಹಿತಿ ನೀಡಿದ್ದಾರೆ. ಇಡ್ಲಿ ಹಿಟ್ಟಿಗೆ ಕೇವಲ ಎರಡು ಪದಾರ್ಥಗಳನ್ನು ಸೇರಿಸಿದರೆ ನಿಮ್ಮ ಇಡ್ಲಿ ಅತ್ಯಂತ ಮೃದುವಾಗಿ, ಬಾಯಲ್ಲಿ ಇಟ್ಟರೆ ಕರಗುವಂತೆ ತಯಾರಾಗುತ್ತವೆ.
ಬಾಯಲ್ಲಿಟ್ಟರೆ ಕರಗುತ್ತೆ
ತಜ್ಞರು ಹೇಳುವಂತೆ, ಅನೇಕ ಗೃಹಿಣಿಯರಿಗೆ ಹೊರಗಿನ ಇಡ್ಲಿಗಳಷ್ಟೇ ಮೃದುವಾದ ಇಡ್ಲಿಗಳನ್ನು ಮನೆಯಲ್ಲಿ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಕೊರಗಿರುತ್ತದೆ. ಹೋಟೆಲ್ ಅಥವಾ ರೆಸ್ಟೋರೆಂಟ್‌ಗಳವರು ಇಡ್ಲಿ ಸಾಫ್ಟ್ ಆಗಲು ಏನು ಹಾಕುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ. ಇದಕ್ಕೆ ಉತ್ತರ ಸರಳವಾಗಿದೆ, ನೀವು ಕೇವಲ ಈ ಎರಡು ಪದಾರ್ಥಗಳನ್ನು ಬಳಸಬೇಕು.
ಸ್ವಲ್ಪ ಅವಲಕ್ಕಿ ಮತ್ತು ಮೆಂತ್ಯ ಕಾಳು
ಹೌದು. ತಜ್ಞರ ಪ್ರಕಾರ, ಇಡ್ಲಿ ಹಿಟ್ಟು ರುಬ್ಬುವಾಗ ಈ ಕೆಳಗಿನ ವಿಧಾನ ಅನುಸರಿಸಿ
ಅವಲಕ್ಕಿ (Poha): ಅರ್ಧ ಕಪ್ ಅವಲಕ್ಕಿಯನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ನೆನೆಸಿ. ನಂತರ ಅದನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಇದನ್ನು ಅಕ್ಕಿ ಮತ್ತು ಉದ್ದಿನ ಬೇಳೆಯ ಹಿಟ್ಟಿನೊಂದಿಗೆ ಚೆನ್ನಾಗಿ ಬೆರೆಸಿ. ಇದು ಹಿಟ್ಟಿನಲ್ಲಿ ಹುಳಿ (Fermentation) ಚೆನ್ನಾಗಿ ಬರಲು ಸಹಾಯ ಮಾಡುತ್ತದೆ ಮತ್ತು ಹಿಟ್ಟಿನ ಪ್ರಮಾಣವನ್ನು ದುಪ್ಪಟ್ಟು ಮಾಡುತ್ತದೆ.
ಮೆಂತ್ಯ ಕಾಳು (Fenugreek Seeds): ಹಿಟ್ಟು ರುಬ್ಬುವ ಮೊದಲೇ ಅರ್ಧ ಚಮಚ ಮೆಂತ್ಯ ಕಾಳುಗಳನ್ನು ನೆನೆಸಿಡಿ. ನಂತರ ಅಕ್ಕಿ-ಉದ್ದಿನ ಬೇಳೆಯ ಜೊತೆಗೆ ಸೇರಿಸಿ ನುಣ್ಣಗೆ ರುಬ್ಬಿ.
ಮೆಂತ್ಯ ಕಾಳು ಹುಳಿ ಬರಲು ಸಹಾಯ ಮಾಡುತ್ತೆ
ಮೆಂತ್ಯ ಕಾಳುಗಳನ್ನು ಸೇರಿಸುವುದರಿಂದ ಹಿಟ್ಟು ಅದ್ಭುತವಾಗಿ ಉಬ್ಬುತ್ತದೆ. ಉದಾಹರಣೆಗೆ, ನಿಮ್ಮ ಪಾತ್ರೆಯಲ್ಲಿ ಅರ್ಧದಷ್ಟು ಹಿಟ್ಟು ಇದ್ದರೆ, ಬೆಳಗ್ಗೆ ನೋಡುವಷ್ಟರಲ್ಲಿ ಅದು ಪಾತ್ರೆಯ ಮೇಲಿನವರೆಗೆ ಉಬ್ಬಿ ಬಂದಿರುತ್ತದೆ.
ಸಮಯದ ಬಗ್ಗೆ ಗಮನವಿರಲಿ
ಹಿಟ್ಟನ್ನು ರುಬ್ಬಿದ ನಂತರ ಕನಿಷ್ಠ 12 ರಿಂದ 13 ಗಂಟೆಗಳ ಕಾಲ ಹಾಗೆಯೇ ಬಿಡಬೇಕು. ಕೇವಲ 7-8 ಗಂಟೆ ಬಿಟ್ಟರೆ ಪ್ರಯೋಜನವಿಲ್ಲ. ಬೇಸಿಗೆಯಲ್ಲಿ 12-13 ಗಂಟೆ ಸಾಕಾಗುತ್ತದೆ, ಆದರೆ ಚಳಿಗಾಲದಲ್ಲಿ ಹಿಟ್ಟು ಸರಿಯಾಗಿ ಉಬ್ಬಲು ಕನಿಷ್ಠ 24 ಗಂಟೆಗಳ ಕಾಲ ಬಿಡಬೇಕಾಗಬಹುದು.
ಹಲ್ಲಿಲ್ಲದವರು ಕೂಡ ತಿನ್ನಬೋದು
ಈ ರೀತಿ ಮಾಡಿದಾಗ ಇಡ್ಲಿಗಳು ಎಷ್ಟೊಂದು ಮೃದುವಾಗುತ್ತವೆ ಎಂದರೆ, ನೀವು ಕೈಯಲ್ಲಿ ಹಿಡಿದ ತಕ್ಷಣ ಅವು ತುಂಡಾಗುವಷ್ಟು ಸಾಫ್ಟ್ ಆಗಿರುತ್ತವೆ. ಹಲ್ಲಿಲ್ಲದವರು ಕೂಡ ಇದನ್ನು ಸುಲಭವಾಗಿ ತಿನ್ನಬಹುದು. ಅಷ್ಟು ಮೃದುವಾಗಿರುವುದರಿಂದ ಇದು ಜೀರ್ಣಕ್ರಿಯೆಗೂ ತುಂಬಾ ಒಳ್ಳೆಯದು.
ಚಟ್ನಿ-ಸಾಂಬಾರ್ ಜೊತೆ
ಇದನ್ನು ಕಾಯಿ ಚಟ್ನಿ ಅಥವಾ ಸಾಂಬಾರ್ ಜೊತೆ ಸವಿಯಬಹುದು. ಅಥವಾ ಒಗ್ಗರಣೆ (ಸಾಸಿವೆ, ಕರಿಬೇವು) ಹಾಕಿ ಫ್ರೈ ಮಾಡಿ ಗ್ರೀನ್ ಚಟ್ನಿ ಜೊತೆಗೂ ಸವಿಯಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

