ಇಡ್ಲಿ ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಆಹಾರ. ಮನೆಯಲ್ಲೇ ಹೋಟೆಲ್ ಶೈಲಿಯ ಮೃದುವಾದ ಮತ್ತು ಸ್ಪಂಜಿನಂತಹ ಇಡ್ಲಿ ತಯಾರಿಸಲು ಇಲ್ಲಿವೆ ಕೆಲವು ಸುಲಭ ಉಪಾಯಗಳು.
food Apr 12 2026
Author: Ashwini HR Image Credits:Pinterest
Kannada
ಅಗತ್ಯವಿರುವ ಪದಾರ್ಥಗಳು
3 ಕಪ್ ಇಡ್ಲಿ ಅಕ್ಕಿ, 1 ಕಪ್ ಸಿಪ್ಪೆ ತೆಗೆದ ಉದ್ದಿನ ಬೇಳೆ, 1 ಚಿಕ್ಕ ಚಮಚ ಮೆಂತೆ ಕಾಳು, ಸೂಜಿ (ರವೆ): ಅಗತ್ಯವಿದ್ದಲ್ಲಿ. ಉಪ್ಪು: ರುಚಿಗೆ ತಕ್ಕಷ್ಟು.
Image credits: Getty
Kannada
ನೆನೆಸುವುದು
ಉದ್ದಿನ ಬೇಳೆ ನೆನೆಸುವಾಗ ಅದಕ್ಕೆ ಒಂದು ಚಮಚ ಮೆಂತೆ ಕಾಳು ಹಾಕಿ. ಇದು ಇಡ್ಲಿಯನ್ನು ಸಾಫ್ಟ್ ಮಾಡಲು ಮತ್ತು ಹಿಟ್ಟು ಚೆನ್ನಾಗಿ ಉಬ್ಬಲು (Fermentation) ಸಹಾಯ ಮಾಡುತ್ತದೆ.
Image credits: our own
Kannada
ರುಬ್ಬುವುದು
ಉದ್ದಿನ ಬೇಳೆಯನ್ನು ಪೂರ್ತಿ ನಯವಾಗಿ ಮತ್ತು ಫ್ಲಫಿ ಆಗುವವರೆಗೆ ರುಬ್ಬಿ. ಅಕ್ಕಿಯನ್ನು ಮಾತ್ರ ರವೆಯಂತೆ ಸ್ವಲ್ಪ ತರಿತರಿಯಾಗಿ ರುಬ್ಬಿಕೊಳ್ಳಿ.
Image credits: social media
Kannada
ಹುದುಗುವಿಕೆ
ರುಬ್ಬಿದ ಹಿಟ್ಟನ್ನು ಕನಿಷ್ಠ 8-10 ಗಂಟೆಗಳ ಕಾಲ ಬೆಚ್ಚಗಿನ ಜಾಗದಲ್ಲಿ ಇಡಿ. ಇಡ್ಲಿ ಮಾಡುವ ಮೊದಲು ಮಾತ್ರ ಉಪ್ಪು ಸೇರಿಸಿ.
Image credits: social media
Kannada
ಬೇಯಿಸುವುದು
ಮಧ್ಯಮ ಉರಿಯಲ್ಲಿ ಕೇವಲ 10-12 ನಿಮಿಷ ಬೇಯಿಸಿ. ಹೆಚ್ಚು ಹೊತ್ತು ಬೇಯಿಸಿದರೆ ಇಡ್ಲಿ ಗಟ್ಟಿಯಾಗುತ್ತದೆ . ಪಕ್ಕಾ ಅಳತೆ ಮತ್ತು ಸರಿಯಾದ ರೀತಿಯಲ್ಲಿ ಹಿಟ್ಟು ಉಬ್ಬಿದರೆ ಮಾತ್ರ ಇಡ್ಲಿ ಹತ್ತಿಯಂತೆ ಮೃದುವಾಗಿ ಬರಲು ಸಾಧ್ಯ.