- Home
- Life
- Food
- Virat Kohli ತಿಂದಿದ್ದು ಚಿಪ್ಸ್ ಅಲ್ಲ, ಕುರ್ ಕುರೆಯೂ ಅಲ್ಲ, ದೇಶಿ ಫುಡ್ Birista; 2 ಸ್ಟೆಪ್‌ನಲ್ಲಿ ಮಾಡೋ ವಿಧಾನ
Virat Kohli ತಿಂದಿದ್ದು ಚಿಪ್ಸ್ ಅಲ್ಲ, ಕುರ್ ಕುರೆಯೂ ಅಲ್ಲ, ದೇಶಿ ಫುಡ್ Birista; 2 ಸ್ಟೆಪ್‌ನಲ್ಲಿ ಮಾಡೋ ವಿಧಾನ
Cricketer Virat Kohli eat birista: ಇತ್ತೀಚೆಗೆ ಕ್ರಿಕೆಟರ್ ವಿರಾಟ್ ಕೊಹ್ಲಿ ಅವರು ಫೀಲ್ಡ್‌ನಲ್ಲಿಯೇ ಒಂದು ಡಬ್ಬ ಹಿಡಿದುಕೊಂಡು ಬಂದಿದ್ದರು. ಅಲ್ಲಿ ಅವರು Snack ತಿನ್ನುತ್ತಿದ್ದರು, ಅದನ್ನು ನೋಡಿದ ಅನೇಕರಿಗೆ ಇದು ಬಾಳೆಕಾಯಿ ಚಿಪ್ಸ್ ಅಥವಾ ಕುರ್‌ಕುರೆ ಎಂದು ಡೌಟ್ ಬಂದಿದೆ. ಆದರೆ ಇದು ಬೇರೆ.

ಬಿರಿಸ್ತಾ ಎಂದರೇನು?
ಬಿರಿಯಾನಿ, ಕುರ್ಮಾ, ಪಲಾವ್ ಮಾಡುವಾಗ 'ಬಿರಿಸ್ತಾ' ಬೇಕೇ ಬೇಕು. ಈರುಳ್ಳಿಯನ್ನು ಚಿನ್ನದ ಬಣ್ಣ ಬರುವವರೆಗೆ ಗರಿಗರಿಯಾಗಿ ಕರಿಯುವುದಕ್ಕೆ ಬಿರಿಸ್ತಾ ಎನ್ನುತ್ತಾರೆ. ಇದರಿಂದ ಅಡುಗೆ ರುಚಿ ಹೆಚ್ಚುವುದು.
ಬೇಕಾಗುವ ಪದಾರ್ಥಗಳು
4 ಈರುಳ್ಳಿ- ದೊಡ್ಡದು ( ಉದ್ದಕ್ಕೆ ಸಣ್ಣದಾಗಿ ಹೆಚ್ಚಿಕೊಳ್ಳಬೇಕು)
ಕರಿಯಲು ಎಣ್ಣೆ ಬೇಕು
ಅಗತ್ಯ ಇದ್ದಷ್ಟು ಉಪ್ಪು ಬೇಕು
ಹೇಗೆ ಮಾಡುವುದು?
ಈರುಳ್ಳಿಯನ್ನು ತೆಳ್ಳಗೆ ಉದ್ದುದ್ದ ಕಟ್ ಮಾಡಿಕೊಳ್ಳಬೇಕು, ಅದನ್ನು ಕೈಯಲ್ಲಿ ಹಿಸುಕಿ ಪದರಗಳನ್ನು ಬಿಡಿಸಿಕೊಳ್ಳಿ. ಬಾಣೆಲೆ ತಗೊಂಡು ಮಧ್ಯಮ ಉರಿಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಕಾದ ಬಳಿಕ ಈರುಳ್ಳಿ ಹಾಕಿ ಫ್ರೈ ಮಾಡಬೇಕು.
ಕೊನೆಯಲ್ಲಿ ಏನು ಮಾಡಬೇಕು?
ಈರುಳ್ಳಿಯ ಬಣ್ಣವು ತಿಳಿ ಹಳದಿಗೆ ತಿರುಗಬೇಕು. ಎಣ್ಣೆಯಿಂದ ತೆಗೆದಮೇಲೆ ಕಪ್ಪಗಾಗುತ್ತದೆ, ಹೀಗಾಗಿ ಜಾಸ್ತಿ ಫ್ರೈ ಮಾಡೋದು ಬೇಡ. ಆಮೇಲೆ ಒಂದು ಟಿಶ್ಯೂ ಪೇಪರ್‌ಗೆ ಹಾಕಿದಾಗ, ಹೆಚ್ಚಿರುವ ಎಣ್ಣೆ ಹೀರುತ್ತದೆ, ಈರುಳ್ಳಿ ಗರಿಗರಿ ಆಗುತ್ತದೆ.
ಈರುಳ್ಳಿ ಕರಿದ ಬಳಿಕ ಉಳಿದ ಎಣ್ಣೆಯಲ್ಲಿ ಉತ್ತಮ ಸುಗಂಧವಿರುತ್ತದೆ. ಇದನ್ನು ಬಿರಿಯಾನಿ ಅಥವಾ ಗ್ರೇವಿ ಮಾಡಲು ಬಳಸಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

