Cooked Rice: ಫ್ರಿಡ್ಜ್‌ನಲ್ಲಿಟ್ಟ ಅನ್ನ ಎಷ್ಟು ದಿನ ತಿನ್ಬೋದು? ನಿರ್ಲಕ್ಷಿಸಿದರೆ ಜೀವಕ್ಕೇ ಅಪಾಯವೇ?
How long can you keep cooked rice in the fridge: ಮನೆಯಲ್ಲಿ ಉಳಿದ ಅನ್ನವನ್ನು ಫ್ರಿಡ್ಜ್‌ನಲ್ಲಿ ಎಷ್ಟು ದಿನಗಳವರೆಗೆ ಇಟ್ಟು ತಿನ್ನಬಹುದು? ಒಂದು ವೇಳೆ ಹಾಗೆ ತಿಂದರೆ ಏನಾಗುತ್ತದೆ ಎಂಬುದನ್ನು ಇಲ್ಲಿ ನೋಡೋಣ.

ಬ್ಯುಸಿ ಲೈಫ್‌ಸ್ಟೈಲ್
ಇಂದಿನ ದಿನಗಳಲ್ಲಿ ನಾವೆಲ್ಲರೂ ಬ್ಯುಸಿ ಜಗತ್ತಿನಲ್ಲಿ ಬದುಕುತ್ತಿದ್ದೇವೆ. ಅಡುಗೆ ಮಾಡಲು ಸಹ ಪುರುಸೊತ್ತು ಇರಲ್ಲ. ಹೀಗಾಗಿ, ಈಗಾಗಲೇ ಬೇಯಿಸಿದ ಆಹಾರವನ್ನು ಫ್ರಿಡ್ಜ್‌ನಲ್ಲಿಟ್ಟು, ಮರುದಿನ ಅದನ್ನು ಬಿಸಿ ಮಾಡಿ ತಿನ್ನುತ್ತೇವೆ.
ಆರೋಗ್ಯದ ಮೇಲೆ ಕೆಟ್ಟ ಪರಿಣಾಮ
ಈ ಅಭ್ಯಾಸವು ಜನರ ನಡುವೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದು ಸಮಯವನ್ನು ಉಳಿಸಿದರೂ, ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳನ್ನು ಉಂಟುಮಾಡಬಹುದು ಎಂಬುದು ನಿಮಗೆ ತಿಳಿದಿದೆಯೇ?
ಎಷ್ಟು ದಿನಗಳವರೆಗೆ ಫ್ರಿಡ್ಜ್‌ನಲ್ಲಿ ಇಡಬಹುದು?
ಎರಡು ದಿನಗಳೊಳಗೆ ತಿನ್ನಿ
ನೀವು ಫ್ರಿಡ್ಜ್‌ನಲ್ಲಿ ಅನ್ನವನ್ನು ಇಟ್ಟು ಬಳಸುವುದಾದರೆ, ಅದನ್ನು ಖಂಡಿತವಾಗಿಯೂ ಎರಡು ದಿನಗಳೊಳಗೆ ತಿನ್ನಬೇಕು. ಮುಖ್ಯವಾಗಿ, ಗಾಳಿಯಾಡದ ಪಾತ್ರೆಯಲ್ಲಿ ಅನ್ನವನ್ನು ಹಾಕಿ ನಂತರ ಫ್ರಿಡ್ಜ್‌ನಲ್ಲಿಡಿ.
ಕೆಟ್ಟ ವಾಸನೆ ಬರುತ್ತಿದ್ದರೆ ಬಿಟ್ಬಿಡಿ
ಒಂದು ವೇಳೆ ಫ್ರಿಡ್ಜ್‌ನಲ್ಲಿಟ್ಟ ಅನ್ನದಿಂದ ಕೆಟ್ಟ ವಾಸನೆ ಬರುತ್ತಿದ್ದರೆ, ಅದನ್ನು ಎಂದಿಗೂ ತಿನ್ನಬೇಡಿ. ಏಕೆಂದರೆ ಅದರಲ್ಲಿ ಬ್ಯಾಕ್ಟೀರಿಯಾಗಳು ಹೆಚ್ಚಾಗಿರುತ್ತವೆ. ಹಾಗೆ ತಿಂದರೆ ಫುಡ್ ಪಾಯ್ಸನ್, ಭೇದಿ, ವಾಂತಿಯಂತಹ ಸಮಸ್ಯೆಗಳು ಉಂಟಾಗಬಹುದು.
ಕೋಣೆಯ ತಾಪಮಾನದಲ್ಲಿ ಇಟ್ಟ ನಂತರವೇ ತಿನ್ನಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
