MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Food
  • ಗ್ಯಾಸ್ ಇಲ್ಲದೆ ಸುಲಭವಾಗಿ ತಯಾರಿಸಿ ಹೈ ಪ್ರೊಟೀನ್ ಲಂಚ್

ಗ್ಯಾಸ್ ಇಲ್ಲದೆ ಸುಲಭವಾಗಿ ತಯಾರಿಸಿ ಹೈ ಪ್ರೊಟೀನ್ ಲಂಚ್

High protein lunch : ಬೆಳಗಿನ ಅರ್ಜೆಂಟ್‌ ನಲ್ಲಿ ದೋಸೆ, ಪರಾಠ ಅಂತ ಗ್ಯಾಸ್ ಉರಿಸಿ, ಒಂದಿಷ್ಟು ಟೈಂ ಸ್ಪೆಂಡ್‌ ಮಾಡಿದ್ರೂ ಸರಿಯಾದ ಪ್ರೊಟೀನ್‌  ಸಿಗೋದಿಲ್ಲ. ಮಧ್ಯಾಹ್ನ ಆಯ್ಲಿಫುಡ್‌ ತಿಂದು ಹೊಟ್ಟೆ ತುಂಬಿಸಿಕೊಳ್ತಾರೆ. ನೀವು ಆರೋಗ್ಯಕರ, ಪ್ರೊಟೀನ್‌ ಆಹಾರ ಗ್ಯಾಸ್‌ ಇಲ್ದೆ ತಯಾರಿಸಬಹುದು. 

2 Min read
Author : Roopa Hegde
Published : Apr 08 2026, 12:31 PM IST
Share this Photo Gallery
  • FB
  • TW
  • Linkdin
  • Whatsapp
15
ನೆನೆಸಿಟ್ಟ ಓಟ್ಸ್‌ ಸೋಯಾ ಮಿಲ್ಕ್
Image Credit : Asianet News

ನೆನೆಸಿಟ್ಟ ಓಟ್ಸ್‌ ಸೋಯಾ ಮಿಲ್ಕ್

ಓಟ್ಸ್ ತೆಗೆದುಕೊಳ್ಳಿ . ಅದಕ್ಕೆ ಸೋಯಾ ಹಾಲು ಅಥವಾ ಬಾದಾಮಿ ಹಾಲು ಸೇರಿಸಿ. ಸ್ವಲ್ಪ ಚಿಯಾ ಬೀಜ ಅಥವಾ ಎಳ್ಳು ಹಾಕಬೇಕು. ಇದನ್ನೆಲ್ಲಾ ಒಂದು ಡಬ್ಬದಲ್ಲಿ ಹಾಕಿ ರಾತ್ರಿ ಪೂರ್ತಿ ನೆನೆಸಿಡಿ. ಇದ್ರಿಂದ ಓಟ್ಸ್ ಸಾಫ್ಟ್ ಆಗುತ್ತದೆ. ಇದ್ರಲ್ಲಿ ಪ್ರೊಟೀನ್ ಮತ್ತು ಫೈಬರ್ ಎರಡೂ ಹೆಚ್ಚಿನ ಪ್ರಮಾಣದಲ್ಲಿದೆ. ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಮಧ್ಯಾಹ್ನದ ನಂತ್ರ ಅತ್ಯುತ್ಸಾಹದಿಂದ ಕೆಲ್ಸ ಮಾಡಬಹುದು.

25
ಮೊಳಕೆಯೊಡೆದ ಹಸಿರುಕಾಳು – ಕಡಲೆಕಾಯಿ ಚಾಟ್
Image Credit : Asianet News

ಮೊಳಕೆಯೊಡೆದ ಹಸಿರುಕಾಳು – ಕಡಲೆಕಾಯಿ ಚಾಟ್

ಮೊಳಕೆಯೊಡೆದ ಹೆಸರುಕಾಳು ಪ್ರೋಟೀನ್ನ ನಿಧಿಯಾಗಿದೆ. ಇದನ್ನು ಹಸಿಯಾಗಿ ತಿನ್ನುವುದು ಒಳ್ಳೆಯದು. ಇದ್ರಲ್ಲಿರುವ ಕಿಣ್ವ ಜೀರ್ಣಕ್ರಿಯೆ ಸುಧಾರಿಸುತ್ತದೆ. ಮೊಳಕೆಯೊಡೆದ ಹೆಸರುಕಾಳಿನ ಜೊತೆ ಹುಡಿದ ಕಡಲೆ ಹಾಗೂ ಈರುಳ್ಳಿ, ಟೊಮೊಟೊ ಬೆರೆಸಿ ಸೇವನೆ ಮಾಡಿ. ರುಚಿಯಾದ ಹಾಗೂ ಆರೋಗ್ಯಕರ ಈ ಆಹಾರ ದಿನವಿಡಿ ನಿಮ್ಮ ದೇಹಕ್ಕೆ ಶಕ್ತಿ ನೀಡುತ್ತದೆ.

Related Articles

Related image1
ಲಟ್ಟಿಸುವಾಗ ಒಣ ಹಿಟ್ಟಲ್ಲ, ಈ ಪದಾರ್ಥ ಬಳಸಿ ಚಪಾತಿ ಹೂವಿನಂತೆ ಅರಳಿ 2-3 ದಿನದವರೆಗೆ ಮೃದುವಾಗಿರುತ್ತೆ
Related image2
ಎಣ್ಣೆಯೂ ಬೇಡ, ಕುದಿಸೋದು ಬೇಡ: ಬಿರಿಯಾನಿ, ಸಾಂಬಾರ್​ ಸೇರಿ ಘಮಘಮಿಸುವ ಸಾವಿರಾರು ಖಾದ್ಯ ಮಾಡೋದು ಹೀಗೆ
35
ಕ್ಯಾನ್ ಟ್ಯೂನಾ
Image Credit : Asianet News

ಕ್ಯಾನ್ ಟ್ಯೂನಾ

ಕ್ಯಾನ್ನಲ್ಲಿ ಸಿಗುವ ಟ್ಯೂನಾ (ಮೀನು) ಅಥವಾ ಮುಂಚಿತವಾಗಿ ಬೇಯಿಸಿದ ಕಡಲೆ ತುಂಬಾ ಸುಲಭವಾದ ಪ್ರೋಟೀನ್ ಊಟ. ಕ್ಯಾನ್ ತೆರೆದು ನೀರನ್ನು ಹೊರಹಾಕಿ. ಅದಕ್ಕೆ ಸ್ವಲ್ಪ ಮಸ್ಟರ್ಡ್ ಸಾಸ್ ಅಥವಾ ಗಟ್ಟಿ ಮೊಸರು ಸೇರಿಸಿ ಚೆನ್ನಾಗಿ ಕಲಸಿ. ಲೆಟ್ಯೂಸ್ ಎಲೆಗಳಲ್ಲಿ ಹಾಕಿ ತಿನ್ನಬಹುದು.

45
ಸತ್ತು ಡ್ರಿಂಕ್ಸ್
Image Credit : Asianet News

ಸತ್ತು ಡ್ರಿಂಕ್ಸ್

ಪ್ರೊಟೀನ್‌ ಹೆಸರು ಬಂದಾಗ ಸತ್ತು ಅಂದ್ರೆ ಹುರಿಗಡಲೆ ಪಾನೀಯ ಲೀಸ್ಟ್ ನಲ್ಲಿ ಮಿಸ್‌ ಆಗೋದಿಲ್ಲ. ಲಂಚ್‌ ತಯಾರಿಸೋಕೆ ಟೈಂ ಇಲ್ಲ ಎನ್ನುವವರು ಇದನ್ನು ತಯಾರಿಸಬಹುದು. ಸತ್ತು ತೆಗೆದುಕೊಳ್ಳಿ. ಅದಕ್ಕೆ ತಣ್ಣೀರು ಸೇರಿಸಿ. ಕಪ್ಪು ಉಪ್ಪು, ಹುರಿದ ಜೀರಿಗೆ ಪುಡಿ , ಸ್ವಲ್ಪ ಹಸಿಮೆಣಸಿನಕಾಯಿ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ. ಇದು ದೇಹವನ್ನು ತಂಪಾಗಿರಿಸುತ್ತದೆ. ಇದು ಹೊಟ್ಟೆ ಫುಲ್ ಆದ ಅನುಭವ ನೀಡುತ್ತದೆ. ತಕ್ಷಣ ನಿಮಗೆ ಎನರ್ಜಿ ನೀಡುತ್ತದೆ.

55
ಮೇಸರ್‌ ಜಾರ್‌ ಸಲಾಡ್
Image Credit : Asianet News

ಮೇಸರ್‌ ಜಾರ್‌ ಸಲಾಡ್

ಸಸ್ಯಹಾರಿಗಳು ಮತ್ತು ಡಯಟ್‌ ಮೇಲೆ ಪ್ರೀತಿ ಹೊಂದಿರುವವರಿಗೆ ಟೋಪು ಮತ್ತು ಎಳ್ಳಿನ ಮೇಸನ್‌ ಜಾರ್ ಸಲಾಡ್‌ ಒಳ್ಳೆಯದು. ಇದು ಕೇಳೋಕೆ ವಿಚಿತ್ರವಾಗಿದೆ. ಆದ್ರೆ ತಯಾರಿಸೋದು ಹಾಗೂ ತಿನ್ನೋದು ಬಹಳ ಸುಲಭ. ಇದಕ್ಕೆ ಸೋಯಾ ಹಾಗೂ ಪನ್ನೀರಿನಿಂದ ಮಾಡಿದ ಟೋಪು, ಎಡಾಮಾಮೆ ಬೀಜ ಅಂದ್ರೆ ಬೇಳೆ, ಕಡಲೆ ಕಾಳು, ಹಸಿರು ಸೊಪ್ಪು, ಎಳ್ಳಿನ ಪೌಡರ್‌ ಅಗತ್ಯವಿದೆ. ನೀವು ಮೊದಲು ಒಂದು ಮೇಸನ್ ಜಾರ್‌ ತೆಗೆದುಕೊಳ್ಳಿ. ಅದಕ್ಕೆ ಮೊದಲು ನಿಂಬೆ ರಸ, ಉಪ್ಪು ಮತ್ತು ಸ್ವಲ್ಪ ಎಣ್ಣೆ ಹಾಕಿ. ಆ ನಂತ್ರ ಟೋಪು, ಯಾವುದಾದ್ರೂ ನೆನೆಸಿಟ್ಟ ಬೇಳೆ ಇಲ್ಲ ಕಡಲೆ, ಹಸಿರು ಸೊಪ್ಪು ಹಾಗೂ ಎಳ್ಳಿನ ಪುಡಿ ಹಾಕಿ ಮಿಕ್ಸ್‌ ಮಾಡಿ ತಿನ್ನಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಆರೋಗ್ಯ
ಆಹಾರ
ಆರೋಗ್ಯಕರ ಆಹಾರಗಳು

Latest Videos
Recommended Stories
Recommended image1
ಲಟ್ಟಿಸುವಾಗ ಒಣ ಹಿಟ್ಟಲ್ಲ, ಈ ಪದಾರ್ಥ ಬಳಸಿ ಚಪಾತಿ ಹೂವಿನಂತೆ ಅರಳಿ 2-3 ದಿನದವರೆಗೆ ಮೃದುವಾಗಿರುತ್ತೆ
Recommended image2
ಎಣ್ಣೆಯೂ ಬೇಡ, ಕುದಿಸೋದು ಬೇಡ: ಬಿರಿಯಾನಿ, ಸಾಂಬಾರ್​ ಸೇರಿ ಘಮಘಮಿಸುವ ಸಾವಿರಾರು ಖಾದ್ಯ ಮಾಡೋದು ಹೀಗೆ
Recommended image3
ಗತಕಾಲಕ್ಕೆ ಮರಳುತ್ತಿದೆ ಭಾರತದ ಜೆನ್‌ಝಿ, ಅಸ್ಸಾಂ ರೈಸ್ ಬಿಯರ್ ಈಗ ಟ್ರೆಂಡ್
Related Stories
Recommended image1
ಲಟ್ಟಿಸುವಾಗ ಒಣ ಹಿಟ್ಟಲ್ಲ, ಈ ಪದಾರ್ಥ ಬಳಸಿ ಚಪಾತಿ ಹೂವಿನಂತೆ ಅರಳಿ 2-3 ದಿನದವರೆಗೆ ಮೃದುವಾಗಿರುತ್ತೆ
Recommended image2
ಎಣ್ಣೆಯೂ ಬೇಡ, ಕುದಿಸೋದು ಬೇಡ: ಬಿರಿಯಾನಿ, ಸಾಂಬಾರ್​ ಸೇರಿ ಘಮಘಮಿಸುವ ಸಾವಿರಾರು ಖಾದ್ಯ ಮಾಡೋದು ಹೀಗೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved