Perfect omelet tricks: ಬೆಳಗಿನ ಉಪಾಹಾರಕ್ಕೆ ಬಿಸಿಬಿಸಿ ಆಮ್ಲೆಟ್ ಮಾಡುವಾಗ ಅದು ಪ್ಯಾನ್‌ಗೆ ಅಂಟಿಕೊಂಡು, ತಿರುಗಿಸುವಾಗ ತುಂಡುತುಂಡಾಗಿ ಹರಿದುಹೋಗುವುದು ಹಲವರಿಗೆ ದೊಡ್ಡ ತಲೆನೋವು. ನಾನ್-ಸ್ಟಿಕ್ ಪ್ಯಾನ್ ಬಳಸಿದರೂ ಕೆಲವೊಮ್ಮೆ ಈ ಸಮಸ್ಯೆ ತಪ್ಪುವುದಿಲ್ಲ. ಒಂದು ವೇಳೆ ನಿಮ್ಮ ಮನೆಯಲ್ಲೂ ಹೀಗಾಗುತ್ತಿದ್ದರೆ, ಈ ಸರಳ ಟಿಪ್ಸ್ ಫಾಲೋ ಮಾಡಿ.
Prevent egg from sticking to pan: ಆರೋಗ್ಯ ಮತ್ತು ದೇಹದ ಫಿಟ್‌ನೆಸ್ ಕಾಪಾಡಿಕೊಳ್ಳಲು ಬಯಸುವ ಬಹುತೇಕರ ಮೊದಲ ಆದ್ಯತೆಯ ಉಪಾಹಾರ ಮೊಟ್ಟೆ. ಬೆಳಗಿನ ಸಮಯದಲ್ಲಿ ಬೇಯಿಸಿದ ಮೊಟ್ಟೆ ಅಥವಾ ಬಿಸಿಬಿಸಿ ಆಮ್ಲೆಟ್ ತಿನ್ನಲು ಜನರು ಇಷ್ಟಪಡುತ್ತಾರೆ. ಮೊಟ್ಟೆ ಬೇಯಿಸುವುದು ತುಂಬಾ ಸುಲಭವಾದ ಕೆಲಸ, ಆದರೆ ಆಮ್ಲೆಟ್ ಮಾಡುವಾಗ ಅದು ಪ್ಯಾನ್‌ಗೆ ಅಂಟಿಕೊಂಡು, ತಿರುಗಿಸಿ ಹಾಕುವಾಗ ತುಂಡುತುಂಡಾಗಿ ಹರಿದುಹೋಗುವುದು ಹಲವರ ದಿನನಿತ್ಯದ ಸಮಸ್ಯೆಯಾಗಿದೆ.
ಕೆಲವೊಮ್ಮೆ ಉತ್ತಮ ಗುಣಮಟ್ಟದ ನಾನ್-ಸ್ಟಿಕ್ ಪ್ಯಾನ್ ಬಳಸಿದರೂ ಸಹ ಆಮ್ಲೆಟ್ ಅಂಟಿಕೊಳ್ಳುತ್ತದೆ. ಒಂದು ವೇಳೆ ನಿಮ್ಮ ಮನೆಯಲ್ಲೂ ಹೀಗೆಯೇ ಆಗುತ್ತಿದ್ದರೆ, ಅದಕ್ಕಾಗಿ ಚಿಂತಿಸಬೇಕಾಗಿಲ್ಲ. ಪ್ರಸಿದ್ಧ ಚೆಫ್ ಪಂಕಜ್ ಭದೌರಿಯಾ ಅವರು ಈ ಸಮಸ್ಯೆಗೆ ಕೆಲವು ಅದ್ಭುತ ಮತ್ತು ಸುಲಭವಾದ ಟಿಪ್ಸ್‌ಗಳನ್ನು ಹಂಚಿಕೊಂಡಿದ್ದಾರೆ. ಈ ಸರಳ ಅಡುಗೆ ತಂತ್ರಗಳನ್ನು ಪಾಲಿಸಿದರೆ ನಿಮ್ಮ ಮನೆಯ ಆಮ್ಲೆಟ್ ಕೂಡ ಹೋಟೆಲ್ ಶೈಲಿಯಲ್ಲಿ ಅತ್ಯಂತ ಸ್ಪಂಜಿ, ಮೃದು ಹಾಗೂ ಸುಂದರವಾಗಿ ಮೂಡಿಬರುತ್ತದೆ. ಆ ಉಪಯುಕ್ತ ಸಲಹೆಗಳು ಇಲ್ಲಿವೆ.
ಉರಿಯನ್ನು ಕಡಿಮೆ ಇರಿಸಿ (Keep the flame low)
ಆಮ್ಲೆಟ್ ಪ್ಯಾನ್‌ಗೆ ಅಂಟಿಕೊಳ್ಳದಿರಲು ಗ್ಯಾಸ್ ತಾಪಮಾನದ ನಿಯಂತ್ರಣ ಅತ್ಯಗತ್ಯ. ಹೆಚ್ಚಿನ ಉರಿಯಲ್ಲಿ ಪ್ಯಾನ್ ಅತಿಯಾಗಿ ಕಾಯ್ದಾಗ ಮೊಟ್ಟೆಯ ಮಿಶ್ರಣ ಹಾಕಿದ ತಕ್ಷಣ ತಳ ಹಿಡಿಯುತ್ತದೆ. ಆದ್ದರಿಂದ, ಪ್ಯಾನ್ ಕಾದ ನಂತರ ಉರಿಯನ್ನು ಸಂಪೂರ್ಣ ಕಡಿಮೆ ಮಾಡಿ, ಬಳಿಕ ಮೊಟ್ಟೆಯ ಮಿಶ್ರಣವನ್ನು ಹಾಕಿ. ಕಡಿಮೆ ಉರಿಯಲ್ಲಿ ಬೇಯಿಸುವುದರಿಂದ ಆಮ್ಲೆಟ್ ಸೀದುಹೋಗದೆ ಒಳಗಿನಿಂದಲೂ ಚೆನ್ನಾಗಿ ಬೇಯುತ್ತದೆ ಮತ್ತು ಸುಲಭವಾಗಿ ತಿರುಗಿಸಲು ಬರುತ್ತದೆ.
ಪ್ಯಾನ್‌ಗೆ ಸ್ವಲ್ಪ ಉಪ್ಪು ಸಿಂಪಡಿಸಿ (Sprinkle a little salt on the pan)
ಇದು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಟ್ರಿಕ್. ಆಮ್ಲೆಟ್ ಮಾಡಲು ಪ್ಯಾನ್‌ಗೆ ಎಣ್ಣೆ ಅಥವಾ ಬೆಣ್ಣೆ ಹಾಕುವ ಮುನ್ನ, ಬಿಸಿ ಪ್ಯಾನ್ ಮೇಲೆ ಒಂದು ಚಿಟಿಕೆ ಉಪ್ಪನ್ನು ಲಘುವಾಗಿ ಸಿಂಪಡಿಸಿ. ಈ ಉಪ್ಪಿನ ಕಣಗಳು ಮೊಟ್ಟೆಯು ಪ್ಯಾನ್ ಮೇಲ್ಮೈಗೆ ನೇರವಾಗಿ ಅಂಟಿಕೊಳ್ಳದಂತೆ ತಡೆಯುವ ರಕ್ಷಣಾ ಕವಚದಂತೆ ಕೆಲಸ ಮಾಡುತ್ತವೆ. ಇದರಿಂದ ಆಮ್ಲೆಟ್ ಯಾವುದೇ ತೊಂದರೆಯಿಲ್ಲದೆ ಸುಲಭವಾಗಿ ಎದ್ದು ಬರುತ್ತದೆ.
ಮುಚ್ಚಳ ಮುಚ್ಚಿ ಬೇಯಿಸಿ (Cover with a lid and cook)
ಮೊಟ್ಟೆಯ ಮಿಶ್ರಣವನ್ನು ಪ್ಯಾನ್‌ಗೆ ಹಾಕಿದ ತಕ್ಷಣ ಗ್ಯಾಸ್ ಉರಿ ಕಡಿಮೆ ಮಾಡಿ, ಅದರ ಮೇಲೆ ಒಂದು ತಟ್ಟೆ ಅಥವಾ ಮುಚ್ಚಳವನ್ನು ಮುಚ್ಚಿ. ಹೀಗೆ ಮಾಡುವುದರಿಂದ ಪ್ಯಾನ್‌ನೊಳಗೆ ಉಗಿ (Steam) ಸೃಷ್ಟಿಯಾಗುತ್ತದೆ. ಈ ಉಗಿಯು ಆಮ್ಲೆಟ್ ಒಣಗದಂತೆ ತಡೆದು, ಅದು ಚೆನ್ನಾಗಿ ಉಬ್ಬಲು (ಫ್ಲಫಿ ಆಗಲು) ಸಹಾಯ ಮಾಡುತ್ತದೆ. ಇದರಿಂದ ಆಮ್ಲೆಟ್ ತಾನಾಗಿಯೇ ಪ್ಯಾನ್‌ನಿಂದ ಬೇರ್ಪಡುತ್ತದೆ.
ಮೊಟ್ಟೆಯನ್ನು ಚೆನ್ನಾಗಿ ಬೀಟ್ ಮಾಡಿ (Beat the egg well)
ಆಮ್ಲೆಟ್ ದಪ್ಪಗೆ ಮತ್ತು ಸಾಫ್ಟ್ ಆಗಿ ಬರಬೇಕಾದರೆ ಮೊಟ್ಟೆಯನ್ನು ಚೆನ್ನಾಗಿ ಮಿಶ್ರಣ ಮಾಡುವುದು ಮುಖ್ಯ. ಮೊಟ್ಟೆಯ ಬಿಳಿ ಮತ್ತು ಹಳದಿ ಭಾಗ ಒಂದಾಗುವಂತೆ ಕನಿಷ್ಠ ಒಂದರಿಂದ ಎರಡು ನಿಮಿಷ ಚೆನ್ನಾಗಿ ಬೀಟ್ ಮಾಡಿ. ಇದರಿಂದ ಮಿಶ್ರಣದಲ್ಲಿ ಗಾಳಿಯ ಗುಳ್ಳೆಗಳು ಸೃಷ್ಟಿಯಾಗಿ ಆಮ್ಲೆಟ್ ಸ್ಪಂಜಿನಂತೆ ಮೃದುವಾಗುತ್ತದೆ.
ಈ ಸುಲಭ ಉಪಾಯಗಳನ್ನು ಬಳಸಿಕೊಂಡು ನೀವೂ ಸಹ ಮನೆಯಲ್ಲೇ ಪ್ರತಿದಿನ ಪರ್ಫೆಕ್ಟ್ ಆಮ್ಲೆಟ್ ತಯಾರಿಸಿ ಆನಂದಿಸಬಹುದು.
ಇಲ್ಲಿದೆ ನೋಡಿ ವಿಡಿಯೋ