ಇದೇ ಮೊದಲ ಭಾರಿಗೆ ಭಾರತದಲ್ಲಿ ಮಾಚಾ ಟಿ ವಾಣಿಜ್ಯ ಉತ್ಪಾದನೆ ಆರಂಭ, ಬರೋಬ್ಬರಿ 3000 ರೂಗೆ ಮಾರಾಟ
ಹಲವು ಬಗೆಯ ಚಹಾಗಳಲ್ಲಿ ಮಾಚಾ ಟಿ ಅತ್ಯಂತ ಜನಪ್ರಿಯ. ಇದೀಗ ಈ ಮಾಚಾ ಟಿ ಮೊದಲ ಬಾರಿಗೆ ಭಾರತದಲ್ಲಿ ವಾಣಿಜ್ಯ ಉತ್ಪಾದನೆ ಆರಂಭಿಸಿದೆ. ಇಷ್ಟೇ ಅಲ್ಲ ಹರಾಜಿನಲ್ಲಿ ಕೆಜಿಗೆ ಬರೋಬ್ಬರಿ 3000 ರೂಗೆ ಮಾರಾಟವಾಗಿದೆ. ಏನಿದು ಮಾಚಾ ಟಿ?

ಮಾಚಾ ಟಿ ಈಗ ಭಾರತದಲ್ಲಿ ಉತ್ಪಾದನೆ ಆರಂಭ
ವಿಶ್ವದಲ್ಲೇ ಮಾಚಾ ಟಿಗೆ ಅತ್ಯಂತ ಬೇಡಿಕೆ ಇದೆ. ಆರೋಗ್ಯದ ದೃಷ್ಟಿಯಿಂದ ಸೇರಿದಂತೆ ಹಲವು ಕಾರಣಗಳಿಂದ ಮಾಚಾ ಚಹಾ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಿಸುತ್ತಿದೆ. ಭಾರತದ ಕೆಲವೆಡೆ ಮಾತ್ರ ಸಿಗುತ್ತಿದ್ದ ಈ ಮಾಚಾ ಟೀ ಇದೀಗ ಮೊದಲ ಬಾರಿಗೆ ವಾಣಿಜ್ಯ ಉತ್ಪಾದನೆ ಆರಂಭಗೊಂಡಿದೆ. ಪರಿಣಾಮ ಭಾರತದ ಮೂಲೆ ಮೂಲೆ ಹಾಗೂ ವಿದೇಶಗಳಿಗೂ ರಫ್ತಾಗಲಿದೆ. ಆದರೆ ಒಂದು ಕೆಜಿ ಮಾಡಿ ಟಿ ಪೌಡರ್ ಬೆಲೆ ಬರೋಬ್ಬರಿ 3,000 ರೂಪಾಯಿ
ಅಸ್ಸಾಂ ಟೀ ಎಸ್ಟೇಟ್‌ನಲ್ಲಿ ಉತ್ಪಾದನೆ
ಅಸ್ಸಾಂನಲ್ಲಿ ಭಾರತದಲ್ಲೇ ಮೊದಲ ಬಾರಿಗೆ ಮಾಚಾ ಟೀ ವಾಣಿಜ್ಯ ಉತ್ಪಾದನೆ ಆರಂಭಗೊಂಡಿದೆ. ಚೋಟಾ ತಿಂಗ್ರಾಯ್ ಟೀ ಎಸ್ಟೇಟ್‌ನಲ್ಲಿ ವಾಣಿಜ್ಯ ಉತ್ಪಾದನೆಯ ಮಾಚಾ ಟಿ ರಾಜಧಾನಿ ಗುವ್ಹಾಟಿಯ ಚಹಾ ಹರಾಜು ಕೇಂದ್ರ(GTAC)ದಲ್ಲಿ ಒಂದು ಕೆಜಿಗೆ 3000 ರೂಪಾಯಿಗೆ ಮಾರಾಟವಾಗೋ ಮೂಲಕ ಹೊಸ ದಾಖಲೆ ನಿರ್ಮಿಸಿದೆ.
ಜಪಾನ್ ಹಾಗೂ ಭಾರತದ ಸಂಬಂಧದಿಂದ ಮಾಚಾ ಟೀ ಉತ್ಪಾದನೆ
ಮಾಚಾ ಟಿ ಭಾರತದಲ್ಲಿ ಏಕಾಏಕಿ ಉತ್ಪಾದನೆಯಾಗಿದ್ದಲ್ಲ. ಇದರ ಹಿಂದೆ ಒಂದು ದಶಕಗಳ ಪರಿಶ್ರಮವಿದೆ. ಭಾರತ ಹಾಗೂ ಜಪಾನ್ ನಡುವಿನ ಸಂಬಂಧ ಹಾಗೂ ವ್ಯಾಪಾರ ಒಪ್ಪಂದಗಳಿಂದ ಮಾಚಾ ಟೀ ಭಾರತದಲ್ಲೇ ಉತ್ಪಾದನೆ ಸಾಧ್ಯವಾಗಿದೆ. ಅಸ್ಸಾಂನ ಚೋಟಾ ತಿಂಗ್ರಾಯ್ ಟೀ ಎಸ್ಟೇಟ್ ನಿರಂತರವಾಗಿ ಕಳೆದ 10 ವರ್ಷಗಳಿಂದ ಜಪಾನ್ ಕೃಷಿಕರು, ತಂತ್ರಜ್ಞಾನ ಪೂರೈಕೆದಾರರು, ಮಾಚಾ ಚಹಾ ಪರಿಣಿತರ ಜೊತೆ ಕೆಲಸ ಮಾಡಿದೆ. ಪರಿಣಾಮ ಜಪಾನ್ ಮಾಚಾ ಟೀ ಪರಿಣಿತರು ಸಲಹೆ, ತಂತ್ರಜ್ಞಾವನ್ನು ಅಸ್ಸಾಂ ಟೀ ಎಸ್ಟೇಟ್‌ನಲ್ಲಿ ಅಳವಡಿಸಿ ಭಾರತದಲ್ಲೇ ಮಾಚಾ ಟೀ ಉತ್ಪಾದನೆ ಆರಂಭಿಸುವಲ್ಲಿ ಯಶಸ್ವಿಯಾಗಿದೆ.
ಹಿಮಂತ ಬಿಸ್ವ ಶರ್ಮಾ ಸಂತಸ
ಭಾರತದಲ್ಲಿ ಚಹಾ ಪೈಕಿ ಅಸ್ಸಾಂ ಮುಂಚೂಣಿಯ ರಾಜ್ಯ. ಇದೀಗ ಇಸ್ಸಾಂ ಸಾಂಪ್ರಾದಾಯಿಕ ಟೀ ಜೊತೆ ಮಾಚಾ ಟೀ ಸೇರಿಕೊಂಡಿದೆ. ಈ ಕುರಿತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಮುಂದೆ ಮಾಚಾ ಟೀ ನಮ್ಮ ಅಸ್ಸಾಂ ಮಣ್ಣಿನಲ್ಲಿ ಉತ್ಪಾದನೆಯಾಗಲಿದೆ. ಜಾಗತಿಕ ಮಟ್ಟದಲ್ಲಿ ಅಸ್ಸಾಂ ಚಹಾ ಬ್ರ್ಯಾಂಡ್‌ನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಶರ್ಮಾ ಹೇಳಿದ್ದಾರೆ.
ಏನಿದು ಮಾಚಾ ಟಿಗೂ ವ್ಯತ್ಯಾಸವೇನು?
ಮಾಚಾ ಟೀ ಉತ್ಪಾದನೆ ಭಿನ್ನ. ಚಹಾ ಎಲೆಗಳನ್ನು ಕೊಯ್ಲು ಮಾಡುವ ಮೊದಲು ಚಹಾ ಎಲೆಗಳನ್ನು ನೆರಳಿನಲ್ಲಿ ಬೆಳೆಸಲಾಗುತ್ತದೆ. ಹೀಗೆ ಬೆಳೆದ ಎಲೆಗಳನ್ನು ಕಿತ್ತು ನಯವಾದ ಪುಡಿಯಾಗಿ ಮಾಡಲಾಗುತ್ತದೆ. ಈ ಪುಡಿಯನ್ನು ನೀರಿನಲ್ಲಿ ಬೆರೆಸಿದರೆ ಮಾಚಾ ಟೀ ರೆಡಿ. ಮಾಚಾ ಟೀಯಲ್ಲಿ ಆ್ಯಂಟಿಒಕ್ಸಿಡೆಂಟ್, ಅಮೈನೋ ಆಮ್ಲ, ನೈಸರ್ಗಿಕ ಕೆಫೀನ್ ಪ್ರಮಾಣ ಹೆಚ್ಚಿರುವ ಕಾರಣ ಆರೋಗ್ಯಕ್ಕೆ ಉತ್ತಮವಾಗಿದೆ. ಕೆಫೆಗಳಲ್ಲಿ ಮಾಚಾ ಟೀಗೆ ಭಾರಿ ಬೇಡಿಕೆಯೂ ಇದೇ, ಅಷ್ಟೇ ದುಬಾರಿಯಾಗಿದೆ. ಒಂದು ಮಾಚಾ ಟೀ ಪಾನಿಯಕ್ಕೆ 500 ರೂಪಾಯಿಂದ 1,000 ಸಾವಿರ ರೂಪಾಯಿವೆಗೆ ಕೆಫೆಗಳಲ್ಲಿ ಚಾರ್ಜ್ ಮಾಡಲಾಗುತ್ತದೆ
ಗ್ರೀನ್ ಟೀ ಗೂ ಮಾಚಾ ಟಿಗೂ ವ್ಯತ್ಯಾಸವೇನು?
ಗ್ರೀನ್ ಟೀ ಚಹಾದಲ್ಲಿ ಒಣಗಿಸಿದ ಹಸಿರು ಚಹಾ ಎಲೆಗಳನ್ನು ನೀರಿನಲ್ಲಿ ಕುದಿಸಲಾಗುತ್ತದೆ. ಬಳಿಕ ಎಲೆ ಹೊರಕ್ಕೆಸೆದು ಚಹಾ ಕುಡಿಯಲಾಗುತ್ತದೆ. ಆದರೆ ಮಾಚಾ ಟೀಯಲ್ಲಿ ಹಸಿರು ಎಸೆಗಳ ನುಣ್ಣನೆ ಪುಡಿ ಮಾಡಲಾಗುತ್ತದೆ. ಬಳಿಕ ಈ ಪುಡಿಯನ್ನು ಬೆರೆಸೆ ಕುಡಿಯಲಾಗುತ್ತದೆ. ಇದೀಗ ಅಸ್ಸಾಂ ಟೀ ಉದ್ಯಮಕ್ಕೆ ಹೊಸ ಚೈತನ್ಯ ಸಿಕ್ಕಿದೆ. ಮಾಚಾ ಟೀ ಭಾರತದಲ್ಲಿ ಎಲ್ಲೆಡೆ ಬಳಕೆಗೆ ಸಿದ್ದವಾಗಲಿದೆ. ಟೀ ಬೆಳೆಗಾರರು ಸಂತಸ ಮೂಡಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

