MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Food
  • ಚಹಾಕ್ಕೆ ಹಾಲು ಬೆರೆಸಿ ಕುಡಿಯುವುದು ಏಕೆ? ಹೇಗೆ ಆರಂಭವಾಯಿತು? ಇಲ್ಲಿದೆ ಭಾರತೀಯರ ‘ಟೀ’ ಇತಿಹಾಸ!

ಚಹಾಕ್ಕೆ ಹಾಲು ಬೆರೆಸಿ ಕುಡಿಯುವುದು ಏಕೆ? ಹೇಗೆ ಆರಂಭವಾಯಿತು? ಇಲ್ಲಿದೆ ಭಾರತೀಯರ ‘ಟೀ’ ಇತಿಹಾಸ!

ಭಾರತದಲ್ಲಿ ಚಹಾ ಜನಪ್ರಿಯವಾಗಲು ಐತಿಹಾಸಿಕ ಕಾರಣಗಳಿವೆ. ಭಾರತದಲ್ಲಿ ಹಾಲಿನ ಚಹಾ ಕುಡಿಯುವ ಅಭ್ಯಾಸ ಹೇಗೆ ಶುರುವಾಯಿತು?  ಚಹಾಗೆ ಹಾಲು ಬೆರೆಸೋದು ಯಾಕೆ? ಎಂಬ ಸಂಪೂರ್ಣ ವಿವರಣೆ ಇಲ್ಲಿದೆ.

2 Min read
Author : Gowthami K
Published : Jul 04 2026, 11:28 AM IST
Share this Photo Gallery
  • FB
  • TW
  • Linkdin
  • Whatsapp
16
ಚಹಾಗೆ ಹಾಲು ಬೆರೆಸೋದು ಯಾಕೆ?
Image Credit : ai

ಚಹಾಗೆ ಹಾಲು ಬೆರೆಸೋದು ಯಾಕೆ?

ಬೆಂಗಳೂರು: ಇಂದು ಭಾರತದಲ್ಲಿ ಬೆಳಿಗ್ಗೆ ಎದ್ದ ತಕ್ಷಣ ಒಂದು ಕಪ್ ಬಿಸಿ ಬಿಸಿ ಹಾಲಿನ ಚಹಾ (Milk Tea) ಸಿಗದಿದ್ದರೆ ಬಹುತೇಕರ ದಿನವೇ ಆರಂಭವಾಗುವುದಿಲ್ಲ. ಅತಿಥಿಗಳು ಮನೆಗೆ ಬಂದರೆ ಉಪಚರಿಸಲು, ಆಫೀಸ್ ಕೆಲಸದ ಮಧ್ಯೆ ಸುಸ್ತು ನಿವಾರಿಸಿಕೊಳ್ಳಲು ನಮಗೆ ‘ಟೀ’ ಬೇಕೇ ಬೇಕು. ಆದರೆ, ಮೂಲತಃ ಚೀನಾದಲ್ಲಿ ಕೇವಲ ಎಲೆಗಳನ್ನು ನೀರಿನಲ್ಲಿ ಕುದಿಸಿ ಕುಡಿಯುತ್ತಿದ್ದ ಈ ಕಷಾಯಕ್ಕೆ, ಭಾರತೀಯರಾದ ನಾವು ಹಾಲು ಮತ್ತು ಸಕ್ಕರೆ ಬೆರೆಸಿ ಕುಡಿಯಲು ಆರಂಭಿಸಿದ್ದರ ಹಿಂದೆ ಒಂದು ಕುತೂಹಲಕಾರಿ ಇತಿಹಾಸವಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಬ್ರಿಟಿಷರ ಆಳ್ವಿಕೆ ಮತ್ತು ಚಹಾದ ಎಂಟ್ರಿ:
Image Credit : AI Image

ಬ್ರಿಟಿಷರ ಆಳ್ವಿಕೆ ಮತ್ತು ಚಹಾದ ಎಂಟ್ರಿ:

ಭಾರತದಲ್ಲಿ ಚಹಾ ಕುಡಿಯುವ ಪದ್ಧತಿ ವ್ಯಾಪಕವಾಗಿ ಹರಡಿದ್ದು ಬ್ರಿಟಿಷರ ಆಳ್ವಿಕೆಯ ಅವಧಿಯಲ್ಲಿ. 19ನೇ ಶತಮಾನದಲ್ಲಿ ಜಾಗತಿಕ ಚಹಾ ಮಾರುಕಟ್ಟೆಯಲ್ಲಿ ಚೀನಾ ದೇಶಕ್ಕೆ ತೀವ್ರ ಪೈಪೋಟಿ ನೀಡಲು ಬ್ರಿಟಿಷರ ‘ಈಸ್ಟ್ ಇಂಡಿಯಾ ಕಂಪನಿ’ ನಿರ್ಧರಿಸಿತು. ಇದಕ್ಕಾಗಿ ಅವರು ಭಾರತದ ಅಸ್ಸಾಂ ಮತ್ತು ದಾರ್ಜಿಲಿಂಗ್‌ನಂತಹ ಪ್ರದೇಶಗಳಲ್ಲಿ ಬೃಹತ್ ಪ್ರಮಾಣದಲ್ಲಿ ಚಹಾ ತೋಟಗಳನ್ನು ನಿರ್ಮಿಸಿ, ಚಹಾ ಬೆಳೆಯಲು ಆರಂಭಿಸಿದರು. ಆದರೆ, ಆರಂಭದ ದಿನಗಳಲ್ಲಿ ಈ ಚಹಾ ಕೇವಲ ಬ್ರಿಟಿಷರ ಸ್ವಂತ ಬಳಕೆಗೆ ಮತ್ತು ವಿದೇಶಗಳಿಗೆ ರಫ್ತು ಮಾಡಲು (Export) ಮಾತ್ರ ಸೀಮಿತವಾಗಿತ್ತು. ಭಾರತೀಯರಿಗೆ ಇದರ ರುಚಿ ಅಷ್ಟಾಗಿ ಪರಿಚಯವಿರಲಿಲ್ಲ.

Related Articles

Related image1
ಕುಡಿಯೋದು ಓಕೆ, ಚಹಾ, ಕಾಫಿ ಕುಡಿಯದಿದ್ದರೆ ಏನಾಗುತ್ತದೆ? ಜಸ್ಟ್‌ 10 ದಿನ ಇವನ್ನು ಬಿಟ್ಟು ನೋಡಿ, ಹೀಗೆಲ್ಲಾ ಆಗುತ್ತದೆ!
Related image2
ಕಾಫಿ ನಗರಿಯಲ್ಲಿ ಚಹಾ ಅಧಿಪತ್ಯ: ಮುಂಬೈ, ಹೈದರಾಬಾದ್‌ನ್ನು ಹಿಂದಿಕ್ಕಿದ ಬೆಂಗಳೂರು ಈಗ ಭಾರತದ 'ಟೀ' ರಾಜಧಾನಿ!
36
ಭಾರತೀಯರನ್ನು ಸೆಳೆಯಲು ಬ್ರಿಟಿಷರು ಹೂಡಿದ ತಂತ್ರ!
Image Credit : chat gpt

ಭಾರತೀಯರನ್ನು ಸೆಳೆಯಲು ಬ್ರಿಟಿಷರು ಹೂಡಿದ ತಂತ್ರ!

1900ರ ದಶಕದ ಆರಂಭದಲ್ಲಿ ಬ್ರಿಟಿಷ್ ಸರ್ಕಾರ ಮತ್ತು ಚಹಾ ಮಂಡಳಿಯು ಭಾರತೀಯ ಮಾರುಕಟ್ಟೆಯಲ್ಲೂ ಚಹಾವನ್ನು ಜನಪ್ರಿಯಗೊಳಿಸಲು ಮತ್ತು ಅದರ ವ್ಯಾಪಾರವನ್ನು ವೃದ್ಧಿಸಲು ಒಂದು ಉಪಾಯ ಹೂಡಿತು. ಕೇವಲ ಬ್ಲ್ಯಾಕ್ ಟೀ (ಕಪ್ಪು ಚಹಾ) ಕುಡಿಯಲು ಭಾರತೀಯರು ಅಷ್ಟಾಗಿ ಇಷ್ಟಪಡುವುದಿಲ್ಲ ಎಂಬುದನ್ನು ಅರಿತ ಬ್ರಿಟಿಷರು, ಚಹಾಕ್ಕೆ ಹಾಲು ಮತ್ತು ಸಕ್ಕರೆಯನ್ನು ಸೇರಿಸಿ ಕುಡಿಯುವಂತೆ ಜನರಿಗೆ ಸಲಹೆ ನೀಡಿದರು. ಆ ಕಾಲದಲ್ಲಿ ಭಾರತದಲ್ಲಿ ಹಾಲಿನ ಲಭ್ಯತೆ ಹೆಚ್ಚಾಗಿದ್ದರಿಂದ ಮತ್ತು ಭಾರತೀಯರಿಗೆ ಸಿಹಿ ಪದಾರ್ಥಗಳ ಮೇಲೆ ಒಲವಿದ್ದರಿಂದ, ಬ್ರಿಟಿಷರ ಈ ಐಡಿಯಾ ಸೂಪರ್ ಹಿಟ್ ಆಯಿತು. ನಿಧಾನವಾಗಿ ಈ ವಿಭಿನ್ನ ಮಿಶ್ರಣದ ಅಭ್ಯಾಸ ಜನರ ದೈನಂದಿನ ಜೀವನದ ಭಾಗವಾಗಿ ಬೆಳೆದುಬಂತು.

46
ಬ್ರಿಟಿಷರ ಚಹಾಕ್ಕೆ ಭಾರತೀಯ ‘ಮಸಾಲೆ’ ಸ್ಪರ್ಶ:
Image Credit : Getty

ಬ್ರಿಟಿಷರ ಚಹಾಕ್ಕೆ ಭಾರತೀಯ ‘ಮಸಾಲೆ’ ಸ್ಪರ್ಶ:

ಬ್ರಿಟಿಷರು ಕಲಿಸಿಕೊಟ್ಟ ಹಾಲಿನ ಚಹಾವನ್ನು ಭಾರತೀಯರು ಹಾಗೆಯೇ ಸ್ವೀಕರಿಸಲಿಲ್ಲ. ಕಾಲಕ್ರಮೇಣ ನಮ್ಮ ದೇಶದ ಸಂಸ್ಕೃತಿ ಮತ್ತು ರುಚಿಗೆ ತಕ್ಕಂತೆ ಅದಕ್ಕೆ ಹೊಸ ರೂಪವನ್ನೇ ನೀಡಿದರು. ಹಾಲಿನ ಚಹಾಕ್ಕೆ ಭಾರತೀಯರು ತಮ್ಮ ಅಡುಗೆಮನೆಯ ಸಾಂಬಾರ ಪದಾರ್ಥಗಳಾದ ಏಲಕ್ಕಿ, ಶುಂಠಿ, ದಾಲ್ಚಿನ್ನಿ ಮತ್ತು ಲವಂಗದಂತಹ ಮಸಾಲೆಗಳನ್ನು ಸೇರಿಸಲು ಆರಂಭಿಸಿದರು.

56
ವಿಶ್ವಪ್ರಸಿದ್ಧವಾದ ‘ಮಸಾಲಾ ಚಾಯ್’:
Image Credit : Getty

ವಿಶ್ವಪ್ರಸಿದ್ಧವಾದ ‘ಮಸಾಲಾ ಚಾಯ್’:

ಮಸಾಲೆಗಳ ಈ ಅದ್ಭುತ ಸುವಾಸನೆ ಮತ್ತು ಆರೋಗ್ಯಕರ ಗುಣಗಳು ಚಹಾಕ್ಕೆ ಹೊಸ ಆಯಾಮವನ್ನು ನೀಡಿದವು. ಇಂದು ಜಗತ್ತಿನಾದ್ಯಂತ ಭಾರತದ 'ಮಸಾಲಾ ಚಾಯ್' ಅಥವಾ 'ಕಟಿಂಗ್ ಚಾಯ್' ತನ್ನದೇ ಆದ ವಿಶಿಷ್ಟ ರುಚಿಗೆ ಭಾರೀ ಪ್ರಸಿದ್ಧಿ ಪಡೆದಿದೆ. ಹೀಗೆ, ಬ್ರಿಟಿಷರು ಕೇವಲ ಬಿಸಿನೆಸ್ ಲಾಭಕ್ಕಾಗಿ ಪರಿಚಯಿಸಿದ ಹಾಲಿನ ಚಹಾ, ಇಂದು ಭಾರತೀಯರ ಭಾವನೆಗಳೊಂದಿಗೆ ಬೆರೆತುಹೋಗಿದೆ ಎಂದರೆ ತಪ್ಪಾಗಲಾರದು.

66
ಟೀ ಕುಡಿಯುವ ದೇಶಗಳು ಯಾವುವು?
Image Credit : AI

ಟೀ ಕುಡಿಯುವ ದೇಶಗಳು ಯಾವುವು?

ವಿಶ್ವದಾದ್ಯಂತ ನೀರಿನ ನಂತರ ಅತಿ ಹೆಚ್ಚು ಸೇವಿಸುವ ಪಾನೀಯ ಚಹಾವಾಗಿದೆ. ಟರ್ಕಿ ಅತಿ ಹೆಚ್ಚು ಚಹಾ ಕುಡಿಯುವ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ಇಲ್ಲಿ ಹೆಚ್ಚಾಗಿ ಬ್ಕ್ಯಾಕ್ ಟೀ ಕುಡಿಯುತ್ತಾರೆ. ಎರಡನೇ ಸ್ಥಾನದಲ್ಲಿ ನಂತರ ಐರ್ಲೆಂಡ್ ಇದೆ. ಐರಿಶ್ ಜನರು ಹಾಲು ಮತ್ತು ಸಕ್ಕರೆ ಜೊತೆಗೆ ಕುಡಿಯಲು ಇಷ್ಟಪಡುತ್ತಾರೆ. ಮತ್ತು ಮೂರನೇ ಸ್ಥಾನದಲ್ಲಿ ಯುನೈಟೆಡ್ ಕಿಂಗ್‌ಡಮ್ (ಇಂಗ್ಲೆಂಡ್) ಇದೆ. ಬ್ರಿಟಿಷರ ಸಂಸ್ಕೃತಿಯಲ್ಲಿ ಚಹಾ ಅವಿಭಾಜ್ಯ ಅಂಗವಾಗಿದೆ. 'ಆಫ್ಟರ್‌ನೂನ್ ಟೀ' (Afternoon Tea) ಮತ್ತು ಹಾಲು ಬೆರೆಸಿದ ಚಹಾ ಇಲ್ಲಿ ತುಂಬಾ ಪ್ರಸಿದ್ಧ.

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಚಹಾ ಉತ್ಪಾದಿಸುವ ಮತ್ತು ಹೆಚ್ಚು ಚಹಾ ಸೇವಿಸುವ ದೇಶಗಳಲ್ಲಿ ಒಂದಾಗಿದೆ. ಹಾಲು, ಸಕ್ಕರೆ ಮತ್ತು ಮಸಾಲೆಗಳನ್ನು ಹಾಕಿ ಕುದಿಸುವ 'ಮಸಾಲಾ ಚಾಯ್' ಇಲ್ಲಿ ಫೇಮಸ್‌ . ತದನಂತರದ ಸ್ಥಾನದಲ್ಲಿ ಚೀನಾ ಇದೆ. ಚಹಾ ಹುಟ್ಟಿದ ದೇಶವಾದ ಚೀನಾ, ಒಟ್ಟು ಬಳಕೆಯಲ್ಲಿ ಮುಂಚೂಣಿಯಲ್ಲಿದೆ. ಇಲ್ಲಿ ಹಸಿರು ಚಹಾ (Green Tea) ಮತ್ತು ಇತರ ಸಾಂಪ್ರದಾಯಿಕ ಚಹಾಗಳನ್ನು ಹೆಚ್ಚಾಗಿ ಕುಡಿಯುತ್ತಾರೆ. ಜಪಾನ್‌ನಲ್ಲಿ 'ಮಚ್ಚಾ' (Matcha) ಎಂಬ ಪುಡಿಮಾಡಿದ ಹಸಿರು ಚಹಾವನ್ನು ಕುಡಿಯುವ ಸಂಪ್ರದಾಯವಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಯುನೈಟೆಡ್ ಕಿಂಗ್‌ಡಮ್
ಜೀವನಶೈಲಿ
ಕಿಚ್ಚ ಸುದೀಪ್
ಚೀನಾ

Latest Videos
Recommended Stories
Recommended image1
ಮನೆಯಲ್ಲೇ ಹೋಟೆಲ್ ಸ್ಟೈಲ್ ಸಾಂಬಾರ್ ಮಾಡಬೇಕಾ? ಈ ಒಂದು ಟ್ರಿಕ್ ಸಾಕು, ರುಚಿ ಡಬಲ್
Recommended image2
ಹುಳಿ ಮೊಸರು ಚೆಲ್ಲಬೇಡಿ... ದೋಸೆ-ಇಡ್ಲಿ ಹಿಟ್ಟಿಗೆ ಬಳಸಿ, ಸಾಫ್ಟಾಗಿ ಬರುತ್ತೆ
Recommended image3
ಚಿಕನ್, ಮಟನ್, ಮೀನನ್ನು ಫ್ರಿಜ್‌ನಲ್ಲಿ ಎಷ್ಟು ದಿನ ಇಡಬಹುದು ಗೊತ್ತಾ? ಈ ತಪ್ಪನ್ನು ಮಾಡಲೇಬೇಡಿ
Related Stories
Recommended image1
ಕುಡಿಯೋದು ಓಕೆ, ಚಹಾ, ಕಾಫಿ ಕುಡಿಯದಿದ್ದರೆ ಏನಾಗುತ್ತದೆ? ಜಸ್ಟ್‌ 10 ದಿನ ಇವನ್ನು ಬಿಟ್ಟು ನೋಡಿ, ಹೀಗೆಲ್ಲಾ ಆಗುತ್ತದೆ!
Recommended image2
ಕಾಫಿ ನಗರಿಯಲ್ಲಿ ಚಹಾ ಅಧಿಪತ್ಯ: ಮುಂಬೈ, ಹೈದರಾಬಾದ್‌ನ್ನು ಹಿಂದಿಕ್ಕಿದ ಬೆಂಗಳೂರು ಈಗ ಭಾರತದ 'ಟೀ' ರಾಜಧಾನಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved