ರಾತ್ರಿಯೆಲ್ಲಾ ಅಕ್ಕಿ-ಉದ್ದು ನೆನೆಸೋದು ಬೇಡ; ಜಸ್ಟ್15 ನಿಮಿಷದಲ್ಲಿ ಮಾಡ್ಕೊಳ್ಳಿ ಇಡ್ಲಿ
ಅಕ್ಕಿ, ಬೇಳೆ ನೆನೆಸುವ ಪ್ರಕ್ರಿಯೆ ಇಲ್ಲದೆ, ಕೇವಲ 15 ನಿಮಿಷದಲ್ಲಿ ಮೃದುವಾದ ಇಡ್ಲಿ ತಯಾರಿಸಬಹುದು. ಈ ಲೇಖನದಲ್ಲಿ ನೈಲಾನ್ ಸಬ್ಬಕ್ಕಿ ಮತ್ತು ಸಣ್ಣ ರವೆ ಬಳಸಿ ರುಚಿಕರವಾದ ಇನ್‌ಸ್ಟಂಟ್ ಇಡ್ಲಿ ಮಾಡುವ ಸಂಪೂರ್ಣ ವಿಧಾನವನ್ನು ವಿವರಿಸಲಾಗಿದೆ.

15 ನಿಮಿಷದಲ್ಲಿ ಇನ್‌ಸ್ಟಂಟ್ ಇಡ್ಲಿ
ಇಡ್ಲಿ ಬೇಕು ಅಂದ್ರೆ ಒಂದು ದಿನ ಮುಂಚಿತವಾಗಿ ಸಿದ್ಧತೆ ಮಾಡಿಕೊಳ್ಳಬೇಕು. ಅಕ್ಕಿ, ಉದ್ದಿನಬೇಳೆಯನ್ನು ಕನಿಷ್ಠ 6 ಗಂಟೆಗಳ ಕಾಲ ನೆನೆಸಿಟ್ಟುಕೊಂಡು ರುಬ್ಬಿಕೊಳ್ಳಬೇಕು. ನಂತರ ಮತ್ತೆ ಆರರಿಂದ ಏಳು ಗಂಟೆ ಕಾಲ ನೆನೆಸಿಟ್ಟುಕೊಂಡು ಚೆನ್ನಾಗು ಹುದುಗು ಬಂದ್ರೆ ಮಾತ್ರ ಮಲ್ಲಿಗೆಯಂಥ ಇಡ್ಲಿ ಸವಿಯಲು ಸಿಗುತ್ತದೆ. ಇಂದು ನಾವು ನಿಮಗೆ ಕೇವಲ 15 ನಿಮಿಷದಲ್ಲಿ ಇನ್‌ಸ್ಟಂಟ್ ಇಡ್ಲಿ ಮಾಡುವ ರೆಸಿಪಿ ಹೇಳುತ್ತಿದ್ದೇವೆ.
ಇನ್‌ಸ್ಟಂಟ್ ಸಬ್ಬಕ್ಕಿ ಇಡ್ಲಿ ಮಾಡಲು ಬೇಕಾಗುವ ಸಾಮಾಗ್ರಿಗಳು
ನೈಲಾನ್ ಸಬ್ಬಕ್ಕಿ: 250 ಗ್ರಾಂ, ಹುಳಿ ಮೊಸರು: 100 ಗ್ರಾಂ, ಸಣ್ಣರವೆ: 100 ಗ್ರಾಂ, ಸಾಸವೆ: 1/2 ಟೀ ಸ್ಪೂನ್, ಚಿಟಿಕೆ ಇಂಗು, 8 ರಿಂದ 10 ಗೋಡಂಬಿ, 1 ಟೀ ಸ್ಪೂನ್ ಕಡಲೆಬೇಳೆ, ರುಚಿಗೆ ತಕ್ಕಷ್ಟು ಉಪ್ಪು, ಹಸಿಮೆಣಸಿನಕಾಯಿ, ಕರೀಬೇವು, ಕತ್ತರಿಸಿಕೊಂಡ ಗಜ್ಜರಿ, ಕೋತಂಬರಿ ಸೊಪ್ಪು ಮತ್ತು ಎಣ್ಣೆ
ಇನ್‌ಸ್ಟಂಟ್ ಸಬ್ಬಕ್ಕಿ ಇಡ್ಲಿ ಮಾಡುವ ವಿಧಾನ
ಮೊದಲಿಗೆ ಒಂದು ಬಾಣಲೆಗೆ ನೈಲಾನ್ ಸಬ್ಬಕ್ಕಿ ಮತ್ತು ಸಣ್ಣರವೆ ಹಾಕಿಕೊಂಡು ಎರಡು ನಿಮಿಷ ರೋಸ್ಟ್ ಮಾಡಿಕೊಳ್ಳಿ. ಈಗ ಮತ್ತೊಂದು ಪಾತ್ರೆಯನ್ನು ಒಲೆ ಮೇಲಿಟ್ಟುಕೊಂಡು ಒಗ್ಗರಣೆಗೆ ಸಿದ್ಧತೆ ಮಾಡಿಕೊಳ್ಳಿ. ಸಾಸವೆ, ಜೀರಿಗೆ, ಹಸಿಮೆಣಸಿನಕಾಯಿ, ಕರೀಬೇವು, ಇಂಗು ಹಾಕಿ ಒಗ್ಗರಣೆ ಮಾಡಿಕೊಳ್ಳಿ.
ಸಬ್ಬಕ್ಕಿ ಮತ್ತು ರವೆ
ತದನಂತರ ಇದೇ ಒಗ್ಗರಣೆಗೆ ರೋಸ್ಟ್ ಮಾಡಿಟ್ಟುಕೊಂಡಿರುವ ಸಬ್ಬಕ್ಕಿ ಮತ್ತು ರವೆಯನ್ನು ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಒಲೆ ಆಫ್ ಮಾಡಿಕೊಂಡು ಹುಳಿ ಮೊಸರು ಹಾಕಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 10 ನಿಮಿಷ ಎತ್ತಿಟ್ಟುಕೊಳ್ಳಬೇಕು.
ಚಟ್ನಿ, ಸಾಂಬಾರ್ ಜೊತೆ ಇಡ್ಲಿ
ಈಗ ಕೊನೆಯದಾಗಿ ಇಡ್ಲಿ ಪಾತ್ರೆಗೆ ಎಣ್ಣೆ ಸವರಿ ಸಿದ್ಧ ಮಾಡಿಕೊಂಡಿರುವ ಇಡ್ಲಿ ಹಿಟ್ಟು ಹಾಕಿಕೊಳ್ಳಿ. ಬ್ಯಾಟರ್ ಮೇಲೆ ಸಣ್ಣದಾಗಿ ಕತ್ತರಿಸಿಕೊಂಡಿರುವ ಕ್ಯಾರಟ್ ಮತ್ತು ಕೋತಂಬರಿ ಸೇರಿಸಿ ಸ್ಟೀಮ್ ಮಾಡಿಕೊಂಡ್ರೆ ರುಚಿಯಾದ ಇನ್‌ಸ್ಟಂಟ್ ಸಬ್ಬಕ್ಕಿ ಇಡ್ಲಿ ಸವಿಯಲು ಸಿದ್ಧವಾಗುತ್ತದೆ. ಚಟ್ನಿ, ಸಾಂಬಾರ್ ಜೊತೆ ಇಡ್ಲಿ ಸವಿಯಬಹುದು.
ರೆಸಿಪಿ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
