MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Food
  • ಕಾಫಿ ನಗರಿಯಲ್ಲಿ ಚಹಾ ಅಧಿಪತ್ಯ: ಮುಂಬೈ, ಹೈದರಾಬಾದ್‌ನ್ನು ಹಿಂದಿಕ್ಕಿದ ಬೆಂಗಳೂರು ಈಗ ಭಾರತದ 'ಟೀ' ರಾಜಧಾನಿ!

ಕಾಫಿ ನಗರಿಯಲ್ಲಿ ಚಹಾ ಅಧಿಪತ್ಯ: ಮುಂಬೈ, ಹೈದರಾಬಾದ್‌ನ್ನು ಹಿಂದಿಕ್ಕಿದ ಬೆಂಗಳೂರು ಈಗ ಭಾರತದ 'ಟೀ' ರಾಜಧಾನಿ!

ಇನ್‌ಸ್ಟಾಮಾರ್ಟ್ ವರದಿಯ ಪ್ರಕಾರ, ಬೆಂಗಳೂರು ಈಗ ಭಾರತದ 'ಟೀ ರಾಜಧಾನಿ'ಯಾಗಿ ಹೊರಹೊಮ್ಮಿದೆ, ಮುಂಬೈ ಮತ್ತು ಹೈದರಾಬಾದ್‌ಗಳನ್ನು ಹಿಂದಿಕ್ಕಿದೆ. ನಗರದಲ್ಲಿ ಸಾಂಪ್ರದಾಯಿಕ ಶುಂಠಿ ಚಹಾದ ಜೊತೆಗೆ, ಪೀಚ್ ಟೀ, ಕೊಂಬುಚಾದಂತಹ ಹೊಸ ಟ್ರೆಂಡ್‌ಗಳು ಮತ್ತು 'ರೆಡಿ ಟು ಡ್ರಿಂಕ್' ಆಯ್ಕೆಗಳು ಜನಪ್ರಿಯವಾಗುತ್ತಿವೆ.

2 Min read
Author : Gowthami K
Published : Jun 22 2026, 12:36 PM IST
Share this Photo Gallery
  • FB
  • TW
  • Linkdin
  • Whatsapp
16
ಬೆಂಗಳೂರು ಈಗ ಭಾರತದ 'ಟೀ' ರಾಜಧಾನಿ!
Image Credit : ai

ಬೆಂಗಳೂರು ಈಗ ಭಾರತದ 'ಟೀ' ರಾಜಧಾನಿ!

ಬೆಂಗಳೂರು: ಚಳಿ ಇರಲಿ, ಮಳೆ ಇರಲಿ ಅಥವಾ ತಲೆನೋವು ಇರಲಿ... ಬೆಂಗಳೂರಿಗರಿಗೆ ಒಂದು ಕಪ್ ಬಿಸಿ ಬಿಸಿ 'ಕಾಫಿ' ಸಿಕ್ರೆ ಸಾಕು. ಅದರಿಂದ ಸಿಗುವ ಮಜಾನೇ ಬೇರೆ. ಆದರೆ, ನಗರದಲ್ಲಿ ಕಾಫಿಗಿಂತ ಈಗ ಟೀ ಪ್ರಿಯರು ಹೆಚ್ಚಾಗುತ್ತಿದ್ದಾರೆ ಅಂದ್ರೆ ನಂಬುತ್ತೀರಾ? ನಂಬಲೇಬೇಕು. ಆನ್‌ಲೈನ್ ಡೆಲಿವರಿ ಪ್ಲಾಟ್‌ಫಾರ್ಮ್ 'ಇನ್‌ಸ್ಟಾಮಾರ್ಟ್' ಕಳೆದ ಒಂದು ವರ್ಷದಲ್ಲಿ (ಜೂನ್ 2025 ರಿಂದ ಜೂನ್ 2026) ದೇಶದ 130ಕ್ಕೂ ಹೆಚ್ಚು ನಗರಗಳಲ್ಲಿ ನಡೆದ ಟೀ ಆರ್ಡರ್‌ಗಳನ್ನು ವಿಶ್ಲೇಷಿಸಿ ವರದಿಯೊಂದನ್ನು ನೀಡಿದೆ. ಅದರ ಪ್ರಕಾರ ಭಾರತದಲ್ಲಿ ಕಾಫಿ ಪ್ರಿಯರಿಗಿಂತ ಟೀ ಪ್ರಿಯರೇ ಹೆಚ್ಚಿದ್ದಾರೆ. ಆದರೆ, ಈ 'ಟೀ ಪ್ರೇಮಿ'ಗಳ ಪೈಕಿ ನಮ್ಮ ಬೆಂಗಳೂರಿಗರೇ ಇಡೀ ದೇಶದಲ್ಲಿ ಮುಂದಿದ್ದಾರೆ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
 ಭಾರತದ ಟೀ ರಾಜಧಾನಿಯಾದ ಬೆಂಗಳೂರು
Image Credit : Asianet News

ಭಾರತದ ಟೀ ರಾಜಧಾನಿಯಾದ ಬೆಂಗಳೂರು

ಮುಂಬೈ ಮತ್ತು ಹೈದರಾಬಾದ್ ನಗರಗಳು ಚಹಾಕ್ಕೆ ಭಾರೀ ಫೇಮಸ್‌. ಆದರೆ ಇವೆರಡೂ ನಗರಗಳನ್ನು ಹಿಂದಿಕ್ಕಿರುವ ನಮ್ಮ ಉದ್ಯಾನ ನಗರಿ ಭಾರತದ ಅತಿ ಹೆಚ್ಚು ಚಹಾ ಕುಡಿಯುವವರ ನಗರವಾಗಿ ಹೊರಹೊಮ್ಮಿದೆ. ಬೆಂಗಳೂರಿನ ನಂತರದ ಸ್ಥಾನಗಳಲ್ಲಿ ಮುಂಬೈ ಮತ್ತು ಹೈದರಾಬಾದ್ ಇವೆ. ಇನ್ನು ವಾರದ 7 ದಿನಗಳಲ್ಲಿ 'ಭಾನುವಾರ'ದಂದು ಅತಿ ಹೆಚ್ಚು ಟೀ ಆರ್ಡರ್ ಆಗುತ್ತಿದ್ದು, ನಂತರದ ಸ್ಥಾನದಲ್ಲಿ ಶನಿವಾರ ಮತ್ತು ಗುರುವಾರ ಇವೆ.

Related Articles

Related image1
ಚಹಾ ಜೊತೆ ಅಪ್ಪಿ ತಪ್ಪಿಯೂ ಇದನ್ನು ತಿನ್ನಬೇಡಿ… ಹೊಟ್ಟೆ ಹಾಳಾಗೋದು ಗ್ಯಾರಂಟಿ
Related image2
Masala Tea… ಭಾರತದಲ್ಲಿ ಮಾತ್ರ ಅಲ್ಲ, ಪ್ರಪಂಚದಲ್ಲೇ ನಂ 1! ಟೇಸ್ಟಿ ಚಹಾ ರೆಸಿಪಿ ನಿಮಗಾಗಿ
36
ಬದಲಾದ ಟೀ ಟ್ರೆಂಡ್: ಶುಂಠಿ ಜೊತೆಗೆ ಕೊಂಬುಚಾಗೆ ಡಿಮ್ಯಾಂಡ್‌!
Image Credit : AI

ಬದಲಾದ ಟೀ ಟ್ರೆಂಡ್: ಶುಂಠಿ ಜೊತೆಗೆ ಕೊಂಬುಚಾಗೆ ಡಿಮ್ಯಾಂಡ್‌!

ಬೆಂಗಳೂರಿಗರು ಕೇವಲ ಮಾಮೂಲಿ ಟೀ ಪುಡಿ ತಂದು ಮಾಡುವ ಚಹಾಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ, ಆರೋಗ್ಯಕರ ಟೀ ಹಾಗೂ ಜಾಗತಿಕ ಮಟ್ಟದ ಜನಪ್ರಿಯ ಚಹಾಗಳ ಸ್ವಾದವನ್ನೂ ಅನುಭವಿಸುತ್ತಿದ್ದಾರೆ. ಇಡೀ ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಟೀ ಫ್ಲೇವರ್ ಎಂದರೆ ಅದು 'ಪೀಚ್ ಟೀ'. ಕಳೆದ ವರ್ಷಕ್ಕೆ ಹೋಲಿಸಿದರೆ ಇದರ ಆರ್ಡರ್‌ಗಳ ಸಂಖ್ಯೆಯಲ್ಲಿ ಶೇ. 62ರಷ್ಟು ಭಾರೀ ಏರಿಕೆ ಕಂಡು ಬಂದಿದೆ. ಆರೋಗ್ಯದ ದೃಷ್ಟಿಯಿಂದ ತುಳಸಿ ಟೀ, ಗ್ರೀನ್ ಟೀ ಮತ್ತು ಬ್ಲೂ ಪೀ ಟೀ ಬೇಡಿಕೆ ಶೇ. 26ರಷ್ಟು ಹೆಚ್ಚಾಗಿದೆ. ಹುದುಗಿಸಿದ ಟೀ ಆಗಿರುವ 'ಕೊಂಬುಚಾ' ಭಾರತದ ಟಾಪ್ 5 ಫಾಸ್ಟ್ ಗ್ರೋಯಿಂಗ್ ಟೀ ಲಿಸ್ಟ್‌ಗೆ ಸೇರಿಕೊಂಡಿದೆ.

46
ರೆಡಿ ಟು ಡ್ರಿಂಕ್: ಬ್ಯುಸಿ ಲೈಫ್‌ಸ್ಟೈಲ್‌ಗೆ ಬೆಸ್ಟ್!
Image Credit : AI Image

ರೆಡಿ ಟು ಡ್ರಿಂಕ್: ಬ್ಯುಸಿ ಲೈಫ್‌ಸ್ಟೈಲ್‌ಗೆ ಬೆಸ್ಟ್!

ಮನೆಯಲ್ಲಿ ಚಹಾ ಪುಡಿ ಹಾಕಿ ಕುದಿಸಿ ಕುಡಿಯುವಷ್ಟು ಸಮಯ ಇಂದಿನ ಬಹುತೇಕ ಉದ್ಯೋಗಿಗಳಿಗಿಲ್ಲ. ಹೀಗಾಗಿ, ಬಾಟಲ್ ಅಥವಾ ಕ್ಯಾನ್‌ಗಳಲ್ಲಿ ಬರುವ 'ರೆಡಿ ಟು ಡ್ರಿಂಕ್' ಟೀಗೆ ಭಾರಿ ಬೇಡಿಕೆ ಬಂದಿದೆ. ಇದರ ಆರ್ಡರ್‌ಗಳಲ್ಲಿ ಬರೋಬ್ಬರಿ ಶೇ. 109ರಷ್ಟು ಜಿಗಿತ ಕಂಡಿದ್ದು, ಇನ್‌ಸ್ಟಾಮಾರ್ಟ್‌ನಲ್ಲಿ ಅತಿ ಹೆಚ್ಚು ಮಾರಾಟವಾದ ವಿಭಾಗವಾಗಿದೆ.

56
ಏನೇ ಆದ್ರೂ ನಮ್ 'ಅಡರಾಕ್‌ ಚಾಯ್'ಗೆ ಸರಿಸಾಟಿಯಿಲ್ಲ!
Image Credit : AI Image

ಏನೇ ಆದ್ರೂ ನಮ್ 'ಅಡರಾಕ್‌ ಚಾಯ್'ಗೆ ಸರಿಸಾಟಿಯಿಲ್ಲ!

ಮಾರುಕಟ್ಟೆಗೆ ಎಷ್ಟೇ ಹೊಸ, ವಿಭಿನ್ನ ರುಚಿಯ ಚಹಾಗಳು ಬಂದರೂ ಭಾರತೀಯರ ಮನಸ್ಸಲ್ಲಿ ಇಂದಿಗೂ ಮೊದಲ ಸ್ಥಾನದಲ್ಲಿರುವುದು ನಮ್ಮ ಸಾಂಪ್ರದಾಯಿಕ ಚಹಾ!

ರಾಷ್ಟ್ರೀಯ ಮಟ್ಟದಲ್ಲಿ ಟಾಪ್ 5 ಟೀ ವೆರೈಟಿಗಳು ಹೀಗಿವೆ:

* ಶುಂಠಿ ಚಹಾ (ಅಡರಾಕ್‌ ಚಹಾ)

* ಪ್ಲೇನ್ ಬ್ಲ್ಯಾಕ್ ಟೀ

* ಏಲಕ್ಕಿ ಟೀ

* ಗ್ರೀನ್ ಟೀ

* ಮಸಾಲಾ ಚಾಯ್

ಭಾರತದ ಬಹುತೇಕ ಎಲ್ಲಾ ಪ್ರಮುಖ ನಗರಗಳಲ್ಲೂ 'ಶುಂಠಿ ಚಹಾ' ನಂಬರ್ ಒನ್ ಸ್ಥಾನವನ್ನು ಭದ್ರವಾಗಿ ಉಳಿಸಿಕೊಂಡಿದೆ.

66
ಟಿಯರ್‌ - 2 ನಗರಗಳಲ್ಲೂ ಟೀ ಕ್ರೇಜ್
Image Credit : Getty

ಟಿಯರ್‌ - 2 ನಗರಗಳಲ್ಲೂ ಟೀ ಕ್ರೇಜ್

ಮೆಟ್ರೋ ನಗರಗಳು ಮಾತ್ರವಲ್ಲ, ಸಣ್ಣ ನಗರಗಳಲ್ಲೂ ಇನ್‌ಸ್ಟಾಮಾರ್ಟ್ ಮೂಲಕ ಟೀ ಆರ್ಡರ್ ಮಾಡುವುದು ಹೆಚ್ಚಾಗಿದೆ. ಒಡಿಶಾದ ಭುವನೇಶ್ವರ ನಗರವು ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ 'ಟೀ ಸಿಟಿ'ಯಾಗಿದ್ದು, ಇಲ್ಲಿನ ಆರ್ಡರ್‌ಗಳಲ್ಲಿ ಶೇ. 64ರಷ್ಟು ಏರಿಕೆ ಕಂಡುಬಂದಿದೆ. ಭುವನೇಶ್ವರದ ನಂತರ ತಿರುವನಂತಪುರಂ ಮತ್ತು ಕೊಚ್ಚಿ ನಗರಗಳಿವೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಆಹಾರ
ಕಾಫಿ
ಜೀವನಶೈಲಿ
ಆಹಾರ ಸಂಸ್ಕೃತಿ

Latest Videos
Recommended Stories
Recommended image1
Grace Antony: 8 ತಿಂಗಳಲ್ಲಿ 15 ಕೆಜಿ ತೂಕ ಇಳಿಸಿಕೊಂಡ ನಟಿ; ಏನ್ ಬಿಟ್ಟು ಏನ್ ತಿಂದ್ರು- ಸೀಕ್ರೆಟ್ ಇಲ್ಲಿದೆ ನೋಡಿ!
Recommended image2
ಬಿರಿಯಾನಿ vs ಪಲಾವ್.. ಇವೆರಡರ ನಡುವಿನ ವ್ಯತ್ಯಾಸ ಗೊತ್ತಾ? 99% ಜನರಿಗೆ ಇದು ತಿಳಿದಿಲ್ಲ!
Recommended image3
Cooked Rice: ಫ್ರಿಡ್ಜ್‌ನಲ್ಲಿಟ್ಟ ಅನ್ನ ಎಷ್ಟು ದಿನ ತಿನ್ಬೋದು? ನಿರ್ಲಕ್ಷಿಸಿದರೆ ಜೀವಕ್ಕೇ ಅಪಾಯವೇ?
Related Stories
Recommended image1
ಚಹಾ ಜೊತೆ ಅಪ್ಪಿ ತಪ್ಪಿಯೂ ಇದನ್ನು ತಿನ್ನಬೇಡಿ… ಹೊಟ್ಟೆ ಹಾಳಾಗೋದು ಗ್ಯಾರಂಟಿ
Recommended image2
Masala Tea… ಭಾರತದಲ್ಲಿ ಮಾತ್ರ ಅಲ್ಲ, ಪ್ರಪಂಚದಲ್ಲೇ ನಂ 1! ಟೇಸ್ಟಿ ಚಹಾ ರೆಸಿಪಿ ನಿಮಗಾಗಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved