ಚಿಕನ್ ತಿಂದರೆ ಬ್ಯಾಡ್ ಕೊಲೆಸ್ಟ್ರಾಲ್ ಹೆಚ್ಚಾಗುತ್ತಾ..? ಯಾವ ರೀತಿಯ ಚಿಕನ್ ಖಾದ್ಯ ಬೆಸ್ಟ್?
ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದರೆ ಹೃದಯಾಘಾತ, BP, ಮಧುಮೇಹದಂತಹ ಹಲವು ಅಪಾಯಕಾರಿ ಕಾಯಿಲೆಗಳು ಬರುವ ಸಾಧ್ಯತೆ ಇದೆ. ಯಾವಾಗಲೂ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಟ್ಟುಕೊಳ್ಳಬೇಕೆಂದು ತಜ್ಞರು ಸಲಹೆ ನೀಡುತ್ತಾರೆ. ಚಿಕನ್ ತಿನ್ನುವುದರಿಂದ ಕೊಲೆಸ್ಟ್ರಾಲ್ ಹೆಚ್ಚಾಗುತ್ತಾ ಎನ್ನುವುದನ್ನು ನೋಡೋಣ ಬನ್ನಿ

ಚಿಕನ್ ಬಗ್ಗೆ ತಜ್ಞರು ಹೇಳೋದೇನು?
ನಮ್ಮ ದೇಶದಲ್ಲಿ ಮಾಂಸಾಹಾರ ಸೇವಿಸುವವರ ಸಂಖ್ಯೆ ಸಾಕಷ್ಟಿದೆ ಎಂದು ಸಮೀಕ್ಷೆಗಳು ಹೇಳುತ್ತವೆ. 2015-16ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಶೇ. 70ರಷ್ಟು ಪುರುಷರು ಮತ್ತು ಶೇ. 78ರಷ್ಟು ಮಹಿಳೆಯರು ಮಾಂಸಾಹಾರ ಸೇವಿಸುತ್ತಾರೆ. ಮಾಂಸಾಹಾರ ಸೇವಿಸುವವರ ಪೈಕಿ ಹೆಚ್ಚಿನವರು ಚಿಕನ್ ಇಷ್ಟಪಡುತ್ತಾರೆ. ಯಾಕೆಂದರೆ ಇದು ರೆಡ್ ಮೀಟ್‌ಗಿಂತ ಕಡಿಮೆ ಕೊಬ್ಬು ಹೊಂದಿದೆ ಮತ್ತು ಬೆಲೆಯೂ ಕಡಿಮೆ. ಆದರೆ, ಚಿಕನ್ ತಿಂದರೆ ಕೊಲೆಸ್ಟ್ರಾಲ್ ಹೆಚ್ಚಾಗುತ್ತಾ ಎಂಬ ಅನುಮಾನ ಹಲವರಲ್ಲಿದೆ. ಈ ಬಗ್ಗೆ ತಜ್ಞರು ಏನು ಹೇಳುತ್ತಾರೆಂದು ತಿಳಿಯೋಣ.
ಚಿಕನ್ ಅತಿಯಾಗಿ ತಿಂದರೆ ಆರೋಗ್ಯಕ್ಕೆ ಹಾನಿಕರ
ರೆಡ್ ಮೀಟ್‌ನಲ್ಲಿ ಸ್ಯಾಚುರೇಟೆಡ್ ಕೊಬ್ಬು ಹೆಚ್ಚಾಗಿರುತ್ತದೆ. ಇದು ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಮಾಂಸಾಹಾರದಲ್ಲಿ ಚಿಕನ್ ಆರೋಗ್ಯಕ್ಕೆ ಒಳ್ಳೆಯದು ಎಂದು ಹೆಚ್ಚಿನವರು ತಿನ್ನುತ್ತಾರೆ. ಚಿಕನ್ ತಿನ್ನುವುದರಿಂದ ದೇಹಕ್ಕೆ ಬೇಕಾದ ಹಲವು ಬಗೆಯ ಪ್ರೊಟೀನ್‌ಗಳು ಸಿಗುತ್ತವೆ. ಆದರೆ ಇದನ್ನು ಅತಿಯಾಗಿ ತಿಂದರೆ ಆರೋಗ್ಯಕ್ಕೆ ಹಾನಿಕಾರಕ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.
ಚಿಕನ್ ತಿನ್ನುವುದರಿಂದ ಕೊಲೆಸ್ಟ್ರಾಲ್ ಹೆಚ್ಚಾಗುತ್ತಾ?
ಚಿಕನ್ ನಮ್ಮ ಆರೋಗ್ಯಕ್ಕೆ ಒಳ್ಳೆಯದೋ ಅಥವಾ ಕೆಟ್ಟದ್ದೋ ಎನ್ನುವುದು ನಾವು ಅದನ್ನು ಅಡುಗೆ ಮಾಡುವ ವಿಧಾನವನ್ನು ಅವಲಂಬಿಸಿರುತ್ತದೆ ಎಂದು ತಜ್ಞರು ಹೇಳುತ್ತಾರೆ. ಚಿಕನ್ ಅಡುಗೆಯಲ್ಲಿ ಸ್ಯಾಚುರೇಟೆಡ್ ಕೊಬ್ಬು ಹೆಚ್ಚಿರುವ ಎಣ್ಣೆಯನ್ನು ಬಳಸಿದರೆ, ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ.
ಚಿಕನ್‌ನಲ್ಲಿ ಏನೇನಿದೆ?
ಚಿಕನ್‌ನಲ್ಲಿ ಕೊಲೆಸ್ಟ್ರಾಲ್ 87 mg, ಕ್ಯಾಲೋರಿ 237 mg, ಪ್ರೊಟೀನ್ 27.07 mg, ಸೋಡಿಯಂ 404 mg, ಕೊಬ್ಬು 13.5 mg, ಪೊಟ್ಯಾಶಿಯಂ 221 mg, ಕ್ಯಾಲ್ಶಿಯಂ 15 mg, ಕಬ್ಬಿಣ 1.25 mg, ವಿಟಮಿನ್ ಎ 160 ಮೈಕ್ರೋಗ್ರಾಂಗಳಷ್ಟು ಇರುತ್ತದೆ.
ಚಿಕನ್ ಅಡುಗೆ ಮಾಡುವಾಗ ಈ ವಿಚಾರ ಗಮನದಲ್ಲಿರಲಿ
ಚಿಕನ್ ತಯಾರಿಕೆಯಲ್ಲಿ ಎಣ್ಣೆ, ಬೆಣ್ಣೆ ಅಥವಾ ಸ್ಯಾಚುರೇಟೆಡ್ ಕೊಬ್ಬು ಹೆಚ್ಚಿರುವ ಪದಾರ್ಥಗಳನ್ನು ಬಳಸಿದರೆ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ವಿಪರೀತವಾಗಿ ಹೆಚ್ಚುತ್ತದೆ. ಬಟರ್ ಚಿಕನ್, ಕಡಾಯಿ ಚಿಕನ್, ಅಫ್ಘಾನಿ ಚಿಕನ್‌ನಂತಹ ಖಾದ್ಯಗಳನ್ನು ಹೆಚ್ಚಾಗಿ ತಿಂದರೆ ದೇಹದಲ್ಲಿ ಕೊಬ್ಬು ಹೆಚ್ಚಾಗುತ್ತದೆ.
ಚಿಕನ್ ಅಡುಗೆಯಲ್ಲಿ ಎಣ್ಣೆಯನ್ನು ಕಡಿಮೆ ಬಳಸಿ
ಚಿಕನ್ ತಿಂದರೂ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಬಾರದು ಎಂದರೆ, ಅಡುಗೆಯಲ್ಲಿ ಎಣ್ಣೆಯನ್ನು ಕಡಿಮೆ ಬಳಸಿ. ಇದ್ದಿಲಿನ ಮೇಲೆ ಬೇಯಿಸಿದ ಚಿಕನ್, ಚಿಕನ್ ತಂದೂರಿಯಂತಹ ಖಾದ್ಯಗಳನ್ನು ತಿಂದರೆ ಕೊಲೆಸ್ಟ್ರಾಲ್ ಹೆಚ್ಚಾಗುವ ಸಾಧ್ಯತೆ ಕಡಿಮೆ. ಈ ಖಾದ್ಯಗಳಲ್ಲಿಯೂ ಎಣ್ಣೆ ಅಥವಾ ಬೆಣ್ಣೆಯನ್ನು ಕಡಿಮೆ ಬಳಸಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

