Paneer Recipe: ಮನೆಯಲ್ಲಿ ಪನೀರ್ ತಯಾರಿಸುವ ಸಾಮಾನ್ಯವಾಗಿ ಕೆಲವೊಂದು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ನಿಮಗೂ ಮಾರುಕಟ್ಟೆಯಲ್ಲಿ ಸಿಗುವಂತೆ ಮೃದುವಾದ ಪನೀರ್ ತಯಾರಿಸಲು ಸಾಧ್ಯವಾಗದಿದ್ದರೆ, ಇಲ್ಲಿ ತಿಳಿಸಲಾದ 5 ಟಿಪ್ಸ್ ಫಾಲೋ ಮಾಡಿ ನೋಡಿ.
ಮನೆಯಲ್ಲಿ ಪರ್ಫೆಕ್ಟ್ ಪನೀರ್ ತಯಾರಿಸಿ
ಪನೀರ್ ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ, ವಿಶೇಷವಾಗಿ ಮಾಂಸಾಹಾರವನ್ನು ಸೇವಿಸದವರು ಇದನ್ನು ಖಂಡಿತವಾಗಿಯೂ ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಆದರೆ, ಕಳೆದ ಕೆಲವು ವರ್ಷಗಳಿಂದ ಮಾರುಕಟ್ಟೆಯಲ್ಲಿ ಲಭ್ಯವಿರುವ ಪನೀರ್ ನಲ್ಲಿ ಕಲಬೆರಕೆ ಹೆಚ್ಚಾಗಿದೆ. ಈ ಕಾರಣಕ್ಕಾಗಿ, ಅನೇಕ ಜನರು ಈಗ ಮನೆಯಲ್ಲಿ ಪನೀರ್ ತಯಾರಿಸಲು ಬಯಸುತ್ತಾರೆ. ಆದರೂ, ಮನೆಯಲ್ಲಿ ಪನೀರ್ ತಯಾರಿಸುವಾಗ ಸಾಮಾನ್ಯ ದೂರು ಎಂದರೆ ಅದು ಗಟ್ಟಿಯಾಗಿ ಮತ್ತು ರಬ್ಬರ್‌ನಂತೆ ಆಗುತ್ತದೆ. ಪನೀರ್ ಗಟ್ಟಿಯಾಗಲು ಎರಡು ಪ್ರಮುಖ ಕಾರಣಗಳಿವೆ: ಅತಿಯಾಗಿ ಬಿಸಿಯಾಗುವುದು ಮತ್ತು ಹೆಚ್ಚು ಹೊತ್ತು ಪ್ರೆಸ್ ಮಾಡುವುದು. ಪನೀರ್ ಅನ್ನು ಹೆವಿ ತೂಕದ ಕೆಳಗೆ ದೀರ್ಘಕಾಲದವರೆಗೆ ಪ್ರೆಸ್ ಮಾಡಿದಾಗ, ಅದು ತನ್ನ ಎಲ್ಲಾ ತೇವಾಂಶವನ್ನು ಕಳೆದುಕೊಂಡು ಗಟ್ಟಿಯಾಗುತ್ತದೆ. ಅದೇ ರೀತಿ, ಹಾಲು ಮೊಸರಾದ ನಂತರವೂ ಕುದಿಯುತ್ತಲೇ ಇದ್ದರೆ ಪನೀರ್‌ನ ಟೆಕ್ಸಚರ್ ಹಾಳಾಗುತ್ತದೆ.
ಮೃದುವಾದ ಪನೀರ್ ಮಾಡುವುದು ಹೇಗೆ?
- ಮೊದಲನೆಯದಾಗಿ, ಹಾಲನ್ನು ಮೊಸರು ಮಾಡಲು ಎಲ್ಲಾ ನಿಂಬೆ ರಸ ಅಥವಾ ವಿನೆಗರ್ ಒಂದೇ ಬಾರಿಗೆ ಸೇರಿಸಬೇಡಿ; ನಿಧಾನವಾಗಿ ಬೆರೆಸಿ ಒಂದೊಂದು ಚಮಚದಂತೆ ಸೇರಿಸಿ. ಹಾಲು ಸಂಪೂರ್ಣವಾಗಿ ಮೊಸರು ಆಗಿ, ಒಡೆದು ಹೋದ ತಕ್ಷಣ ನಿಂಬೆರಸ ಸೇರಿಸುವುದನ್ನು ನಿಲ್ಲಿಸಿ.
- ಹಾಲು ಮೊಸರು ಆದ ನಂತರ ಅದನ್ನು ಮತ್ತಷ್ಟು ಕುದಿಸಬೇಡಿ. ಹಾಲು ಒಡೆದಿರುವುದು ಕಂಡ ತಕ್ಷಣ ಗ್ಯಾಸ್ ಆಫ್ ಮಾಡಿ; ದೀರ್ಘಕಾಲದವರೆಗೆ ಬಿಸಿ ಮಾಡುವುದರಿಂದ ಪನೀರ್ ಗಟ್ಟಿಯಾಗಬಹುದು.
- ಸೋಸಿದ ನಂತರ, ಅದರ ಮೇಲೆ 15 ರಿಂದ 30 ಸೆಕೆಂಡುಗಳ ಕಾಲ ತಣ್ಣೀರು ಸುರಿಯಿರಿ. ಇದು ಹುಳಿ ರುಚಿಯನ್ನು ತೆಗೆದು ಹಾಕುತ್ತದೆ ಮತ್ತು ಪನೀರನ್ನು ಮೃದುವಾಗಿರಿಸುತ್ತದೆ.
- ಪನೀರ್ ಅನ್ನು ಹೆಚ್ಚು ಹೊತ್ತು ಒತ್ತಬೇಡಿ. ನೀವು ಭುರ್ಜಿ ಮಾಡಲು ಬಯಸಿದರೆ 15 ರಿಂದ 20 ನಿಮಿಷಗಳ ಕಾಲ ಅದನ್ನು ಪ್ರೆಸ್ ಮಾಡಿ ಸಾಕು. ಪಾಲಕ್ ಪನೀರ್ ಅಥವಾ ಶಾಹಿ ಪನೀರ್ ಮಾಡಲು ಬಯಸಿದ್ದರೆ 30 ರಿಂದ 40 ನಿಮಿಷಗಳ ಕಾಲ ಪ್ರೆಸ್ ಮಾಡಿ ಸಾಕು. ಇನ್ನು ಟಿಕ್ಕಾ ಅಥವಾ ಕಬಾಬ್ ಗಾಗಿ, ಇದನ್ನು 50 -60 ನಿಮಿಷ ಒತ್ತಿದರೆ, ಪನೀರ್ ಗಟ್ಟಿಯಾಗುತ್ತದೆ.
ಹೀಗೆ ಮಾಡೋದರಿಂದ ಪರ್ಫೆಕ್ಟ್ ಪನೀರ್ ರೆಡಿಯಾಗುತ್ತದೆ.
ಇದನ್ನೂ ನೆನಪಿನಲ್ಲಿಡಿ:
ಪನೀರ್ ಪ್ರೆಸ್ ಮಾಡಿದ ನಂತರ, ಅದನ್ನು ಕೆಲವು ನಿಮಿಷಗಳ ಕಾಲ ಐಸ್-ಕೋಲ್ಡ್ ನೀರಿನಲ್ಲಿ ಇರಿಸಿ. ಇದು ಹೊರ ಪದರವನ್ನು ಸ್ಟ್ರಾಂಗ್ ಆಗಿಸುತ್ತದೆ ಮತ್ತು ಒಳಭಾಗವನ್ನು ಮೃದು ಮತ್ತು ಕೆನೆಯಂತೆ ಇರಿಸುತ್ತದೆ. ಇದನ್ನು ಮಾಡದೇ ಪನೀರನ್ನು ನೇರವಾಗಿ ರೆಫ್ರಿಜರೇಟ್ ಮಾಡುವುದರಿಂದ ಅದು ರಬ್ಬರ್ ನಂತೆ ಗಟ್ಟಿಯಾಗಬಹುದು. ಈ ಸಿಂಪಲ್ ಟ್ರಿಕ್ಸ್ ಪನೀರ್ ಅನ್ನು ರುಚಿಕರ ಮತ್ತು ಮೃದುವಾಗಿಡಲು ಸಹಾಯ ಮಾಡುತ್ತದೆ.


