ಕನ್ಯಾ ರಾಶಿಯಲ್ಲಿ ಸೂರ್ಯನ ಪ್ರವೇಶ: ಯಾರಿಗೆಲ್ಲಾ ಅದೃಷ್ಟ? ಯಾವ ವಿಷಯದಲ್ಲಿ ಎಚ್ಚರಿಕೆ?
ಸೆಪ್ಟೆಂಬರ್ 17 ರಂದು ಸೂರ್ಯನು ಕನ್ಯಾ ರಾಶಿಗೆ ಪ್ರವೇಶಿಸಲಿದ್ದು, ಇದು ಎಲ್ಲಾ ರಾಶಿಗಳ ವೃತ್ತಿ ಮತ್ತು ಖಾಸಗಿ ಜೀವನದಲ್ಲಿ ಗಮನಾರ್ಹ ಬದಲಾವಣೆಗಳನ್ನು ತರಲಿದೆ. 3 ರಾಶಿಯವರಿಗೆ ಆರ್ಥಿಕ ಪ್ರಗತಿ ಮತ್ತು ಸಂತಸ ತಂದರೆ, ಇತರೆ ಕೆಲವು ರಾಶಿಗಳು ಎಚ್ಚರಿಕೆಯಿಂದ ಇರಬೇಕಾದ ಸಮಯ ಇದಾಗಿದೆ.

ಕನ್ಯಾ ರಾಶಿಗೆ ಸೂರ್ಯ ಪ್ರವೇಶ
ಇದೇ ತಿಂಗಳು ಅಂದ್ರೆ ಸೆಪ್ಟೆಂಬರ್ 17ರಂದು ಸೂರ್ಯನು ಕನ್ಯಾ ರಾಶಿಗೆ ಪ್ರವೇಶಿಸುತ್ತಾನೆ. ಈ ಚಲನೆ ಪ್ರಮುಖವಾಗಿ ರಾಶಿಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ. ಎಲ್ಲಾರಾಶಿಯವರ ವೃತ್ತಿ ಮತ್ತು ಖಾಸಗಿ ಜೀವನದಲ್ಲಿ ಸಾಕಷ್ಟು ಗಮನಾರ್ಹ ಬದಲಾವಣೆ ಉಂಟಾಗಲಿದೆ.
ವೃಶ್ಚಿಕ ರಾಶಿ: 11ನೇ ಮನೆ ಮೂಲಕ ಸೂರ್ಯನ ಚಲನೆ
ಸೂರ್ಯನ ಈ ಚಲನೆಯು ವೃಶ್ಚಿಕ ರಾಶಿಯವರಿಗೆ ಆರ್ಥಿಕ ಪ್ರಗತಿಯನ್ನುಂಟು ಮಾಡಲಿದ್ದಾನೆ. ಪಾಲುದಾರಿಕೆಯಂತಹ ವ್ಯವಹಾರಗಳಲ್ಲಿ ನೀವು ಪಡೆಯುವ ಲಾಭದ ಪ್ರಮಾಣ ಏರಿಕೆಯಾಗಲಿದೆ. ಕೆಲಸ ಮಾಡುವ ಸ್ಥಳದಲ್ಲಿ ನಿಮ್ಮ ಗೌರವ ಹೆಚ್ಚಳವಾಗಲಿದೆ. ಈ ರಾಶಿಯವರಿಗೆ ಈ ಸಮಯದಲ್ಲಿ ಕಂಕಣಭಾಗ್ಯ ಬರಲಿದ್ದು, ಸಂತಸದ ವಾತಾವರಣ ನೆಲೆಸಲಿದೆ.
ಮೀನ ರಾಶಿ: ಏಳನೇ ಮನೆ ಮೂಲಕ ಸಂಚಾರ
ಈ ಸಮಯದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಪಡೆಯುತ್ತೀರಿ. ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಿ ಉಳಿತಾಯದ ಪ್ರಮಾಣ ಏರಿಕೆಯಾಗುತ್ತದೆ. ಕೆಲಸದಲ್ಲಿ ತಂದೆಯ ಮಾರ್ಗದರ್ಶನ ಮತ್ತು ಸಂಗಾತಿ ಬೆಂಬಲ ಸಿಗಲಿದೆ. ಆರೋಗ್ಯದಲ್ಲಿ ಸುಧಾರಣೆ ಮತ್ತು ಕುಟುಂಬದಲ್ಲಿ ಸಂತೋಷ, ನೆಮ್ಮದಿ ನೆಲೆಸಲಿದೆ. ಈ ಭಾನುವಾರ ದಾನ ಮಾಡೋದು ಶುಭಕರ ಎಂದು ಪರಿಗಣಿಸಲಾಗುತ್ತದೆ.
ಕನ್ಯಾ ರಾಶಿ: ಮೊದಲ ಮನೆಗೆ ಸೂರ್ಯನ ಪ್ರವೇಶ
ಈ ಸಮಯ ಕನ್ಯಾ ರಾಶಿಯವರಿಗೆ ಶುಭಕರ ಎಂದು ಪರಿಗಣಿಸಲಾಗುತ್ತದೆ. ಹೊಸ ಅಥವಾ ವ್ಯವಹಾರ ವಿಸ್ತರಣೆಗೆ ಇದು ಒಳ್ಳೆಯ ಅವಕಾಶ. ಆರ್ಥಿಕವಾಗಿ ಸದೃಢರಾಗುತ್ತೀರಿ. ವೈಯಕ್ತಿಕ ವಿಷಯಗಳಲ್ಲಿ ತಾಳ್ಮೆಯಿಂದ ವರ್ತಿಸಿ. ಸಂಗಾತಿಯ ಭಾವನೆಗಳನ್ನು ಗೌರವಿಸಿ.
ಸಿಂಹ ರಾಶಿ: ಎರಡನೇ ಮನೆ ಮೂಲಕ ಸೂರ್ಯನ ಸಂಚಾರ
ಆತ್ಮವಿಶ್ವಾಸ ಹೆಚ್ಚಳವಾಗಲಿದ್ದು, ಕೆಲಸದಲ್ಲಿ ಹೆಚ್ಚು ಕ್ರಿಯಾಶೀಲರಾಗಿ ಎಲ್ಲರ ಗಮನ ಸೆಳೆಯುತ್ತೀರಿ. ಈ ಬೆಳವಣಿಗೆಯೂ ನಿಮಗೆ ಹೆಚ್ಚು ಲಾಭ ತೆಗೆದುಕೊಂಡು ಬರಲಿದೆ. ಆಡಳಿತಾತ್ಮಕ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆಗಳಿವೆ. ಮೇಲಾಧಿಕಾರಿಗಳೊಂದಿಗೆ ಉತ್ತಮ ಸಂಬಂಧ ಕಾಪಾಡಿಕೊಳ್ಳಿ
ಧನು ರಾಶಿ: ಹತ್ತನೇ ಮನೆ ಮೂಲಕ ಸೂರ್ಯನ ಸಂಚಾರ
ಕೆಲಸದಲ್ಲಿ ಹೊಸ ಜವಾಬ್ದಾರಿಗಳು ನಿಮ್ಮದಾಗಲಿವೆ. ಭೂಮಿ, ಕಟ್ಟಡ, ವಾಹನ ಖರೀದಿಸುವ ಸಾಧ್ಯತೆ. ಕೌಟುಂಬಿಕ ಸಂತೋಷ ಅನುಭವಿಸುತ್ತೀರಿ. ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾಣ ಮಾಡುವ ಅವಕಾಶ ಇರಲಿದೆ. ಹೊಸ ವ್ಯವಹಾರ ಮತ್ತು ಪಾಲುದಾರಿಕೆ ಒಪ್ಪಂದಗಳನ್ನು ಮಾಡಿಕೊಳ್ಳಲು ಇದು ಸೂಕ್ತ ಸಮಯವಾಗಿದೆ.
ವೃಷಭ ರಾಶಿ: 5ನೇ ಮನೆ ಮೂಲಕ ಸಂಚಾರ
ಶಿಕ್ಷಣದಲ್ಲಿ ಮಹತ್ವದ ಪ್ರಗತಿ ಕಾಣಲಿದ್ದು, ಪ್ರತಿಫಲ ಪಡೆಯುವ ಸಮಯ ಇದಾಗಿದೆ. ವಿದ್ಯಾರ್ಥಿಗಳಲ್ಲಿರುವ ಗೊಂದಲಗಳು ದೂರವಾಗಲಿದ್ದು, ಶುಭಸುದ್ದಿ ಕೇಳುತ್ತೀರಿ. ಆರ್ಥಿಕ ವಿಷಯಗಳಲ್ಲಿ ಮುನ್ನೆಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಪೋಷಕರು ಮಕ್ಕಳ ಬಗ್ಗೆ ಎಚ್ಚರಿಕೆಯಿಂದಿರಿ. ವೈಯಕ್ತಿಕ ಸಂಬಂಧಗಳಲ್ಲಿ ಸುಧಾರಣೆ ಸಾಧ್ಯತೆ.
ಮಿಥುನ ರಾಶಿ: ನಾಲ್ಕನೇ ಮನೆ ಮೂಲಕ ಚಲನೆ
ವೃತ್ತಿಪರ ಜವಾಬ್ದಾರಿಗಳು ಹೆಚ್ಚಾಗೋದರಿಂದ ವೈಯಕ್ತಿಕ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರೋ ಸಾಧ್ಯತೆ. ಮನೆಯ ವಿಷಯಗಳಲ್ಲಿ ಭಾಗಿಯಾಗುವಿಕೆ, ಸಂಬಂಧಿಕರೊಂದಿಗೆ ಉತ್ತಮ ಮಾತುಕತೆ. ಕೆಲಸದ ಸ್ಥಳದಲ್ಲಿ ಒಳರಾಜಕೀಯದಿಂದೆ ನಿರಾಶೆ ಸಾಧ್ಯತೆ.
ಕರ್ಕಾಟಕ: ಮೂರನೇ ಮನೆ ಮೂಲಕ ಚಲನೆ
ಧೈರ್ಯ, ಸಂವಹನ ಕೌಶಲ್ಯ, ಜವಾಬ್ದಾರಿಗಳು ಹೆಚ್ಚಾಗಲಿವೆ. ಕುಟುಂಬದಲ್ಲಿ ನೀವು ತೆಗೆದುಕೊಳ್ಳುವ ತೀರ್ಮಾನ ಪ್ರಮುಖವಾಗುತ್ತದೆ. ಸೋದರರ ಜೊತೆಗಿನ ಬಾಂಧವ್ಯ ಸುಧಾರಣೆ. ಸ್ವಂತ ಪ್ರಯತ್ನಗಳಿಗೆ ಮೆಚ್ಚುಗೆ.ಉಪಯುಕ್ತ ಅವಕಾಶಗಳನ್ನು ಸೃಷ್ಟಿಸಬಹುದು. ನಿಮ್ಮ ಸಂವಹನವನ್ನು ಅನಗತ್ಯವಾಗಿ ಬಲವಂತವಾಗಿಸುವುದನ್ನು ತಪ್ಪಿಸಿ.
ತುಲಾ ರಾಶಿ: 12ನೇ ಮನೆ ಮೂಲಕ ಸೂರ್ಯ ಸಂಚಾರ
ಖರ್ಚುಗಳು ಹೆಚ್ಚಾಗುವ ಸಾಧ್ಯತೆ, ವಿದೇಶಿ ಸಂಪರ್ಕದಿಂದ ಪ್ರಯಾಣ ಸಾಧ್ಯತೆ, ಅಂತರಾಷ್ಟ್ರೀಯ ವ್ಯವಹಾರಗಳಲ್ಲಿ ಬಂಡವಾಳ ಹೂಡಿಕೆ. ದೈಹಿಕ ಮತ್ತು ಮಾನಸಿಕ ವಿಶ್ರಾಂತಿಗೆ ಆದ್ಯತೆ ನೀಡಿ. ಅನಗತ್ಯ ಖರೀದಿ ತಪ್ಪಿಸಿ.
ಕುಂಭ ರಾಶಿ: ಎಂಟನೇ ಮನೆ ಮೂಲಕ ಸಂಚಾರ
ಹಣಕಾಸು, ಪಾಲುದಾರಿಕೆ, ಆರೋಗ್ಯ ಮತ್ತು ಗೌಪ್ಯ ವಿಷಯಗಳ ಬಗ್ಗೆ ಎಚ್ಚರಿಕೆಯ ಅಗತ್ಯ, ವಿವಾಹಿತ ದಂಪತಿಗಳಲ್ಲಿ ಮನಸ್ತಾಪ ಸಾಧ್ಯತೆ, ಅಪಾಯಕಾರಿ ಹೂಡಿಕೆಗಳಿಂದ ದೂರವಿರಿ. ಹಠಾತ್ ಜವಾಬ್ದಾರಿಗಳು ನಿಮ್ಮಲ್ಲಿ ಹಲವು ಬದಲಾವಣೆಗಳನ್ನು ತೆಗೆದುಕೊಂಡು ಬರಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕ ಸಂವಹನ, ಹಣಕಾಸಿನ ವಿಷಯಗಳಲ್ಲಿ ಸರಿಯಾದ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಳ್ಳಿ
ಮೇಷ: ಆರನೇ ಮನೆ ಮೂಲಕ ಸಂಚಾರ
ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳಲಿವೆ. ಕೆಲಸದಲ್ಲಿ ಸವಾಲುಗಳು ಎದುರಾಗಲಿವೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಶುಭ ಸುದ್ದಿ, ಸಹೋದ್ಯೋಗಿಗಳೊಂದಿಗೆ ಅನಗತ್ಯ ವಾದ ತಪ್ಪಿಸಿ. ಏಕಾಗ್ರತೆಯಿಂದ ಕೆಲಸಗಳನ್ನು ಮಾಡಿ, ಈ ಸಮಯದಲ್ಲಿ ತಾಳ್ಮೆ ಬೇಕಾಗಬಹುದು. ಆರೋಗ್ಯ ಕಾಪಾಡಿಕೊಳ್ಳಿ.
ಮಕರ: ಒಂಬತ್ತನೇ ಮನೆಯ ಮೂಲಕ ಸೂರ್ಯನ ಚಲನೆ
ಊಹೆಗಳ ಮೇಲೆ ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಡಿ. ಹಿರಿಯರು ಮತ್ತು ಆಪ್ತರು ನೀಡುವ ಸಲಹೆಗಳನ್ನು ಗೌರವಿಸಿ.ಅನಿರೀಕ್ಷಿತ ಬೆಳವಣಿಗೆಗಳು ಕೆಲವೊಮ್ಮೆ ಪ್ರಯಾಣ, ಶೈಕ್ಷಣಿಕ ಅಥವಾ ವೃತ್ತಿಪರ ಯೋಜನೆಗಳನ್ನು ಬದಲಾಯಿಸಬಹುದು. ತಂದೆಯಿಂದ ಅದೃಷ್ಟ ಸಿಗುವ ಸಾಧ್ಯತೆ.
Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.

