- Home
- Life
- Fashion
- ಅವಿವಾಹಿತರಿಗೆ ಬಂಪರ್ ಆಫರ್.. ಬ್ರೋಕರ್, ಮ್ಯಾಟ್ರಿಮೋನಿ, ಡೇಟಿಂಗ್ ಏನೂ ಇಲ್ಲದಿದ್ರೂ ಸಿಗ್ತಾರೆ ಒಳ್ಳೇ ಸಂಗಾತಿ
ಅವಿವಾಹಿತರಿಗೆ ಬಂಪರ್ ಆಫರ್.. ಬ್ರೋಕರ್, ಮ್ಯಾಟ್ರಿಮೋನಿ, ಡೇಟಿಂಗ್ ಏನೂ ಇಲ್ಲದಿದ್ರೂ ಸಿಗ್ತಾರೆ ಒಳ್ಳೇ ಸಂಗಾತಿ
Modern Marriage Trends 2026: ಮ್ಯಾಟ್ರಿಮೋನಿ ವೆಬ್‌ಸೈಟ್ಸ್ ಅಥವಾ ಡೇಟಿಂಗ್ ಆ್ಯಪ್‌ಗಳಿಂದ ಬೇಸತ್ತಿದ್ದೀರಾ? ಹಾಗಿದ್ದರೆ ಈ ಹೊಸ ಮದುವೆ ಟ್ರೆಂಡ್ ಗಮನಿಸಿ! ಈಗ ನಿಮ್ಮ ಜೀವನ ಸಂಗಾತಿಯನ್ನು ಹೆಚ್ಚು ಹುಡುಕಬೇಕಿಲ್ಲ, ಮತ್ತೇ? ಆಧುನಿಕ ಡೇಟಿಂಗ್ ಪ್ರಪಂಚದ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಯುವಜನತೆಗೆ ದೊಡ್ಡ ಸವಾಲು
ಬಾಲಿವುಡ್ ಸಿನಿಮಾಗಳನ್ನು ನೋಡಿ ಬೆಳೆದ ಇಂದಿನ ಪೀಳಿಗೆಗೆ 'ಅರೇಂಜ್ಡ್ ಮ್ಯಾರೇಜ್' (ಹಿರಿಯರು ನಿಶ್ಚಯ ಮಾಡಿದ ಮದುವೆ) ಎಂದರೆ ಅಷ್ಟಾಗಿ ಆಸಕ್ತಿ ಇಲ್ಲ. "ಯಾವುದೋ ಪ್ರವಾಸದಲ್ಲೋ ಅಥವಾ ಸಮಾರಂಭದಲ್ಲೋ ಅಚಾನಕ್ಕಾಗಿ ಒಬ್ಬರು ಪರಿಚಯವಾಗುವುದು, ನಂತರ ಅದು ಪ್ರೇಮಕ್ಕೆ ತಿರುಗಿ ಮದುವೆಯಾಗುವುದು..." ಇವೆಲ್ಲ ಸಿನಿಮಾದಲ್ಲಿ ನೋಡಲು ಚೆಂದ. ಆದರೆ ನಿಜ ಜೀವನದಲ್ಲಿ ಸರಿಯಾದ ಸಂಗಾತಿಯನ್ನು ಹುಡುಕುವುದು ಇಂದಿನ ಯುವಜನತೆಗೆ ದೊಡ್ಡ ಸವಾಲಾಗಿದೆ.
ಡೇಟಿಂಗ್ ಆ್ಯಪ್‌ಗಳಿಂದ ಬೇಸತ್ತ ಯುವಜನತೆ
ಆನ್‌ಲೈನ್ ಡೇಟಿಂಗ್ ಆ್ಯಪ್‌ಗಳ ಹಾವಳಿ ಹೆಚ್ಚಾದ ನಂತರ ಪರಿಸ್ಥಿತಿ ಮತ್ತಷ್ಟು ಗೊಂದಲಮಯವಾಗಿದೆ. 'ಘೋಸ್ಟಿಂಗ್' (ಸಂಪರ್ಕ ಕಡಿತ), 'ಸಿಚುವೇಷನ್‌ಶಿಪ್'ನಂತಹ ಪದಗಳು ಯುವಜನತೆಯನ್ನು ಮಾನಸಿಕವಾಗಿ ಸುಸ್ತಾಗಿಸುತ್ತಿವೆ. ಸ್ಕ್ರೀನ್ ನೋಡಿ ಸುಸ್ತಾದ ಯುವಕ-ಯುವತಿಯರು ಈಗ ರನ್ನಿಂಗ್ ಕ್ಲಬ್‌ಗಳು, ಪಬ್‌ಗಳು ಮತ್ತು ನೇರ ಪರಿಚಯಗಳತ್ತ ಮುಖ ಮಾಡುತ್ತಿದ್ದಾರೆ. ಈ ಬದಲಾವಣೆಗೆ ತಕ್ಕಂತೆ ಮದುವೆ ಮಾರುಕಟ್ಟೆಯೂ (Matchmaking) ಹೊಸ ರೂಪ ಪಡೆಯುತ್ತಿದೆ.
ಹುಟ್ಟಿಕೊಂಡ ಹೊಸ ಫ್ಲಾಟ್‌ಫಾರ್ಮ್‌ಗಳು
ಹಳೆಯ ಕಾಲದ ಮ್ಯಾಟ್ರಿಮೋನಿ ವೆಬ್‌ಸೈಟ್‌ಗಳು ಈಗಿನ ಕಾಲಕ್ಕೆ ಮಂಕಾಗಿವೆ ಎಂದು ಯುವಜನತೆ ಭಾವಿಸುತ್ತಿದ್ದಾರೆ. ಹಾಗಾಗಿ ಕ್ಯಾಶುಯಲ್ ಡೇಟಿಂಗ್ ಮತ್ತು ಸಾಂಪ್ರದಾಯಿಕ ಮದುವೆ ಮಧ್ಯೆ ಹೊಸದಾಗಿ 'ಸೀರಿಯಸ್ ಡೇಟಿಂಗ್' ಫ್ಲಾಟ್‌ಫಾರ್ಮ್‌ಗಳು ಹುಟ್ಟಿಕೊಂಡಿವೆ. ಕೂಪ್ಲೆಟ್ (Cooplet), ವೆರೋನಾ, ಐಸಿಲ್‌ನಂತಹ ಆ್ಯಪ್‌ಗಳು ವ್ಯಕ್ತಿಯ ಜೀವನಶೈಲಿ ಮತ್ತು ವ್ಯಕ್ತಿತ್ವದ ಆಧಾರದ ಮೇಲೆ ಸೂಕ್ತ ಜೋಡಿಯನ್ನು ಸೂಚಿಸುತ್ತಿವೆ.
ಇದರಲ್ಲೇನಿದೆ ಹೊಸತು?
ಈ ಹೊಸ ಪ್ಲಾಟ್‌ಫಾರ್ಮ್‌ಗಳಲ್ಲಿ ಕೇವಲ ಪ್ರೊಫೈಲ್‌ಗಳು ಮಾತ್ರವಲ್ಲ, ರಿಲೇಷನ್‌ಶಿಪ್ ಕೌನ್ಸಿಲರ್‌ಗಳು ಮತ್ತು ಸೈಕಾಲಜಿಸ್ಟ್‌ಗಳ ಪಾತ್ರವೂ ದೊಡ್ಡದಿದೆ. ಸಂಗಾತಿಯನ್ನು ಹುಡುಕುವಾಗ ಎದುರಾಗುವ ತಿರಸ್ಕಾರ (Rejection) ಅಥವಾ ಒತ್ತಡವನ್ನು ನಿಭಾಯಿಸಲು ಇವರು ಪ್ರತಿವಾರ ಕೌನ್ಸಿಲಿಂಗ್ ನೀಡಿ ಬೆಂಬಲವಾಗಿ ನಿಲ್ಲುತ್ತಾರೆ.
ಅರ್ಥ ಮಾಡಿಕೊಳ್ಳಲು ಅವಕಾಶ
ಈ ಆ್ಯಪ್‌ಗಳು ಈಗ ಕೇವಲ ಮೊಬೈಲ್‌ಗೆ ಸೀಮಿತವಾಗಿಲ್ಲ. ಬೆಂಗಳೂರು, ಮುಂಬೈ, ದೆಹಲಿಯಂತಹ ನಗರಗಳಲ್ಲಿ 'ಸಿಂಗಲ್ಸ್ ಮಿಕ್ಸರ್ಸ್' ಆಯೋಜಿಸಲಾಗುತ್ತಿದೆ. ಅಡುಗೆ ಮಾಡುವುದು, ಚಿತ್ರಕಲೆ ಅಥವಾ ಕಾಕ್‌ಟೈಲ್ ವರ್ಕ್‌ಶಾಪ್‌ಗಳ ಮೂಲಕ ಒತ್ತಡವಿಲ್ಲದೆ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಅವಕಾಶ ನೀಡಲಾಗುತ್ತಿದೆ.
'ಟ್ರಾವೆಲ್ ಮ್ಯಾಚ್ ಮೇಕಿಂಗ್' ಟ್ರೆಂಡ್
ಇದರ ಜೊತೆಗೆ 'ಟ್ರಾವೆಲ್ ಮ್ಯಾಚ್ ಮೇಕಿಂಗ್' ಟ್ರೆಂಡ್ ಹೆಚ್ಚು ಜನಪ್ರಿಯವಾಗುತ್ತಿದೆ. ಗೋವಾ, ಮನಾಲಿ ಅಥವಾ ರಿಷಿಕೇಶ್‌ಗೆ 3 ರಿಂದ 7 ದಿನಗಳ ಕಾಲ ಪ್ರವಾಸ ಆಯೋಜಿಸಲಾಗುತ್ತದೆ. ಅಲ್ಲಿ ಹತ್ತಾರು 'ಸಿಂಗಲ್ಸ್' ಜೊತೆಯಾಗಿ ಪ್ರವಾಸ ಮಾಡುತ್ತಾರೆ. ವಿವಿಧ ಚಟುವಟಿಕೆಗಳ ಮೂಲಕ ತಮಗೆ ಸರಿ ಹೊಂದುವ ಸಂಗಾತಿಯನ್ನು ಅತ್ಯಂತ ನ್ಯಾಚುರಲ್ಲಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

