MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Fashion
  • ಪ್ರತಿದಿನ ಇದೊಂದನ್ನ ಹಚ್ಚಿ ನೋಡಿ, ಕೇವಲ 4 ವಾರದಲ್ಲಿ ರೆಪ್ಪೆಗೂದಲುಗಳು ವೇಗವಾಗಿ ಬೆಳೆದಿರುತ್ತೆ

ಪ್ರತಿದಿನ ಇದೊಂದನ್ನ ಹಚ್ಚಿ ನೋಡಿ, ಕೇವಲ 4 ವಾರದಲ್ಲಿ ರೆಪ್ಪೆಗೂದಲುಗಳು ವೇಗವಾಗಿ ಬೆಳೆದಿರುತ್ತೆ

How to grow eyelashes: ಪ್ರತಿಯೊಬ್ಬ ಮಹಿಳೆಗೂ ಉದ್ದನೆಯ, ದಟ್ಟವಾದ ರೆಪ್ಪೆಗೂದಲುಗಳಿರಬೇಕೆಂಬ ಆಸೆ ಇರುತ್ತದೆ. ಅದಕ್ಕೆ ಕೆಲವರು ಮಾರುಕಟ್ಟೆಯಲ್ಲಿ ಸಿಗೊ ದುಬಾರಿ ರಾಸಾಯನಿಕಗಳ ಮೊರೆ ಹೋಗುತ್ತಾರೆ. ಆದ್ರೆ ಮನೆಯಲ್ಲಿ ಸಿಗುವ ನೈಸರ್ಗಿಕ ಪದಾರ್ಥ ಬಳಸಿ ಕೇವಲ 4 ವಾರದಲ್ಲಿ ಸುಂದರವಾದ ರೆಪ್ಪೆ ಪಡಿಬೋದು.    

2 Min read
Author : Ashwini HR
Published : Feb 20 2026, 03:23 PM IST
Share this Photo Gallery
  • FB
  • TW
  • Linkdin
  • Whatsapp
17
ಅದ್ಭುತವಾಗಿ ಕೆಲಸ ಮಾಡುತ್ತವೆ
Image Credit : Getty

ಅದ್ಭುತವಾಗಿ ಕೆಲಸ ಮಾಡುತ್ತವೆ

ಕೆಲವರಿಗೆ ರೆಪ್ಪೆಗೂದಲುಗಳು (Eyelashes) ತುಂಬಾ ತೆಳುವಾಗಿರುತ್ತವೆ. ಆಗ ಮುಖದ ಅಂದ ಸ್ವಲ್ಪ ಕಡಿಮೆಯಾದಂತೆ ಅನಿಸಬಹುದು. ಆದ್ದರಿಂದ ನೀವೂ ಉದ್ದವಾದ ಮತ್ತು ದಟ್ಟವಾದ ರೆಪ್ಪೆಗೂದಲುಗಳನ್ನ ಬಯಸಿದರೆ ಕೆಲವು ಮನೆಮದ್ದುಗಳು ಅದ್ಭುತವಾಗಿ ಕೆಲಸ ಮಾಡುತ್ತವೆ.

27
4 ರಿಂದ 8 ವಾರ ಸಾಕು
Image Credit : Getty

4 ರಿಂದ 8 ವಾರ ಸಾಕು

ಉದ್ದನೆಯ ಮತ್ತು ದಟ್ಟವಾದ ರೆಪ್ಪೆಗೂದಲುಗಳು ಮುಖದ ಸೌಂದರ್ಯವನ್ನು ಹೆಚ್ಚಿಸುವುದರಲ್ಲಿ ಸಂಶಯವೇ ಇಲ್ಲ. ಇದಕ್ಕಾಗಿ ಅನೇಕರು ದುಬಾರಿ ಸೀರಮ್‌ಗಳು, ಐಲ್ಯಾಶ್ ಎಕ್ಸ್‌ಟೆನ್ಶನ್ ಅಥವಾ ಇತರ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಇವುಗಳಿಂದ ನ್ಯಾಚುರಲ್ ಆಗಿ ಕಳೆ ಬರುವುದಿಲ್ಲ. ಬದಲಾಗಿ, ಸುಲಭವಾದ ಮನೆಮದ್ದುಗಳನ್ನು ಬಳಸುವ ಮೂಲಕ ಯಾವುದೇ ಅಡ್ಡಪರಿಣಾಮವಿಲ್ಲದೆ 4 ರಿಂದ 8 ವಾರದಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು.

Related Articles

Related image1
ಹೀರೋಯಿನ್ ತರ ಕಾಣ್ಬೇಕಾ? ಬಂಜಾರ ಜುಮ್ಕಾ ಧರಿಸಿ ನೋಡಿ
Related image2
ಸದಾ ಟ್ರೆಂಡ್‌ನಲ್ಲಿರುವ ದಕ್ಷಿಣ ಭಾರತದ ತಾಳಿ ಡಿಸೈನ್‌ಗಳಿವು!
37
ರೆಪ್ಪೆಗೂದಲುಗಳನ್ನು ವೇಗವಾಗಿ ಬೆಳೆಸಲು ಇಲ್ಲಿವೆ ಕೆಲವು ಸುಲಭ ಉಪಾ
Image Credit : Image: Freepik

ರೆಪ್ಪೆಗೂದಲುಗಳನ್ನು ವೇಗವಾಗಿ ಬೆಳೆಸಲು ಇಲ್ಲಿವೆ ಕೆಲವು ಸುಲಭ ಉಪಾ

1. ಹರಳೆಣ್ಣೆ (Castor Oil)
ರೆಪ್ಪೆಗೂದಲುಗಳ ಬೆಳವಣಿಗೆಗೆ ಹರಳೆಣ್ಣೆ ಅತ್ಯುತ್ತಮ ಮತ್ತು ಜನಪ್ರಿಯ ಮದ್ದು. ಇದರಲ್ಲಿರುವ 'ರೈಸಿನೋಲಿಕ್ ಆಸಿಡ್' ಕೂದಲಿನ ಬೇರುಗಳಿಗೆ ಪೋಷಣೆ ನೀಡಿ ಅವುಗಳನ್ನು ಗಟ್ಟಿಗೊಳಿಸುತ್ತದೆ.
ಬಳಸುವ ವಿಧಾನ: ರಾತ್ರಿ ಮಲಗುವ ಮುನ್ನ ಸ್ವಚ್ಛವಾದ ಮಸ್ಕಾರಾ ಬ್ರಷ್ ಅಥವಾ ಇಯರ್ ಬಡ್ ಸಹಾಯದಿಂದ ಸ್ವಲ್ಪ ಎಣ್ಣೆಯನ್ನು ರೆಪ್ಪೆಗಳಿಗೆ ಹಚ್ಚಿ. ಬೆಳಗ್ಗೆ ಎದ್ದ ನಂತರ ತೊಳೆಯಿರಿ. 2-4 ವಾರಗಳಲ್ಲಿ ವ್ಯತ್ಯಾಸ ತಿಳಿಯುತ್ತದೆ.

47
2. ಕೊಬ್ಬರಿ ಎಣ್ಣೆ (Coconut Oil)
Image Credit : Getty

2. ಕೊಬ್ಬರಿ ಎಣ್ಣೆ (Coconut Oil)

ಕೊಬ್ಬರಿ ಎಣ್ಣೆಯು ಕೇವಲ ತಲೆಯ ಕೂದಲಿಗೆ ಮಾತ್ರವಲ್ಲ, ರೆಪ್ಪೆಗೂದಲುಗಳಿಗೂ ತುಂಬಾ ಒಳ್ಳೆಯದು. ಇದರಲ್ಲಿರುವ 'ಲಾರಿಕ್ ಆಸಿಡ್' ಕೂದಲು ತುಂಡಾಗುವುದನ್ನು ತಡೆಯುತ್ತದೆ.
ಬಳಸುವ ವಿಧಾನ: ರಾತ್ರಿ ಮಲಗುವ ಮುನ್ನ ಹಗುರವಾದ ಕೈಗಳಿಂದ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಿ. ನೀವು ಇದನ್ನು ಹರಳೆಣ್ಣೆಯ ಜೊತೆ ಮಿಕ್ಸ್ ಮಾಡಿ ಕೂಡ ಬಳಸಬಹುದು.

57
3. ಅಲೋವೆರಾ ಜೆಲ್ (Aloe Vera Gel)
Image Credit : stockPhoto

3. ಅಲೋವೆರಾ ಜೆಲ್ (Aloe Vera Gel)

ಅಲೋವೆರಾ ಜೆಲ್‌ನಲ್ಲಿ ವಿಟಮಿನ್ A, C ಮತ್ತು E ಸಮೃದ್ಧವಾಗಿದ್ದು, ಇದು ರೆಪ್ಪೆಗಳ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.
ಬಳಸುವ ವಿಧಾನ: ತಾಜಾ ಅಲೋವೆರಾ ಜೆಲ್ ಅನ್ನು ರೆಪ್ಪೆಗಳಿಗೆ ಹಚ್ಚಿ 10-15 ನಿಮಿಷ ಬಿಟ್ಟು ತೊಳೆಯಿರಿ ಅಥವಾ ರಾತ್ರಿ ಪೂರ್ತಿ ಹಾಗೆಯೇ ಬಿಡಬಹುದು.

67
4. ವಿಟಮಿನ್ ಇ ಆಯಿಲ್ ಅಥವಾ ಕ್ಯಾಪ್ಸುಲ್ (Vitamin E Oil)
Image Credit : Getty

4. ವಿಟಮಿನ್ ಇ ಆಯಿಲ್ ಅಥವಾ ಕ್ಯಾಪ್ಸುಲ್ (Vitamin E Oil)

ವಿಟಮಿನ್ ಇ ನಲ್ಲಿ ಆಂಟಿ-ಆಕ್ಸಿಡೆಂಟ್‌ಗಳಿದ್ದು, ಇವು ರೆಪ್ಪೆಗಳು ವೇಗವಾಗಿ ಬೆಳೆಯಲು ಸಹಾಯ ಮಾಡುತ್ತವೆ.
ಬಳಸುವ ವಿಧಾನ: ವಿಟಮಿನ್ ಇ ಕ್ಯಾಪ್ಸುಲ್ ಅನ್ನು ಕತ್ತರಿಸಿ ಎಣ್ಣೆಯನ್ನು ಹೊರತೆಗೆಯಿರಿ. ಇದನ್ನು ತೆಂಗಿನ ಎಣ್ಣೆ ಅಥವಾ ಹರಳೆಣ್ಣೆಯೊಂದಿಗೆ ಬೆರೆಸಿ ರಾತ್ರಿ ಹಚ್ಚಿ ಮಲಗಿ.

77
5. ಬಾದಾಮಿ ಎಣ್ಣೆ ಅಥವಾ ಆಲಿವ್ ಎಣ್ಣೆ (Almond or Olive Oil)
Image Credit : our own

5. ಬಾದಾಮಿ ಎಣ್ಣೆ ಅಥವಾ ಆಲಿವ್ ಎಣ್ಣೆ (Almond or Olive Oil)

ಬಾದಾಮಿ ಎಣ್ಣೆಯು ವಿಟಮಿನ್ ಇ ಇಂದ ಸಮೃದ್ಧವಾಗಿದ್ದು, ಉದ್ದನೆಯ ರೆಪ್ಪೆಗಳನ್ನು ಪಡೆಯಲು ಸಹಕಾರಿ.
ಬಳಸುವ ವಿಧಾನ: ರಾತ್ರಿ ಸ್ವಲ್ಪ ಎಣ್ಣೆಯನ್ನು ಹಚ್ಚಿ ಹಗುರವಾಗಿ ಮಸಾಜ್ ಮಾಡಿ, ಬೆಳಗ್ಗೆ ತೊಳೆಯಿರಿ.
ಸೂಚನೆ: ಎಣ್ಣೆ ಅಥವಾ ಜೆಲ್ ಹಚ್ಚುವಾಗ ಅದು ಕಣ್ಣಿನ ಒಳಗೆ ಹೋಗದಂತೆ ಜಾಗರೂಕತೆ ವಹಿಸಿ. ನಿಮಗೆ ಯಾವುದಾದರೂ ಅಲರ್ಜಿ ಇದ್ದರೆ ಮೊದಲು ಪ್ಯಾಚ್ ಟೆಸ್ಟ್ ಮಾಡಿ ನೋಡಿ. 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಫ್ಯಾಷನ್
ಜೀವನಶೈಲಿ
ಮಹಿಳೆಯರು

Latest Videos
Recommended Stories
Recommended image1
Silver Kada Designs: ವರ್ಕಿಂಗ್ ವಿಮೆನ್‌ ಪ್ರತಿ ಲುಕ್‌ಗೂ ನೀಡುತ್ತೆ ಎಲಿಗೆಂಟ್ ಟಚ್
Recommended image2
Gold Nosepin: ಹೆಣ್ಣಿನ ಅಂದ ಹೆಚ್ಚಿಸುತ್ತೆ ಈ 7 ಕ್ಯೂಟ್ ಚಿನ್ನದ ಮೂಗುತಿ ಡಿಸೈನ್
Recommended image3
ಮದುವೆಗೂ ಮುನ್ನ ನಿಮ್ಮ ಭಾವಿ ಅಳಿಯನಿಗೆ ಚಿನ್ನದ ಈ ಡಿಸೈನ್ ಉಂಗುರ ಗಿಫ್ಟ್ ಕೊಡಿ!
Related Stories
Recommended image1
ಹೀರೋಯಿನ್ ತರ ಕಾಣ್ಬೇಕಾ? ಬಂಜಾರ ಜುಮ್ಕಾ ಧರಿಸಿ ನೋಡಿ
Recommended image2
ಸದಾ ಟ್ರೆಂಡ್‌ನಲ್ಲಿರುವ ದಕ್ಷಿಣ ಭಾರತದ ತಾಳಿ ಡಿಸೈನ್‌ಗಳಿವು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved