ಹಣೆ ಮೇಲೆ ಸಣ್ಣ ದದ್ದುಗಳಿವೆಯೇ? ಈ ಮನೆಮದ್ದುಗಳನ್ನು, ಟ್ರೈ ಮಾಡಿ !
ಮುಖದ ಮೇಲೆ ಸಣ್ಣ ಒಂದು ಕಲೆಯಾದರೂ ಸಹ ಸೌಂದರ್ಯಕ್ಕೆ ಎಫೆಕ್ಟ್ ಆಗುತ್ತೆ ಎಂದು ನಾವು ಭಾವಿಸುತ್ತೇವೆ. ಅದೇ ರೀತಿ ಮುಖದ ಮೇಲೆ ಪೂರ್ತಿಯಾಗಿ ದದ್ದುಗಳು ಮೂಡಿದರೆ ಏನು ಮಾಡೋದು? ಸಾಮಾನ್ಯವಾಗಿ ಹೆಚ್ಚಿನವರನ್ನು ಕಾಡುವ ಸಮಸ್ಯೆ ಎಂದರೆ ಹಣೆಯ ಮೇಲೆ ಮೂಡುವ ದದ್ದುಗಳು. ನಿಮ್ಮ ಸೌಂದರ್ಯದ ಮೇಲೆ ಪರಿಣಾಮ ಬೀರುವ ಸಣ್ಣ ದದ್ದುಗಳು ಮುಖದ ಮೇಲೆ ಬಿದ್ದರೆ, ಈ ಮನೆಮದ್ದುಗಳನ್ನು ಅಳವಡಿಸಿಕೊಳ್ಳಿ.
ಅನೇಕ ಕಾರಣಗಳಿಗಾಗಿ ಹಣೆಯ ಮೇಲೆ ಮೊಡವೆಗಳು(Pimples) ಉಂಟಾಗಬಹುದು. ಮೊಡವೆ ಅಲ್ಲದೇ ಇದ್ದರೂ ಸಣ್ಣ ದದ್ದುಗಳು ಉಂಟಾಗಬಹುದು. ಶುಚಿತ್ವದ ಬಗ್ಗೆ ಕಾಳಜಿ ವಹಿಸದಿರೋದು, ಹಾರ್ಮೋನುಗಳಲ್ಲಿನ ಬದಲಾವಣೆ ಅಥವಾ ಒತ್ತಡದಂತಹ ಕಾರಣಗಳಿಂದಾಗಿ, ಹಣೆಯ ಮೇಲೆ ಸಣ್ಣ ಮೊಡವೆಗಳು ಉಂಟಾಗುತ್ತವೆ.
ಹಣೆಯ ಮೇಲಿನ ಈ ದದ್ದುಗಳು ಚರ್ಮದ ಮೇಲಿನ ಲೇಯರ್ ಕೆಳಗೆ ಇರುತ್ತವೆ, ಅದು ಬ್ಲಾಕ್ ಆಗಿರುತ್ತೆ ಮತ್ತು ಮೇಲಕ್ಕೆತ್ತಲ್ಪಟ್ಟಂತೆ ತೋರುತ್ತೆ. ಈ ರಾಶಸ್(Rashes) ಮುಖದ ಸೌಂದರ್ಯವನ್ನು ಕಸಿದುಕೊಳ್ಳುತ್ತೆ. ಇದರಿಂದಾಗಿ ಜನರು ಅವುಗಳನ್ನು ಸಾಧ್ಯವಾದಷ್ಟು ಬೇಗ ನಿವಾರಿಸಾಲು ಬಯಸ್ತಾರೆ. ಆದರೆ ಯಾವುದೇ ಪರಿಣಾಮಕಾರಿ ಮಾರ್ಗ ತಿಳಿದಿರೋಲ್ಲ.
ನಿಮ್ಮ ಮುಖದ(Face) ಮೇಲೂ ಸಹ ಈ ರೀತಿಯ ದದ್ದುಗಳು ಮೂಡಿವೆಯೇ? ಅವುಗಳನ್ನ ನಿವಾರಣೆ ಮಾಡಲು ನೀವು ಟ್ರೈ ಮಾಡುತ್ತಿದ್ದರೆ ನಿಮಗಾಗಿ ಕೆಲವೊಂದು ಟಿಪ್ಸ್ ಇಲ್ಲಿದೆ. ಅಜ್ಜಿಯ ಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಮತ್ತು ಸಮಸ್ಯೆಯನ್ನು ನಿವಾರಿಸಲು ಸಹಾಯಕವಾಗಿರುವ ಕೆಲವೊಂದು ಪರಿಣಾಮಕಾರಿ ಮನೆಮದ್ದುಗಳನ್ನು ಇಲ್ಲಿ ತಿಳಿಯೋಣ.
ಹಣೆಯ ಮೇಲಿನ ಮೊಡವೆಗಳಿಗೆ ಮನೆಮದ್ದು
ಅಲೋವೆರಾ(Aloevera) ಎಣ್ಣೆಯನ್ನು ಹಣೆಗೆ ಹಚ್ಚಿ ಮಸಾಜ್ ಮಾಡಿ. ಇದರಿಂದ ಉತ್ತಮ ಪ್ರಯೋಜನ ಪಡೆಯಬಹುದು. ಇದು ದದ್ದುಗಳನ್ನು ಶೀಘ್ರವಾಗಿ ನಿವಾರಣೆ ಮಾಡುತ್ತೆ.
ಅಲ್ಲದೇ ನಿಮ್ಮ ಬಳಿ ಟೀ ಟ್ರೀ ಆಯಿಲ್ ಇದ್ದರೆ, ಅದರಿಂದಲೂ ದದ್ದು ನಿವಾರಿಸಬಹುದು. ಅದಕ್ಕಾಗಿ ಒಂದು ಹನಿ ಟೀ ಟ್ರೀ ಎಣ್ಣೆಯನ್ನು ನೀರಿನಲ್ಲಿ ಬೆರೆಸಿ ಹತ್ತಿಯ ಸಹಾಯದಿಂದ ಹಣೆಗೆ ಹಚ್ಚಿ.
ಕೆಲವು ಹನಿ ನಿಂಬೆರಸವನ್ನು(Lemon) ನೇರವಾಗಿ ಹಣೆಯ ಮೇಲಿನ ರಾಷೆಸ್ ಮೇಲೆ ಹಚ್ಚಿ ಮತ್ತು 5 ನಿಮಿಷಗಳ ಕಾಲ ಇರಿಸಿದ ನಂತರ ತೊಳೆಯಿರಿ. ಇದು ಸ್ವಲ್ಪ ಕಿರಿಕಿರಿಯನ್ನು ಉಂಟುಮಾಡುತ್ತೆ, ಆದರೆ ಹಣೆಯ ಮೇಲಿನ ದದ್ದುಗಳನ್ನು ಕಮ್ಮಿ ಮಾಡುತ್ತೆ. ಅಷ್ಟೇ ಅಲ್ಲ ನಿಂಬೆ ರಸ ಮುಖದ ಮೇಲೆ ಬ್ಲೀಚಿಂಗ್ ನಂತೆ ಸಹ ಕೆಲಸ ಮಾಡೋದರಿಂದ ಕಲೆಗಳು ಸಹ ನಿವಾರಣೆಯಾಗುತ್ತೆ.
ಕಲ್ಲಂಗಡಿ ಹಣ್ಣು (Watermelon)ತಿನ್ನೋದಿಕ್ಕೆ ಮಾತ್ರವಲ್ಲ, ಹೀಗೂ ಬಳಕೆ ಮಾಡಬಹುದು. ರಾತ್ರಿ ಮಲಗುವ ಮೊದಲು ಹಣೆಗೆ ಕಲ್ಲಂಗಡಿ ಹಣ್ಣಿನ ತುಂಡನ್ನು ಉಜ್ಜಿ ಮತ್ತು ಬೆಳಿಗ್ಗೆ ಎದ್ದು ನೀರಿನಿಂದ ತೊಳೆಯಿರಿ. ಇದು ನಿಮ್ಮ ದದ್ದುಗಳನ್ನು ಸಹ ತೆಗೆದುಹಾಕುತ್ತೆ ಮತ್ತು ಚರ್ಮವು ಸಹ ಮೃದುವಾಗುತ್ತೆ. ಟ್ರೈ ಮಾಡಿ ನೋಡಿ.
ಕಡಲೆ ಹಿಟ್ಟು(Gram flour) ಮತ್ತು ಬಾದಾಮಿ ಪುಡಿಯನ್ನು ಸಮಪ್ರಮಾಣದಲ್ಲಿ ತೆಗೆದುಕೊಳ್ಳಿ ಮತ್ತು ಅದಕ್ಕೆ ಒಂದು ಚಿಟಿಕೆ ಅರಿಶಿನ ಮತ್ತು ನೀರನ್ನು ಸೇರಿಸಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ಹಣೆಗೆ ಹಚ್ಚಿದ ನಂತರ 15 ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ತೊಳೆಯಿರಿ. ದದ್ದು ಕಡಿಮೆಯಾಗುತ್ತೆ. ಮುಖಕ್ಕೆ ಹೊಳಪು ಸಹ ಬರುತ್ತೆ.
ಅಲೋವೆರಾ ಜೆಲ್ ನಲ್ಲಿ ಕೆಲವು ಹನಿ ಟೀ ಟ್ರೀ ಎಣ್ಣೆಯನ್ನು(Tea tree oil) ಹಾಕಿ ಮತ್ತು ಗುಳ್ಳೆಗಳನ್ನು ತೆಗೆದುಹಾಕಲು ಪ್ರತಿದಿನ ರಾತ್ರಿ ಹಣೆಗೆ ಹಚ್ಚಿ. 15-20 ನಿಮಿಷಗಳ ನಂತರ ತೊಳೆಯಿರಿ. ರಾಷೆಸ್ ಹೋಗುವವರೆಗೆ ಪ್ರತಿದಿನ ಬಳಸಿ. ಇದು ನಿಮ್ಮ ಮುಖವನ್ನು ಸದಾ ಕಾಲ ತಾಜಾತನದಿಂದ ಕೂಡಿರುವಂತೆ ಮಾಡುತ್ತದೆ.
ಸ್ಕ್ರಬ್(Scrub) ಸಹಾಯದಿಂದ ವಾರಕ್ಕೊಮ್ಮೆ ಮುಖವನ್ನು ಎಕ್ಸ್ ಫೋಲಿಯೇಟ್ ಮಾಡಿ. ಕಾಫಿಯೊಂದಿಗೆ ಸಹ ಸ್ಕ್ರಬ್ ಮಾಡಬಹುದು. ಅಥವಾ ಸಕ್ಕರೆಯಿಂದ ಸಹ ನೀವು ಮುಖವನ್ನು ಸ್ಕ್ರಬ್ ಮಾಡಬಹುದು. ಇದರಿಂದ ಮುಖದ ಮೇಲಿನ ಕೊಳೆ, ರಾಶಸ್ ಎಲ್ಲವೂ ನಿವಾರಣೆಯಾಗುತ್ತೆ. ಈ ಟಿಪ್ಸ್ ಫಾಲೋ ಮಾಡಿ ನಿಮ್ಮ ಹಣೆಯ ಮೇಲಿನ ಗುಳ್ಳೆಗಳು ಹೇಗೆ ಮಾಯವಾಗ್ತವೆ ನೀವೇ ನೋಡಿ.