ಬಿಸಿ ಆಹಾರಕ್ಕೆ ಅಪ್ಪಿತಪ್ಪಿಯೂ ನಿಂಬೆಹಣ್ಣಿನ ರಸ ಸೇರಿಸಬೇಡಿ !
ಭಾರತೀಯ ಅಡುಗೆ ಮನೆಯಲ್ಲಿ ನಿಂಬೆಹಣ್ಣಿಗೆ ಮಹತ್ವದ ಸ್ಥಾನವಿದೆ. ಉಪ್ಪಿನಕಾಯಿ, ಚಿತ್ರಾನ್ನದಿಂದ ತೊಡಗಿ ಹಲವು ರೆಸಿಪಿಗಳಿಗೆ ನಿಂಬೆ, ನಿಂಬೆ ರಸವನ್ನು ಬಳಸಲಾಗುತ್ತದೆ. ಆದ್ರೆ ಬಿಸಿ ಅಡುಗೆಗೆ ನಿಂಬೆ ರಸವನ್ನು ಬಳಸಬಾರ್ದು ಅನ್ನೋ ವಿಷ್ಯ ನಿಮ್ಗೊತ್ತಾ ? ಆ ಬಗ್ಗೆ ಇಲ್ಲಿದೆ ಮಾಹಿತಿ.
ನಿಂಬೆಹಣ್ಣುಗಳು ದಿನ ನಿತ್ಯದ ಬಳಕೆಯಲ್ಲಿ ಅತಿ ಮುಖ್ಯ. ಜ್ಯೂಸ್‌ನಿಂದ ಸಲಾಡ್ ವರೆಗೆ ಮತ್ತು ಎಲ್ಲಾ ಅಡುಗೆಗಳಲ್ಲಿ ನಿಂಬೆ ಹಣ್ಣಿನ ಬಳಕೆ ಸಾಮಾನ್ಯ. ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದೆ. ಭಾರತೀಯ ಅಡುಗೆ ಮನೆಯಲ್ಲಿ ನಿಂಬೆಹಣ್ಣಿಗೆ ಮಹತ್ವದ ಸ್ಥಾನವಿದೆ. ಉಪ್ಪಿನಕಾಯಿ, ಚಿತ್ರಾನ್ನದಿಂದ ತೊಡಗಿ ಹಲವು ರೆಸಿಪಿಗಳಿಗೆ ನಿಂಬೆ, ನಿಂಬೆ ರಸವನ್ನು ಬಳಸಲಾಗುತ್ತದೆ. ನಾನ್‌ವೆಜ್ ಅಡುಗೆ ಮಾಡಿದಾಗಲಂತೂ ಪಕ್ಕದಲ್ಲಿ ಕತ್ತರಿಸಿದ ನಿಂಬೆಹಣ್ಣು ಇರಲೇಬೇಕು. ಇನ್ನು ಕೆಲವರು ಬಿಸಿ ಅನ್ನಕ್ಕೆ, ಬಿರಿಯಾನಿಗೆ ನಿಂಬೆ ಹಣ್ಣಿನ ರಸವನ್ನು ಹಿಂಡಿ ಸೇವಿಸುತ್ತಾರೆ. ಆದ್ರೆ ಈ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದಲ್ಲ ಅನ್ನೋದು ನಿಮಗೆ ಗೊತ್ತಿದೆಯಾ ?
ನಿಂಬೆಹಣ್ಣಿನ ಬಳಕೆ ನಿಮ್ಮ ದೈನಂದಿನ ಅಡುಗೆ (Cooking) ದಿನಚರಿಯಲ್ಲಿ ನಿಜವಾಗಿಯೂ ಮುಖ್ಯವಾಗಿದೆ ಏಕೆಂದರೆ ನಿಂಬೆಯು ವಿಟಮಿನ್ ಸಿ ಯಿಂದ ತುಂಬಿರುತ್ತದೆ, ಇದು ನಿಮ್ಮ ದೇಹಕ್ಕೆ (Body) ದಿನನಿತ್ಯದ ಅಗತ್ಯವಿರುವ ಪೋಷಕಾಂಶವಾಗಿದೆ. ನಮ್ಮ ದೇಹವು ವಿಟಮಿನ್ ಸಿ ಅನ್ನು ಸಂಗ್ರಹಿಸುವುದಿಲ್ಲ ಅಥವಾ ಉತ್ಪಾದಿಸುವುದಿಲ್ಲ, ಆದ್ದರಿಂದ ವಿಟಮಿನ್ ಸಿ ದೈನಂದಿನ ಸೇವನೆಯು ಉತ್ತಮ ಆರೋಗ್ಯ (Health) ಮತ್ತು ದೀರ್ಘಾಯುಷ್ಯಕ್ಕೆ ಒಳ್ಳೆಯದು.
ನಿಂಬೆಹಣ್ಣು ಹೆಚ್ಚು ಕಾಲ ಫ್ರೆಶ್ ಅಗಿಡಲು ಈ ಟಿಪ್ಸ್ ಫಾಲೋ ಮಾಡಿ!
ನಿಂಬೆ ರಸವನ್ನು ಬಿಸಿ ಆಹಾರಕ್ಕೆ ಸೇರಿಸಲೇಬೇಡಿ
ವಿಟಮಿನ್ ಸಿ ಯ ನಿಯಮಿತ ಬಳಕೆ ಅಗತ್ಯ ಉತ್ಕರ್ಷಣ ನಿರೋಧಕ ಪೋಷಕಾಂಶ, ರೋಗನಿರೋಧಕ ಶಕ್ತಿ, ಕಬ್ಬಿಣದ ಹೀರಿಕೊಳ್ಳುವಿಕೆ, ಮೂಳೆ ಆರೋಗ್ಯ, ಚರ್ಮ, ಕೂದಲು (Hair) ಮತ್ತು ಕಣ್ಣುಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಆದರೆ ನಿಂಬೆ ರಸವನ್ನು ಬಿಸಿ ಆಹಾರಕ್ಕೆ ಸೇರಿಸಿ ತಿನ್ನೋದ್ರಿಂದ ಆರೋಗ್ಯ ಸಮಸ್ಯೆಗಳು (Health problem) ಕಾಡಬಹುದು. ಪೌಷ್ಟಿಕತಜ್ಞ ಜೂಹಿ ಕಪೂರ್ ಪ್ರಕಾರ, ಹಬೆಯಾಡುವ ಬಿಸಿ ಭಕ್ಷ್ಯಗಳಲ್ಲಿ ನಿಂಬೆ ರಸವನ್ನು ಹಾಕುವುದನ್ನು ತಪ್ಪಿಸಬೇಕು ಎಂದು ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಕೆಲವು ಜನರು ನಿಂಬೆಯ (Lemon) ಕಟುವಾದ ಪರಿಮಳವನ್ನು ಆನಂದಿಸುತ್ತಾರೆ ಮತ್ತು ಆಗಾಗ್ಗೆ ತಮ್ಮ ಊಟಕ್ಕೆ ನಿಂಬೆ ರಸವನ್ನು ಸೇರಿಸುತ್ತಾರೆ. ಭಕ್ಷ್ಯಕ್ಕೆ ಅಥವಾ ಇನ್ನೂ ಅಡುಗೆ ಮಾಡುವಾಗ ಅಥವಾ ಬಿಸಿಯಾಗಿದ್ದಾಗ ಆಹಾರಕ್ಕೆ (Food) ನಿಂಬೆ ರಸವನ್ನು ಸೇರಿಸಿಬಿಡುತ್ತಾರೆ. ನೀವು ಸಹ ಹಾಗೇ ಮಾಡುತ್ತಿದ್ದೀರಾ ? ಹಾಗಿದ್ರೆ ಅದ್ರಿಂದ ಎಷ್ಟೊಂದು ತೊಂದ್ರೆಯಾಗುತ್ತೆ ಅನ್ನೋದನ್ನು ತಿಳ್ಕೊಳ್ಳಿ.
ಪೌಷ್ಟಿಕಾಂಶವು ಶಾಖದಿಂದ ಸುಲಭವಾಗಿ ನಾಶವಾಗುತ್ತದೆ
'ವಿಟಮಿನ್ ಸಿ ಅತ್ಯಂತ ಶಾಖ-ಸೂಕ್ಷ್ಮವಾಗಿದೆ. ಹೀಗಾಗಿ ಆಹಾರಕ್ಕೆ ನಿಂಬೆ ರಸ ಸೇರಿಸುವುದರಿಂದ ಪೌಷ್ಟಿಕಾಂಶವು ಶಾಖದಿಂದ ಸುಲಭವಾಗಿ ನಾಶವಾಗುತ್ತದೆ ಎಂದು ಗಮನಿಸಬೇಕು. ಇದಕ್ಕಾಗಿಯೇ ನೀವು ಇನ್ನೂ ಬಿಸಿಯಾಗಿರುವ ಅಥವಾ ಇನ್ನೂ ಉರಿಯಲ್ಲಿ ಬೇಯಿಸುವ ಆಹಾರದ ಮೇಲೆ ನಿಂಬೆ ರಸವನ್ನು ಹಾಕಬಾರದು. ಈ ಅಭ್ಯಾಸವು (Habit) ನಿಂಬೆಯಿಂದ ವಿಟಮಿನ್ ಸಿ ನಾಶವಾಗಲು ಕಾರಣವಾಗುತ್ತದೆ ಮತ್ತು ನೀವು ಪೂರ್ಣ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ' ಎಂದು ಜೂಹಿ ಕಪೂರ್ ಹೇಳಿದ್ದಾರೆ.
ಫ್ರಿಡ್ಜಲ್ಲಿ ನಿಂಬೆ ಹಣ್ಣನ್ನು ಇಡಬಹುದಾ, ಡೌಟಿಗಿಲ್ಲಿದೆ ಉತ್ತರ
ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯ, ಆಹಾರ ತಂತ್ರಜ್ಞಾನ ಮತ್ತು ಪೋಷಣೆವಿಭಾಗದ ಮುಖ್ಯಸ್ಥ ಡಾ.ಸೌಂದರ್ ಕೌರ್, ವಿಟಮಿನ್ ಸಿ ಯ ಉತ್ತಮ ಮೂಲವಾಗಿರುವ ನಿಂಬೆಯನ್ನು ಊಟದಲ್ಲಿ ಸೇರಿಸಿದಾಗ ಇದು ಕಬ್ಬಿಣವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. ಆದರೆ, 'ವಿಟಮಿನ್ ಸಿ ಅಥವಾ ಆಸ್ಕೋರ್ಬಿಕ್ ಆಮ್ಲವು ತಾಪಮಾನ ಮತ್ತು ಬೆಳಕಿನ ಸೂಕ್ಷ್ಮ ವಿಟಮಿನ್ ಆಗಿದೆ. C ಜೀವಸತ್ವದ ಅವನತಿಯು 30 ° C ಗಿಂತ ಕಡಿಮೆ ತಾಪಮಾನದಲ್ಲಿ ಸಂಭವಿಸಬಹುದು ಮತ್ತು ಇದು ಒಡ್ಡುವಿಕೆಯ ಸಮಯವನ್ನು ಅವಲಂಬಿಸಿ 85-95 ° C ವರೆಗಿನ ತಾಪಮಾನದಲ್ಲಿ ಅತ್ಯಧಿಕವಾಗಿರುತ್ತದೆ. ಈ ವಿಟಮಿನ್ ನೀರಿನಲ್ಲಿ ಕರಗುತ್ತದೆ ಮತ್ತು ಸಾಮಾನ್ಯವಾಗಿ ಅಡುಗೆ ನೀರಿನಲ್ಲಿ ಸೇರಿಕೊಳ್ಳುತ್ತದೆ. ಬಿಸಿ ಆಹಾರದ ಮೇಲೆ ನಿಂಬೆ ರಸವನ್ನು ಹಾಕುವುದರಿಂದ ವಿಟಮಿನ್ ಮತ್ತು ಅದರ ಎಂಜೈಮ್ಯಾಟಿಕ್ ಚಟುವಟಿಕೆಯನ್ನು ನಾಶಪಡಿಸಬಹುದು' ಎಂದು ಕಪೂರ್ ಮಾಹಿತಿ ಹಂಚಿಕೊಂಡಿದ್ದಾರೆ.