ಸೀರೆಯಲ್ಲಿ ಗುಂಡಮ್ಮನಂತೆ ಕಾಣ್ತೀರಾ? ಹೊಟ್ಟೆ ಮರೆಮಾಚಿ ಸ್ಲಿಮ್ ಆಗಿ ಕಾಣಲು ಹೀಗೆ ಮಾಡಿ
ನಟಿಯರು ಸೀರೆಯಲ್ಲಿ ಸ್ಲಿಮ್ ಮತ್ತು ಸುಂದರವಾಗಿ ಕಾಣಲು ಕೆಲವು ವಿಶೇಷ ಟಿಪ್ಸ್ ಅನುಸರಿಸುತ್ತಾರೆ. ಈ ಸರಳ ತಂತ್ರಗಳು ನಿಮ್ಮನ್ನು ಸೀರೆಯಲ್ಲಿ ಹೆಚ್ಚು ಆಕರ್ಷಕವಾಗಿ ಮತ್ತು ನೀಳವಾಗಿ ಕಾಣುವಂತೆ ಮಾಡುತ್ತವೆ.

ನಟಿಯರು ಫಾಲೋ ಮಾಡುವ ಸೀರೆ ಟಿಪ್ಸ್
ಸೀರೆ ನಮ್ಮ ದೇಶದ ಸಾಂಪ್ರದಾಯಿಕ ಉಡುಗೆ. ಹಬ್ಬ, ಪೂಜೆ, ಮದುವೆ ಸೇರಿದಂತೆ ಯಾವುದೇ ಸಮಾರಂಭ ಬಂದರೂ ಮಹಿಳೆಯರ ಮೊದಲ ಆಯ್ಕೆ ಸೀರೆಯಾಗಿರುತ್ತದೆ. ಆದ್ರೆ ಸೀರೆ ಧರಿಸಿದ ನಂತರ ಕೆಲವರು ಹೆವಿಯಾಗಿ ಕಾಣಿಸುತ್ತೇವೆ ಎಂದು ಭಾವಿಸುತ್ತಾರೆ. ನಟಿಯರು, ಮಾಡೆಲ್‌ಗಳು ಸೀರೆ ಧರಿಸಿದ್ರೆ ಮತ್ತಷ್ಟು ಸ್ಲಿಮ್ ಆಗಿ ಕಾಣಿಸುತ್ತಾರೆ. ಇದಕ್ಕೆ ನಟಿಯರು ಕೆಲವೊಂದು ಟಿಪ್ಸ್ ಫಾಲೋ ಮಾಡ್ತಾರೆ. ಇದರಿಂದ ನಟಿಯರು ಸಹಜವಾಗಿ ಬಳಕುವ ಮಿಂಚಿನಂತೆ ಕಾಣುತ್ತಾರೆ. ನಟಿಯರು ಅನುಸರಿಸುವ ಪ್ರಮುಖ ಟಿಪ್ಸ್ ಇಲ್ಲಿವೆ.

ಪೇಟಿಕೋಟ್ ಆಯ್ಕೆ
ಸೀರೆಯಲ್ಲಿ ಸುಂದರವಾಗಿ ಕಾಣಬೇಕಾದ್ರೆ ಪೇಟಿಕೋಟ್ (ಲಂಗ) ಆಯ್ಕೆಯೂ ಪ್ರಮುಖವಾಗಿರುತ್ತದೆ. ಸಾಮಾನ್ಯ ಪೇಟಿಕೋಟ್ ಧರಿಸಿದ್ರೆ ಸೀರೆ ಸರಿಯಾಗಿ ಸೆಟ್ ಆಗಲ್ಲ. ಹಾಗಾಗಿ ಮಾರುಕಟ್ಟೆಯಲ್ಲಿ ಸಿಗುವ ಶೇಪ್ ಪೇಟಿಕೋಟ್ ಆಯ್ಕೆ ಮಾಡಿಕೊಳ್ಳಿ. ಈ ಪೇಟಿಕೋಟ್‌ಗಳು ನಿಮ್ಮ ದೇಹಕ್ಕೆ ಪರ್ಫೆಕ್ಟ್ ಶೇಪ್ ನೀಡುತ್ತವೆ. ಇದರಿಂದ ನಿಮ್ಮ ಟಮ್ಮಿ ಮತ್ತು ವೆಸ್ಟ್ ಸ್ಲಿಮ್ ಆಗಿ ಕಾಣುತ್ತದೆ.
ಸೀರೆಯ ಮೆಟಿರಿಯಲ್
ಸ್ಲಿಮ್ ಆಗಿ ಕಾಣಿಸಬೇಕಾದ್ರೆ ಸೀರೆಯ ಮೆಟಿರೀಯಲ್ ಮುಖ್ಯವಾಗುತ್ತದೆ. ಶಿಫಾನ್ ಅಥವಾ ಜಾರ್ಜೆಟ್ ಸೀರೆಗಳು ನಿಮ್ಮ ದೇಹವನ್ನು ನೀಳವಾಗಿ ಕಾಣುವಂತೆ ಮಾಡುತ್ತವೆ. ಹೆವಿ ಸೀರೆಗಳ ಬದಲಾಗಿ ಇವುಗಳನ್ನು ಆಯ್ಕೆ ಮಾಡಿಕೊಳ್ಳಿ. ಈ ಸೀರೆಗಳು ನ್ಯಾಚುರಲ್ ಆಗಿ ದೇಹದ ಮೇಲೆ ಫಾಲಿಂಗ್ ಆಗಿರೋದರಿಂದ ಸ್ಲಿಮ್ ಲುಕ್ ನೀಡುತ್ತವೆ. ಚಿಕ್ಕ ಬಾರ್ಡರ್ ಸೀರೆಗಳು ನೀವು ಎತ್ತರವಾಗಿ ಕಾಣುವಂತೆ ಮಾಡುತ್ತವೆ.
ಬ್ಲೌಸ್
ಸೀರೆ ಜೊತೆ ಧರಿಸುವ ಬ್ಲೌಸ್‌ಗಳು ನಿಮ್ಮನ್ನು ಸ್ಲಿಮ್ ಆಗಿ ಕಾಣುವಂತೆ ಮಾಡುತ್ತವೆ. ಕೊಂಚ ಡೀಪ್ ನೆಕ್ ಅಥವಾ ಲಾಂಗ್ ಲೆಂಥ್ ಬ್ಲೌಸ್‌ಗಳು ನಿಮ್ಮನ್ನು ಸುಂದರವಾಗಿ ಕಾಣುವಂತೆ ಮಾಡುತ್ತವೆ. ಬ್ಲೌಸ್ ಡಿಸೈನ್ಸ್ ಸಿಂಪಲ್ ಆದಷ್ಟು ಹೆಚ್ಚು ಆಕರ್ಷಕವಾಗಿಸುತ್ತವೆ. ನಿಮ್ಮದು ದುಂಡನೆಯ ದೇಹವಾಗಿದ್ರೆ ಲಾಂಗ್ ಲೆಂಥ್ ಅಂದ್ರೆ ಸೊಂಟ ಮರೆಮಾಚುವಂತಹ ಶರ್ಟ್ ಅಥವಾ ಟಾಪ್ ರೀತಿಯ ಬ್ಲೌಸ್ ಧರಿಸಿ.
ಸೀರೆಯ ನೆರಿಗೆ
ಸೀರೆಯ ನೆರಿಗೆಯನ್ನು ಫ್ಲ್ಯಾಟ್ ಆಗಿ ಮಾಡಬೇಕು. ಹಾಗೆಯೇ ಪಲ್ಲು ಸೆಟ್ ಮಾಡಿಕೊಳ್ಳುವಾಗಲೂ ನೆರಿಗೆಯನ್ನು ಸರಿಯಾಗಿ ಸೆಟ್ ಮಾಡಿಕೊಳ್ಳಬೇಕು. ಈ ರೀತಿಯ ನೇರ ಮತ್ತು ಕಡಿಮೆ ನೆರಿಗೆಗಳು ನಿಮ್ಮ ಎತ್ತರವನ್ನು ಮರೆ ಮಾಡುತ್ತವೆ. ಕುಳ್ಳಗಿರೋ ಮಹಿಳೆಯರು ಈ ರೀತಿ ಪ್ಲೇಟ್ ಮಾಡ್ತಾರೆ.
ಇದನ್ನೂ ಓದಿ: ಬನಾರಸಿ, ರೇಷ್ಮೆಯಂಥ ಹೆವಿ ಸೀರೆಗಳನ್ನು ಡ್ರೈ ಕ್ಲೀನ್‌ಗೆ ಕೊಡದೇ ಮನೆಯಲ್ಲೇ ತೊಳೆಯುವ ವಿಧಾನ
ಪಿನ್
ಮೊದಲ ಬಾರಿಗೆ ನೀವು ಸೀರೆ ಧರಿಸುತ್ತಿದ್ರೆ ಸರಿಯಾಗಿ ಪಿನ್‌ಗಳನ್ನು ಅಡ್ಜಸ್ಟ್ ಮಾಡಿಕೊಳ್ಳಿ. ನಿಮ್ಮ ಬೆಲ್ಲಿ ಫ್ಯಾಟ್ ಕಾಣದಂತೆ ಸೀರೆಯನ್ನು ಬ್ಲೌಸ್ ಜೊತೆ ಪಿನ್ ಮಾಡಿಕೊಳ್ಳಬೇಕು. ಈ ರೀತಿ ಮಾಡೋದರಿಂದ ಸೀರೆಯ ಲುಕ್ ಹೆಚ್ಚಾಗುತ್ತದೆ. ಸೀರೆ ಧರಿಸದ್ಮೇಲೆ ಲಾಂಗ್ ಇಯರಿಂಗ್ಸ್, ಸಿಂಪಲ್ ಕಡ, ಒಂದು ಎಳೆಯ ಸರ, ಒಂದೇ ಒಂದು ಫಿಂಗರ್ ರಿಂಗ್ ಸಹ ನಿಮ್ಮನ್ನು ಅತ್ಯಾಕರ್ಷವಾಗಿ ಕಾಣುವಂತೆ ಮಾಡುತ್ತವೆ.
ಇದನ್ನೂ ಓದಿ: ಅಸಲಿ ಬನಾರಸಿ ಸೀರೆ ಗುರುತಿಸುವುದು ಹೇಗೆ? ಖರೀದಿಸುವ ಮುನ್ನ ಈ 7 ವಿಷ್ಯ ಮರೆಯದೇ ಪರೀಕ್ಷಿಸಿ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

