ಉತ್ತರ ಪ್ರದೇಶದ ಬರೇಲಿಯಲ್ಲಿ, ಇಬ್ಬರು ಅಪ್ರಾಪ್ತ ಮುಸ್ಲಿಂ ಬಾಲಕಿಯರು ತಮ್ಮ ಹಿಂದೂ ಸ್ನೇಹಿತೆಯನ್ನು ಮನೆಗೆ ಕರೆದು, ಪಾನೀಯದಲ್ಲಿ ಮತ್ತು ಬರುವ ದ್ರವ ಬೆರೆಸಿ ಪ್ರಜ್ಞೆ ತಪ್ಪಿಸಿದ್ದಾರೆ. ನಂತರ, ಆ ಬಾಲಕಿಯರ ಸಹೋದರ ಆಕೆಯ ಮೇಲೆ ಅತ್ಯಾ*ಚಾರ ಎಸಗಿ, ಅದನ್ನು ವಿಡಿಯೋ ಮಾಡಿ, ಇಸ್ಲಾಂಗೆ ಮತಾಂತರಗೊಳ್ಳುವಂತೆ ಬೆದರಿಕೆ ಹಾಕಿದ್ದಾನೆ.
'ದಿ ಕೇರಳ ಸ್ಟೋರಿ'ಗಿಂತಲೂ ಭಯಾನಕ ಎನ್ನುವಂಥ ಘಟನೆಯೊಂದು ಉತ್ತರ ಪ್ರದೇಶದ ಬರೇಲಿಯಲ್ಲಿ ಕೆಲವು ದಿನಗಳ ಹಿಂದೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ. ಆದರೆ ಶಾಕಿಂಗ್ ಎನ್ನುವಂತೆ ತಮ್ಮ ಹಿಂದೂ ಸ್ನೇಹಿತೆಯನ್ನು ಬಲೆಗೆ ಹಾಕಿಕೊಂಡವರು 10ನೇ ಕ್ಲಾಸ್ ಬಾಲಕಿರು. ಅರ್ಥಾತ್ 15-16 ವಯಸ್ಸಿನ ಬಾಲಕಿಯರು ಇವರು! ಕಾಲೇಜಿನ ಫಂಕ್ಷನ್ ಆದ ಬಳಿಕ, ಈ ಬಾಲಕಿಯರು ತಮ್ಮ ಹಿಂದೂ ಸ್ನೇಹಿತೆಯನ್ನು ಮನೆಗೆ ಆಹ್ವಾನಿಸಿದ್ದಾರೆ. ಆಕೆ ಮನೆಗೆ ಹೋಗಬೇಕು ಎಂದು ಕೇಳಿದರೂ, ಧರ್ಮ ಬದಲಾದರೇನು? ನಾವೆಲ್ಲಾ ಸಿಸ್ಟರ್ಸ್ ಇದ್ದ ಹಾಗೆ ಅಲ್ವಾ, ನಮ್ಮ ಮನೆಗೆ ಬಾರೆ ಕಣೆ, ಚೆನ್ನಾಗಿರುತ್ತೆ ಎಂದು ಅವಳನ್ನು ಪುಸಲಾಯಿಸಿ ಕರೆದುಕೊಂಡು ಹೋದರು.
ಆಗಿದ್ದೇ ಬೇರೆ
ಅಲ್ಲಿ ಆ ಬಾಲಕಿಯರ ಅಪ್ಪ, ಅಮ್ಮ, ಅಣ್ಣ ಎಲ್ಲರೂ ಇದ್ದರು. ಈ ಬಾಲಕಿಗೆ ಕುಡಿಯಲು ಪಾನೀಯ ನೀಡಲಾಯಿತು. ಕೋಲ್ಡ್ ಡ್ರಿಂಕ್ಸ್ ಎಂದು ಅವಳು ಸ್ವಲ್ಪವೂ ಡೌಟ್ ಪಡದೇ ಕುಡಿದುಬಿಟ್ಟಳು. ಆದರೆ ಅದು ಬರಿ ಕೋಲ್ಡ್ ಡ್ರಿಂಕ್ಸ್ ಆಗಿರಲಿಲ್ಲ. ಅದರಲ್ಲಿ ಮತ್ತು ಬರುವ ಮದ್ಯ ಸೇರಿಸಲಾಗಿತ್ತು. ಬಾಲಕಿ ಪ್ರಜ್ಞೆ ತಪ್ಪಿ ಬಿದ್ದಳು. ಮುಂದೆ ನಡೆದದ್ದು ಎಲ್ಲವೂ ಪ್ರೀಪ್ಲ್ಯಾನ್ಡ್. ಈ ಫೋಟೋದಲ್ಲಿ ಅಮಾಯಕನಂತೆ ಕಾಣುತ್ತಿರುವ ಯುವಕ ಅರ್ಥಾತ್ ಅದೇ ಸಿಸ್ಟರ್ಸ್ ಎಂದು ಹೇಳಿಕೊಂಡ ಬಾಲಕಿಯರ ಬ್ರದರ್, ಆ ಹಿಂದೂ ಬಾಲಕಿಯ ಮೇಲೆ ಎರಗಿದ. ಎಲ್ಲರೂ ಸೇರಿ ವಿಡಿಯೋ ಮಾಡಿದರು!
ಮತಾಂತರಕ್ಕೆ ಒತ್ತಾಯ
ಬಾಲಕಿಗೆ ಪ್ರಜ್ಞೆ ಬಂದ ಬಳಿಕ, ಆಕೆಯನ್ನು ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸಲಾಯಿತು. ಆಕೆ ಒಪ್ಪದಿದ್ದಾಗ, ಆ ವಿಡಿಯೋ ತೋರಿಸಿ ಮತಾಂತರ ಆಗದೇ ಹೋದರೆ ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಬೆದರಿಕೆ ಹಾಕಲಾಯಿತು. ಇದನ್ನೇನಾದರೂ ಮನೆಯಲ್ಲಿ ಅಥವಾ ಪೊಲೀಸರಿಗೆ ಹೇಳಿದರೆ ಸೋಷಿಯಲ್ ಮೀಡಿಯಾದಲ್ಲಿ ರೇ*ಪ್ ವಿಡಿಯೋ ವೈರಲ್ ಮಾಡುತ್ತೇವೆ ಎಂದರು. ಮಗಳು ಮನೆಗೆ ಬಾರದೇ ಇದ್ದಾಗ, ಎಲ್ಲಾ ಕಡೆ ಹುಡುಕಿ ಇನ್ನೇನು ಪೊಲೀಸ್ ಕಂಪ್ಲೇಂಟ್ ಕೊಡಬೇಕು ಎಂದು ಹೋದಾಗ, ಈ ವಿಷಯ ತಿಳಿದ ಆ ಕುಟುಂಬದವರು ಬಾಲಕಿಯನ್ನು ಎಲ್ಲೋ ಎಸೆದು ಹೋಗಿದ್ದಾರೆ.
ಪೊಲೀಸ್ ಠಾಣೆಗೆ ದೂರು
ಅಪ್ಪ-ಅಮ್ಮನಿಗೆ ಬಾಲಕಿ ಸಿಕ್ಕು ವಿಷಯ ತಿಳಿಸಿದ್ದಾಳೆ. ಮರ್ಯಾದೆಗೆ ಅಂಜುತ್ತಾ ಕುಳಿತರೆ ತನ್ನ ಮಗಳಿಗೆ ನ್ಯಾಯ ಸಿಗುವುದಿಲ್ಲ ಎಂದು ಅರಿತ ಅಪ್ಪ-ಅಮ್ಮ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲು ಮಾಡಿದರು. ಕೊನೆಗೆ ಈ ಯುವಕನನ್ನು ಅರೆಸ್ಟ್ ಮಾಡಲಾಗಿದೆ. ಇವನ ವಿಡಿಯೋ ಒಮ್ಮೆ ನೋಡಿಬಿಡಿ. ಏನೂ ಆಗದೇ ಇದ್ದವರ ರೀತಿ, ನನ್ನ ಹೆಸರು ಮೊಹಮ್ಮದ್ ಅನಸ್. ನನ್ನ ಅಪ್ಪನ ಹೆಸರು... ಇನ್ನು ಎಲ್ಲಾ ಹೆಣ್ಣುಮಕ್ಕಳನ್ನು ನನ್ನ ಸಹೋದರಿಯರಂತೆ ಕಾಣುತ್ತೇನೆ ಎಂದಿದ್ದಾನೆ.
ಯುವಕ ಅರೆಸ್ಟ್
ನಂತರ, ನವಾಬ್‌ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಮುಖ ಅಪರಾಧಿ ಸೇರಿದಂತೆ 5 ವ್ಯಕ್ತಿಗಳ ವಿರುದ್ಧ ಅತ್ಯಾ*ಚಾರ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆ, ಪಿತೂರಿ, ಬೆದರಿಕೆ ಮತ್ತು ಮಾಹಿತಿ ತಂತ್ರಜ್ಞಾನ (IT) ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಥಮ ಮಾಹಿತಿ ವರದಿ (FIR) ಸಲ್ಲಿಸಲಾಯಿತು. ಈ ವಿಷಯವು ಪ್ರಸ್ತುತ ತನಿಖೆಯಲ್ಲಿದೆ. ತನಿಖೆ ಏನಾಯಿತೋ ಗೊತ್ತಿಲ್ಲ. ಒಬ್ಬನನ್ನು ಅರೆಸ್ಟ್ ಮಾಡಿದ್ದಾರೆ. ಆದರೆ, ಆ ಇಬ್ಬರು ಬಾಲಕಿಯರು ಮತ್ತು ಇದಕ್ಕೆ ಸಹಕರಿಸಿದ ಅಪ್ಪ-ಅಮ್ಮ ಎಲ್ಲರೂ ಕ್ಷೇಮವಾಗಿ ಮನೆಯಲ್ಲಿ ಇದ್ದಾರೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಬಂದಿದೆ. CrimeTak.in ನಲ್ಲಿ ಇವನ ವಿಡಿಯೋ ಹಾಕಲಾಗಿದೆ. ನೋಡಿಬಿಡಿ. ಎಷ್ಟು ಅಮಾಯಕ ಎಂದು!


