ಹುಡುಗರ ಹೃದಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಟಾಕ್ಸಿಕ್ ಗ್ಲಾಮರ್ ಗೊಂಬೆ ಯಾರು?
ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ನೋಡುಗರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಟೀಸರ್‌ನಲ್ಲಿ ಯಶ್ ಜೊತೆ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ಗ್ಲಾಮರ್ ನಟಿ ಯಾರು ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಟಾಕ್ಸಿಕ್ ಟೀಸರ್
ಚಂದನವನದ ಗೂಗ್ಲಿ ಸ್ಟಾರ್, ರಾಜಾಹುಲಿ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಬಹುತಾರಾಗಣವನ್ನು ಹೊಂದಿರುವ ಟಾಕ್ಸಿಕ್ ಟೀಸರ್ ನೋಡುತ್ತಿದ್ದವರು ಪದೇ ಪದೇ ನೋಡುತ್ತಿದ್ದಾರೆ. 2.51 ನಿಮಿಷದ ಟೀಸರ್ ನೋಡುಗರಲ್ಲಿ ತೀವ್ರ ಕುತೂಹಲವನ್ನುಂಟು ಮಾಡಿದೆ.
ಟಾಕ್ಸಿಕ್ ಸಿನಿಮಾದ ನಟಿಯರು
ಕಳೆದೊಂದು ವಾರದಿಂದ ಟಾಕ್ಸಿಕ್ ಸಿನಿಮಾದ ನಟಿಯರ ಲುಕ್ ಮತ್ತು ಪಾತ್ರದ ಹೆಸರನ್ನು ಚಿತ್ರತಂಡ ರಿವೀಲ್ ಮಾಡಿಕೊಂಡು ಬರುತ್ತಿತ್ತು. ಟಾಕ್ಸಿಕ್‌ನಲ್ಲಿ ತಾರಾ ಸುತಾರಿಯಾ, ರುಕ್ಮಿಣಿ ವಸಂತ್, ನಯನತಾರಾ, ಕಿಯಾರಾ ಅದ್ವಾನಿ, ಹುಮಾ ಖರೇಷಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆದರೆ ಟೀಸರ್‌ನಲ್ಲಿ ಕಾಣಿಸಿಕೊಂಡಿರುವ ಮಾದಕ ಚೆಲುವೆ ಯಶ್ ಜೊತೆಯಲ್ಲಿ ಸದ್ದು ಮಾಡುತ್ತಿದ್ದಾರೆ.
ಟೀಸರ್‌ನಲ್ಲಿ ಹಸಿಬಿಸಿ ದೃಶ್ಯ
ಟೀಸರ್‌ನಲ್ಲಿ ಹಸಿಬಿಸಿ ದೃಶ್ಯವೊಂದು ಕಾಣಿಸುತ್ತಿದೆ. ಯಶ್ ಜೊತೆಯಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ಗ್ಲಾಮರ್ ಗೊಂಬೆ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಟೀಸರ್ ಬಿಡುಗಡೆಯಾದ ಬಳಿಕ ಯಾರು ಈ ಚೆಲುವೆ ಎಂದು ನೆಟ್ಟಿಗರು ಹುಡುಕಾಡುತ್ತಿದ್ದರು.
ಗ್ಲಾಮರ್ ಗೊಂಬೆಯ ಹೆಸರು ನತಾಲಿ ಬರ್ನ್ Natalie Burn
ಟಾಕ್ಸಿಕ್ ಗ್ಲಾಮರ್ ಗೊಂಬೆಯ ಹೆಸರು ನತಾಲಿ ಬರ್ನ (Natalie Burn). ಉಕ್ರೇನ್-ಅಮೆರಿಕನ್ ನಟಿಯಾಗಿರುವ ನತಾಲಿ ಮಾಡೆಲ್ ಆಗಿಯೂ ಗುರುತಿಸಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂ ಪ್ರೋಫೈಲ್‌ನಲ್ಲಿ ದಿ ಆಕ್ಟರ್ಸ್ ಸ್ಟುಡಿಯೋ & ದಿ ಟೆಲಿವಿಷನ್ ಅಕಾಡೆಮಿ ಸದಸ್ಯೆ ಮತ್ತು ನಟಿ ಎಂದು ಬರೆದುಕೊಂಡಿದ್ದಾರೆ. ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿಯೂ ಟಾಕ್ಸಿಕ್ ಟೀಸರ್ ಬಿಡುಗಡೆಯ ಪೋಸ್ಟರ್ ಶೇರ್ ಮಾಡಿಕೊಂಡಿದ್ದಾರೆ.
ನತಾಲಿ ಬರ್ನ್ Natalie Burn
ಕೆಲ ದಿನಗಳ ಹಿಂದೆಯಷ್ಟೇ ಟಾಕ್ಸಿಕ್ ಸಿನಿಮಾದಲ್ಲಿ ನಟಿಸುತ್ತಿರುವ ಮಾಹಿತಿಯನ್ನು ನತಾಲಿ ಹಂಚಿಕೊಂಡಿದ್ದರು. ನತಾಲಿ ಅವರು ಹಲವು ಜನಪ್ರಿಯ ಮ್ಯಾಗ್‌ಜಿನ್‌ಗೆ ರೂಪದರ್ಶಿಯಯಾಗಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: Yash: ಟಾಕ್ಸಿಕ್ ಟೀಸರ್ ನೋಡ್ತಿದ್ದಂತೆ ಗಂಡೈಕ್ಳಳಿಂದ ಶುರುವಾಯ್ತು ಗೂಗಲ್ ಹುಡುಕಾಟ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

