ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಅವರು 2027-28ರ ನಡುವೆ ಯುವ ತೆಲುಗು ನಟ ಮತ್ತು ನಟಿಯೊಬ್ಬರ ಜೀವಕ್ಕೆ ಅಪಾಯವಿದೆ ಎಂದು ಆಘಾತಕಾರಿ ಭವಿಷ್ಯ ನುಡಿದಿದ್ದಾರೆ. ಅವರ ಹೆಸರುಗಳನ್ನು ಬಹಿರಂಗಪಡಿಸದೆ, ಅವರಿಬ್ಬರೂ ಮೇಷ ಅಥವಾ ವೃಶ್ಚಿಕ ರಾಶಿಯವರೆಂದು ಸುಳಿವು ನೀಡಿದ್ದಾರೆ. ಈ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ವಿವಾದಾತ್ಮಕ ಸೆಲೆಬ್ರಿಟಿ ಜ್ಯೋತಿಷಿ ಎಂದೇ ಫೇಮಸ್ ಆಗಿರುವ ವೇಣು ಸ್ವಾಮಿ ಅವರಿಗೆ ವಿವಾದಗಳೇನೂ ಹೊಸತಲ್ಲ. ಇದಾಗಲೇ ಹಲವಾರು ಸೆಲೆಬ್ರಿಟಿಗಳ ಬಗ್ಗೆ ಮಾತನಾಡಿ ವಿವಾದವನ್ನು ಮೈಮೇಲೆ ಎಳೆದುಕೊಂಡವರು ಇವರು. ಇದೀಗ ಎಲ್ಲಕ್ಕಿಂತ ಭಿನ್ನವಾದ, ಭಯಾನಕ ಭವಿಷ್ಯವೊಂದನ್ನು ನುಡಿದಿದ್ದಾರೆ. ವಿಶೇಷವಾಗಿ ತೆಲುಗು ಚಲನಚಿತ್ರೋದ್ಯಮದ ತಾರೆಯರ ಬಗ್ಗೆ ದಿಟ್ಟ ಭವಿಷ್ಯ ನುಡಿಯುವುದಕ್ಕೆ ಹೆಸರುವಾಸಿಯಾಗಿರುವ ವೇಣು ಸ್ವಾಮಿ , ಇಬ್ಬರು ಟಾಲಿವುಡ್ ತಾರೆಯರ ಬಗ್ಗೆ ಆಘಾತಕಾರಿ ಹೇಳಿಕೆಗಳೊಂದಿಗೆ ಮತ್ತೊಮ್ಮೆ ಗಮನ ಸೆಳೆದಿದ್ದಾರೆ.
ಸಂದರ್ಶನವೊಂದರದಲ್ಲಿ ಅವರು, 2027 ಮತ್ತು 2028 ರ ನಡುವೆ ಒಬ್ಬ ಯುವ ತೆಲುಗು ನಟ ಮತ್ತು ಜನಪ್ರಿಯ ನಟಿಯ ಜೀವಕ್ಕೆ ಗಂಭೀರ ಬೆದರಿಕೆ ಎದುರಾಗಬಹುದು ಎಂದು ಹೇಳಿದ್ದಾರೆ. ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಇಬ್ಬರು ಸೆಲೆಬ್ರಿಟಿಗಳ ಗುರುತುಗಳ ಬಗ್ಗೆ ಕುತೂಹಲ ಕೆರಳಿಸಿದ್ದಾರೆ. ಜ್ಯೋತಿಷಿಯ ಪ್ರಕಾರ, ಇಬ್ಬರೂ ತಾರೆಯರು ಪ್ರಸ್ತುತ 45 ಅಥವಾ 46 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಅವರು ಮೊದಲು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು, ಅದು ನಂತರ ಜೀವಕ್ಕೆ ಅಪಾಯಕಾರಿಯಾಗಬಹುದು ಎಂದಿದ್ದಾರೆ. ಯುವ ನಟನ ಬಗ್ಗೆ ಇನ್ನಷ್ಟು ಮಾಹಿತಿ ನೀಡಿದ ಅವರು, ಇವರ ಸಾವು ಆರೋಗ್ಯದ ತೊಂದರೆಗಳಿಂದಾಗಿರಬಹುದು ಅಥವಾ ಕಠಿಣ ಸಂದರ್ಭಗಳಲ್ಲಿ ಆತ್ಮಹತ್ಯೆಯಾಗಿರಬಹುದು ಎಂದು ಹೇಳಿದ್ದಾರೆ.
ಮೇಷ-ವೃಶ್ಚಿಕ ರಾಶಿಯವರು
ಆದಾಗ್ಯೂ, ವೇಣು ಸ್ವಾಮಿ ಅವರ ಹೆಸರುಗಳನ್ನು ಬಹಿರಂಗಪಡಿಸಲಿಲ್ಲ, ಹಾಗೆ ಮಾಡುವುದರಿಂದ ಚಿತ್ರರಂಗದಲ್ಲಿ ಅನಗತ್ಯ ವಿವಾದ ಉಂಟಾಗಬಹುದು ಎಂದು ಹೇಳಿದರು. ಅವರು ಇಬ್ಬರು ಸೆಲೆಬ್ರಿಟಿಗಳು ಮೇಷ ಮತ್ತು ವೃಶ್ಚಿಕ ರಾಶಿಯವರಿಗೆ ಸೇರಿದವರು ಎಂದು ಸುಳಿವು ನೀಡಿದ್ದಾರೆ ಎಂದು ವರದಿಯಾಗಿದೆ, ಇದು ಜನರ ತಲೆಗೆ ಹುಳು ಬಿಟ್ಟಂತಾಗಿದೆ. ಇದು ವೈರಲ್ ಆಗುತ್ತಲೇ ಆನ್‌ಲೈನ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ಬಂದಿವೆ. ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಭವಿಷ್ಯವಾಣಿಯ ಬಗ್ಗೆ ಚಿಂತಿತರಾಗಿದ್ದಾರೆ, ಇತರರು ಇದನ್ನು ವಿವಾದಾತ್ಮಕ ಜ್ಯೋತಿಷಿಯ ಮತ್ತೊಂದು ಪ್ರಚಾರ ತಂತ್ರ ಎಂದು ತಳ್ಳಿಹಾಕಿದ್ದಾರೆ. ವೇಣು ಸ್ವಾಮಿ ಆಗಾಗ್ಗೆ ಸೆಲೆಬ್ರಿಟಿಗಳ ವೈಯಕ್ತಿಕ ಜೀವನ, ವೃತ್ತಿಜೀವನ ಮತ್ತು ಭವಿಷ್ಯದ ಬಗ್ಗೆ ಭವಿಷ್ಯ ನುಡಿಯುತ್ತಾರೆ.
ಸೆಲೆಬ್ರಿಟಿಗಳ ಬಗ್ಗೆ ವೇಣು ಸ್ವಾಮಿ ಅವರ ಭವಿಷ್ಯವಾಣಿಗಳು
ಸೆಲೆಬ್ರಿಟಿ ಸಂಬಂಧಗಳ ಬಗ್ಗೆ ವೇಣು ಸ್ವಾಮಿ ಅವರ ಭವಿಷ್ಯವಾಣಿಗಳಿಗಾಗಿ ಸುದ್ದಿಯಾಗಿರುವುದು ಇದೇ ಮೊದಲಲ್ಲ. ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಬಗ್ಗೆಯೂ ಅವರು ಮಾತನಾಡಿದ್ದರು, ದಂಪತಿ ತಮ್ಮ ಎರಡನೇ ಮಗುವನ್ನು ಸ್ವಾಗತಿಸಿದ ನಂತರ ಅವರ ಮದುವೆಯಲ್ಲಿ ಸವಾಲುಗಳನ್ನು ಎದುರಿಸಬಹುದು ಎಂದು ಹೇಳಿದ್ದರು. ನಟಿ ಸೋನಾಕ್ಷಿ ಸಿನ್ಹಾ ಅವರ ಬಗ್ಗೆಯೂ ಮಾತನಾಡಿದ್ದ ಇವರು, ಇವರ ದಾಂಪತ್ಯ ಜೀವನದಲ್ಲಿ ಏರುಪೇರು ಆಗಲಿದೆ ಎಂದಿದ್ದರು. ಸದ್ಯ ಇದ್ಯಾವುದೀ ಆಗಿಲ್ಲ. ಇದೇ ರೀತಿ ವೇಣುಸ್ವಾಮಿ ಅವರ ಹೇಳಿಕೆಗಳು ನಿಯಮಿತವಾಗಿ ಆನ್‌ಲೈನ್‌ನಲ್ಲಿ ಗಮನ ಸೆಳೆಯುತ್ತಿದ್ದರೂ, ಅವರ ಭವಿಷ್ಯವಾಣಿಗಳು ಹಕ್ಕುಗಳು ಮತ್ತು ಊಹಾಪೋಹಗಳಾಗಿ ಉಳಿದಿವೆ ಮತ್ತು ಅವುಗಳನ್ನು ವಾಸ್ತವಿಕ ಮುನ್ಸೂಚನೆಗಳಾಗಿ ಪರಿಗಣಿಸಬಾರದು ಎನ್ನಲಾಗುತ್ತದೆ.


