ಅಯ್ಯಯ್ಯೋ ರಶ್ಮಿಕಾ, ಇದೇನಮ್ಮಾ? ಕನ್ನಡದ ಮೊದಲ ಆಡಿಷನ್ ವಿಡಿಯೋ ನೋಡಿ ಸುಸ್ತಾದ ಫ್ಯಾನ್ಸ್
'ಕಿರಿಕ್ ಪಾರ್ಟಿ' ಚಿತ್ರಕ್ಕಾಗಿ ರಶ್ಮಿಕಾ ಮಂದಣ್ಣ ನೀಡಿದ್ದ ಮೊದಲ ಆಡಿಷನ್ ವಿಡಿಯೋ ವೈರಲ್ ಆಗಿದೆ. ಇದರಲ್ಲಿ 19 ವರ್ಷದ ರಶ್ಮಿಕಾ ಕನ್ನಡ ಡೈಲಾಗ್ ಹೇಳಲು ಪರದಾಡಿದ್ದು, ಈ ವಿಡಿಯೋ ಅವರ ಸಿನಿ ಪಯಣದ ಆರಂಭವನ್ನು ನೆನಪಿಸುತ್ತದೆ.

ರಶ್ಮಿಕಾ ವಿಡಿಯೋ
ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ (Rashmika Mandanna and Vijaya Devarakonda) ಅವರ ಮದುವೆಯ ಬೆನ್ನಲ್ಲೇ ಇದೀಗ ರಶ್ಮಿಕಾರ ಹಲವು ವಿಡಿಯೋಗಳು ವೈರಲ್ ಆಗುತ್ತಿವೆ.
ಮೊದಲ ಆಡಿಷನ್
ಅದರಲ್ಲಿ ಒಂದು ರಶ್ಮಿಕಾ ಕನ್ನಡದಲ್ಲಿ ಮೊದಲ ಆಡಿಷನ್ ಕೊಟ್ಟಿದ್ದು. ಸಿನಿ ಪ್ರಿಯರಿಗೆ ತಿಳಿದಿರುವಂತೆ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಚಿತ್ರದಿಂದ ಕನ್ನಡದಲ್ಲಿ ಗುರುತಿಸಿಕೊಂಡವರು. ಆ ಸಮಯದಲ್ಲಿ ಅವರಿಗೆ ಆಡಿಷನ್ ಮಾಡಲಾಗಿತ್ತು.
ಡೈಲಾಗ್ಗಾಗಿ ಪರದಾಟ
ಅದರಲ್ಲಿ ರಶ್ಮಿಕಾ ಕನ್ನಡದಲ್ಲಿ ಮಾತನಾಡಲು ಟ್ರೈ ಮಾಡಿದ್ದರು. ಆದರೆ ಅವರಿಗೆ ಆಗ ಕನ್ನಡ ಸರಿಯಾಗಿ ಬರುತ್ತಿಲ್ಲದ ಕಾರಣ ಹೇಗೇಗೋ ಮಾತನಾಡಿದ್ದರು. ನನ್ನ ಹೆಸರು ರಶ್ಮಿಕಾ ಮಂದಣ್ಣ ಎಂದು ಹೇಳುತ್ತಲೇ ಕೊನೆಗೆ ಕೊಟ್ಟ ಡೈಲಾಗ್ ಹೇಳಲಾಗದೇ ಪರದಾಡಿದ್ದರು.
ಹಾಳಾದೋನ ಲವ್ ಮಾಡಿಬಿಟ್ಟೆ
ಅದರ ವಿಡಿಯೋ ಈಗ ವೈರಲ್ ಆಗಿದೆ. ಈ ಆಡಿಷನ್ನಲ್ಲಿ ನಟಿ ಹೇಳುವಂಥದ್ದೇನೂ ಮಾಡಿರಲಿಲ್ಲ. ಹಾಳೋದೋನ ಲವ್ ಮಾಡಿಬಿಟ್ಟೆ ಎನ್ನುವ ಡೈಲಾಗ್ ಕೂಡ ಹೇಳಿದ್ದಾರೆ ನಟಿ. ಕೊನೆಗೆ ಡಾನ್ಸ್ ಮಾಡಲು ಹೇಳಿದಾಗ, ಸೊಂಟ ಬಳುಕಿಸಿದ್ದರು ನಟಿ.
19ನೇ ವಯಸ್ಸಿನ ವಿಡಿಯೋ
ಇದರಲ್ಲಿ ನಟಿ, ಅಂದಹಾಗೆ ರಶ್ಮಿಕಾ ಮಂದಣ್ಣ ತಮ್ಮ 19 ನೇ ವಯಸ್ಸಿಗೆ ಈ ಆಡಿಷನ್ ಕೊಟ್ಟಿದ್ದಾರೆ. ಹೆಸರು ರಶ್ಮಿಕಾ ಅಂತಲೇ ಹೇಳಿದ್ದಾರೆ. 5.5 ಅಡಿ ಎತ್ತರ ಅಂತಲೂ ಹೇಳಿಕೊಂಡಿದ್ದಾರೆ. ಆದರೆ ಡೈಲಾಗ್ ಕೊಟ್ಟು ಹೇಳು ಅಂದರೆ ಕನ್ನಡ ಪದವನ್ನು ಉಚ್ಚರಿಸಲಾಗದೇ ಸುಸ್ತು ಹೊಡೆದಿದ್ದಾರೆ.
ಬೇರೆ ಭಾಷೆಗಳ ಬಾಗಿಲು
ಅದಾದ ಮೇಲೆ ರಶ್ಮಿಕಾಗೆ ಬೇರೆ ಭಾಷೆಗಳ ಬಾಗಿಲು ತೆರೆದದ್ದು ಗೊತ್ತೇ ಇದೆ. ಇದೀಗ ಆಕೆ ಪ್ಯಾನ್ ಇಂಡಿಯಾ ಮೀರಿ ಹೋಗಿದ್ದಾರೆ. ಎಂಥ ಪಾತ್ರ ಕೊಟ್ಟರೂ ನಟಿಸುವ ಸಾಮರ್ಥ್ಯ ಹೊಂದಿದ್ದಾರೆ. ಕನ್ನಡವನ್ನೂ ತಕ್ಕ ಮಟ್ಟಿಗೆ ಚೆನ್ನಾಗಿಯೇ ಮಾತನಾಡುತ್ತಾರೆ. ಇದರ ಹೊರತಾಗಿಯೂ ಕನ್ನಡದ ಬಗ್ಗೆ ಅಸಡ್ಡೆ ತೋರಿ ಕನ್ನಡಿಗರ ಕೋಪಕ್ಕೆ ಗುರಿಯಾಗಿದ್ದೂ ಇದೆ. ಒಟ್ಟಿನಲ್ಲಿ ರಶ್ಮಿಕಾ ಮಂದಣ್ಣ ಸದ್ಯ ಸೋಷಿಯಲ್ ಮೀಡಿಯಾ ಸ್ಟಾರ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

