ವಿವಾದ ಎದ್ದು ಪರಿಸ್ತಿತಿ ಕೈಮೀರುತ್ತಿದ್ದಂತೆ ಎಚ್ಚೆತ್ತುಕೊಂಡ ಪೆದ್ದಿ ಸಿನಿಮಾ ನಿರ್ದೇಶಕ ಬುಚ್ಚಿಬಾಬು ಸನಾ ಈಗ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ಕಥೆಯ ಡಿಮ್ಯಾಂಡ್ ಹಾಗೂ ಹಳ್ಳಿಯ ನೇಟಿವಿಟಿಗೆ ತಕ್ಕಂತೆ ಆ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ ವಿನಃ ಯಾವುದೇ ಕೆಟ್ಟ ಉದ್ದೇಶದಿಂದಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ರಾಮ್​ಚರಣ್-ಜಾಹ್ನವಿ 'ಪೆದ್ದಿ'ಯಲ್ಲಿ ಕೀಳು ಮಟ್ಟದ ದೃಶ್ಯ; 'ಪೆದ್ದಿ' ಸಿನಿಮಾ ನೋಡಿ ಚಿತ್ರತಂಡದ ವಿರುದ್ಧ ಪ್ರೇಕ್ಷಕ ಗರಂ; ಜಾಹ್ನವಿ ಮೈಮಾಟ ಪ್ರದರ್ಶನ ಅತಿರೇಕ ಎಂದು ವಿರೋಧ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಾಲಿವುಡ್​ ಜಗತ್ತು ಈಗ ವಿವಾದದ ಗೂಡಾಗಿದೆ. ರಣ್ವೀರ್​​​ ಸಿಂಗ್​​​​​​ರನ್ನ ಚಿತ್ರರಂಗದಿಂದ ದೂರ ಇಟ್ಟಿದ್ದು, ಸಲ್ಲು ವಿರುದ್ಧ ನಿರ್ಮಾಪಕರೊಬ್ಬರು ನೋಟೀಸ್ ಕೊಟ್ಟಿದ್ದು, ಈಗ ಹಾಟ್​ ಬ್ಯೂಟಿ ಜಾನ್ವಿ ಕಪೂರ್​​​​​​​​ ಬಗ್ಗೆ ಹೊರ ಬರುತ್ತಿರೋ ಪೆದ್ದಿಯ ಪದಗಳು ವಿವಾದ ಎಬ್ಬಿಸಿವೆ. ಪೆದ್ದಿಯಲ್ಲಿ ತೆರೆ ಮೇಲೆ ಜಾನ್ವಿಯನ್ನ ಕಂಡ ಪ್ರೇಕ್ಷಕರು ಚಿತ್ರತಂಡದ ಕೆಂಡಾಮಂಡಲ ಆಗಿದ್ದಾರೆ. ಅಷ್ಟಕ್ಕೂ ಆಗಿದ್ದೇನು ನೋಡೋಣ ಬನ್ನಿ..

ಪೆದ್ದಿಯಲ್ಲಿ ಶ್ರೀದೇವಿ ಪುತ್ರಿ ಬಗ್ಗೆ ಕೆಟ್ಟ ಪದ ಬಳಸಿದ್ರಾ ಡೈರೆಕ್ಟರ್?

'ಪೆದ್ದಿ' ಸಿನಿಮಾ ನೋಡಿ ಚಿತ್ರತಂಡದ ವಿರುದ್ಧ ಪ್ರೇಕ್ಷಕ ಗರಂ; ಜಾನ್ವಿ ಮೈಮಾಟ ಪ್ರದರ್ಶನ ಅತಿರೇಕ ಎಂದು ವಿರೋಧ!

ಟಾಲಿವುಡ್‌ನ ಖ್ಯಾತ ನಟ ರಾಮ್ ಚರಣ್ ನಟನೆಯ ಪೆದ್ದಿ ಸಿನಿಮಾ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಾಣಿದೆ. ಆದರೆ ಸಿನಿಮಾಗಿಂತ ನಟಿ ಜಾನ್ವಿ ಬಗ್ಗೆಯೇ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಪೆದ್ದಿ ಮೂಲಕ ಸೌತ್‌ಗೆ ಗ್ರಾಂಡ್ ಎಂಟ್ರಿ ಕೊಟ್ಟಿದ್ದ ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ ಲುಕ್ ಈಗ ಭಾರಿ ವಿವಾದ ಹುಟ್ಟಿಸಿದೆ. ಸಿನಿಮಾದಲ್ಲಿ ಜಾನ್ವಿ ಅವರ ಅತಿರೇಕದ ಗ್ಲಾಮರ್ ಪ್ರದರ್ಶನ ಮತ್ತದರ ವೈಭವೀಕರಣ ನೋಡಿ ಚಿತ್ರತಂಡದ ವಿರುದ್ಧ ಜನ ಕಿಡಿಕಾರುತ್ತಿದ್ದಾರೆ.

ನಿರ್ದೇಶಕರು ಸಿನಿಮಾದಲ್ಲಿ ಜಾನ್ವಿ ಕಪೂರ್ ನಟನೆಗಿಂತ ಅವರ ಮೈಮಾಟದ ಮೇಲೆಯೇ ಹೆಚ್ಚು ಗಮನ ಹರಿಸಿದ್ದಾರೆ. ನಾಯಕಿಯ ಮುಖ ತೋರಿಸುವ ಮುನ್ನವೇ ಕ್ಯಾಮರಾವನ್ನು ನೇರವಾಗಿ ಅವರ ಎದೆ ಹಾಗೂ ಸೊಂಟದ ಮೇಲೆ ಗುರಿ ಇಟ್ಟಿದ್ದಾರೆ. ಮಹಿಳೆಯರ ದೇಹವನ್ನು ಈ ರೀತಿಯ ಅತಿರೇಕದ ಆಕ್ಸಿಫಿಕೇಶನ್ ಮಾಡಿರೋದನ್ನು ನೋಡಿ ಪ್ರೇಕ್ಷಕ ಈಗ ಚಿತ್ರತಂಡಕ್ಕೆ ಛೀ ಥೂ ಅಂತ ಉಗಿಯುತ್ತಿದ್ದಾರೆ.

ರಾಮ್​ ಚರಣ್​​-ಜಾನ್ವಿಯ ಪೆದ್ದಿಯಲ್ಲಿ ಕೀಳು ಮಟ್ಟದ ಮೇಕಿಂಗ್; ಪೆದ್ದಿ ಸಿನಿಮಾದಲ್ಲಿ ಶ್ರೀದೇವಿ ಮಗಳ ಎದೆ ಸೊಂಟವೇ ಹೈಲೆಟ್..!

ಈ ಗ್ಲಾಮರ್ ವಿವಾದ ಕೇವಲ ಪ್ರೇಕ್ಷಕರಿಗೆ ಮಾತ್ರ ಸೀಮಿತವಾಗದೆ ಸೆಲೆಬ್ರಿಟಿಗಳ ಮಟ್ಟಕ್ಕೂ ತಲುಪಿದೆ. ಖ್ಯಾತ ಗಾಯಕಿ ಸುಮಂಗಲಿ ಅವರು ಪೆದ್ದಿ ಚಿತ್ರತಂಡದ ಈ ಕೀಳುಮಟ್ಟದ ಮೇಕಿಂಗ್ ವಿರುದ್ಧ ತೀವ್ರವಾಗಿ ಹರಿಹಾಯ್ದಿದ್ದಾರೆ. ಕೇವಲ ಕಮರ್ಷಿಯಲ್ ಹಿಟ್ ಉದ್ದೇಶದಿಂದ ನಾಯಕಿಯ ಎದೆ ಮತ್ತು ಸೊಂಟವನ್ನು ಈ ರೀತಿ ಅಸಹ್ಯವಾಗಿ ತೋರಿಸಿದ್ದಕ್ಕೆ ನಿರ್ದೇಶಕರು ಹಾಗೂ ಚಿತ್ರತಂಡವನ್ನು ಸುಮಂಗಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಜಾನ್ವಿ ಮೈಮಾಟ ಪ್ರದರ್ಶನ, ಸಿಟ್ಟಿಗೆದ್ದ ಕನ್ನಡ ನಟಿ ಆಶಿಕಾ..!

ಪೆದ್ದಿ ಸಿನಿಮಾದಲ್ಲಿ ಅಚ್ಚಿಯಮ್ಮ ಎಂಬ ಪಾತ್ರದಲ್ಲಿ ನಟಿಸಿರೋ ಜಾನ್ವಿ ಕಪೂರ್ ತನ್ನ ಕೈ ಮೀರಿ ಪಾತ್ರಕ್ಕೆ ಜೀವ ತುಂಬಿದಂತಿದೆ. ಆದ್ರೆ ಆಕೆಯ ರೋಲ್​​ಅನ್ನ ಚಿತ್ರಿಸಿರುವ ಪರಿಗೆ ಸ್ಯಾಂಡಲ್​ವುಡ್​ ನಟಿ ಆಶಿಕಾ ರಂಗನಾಥ್ ಕೂಡ ಗರಂ ಆಗಿದ್ದಾರೆ. ಇಲ್ಲಿ "ನಟಿಯನ್ನು ದೂಷಿಸಬೇಡಿ. ಇವತ್ತಿಗೂ ಜನ ಇದನ್ನೇ ಕೇಳ್ತಾರೆ ಎಂದು ಭಾವಿಸಿರುವ ವ್ಯವಸ್ಥೆಯನ್ನು, ಫಿಲ್ಮ್ ಮೇಕರ್ಸ್ ಅನ್ನು ದೂಷಿಸಿ. ಕಲಾವಿದರು ಹೆಚ್ಚಾಗಿ ತಮಗೆ ಲಭ್ಯವಿರುವ ಅವಕಾಶಗಳೊಳಗೆ ಕೆಲಸ ಮಾಡುತ್ತಾರೆ. ದೊಡ್ಡ ಚಿತ್ರಗಳ ಭಾಗವಾಗಲು ಮತ್ತು ವಿಶಾಲ ಪ್ರೇಕ್ಷಕರನ್ನು ತಲುಪಲು ಆಶಿಸುತ್ತಾರೆ. ಮಹಿಳಾ ಪಾತ್ರಗಳನ್ನು ಸರಿಯಾಗಿ ಬರೆದಿಲ್ಲ ಎಂದು ಭಾವಿಸಿದರೆ, ಆ ಪಾತ್ರಗಳನ್ನು ನಿರ್ವಹಿಸುವ ಮಹಿಳೆಯರಿಗಿಂತ ಅದರ ಬರವಣಿಗೆ ಹಾಗೂ ಫಿಲ್ಮ್ ಮೇಕರ್ಸ್ ಆಯ್ಕೆಯೇ ಅದಕ್ಕೆಲ್ಲಾ ಕಾರಣ ಎಂದು ಆಶಿಕಾ ಬರೆದುಕೊಂಡು ಜಾನ್ವಿ ಕಪೂರ್​ಗೆ ಬೆಂಬಲ ಕೊಟ್ಟಿದ್ದಾರೆ.

ಇಷ್ಟೆಲ್ಲಾ ವಿವಾದ ಎದ್ದು ಪರಿಸ್ತಿತಿ ಕೈಮೀರುತ್ತಿದ್ದಂತೆ ಎಚ್ಚೆತ್ತುಕೊಂಡ ಪೆದ್ದಿ ಸಿನಿಮಾ ನಿರ್ದೇಶಕ ಬುಚ್ಚಿಬಾಬು ಸನಾ ಈಗ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ಕಥೆಯ ಡಿಮ್ಯಾಂಡ್ ಹಾಗೂ ಹಳ್ಳಿಯ ನೇಟಿವಿಟಿಗೆ ತಕ್ಕಂತೆ ಆ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ ವಿನಃ ಯಾವುದೇ ಕೆಟ್ಟ ಉದ್ದೇಶದಿಂದಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ಮೆಗಾ ಕಾಂಟ್ರವರ್ಸಿಗೆ ಬ್ರೇಕ್ ಹಾಕುವ ಪ್ರಯತ್ನ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ನೋಡಿ...