- Home
- Life
- Relationship
- ಆಮೀರ್ ಖಾನ್‌ಗೆ ಮುಸ್ಲಿಂ ಮಹಿಳೆ ಮೇಲೆ ಲವ್ ಯಾಕಾಗಲ್ಲ? ರಹಸ್ಯ ಬಿಚ್ಚಿಟ್ಟ ವಕೀಲೆ ನಾಜಿಯಾ ಖಾನ್
ಆಮೀರ್ ಖಾನ್‌ಗೆ ಮುಸ್ಲಿಂ ಮಹಿಳೆ ಮೇಲೆ ಲವ್ ಯಾಕಾಗಲ್ಲ? ರಹಸ್ಯ ಬಿಚ್ಚಿಟ್ಟ ವಕೀಲೆ ನಾಜಿಯಾ ಖಾನ್
61ನೇ ವಯಸ್ಸಿನಲ್ಲಿ ನಟ ಆಮೀರ್ ಖಾನ್ ಮೂರನೇ ಬಾರಿಗೆ ಹಿಂದೂ ಮಹಿಳೆಯನ್ನೇ ಮದುವೆಯಾಗುತ್ತಿರುವುದು ಚರ್ಚೆಗೆ ಕಾರಣವಾಗಿದೆ. ಅವರ ಹಿಂದಿನ ಇಬ್ಬರು ಪತ್ನಿಯರೂ ಹಿಂದೂಗಳಾಗಿದ್ದು, ಇದರ ಹಿಂದೆ ಸಂಚಿದೆಯೇ ಎಂದು ಸುಪ್ರೀಂಕೋರ್ಟ್ ವಕೀಲೆ ನಾಜಿಯಾ ಖಾನ್ ಪ್ರಶ್ನಿಸಿದ್ದು, ಈ ಬೆಳವಣಿಗೆಯನ್ನು ವಿಶ್ಲೇಷಿಸಲಾಗಿದೆ.

ಮೂರನೆ ಬಾರಿ ಹಿಂದೂ ಮಹಿಳೆ ಮದ್ವೆ
61ನೇ ವಯಸ್ಸಿನಲ್ಲಿ ನಟ ಆಮೀರ್ ಖಾನ್ ಮೂರನೆಯ ಬಾರಿ ಹಿಂದೂ ಮಹಿಳೆಯನ್ನೇ ಮದುವೆಯಾಗುತ್ತಿರುವುದು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಮೊದಲ ಮತ್ತು ಎರಡನೆಯ ಪತ್ನಿ ಕೂಡ ಹಿಂದೂ. ಈಗ ಲವ್ ಆಗಿರುವುದೂ ಹಿಂದೂ ಮೇಲೆ. ಹೀಗ್ಯಾಕೆ ಎನ್ನುವ ಪ್ರಶ್ನೆ ಹಲವರನ್ನು ಕಾಡುತ್ತಿದೆ.
ವಕೀಲೆ ನಾಜಿಯಾ ಖಾನ್
ಇದಾಗಲೇ ಮುಸ್ಲಿಂ ಸಮುದಾಯದ ಬಗ್ಗೆ ಹಲವಾರು ಕಾಂಟ್ರವರ್ಸಿ ಹೇಳಿಕೆಗಳನ್ನು ದಾಖಲೆ ಸಹಿತ ಬಿಚ್ಚಿಟ್ಟು, ಜಾಲತಾಣದಲ್ಲಿ ಹಲ್‌ಚಲ್ ಸೃಷ್ಟಿಸುತ್ತಿರುವ ಸುಪ್ರೀಂಕೋರ್ಟ್ ವಕೀಲೆ ನಾಜಿಯಾ ಖಾನ್ ಇದೀಗ ಆಮೀರ್ ಖಾನ್ ರಸಹ್ಯವನ್ನು ಬಿಚ್ಚಿಟ್ಟಾರೆ.
ಯಾವ ಸಂಚು ಇದೆ?
ಮೊದಲ ಪತ್ನಿ ರೀನಾ ದತ್ತಾ. ಎರಡನೆಯ ಪತ್ನಿ ಕಿರಣ್ ರಾವ್. ಮೂರನೆಯ ಪತ್ನಿ ಗೌರಿ. ಅಂದರೆ ಮೂವರೂ ಹಿಂದೂಗಳೇ. ಇದನ್ನು ನೋಡಿದ್ರೆ ಇದರ ಹಿಂದೆ ಯಾವ ರೀತಿಯ ಸಂಚು ಇದೆ ಎಂದು ಗೊತ್ತಾಗಲ್ವೆ ಎಂದು ಪ್ರಶ್ನಿಸಿರೋ ನಾಜಿಯಾ, ಮೂರನೆಯ ಪತ್ನಿಗೂ ಒಂದು ಖಾನ್ ಮಗು ಜನಿಸಿದ ಮೇಲೆ ನಾಲ್ಕನೆಯ ಹಿಂದೂ ಹುಡುಗಿಯನ್ನು ಹುಡುಕುತ್ತಾರೆ ಬೇಕಿದ್ರೆ ನೋಡಿ ಎಂದು ಹೇಳಿದ್ದಾರೆ.
ಮುಸ್ಲಿಂ ಮಹಿಳೆ ಒಬ್ಬಳೂ ಸಿಗಲಿಲ್ವಾ?
ಆಮೀರ್ ಖಾನ್ ಅವರಿಗೆ ಮುಸ್ಲಿಮ್ ಸಮುದಾಯದ ಬಹುದೊಡ್ಡ ಬೆಂಬಲವಿದೆ. ಹೇಳಿ ಕೇಳಿ ನಟ. ಮುಸ್ಲಿಮ್ ದೇಶಗಳಿಗೂ ಸಾಕಷ್ಟು ಸುತ್ತುತ್ತಾರೆ. ಅಲ್ಲಿಯೂ ಅಭಿಮಾನಿಗಳು ಇದ್ದಾರೆ. ಹಾಗಿದ್ರೆ ಲವ್ ಮಾಡಲು ಒಬ್ಬಳೇ ಒಬ್ಬಳು ಮುಸ್ಲಿಂ ಮಹಿಳೆ ಯಾಕೆ ಸಿಗಲ್ಲ ಎನ್ನುವುದು ನಾಜಿಯಾ ಖಾನ್ ಪ್ರಶ್ನೆ. ಇವೆಲ್ಲವೂ ಪ್ಲ್ಯಾನ್ ಎನ್ನುವುದು ತಿಳಿಯುವುದಿಲ್ಲವೆ ಎಂದು ಪ್ರಶ್ನಿಸಿದ್ದಾರೆ.
ಖಾನ್ ನಟರ ಹಿಂದೂ ಪತ್ನಿ ಮೋಹ!
ಇದಾಗಲೇ ಶಾರುಖ್ ಖಾನ್ ಕೂಡ ಗೌರಿ ಅವರನ್ನು ಮದುವೆಯಾಗಿದ್ದಾರೆ. ಸದ್ಯ ಅವರು ಇನ್ನೂ ಗೌರಿ ಅವರ ಜೊತೆಯೇ ಇದ್ದಾರೆ ಎನ್ನುವುದು ನೆಮ್ಮದಿಯ ಸಂಗತಿ. ಇನ್ನೋರ್ವ ಖಾನ್ ನಟ ಸಲ್ಮಾನ್ ಖಾನ್ ತಮ್ಮ ಜೊತೆ ಸಂಬಂಧ ಹೊಂದಿ ಕೈಕೊಟ್ಟರು ಎಂದು ಇದಾಗಲೇ ಕೆಲವು ಹಿಂದೂ ನಟಿಯರು ಹೇಳಿಕೊಂಡದ್ದು ಇದೆ. ಆದ್ರೆ ಇವೆಲ್ಲಾ ಅಂತೆ ಕಂತೆಗಳು ಬಿಡಿ. ಆದರೆ ಸದ್ಯ ಆಮೀರ್ ಖಾನ್ ಮಾತ್ರ ಮೂರನೆಯ ಬಾರಿ ಹಿಂದೂ ಮಹಿಳೆಯನ್ನು ಮದ್ವೆಯಾಗಿ ಸದ್ದು ಮಾಡುತ್ತಿದ್ದಾರೆ.
14 ವರ್ಷಗಳ ಅಂತರ
ಅಂದ ಹಾಗೆ, ಆಮೀರ್ ಖಾನ್ ಹಾಗೂ ಅವರ ಭಾವಿ ಪತ್ನಿ ಗೌರಿ ಸ್ಪ್ರ್ಯಾಟ್ ನಡುವಿನ 14 ವರ್ಷಗಳ ವಯಸ್ಸಿನ ಅಂತರವಿದೆ. ಅಂದಹಾಗೆ ಇವರ ಮದುವೆ ಜುಲೈ 5ರಂದು ನಡೆಯಲಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

