ಶುಭಾ ಪೂಂಜಾ ಶೂಟಿಂಗ್ ಸೆಟ್‌ನಲ್ಲಿ ಹೇಗಿರ್ತಾರೆ? ಕಾಮಿಡಿ ಕಿಲಾಡಿ ಬಿಚ್ಚಿಟ್ಟ ಸತ್ಯ ಏನು?
ನಟಿ ಶುಭಾ ಪೂಂಜಾ 'ಕಾಮಿಡಿ ಕಿಲಾಡಿಗಳು' ವೇದಿಕೆಯಲ್ಲಿ ಕೋಳಿ ಕಳ್ಳ ಖ್ಯಾತಿಯ ಮನು ಜೊತೆ ನಟಿಸಿದ್ದಾರೆ. ಅವರ ಸರಳತೆಗೆ ಸಹನಟ ಮನು ಮನಸೋತರೆ, ಹಿರಿಯ ನಟ ಜಗ್ಗೇಶ್ ಅವರ ನಟನೆ ಹಾಗೂ ಕಲಿಯುವ ಆಸಕ್ತಿಯನ್ನು ಮೆಚ್ಚಿಕೊಂಡಿದ್ದಾರೆ.

ಶುಭಾ ಪೂಂಜಾ
ಮೊಗ್ಗಿನ ಮನಸ್ಸಿನ ಚೆಲುವೆ ಶುಭಾ ಪೂಂಜಾ ಸದ್ಯ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನಲ್ಲಿ ಭಾಗಿಯಾಗುತ್ತಿದ್ದಾರೆ. ದೇಹದ ತೂಕ ಇಳಿಸಿಕೊಂಡು ಶುಭಾ ಪೂಂಜಾ ಅವರನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.
ಕಾಮಿಡಿ ಕಿಲಾಡಿ ಕೋಳಿ ಕಳ್ಳ ಖ್ಯಾತಿಯ ಮನು
ಈ ವಾರ ಕಾಮಿಡಿ ಕಿಲಾಡಿ ಕೋಳಿ ಕಳ್ಳ ಖ್ಯಾತಿಯ ಮನು ಜೊತೆ ಶುಭಾ ಪೂಂಜಾ ವೇದಿಕೆ ಹಂಚಿಕೊಂಡಿದ್ದರು. ಈಗಾಗಲೇ ಹಲವು ಸಿನಿಮಾಗಳಲ್ಲಿ ನಟಿಸಿ ತಮ್ಮದೇ ಆದ ಜನಪ್ರಿಯತೆ ಪಡೆದುಕೊಂಡಿರುವ ಶುಭಾ ಪೂಂಜಾ ತಮ್ಮೊಂದಿಗೆ ಹೇಗೆ ಡ್ರಾಮಾ ಪ್ರ್ಯಾಕ್ಟಿಸ್ ಮಾಡಿದ್ರು ಎಂಬುದನ್ನು ಮನು ಹಂಚಿಕೊಂಡರು.
ಸರಳ ಜೀವಿ
ಡ್ರಾಮಾ ಎಲ್ಲಾ ತೀರ್ಮಾನವಾದಾಗ ಶುಭಾ ಅವರೊಂದಿಗೆ ನಟಿಸಬೇಕೆಂದು ಹೇಳಿದರು. ನಟಿಯಾಗಿರುವ ಶುಭಾ ಅವರು ಪ್ರ್ಯಾಕ್ಟಿಸ್‌ಗೆ ಬರ್ತಾರಾ? ಬಂದ್ರೆ ಎಷ್ಟು ದಿನ ಅಂತೆಲ್ಲಾ ಚಿಂತೆಯಾಗಿತ್ತು. ಆದ್ರೆ ಶುಭಾ ಪೂಂಜಾ ಯಾವುದೇ ಸ್ಟಾರ್ ನಟಿ ಎಂದು ತೋರಿಸಿಕೊಳ್ಳಲಿಲ್ಲ. ನಾವು ಸೆಟ್‌ನ ಯಾವುದೇ ಮೂಲೆಯಲ್ಲಿ ಕುಳಿತ್ರೂ ಅಲ್ಲಿಯೇ ಬಂದು ಮೂರು ದಿನ ಪ್ರ್ಯಾಕ್ಟಿಸ್ ಮಾಡುತ್ತಿದ್ದರು. ಶುಭಾ ಅವರು ತುಂಬಾ ಸರಳ ಜೀವಿ ಎಂದು ಮನು ಹೇಳಿದರು.
ಶುಭಾ ಪೂಂಜಾ
ನಾನು ಯಾವತ್ತೂ ವೇದಿಕೆ ಮೇಲೆ ಕಾಮಿಡಿ ಪಾತ್ರವನ್ನು ಮಾಡಿರಲಿಲ್ಲ. ನನಗೆ ಫೋನ್ ಮಾಡಿ ಹೇಳಿದಾಗ ನಾನು ಕೂಡಲೇ ಒಪ್ಪಿಕೊಂಡೆ. ಈ ಆಕ್ಟ್‌ನಲ್ಲಿ ನನ್ನದು ಚಿಕ್ಕ ಪಾತ್ರವಾಗಿತ್ತು. ಇವರೆದೆಲ್ಲಾ ತುಂಬಾ ದೊಡ್ಡ ಪಾತ್ರವಾಗಿತ್ತು. ಇವರೊಂದಿಗೆ ವೇದಿಕೆ ಹಂಚಿಕೊಂಡಿದ್ದಕ್ಕೆ ತುಂಬಾ ಖುಷಿಯಾಯ್ತು ಎಂದು ಶುಭಾ ಪೂಂಜಾ ಹೇಳಿಕೊಂಡರು.
ಇದನ್ನೂ ಓದಿ: ವೀಕ್ಷಕರ ಬೇಸರಕ್ಕೆ ಕಾರಣವಾದ ಸಿದ್ದೇಗೌಡ-ಭಾವನಾ ಗೃಹಪ್ರವೇಶ; ಯಾಕಿಷ್ಟು ಮಿಸ್‌ಟೇಕ್?
ಜಗ್ಗೇಶ್ ಮೆಚ್ಚುಗೆ
ಶುಭಾ ಪೂಂಜಾ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಹಿರಿಯ ನಟ ಜಗ್ಗೇಶ್, ವೇದಿಕೆ ಮೇಲೆ ಬಂದು ಶುಭಾ ಪೂಂಜಾ ತಾನು ಕಲಾವಿದೆ ಎಂಬುದನ್ನು ಸಾಬೀತು ಮಾಡಿದರು. ಶುಭಾ ಅವರಲ್ಲಿ ಕಲಿಯುವ ಆಸಕ್ತಿ ಇದೆ. ಕಲಾವಿದರಲ್ಲಿ ಕಲಿಯುವ ಆಸಕ್ತಿ ಇದ್ರೆ ಮಾತ್ರ ಮುಂದೆ ಬರಲು ಸಾಧ್ಯವಾಗುತ್ತದೆ ಎಂದು ಜಗ್ಗೇಶ್ ಹೇಳಿದರು.
ಇದನ್ನೂ ಓದಿ: BBK 12: ರಕ್ಷಿತಾ ಆಟದ ನಿಗೂಢ ತಂತ್ರಗಾರಿಕೆ ಬಿಚ್ಚಿಟ್ಟ ಧ್ರುವಂತ್‌ಗೆ ಫಿದಾ ಆದ್ರು ಗಿಲ್ಲಿ ಫ್ಯಾನ್ಸ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

