- Home
- Entertainment
- TV Talk
- BBK 12: ರಕ್ಷಿತಾ ಆಟದ ನಿಗೂಢ ತಂತ್ರಗಾರಿಕೆ ಬಿಚ್ಚಿಟ್ಟ ಧ್ರುವಂತ್‌ಗೆ ಫಿದಾ ಆದ್ರು ಗಿಲ್ಲಿ ಫ್ಯಾನ್ಸ್
BBK 12: ರಕ್ಷಿತಾ ಆಟದ ನಿಗೂಢ ತಂತ್ರಗಾರಿಕೆ ಬಿಚ್ಚಿಟ್ಟ ಧ್ರುವಂತ್‌ಗೆ ಫಿದಾ ಆದ್ರು ಗಿಲ್ಲಿ ಫ್ಯಾನ್ಸ್
ಸೀಕ್ರೆಟ್ ರೂಮ್‌ನಲ್ಲಿದ್ದ ಧ್ರುವಂತ್, ರಕ್ಷಿತಾ ಅವರ ಆಟದ ತಂತ್ರಗಾರಿಕೆಯನ್ನು ವೀಕೆಂಡ್ ಸಂಚಿಕೆಯಲ್ಲಿ ಬಹಿರಂಗಪಡಿಸಿದ್ದಾರೆ. ಫಿನಾಲೆಯಲ್ಲಿ ಗಿಲ್ಲಿ ಜೊತೆಗಿರಲು ರಕ್ಷಿತಾ, ಕಾವ್ಯಾ ಮತ್ತು ಸ್ಪಂದನಾ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಧ್ರುವಂತ್ ವಿವರಿಸಿದರು.

ಈ ರೀತಿಯಾಗಿಯೂ ಉಂಟಾ?
ಸೀಕ್ರೆಟ್ ರೂಮ್‌ನಲ್ಲಿ ರಕ್ಷಿತಾ ಜೊತೆಯಲ್ಲಿಯೇ ಒಂದು ವಾರ ಕಳೆದ ಧ್ರುವಂತ್ ವೀಕೆಂಡ್ ಸಂಚಿಕೆಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಇದೇ ವೇಳೆ ಸಹ ಸ್ಪರ್ಧಿಯಾಗಿದ್ದ ರಕ್ಷಿತಾ ಅವರ ಆಟದ ತಂತ್ರಗಾರಿಕೆ ಹೇಗಿದೆ ಎಂಬುದನ್ನು ವಿವರಿಸಿದರು. ಧ್ರುವಂತ್ ಮಾತುಗಳನ್ನು ಕೇಳಿದ ಗಿಲ್ಲಿ ಫ್ಯಾನ್ಸ್ ಈ ರೀತಿಯಾಗಿಗೂ ಉಂಟಾ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ರಕ್ಷಿತಾ ತಂತ್ರಗಾರಿಕೆ ಯಾಕೆ ಆ ರೀತಿಯಾಗಿತ್ತು?
ಸೀಕ್ರೆಟ್ ರೂಮ್‌ನಲ್ಲಿದ್ರೂ ಬಿಗ್‌ಬಾಸ್ ಮನೆಯಲ್ಲಿ ನಡೆಯುವ ಎಲ್ಲಾ ಟಾಸ್ಕ್‌ಗಳಲ್ಲಿ ರಕ್ಷಿತಾ ಮತ್ತು ಧ್ರುವಂತ್ ಭಾಗವಾಗಿದ್ದರು. ಟೀಂ ರಚನೆ ಸೇರಿದಂತೆ ಹಲವು ನಿರ್ಧಾರಗಳನ್ನು ಇಬ್ಬರು ಒಮ್ಮತದಿಂದ ಪ್ರಕಟಿಸಬೇಕು. ಬಹುತೇಕ ತಾನು ಹೇಳಿದಂತೆ ನಡೆಯಬೇಕೆಂದು ರಕ್ಷಿತಾ ಹಠ ಹಿಡಿದಿದ್ದರು. ಈ ವೇಳೆ ರಕ್ಷಿತಾ ತಂತ್ರಗಾರಿಕೆ ಯಾಕೆ ಆ ರೀತಿಯಾಗಿತ್ತು ಎಂಬುದನ್ನು ಸುದೀಪ್ ಅವರ ಮುಂದೆ ಧ್ರುವಂತ್ ವಿವರಿಸಿದ್ದಾರೆ.
ಧ್ರುವಂತ್ ಹೇಳಿದ್ದೇನು?
ಫಿನಾಲೆಯಲ್ಲಿ ಗಿಲ್ಲಿ ಜೊತೆ ನಾನಿರುತ್ತೇನೆ ಎಂದು ರಕ್ಷಿತಾ ಫಿಕ್ಸ್ ಆಗಿದ್ದಾರೆ. ಹಾಗಾಗಿ ಗಿಲ್ಲಿ ಜೊತೆಯಲ್ಲಿ ಯಾರಾದ್ರು ಇದ್ರೆ ಅದು ತನ್ನಾಟಕ್ಕೆ ತೊಂದರೆ ಎಂದು ರಕ್ಷಿತಾ ತಿಳಿದುಕೊಂಡಿದ್ದಾರೆ. ಹಾಗಾಗಿ ಗಿಲ್ಲಿಯೊಂದಿಗಿರುವ ಕಾವ್ಯಾ ಮತ್ತು ಸ್ಪಂದನಾ ಅವರನ್ನು ಟಾರ್ಗೆಟ್ ಮಾಡ್ತಾರೆ. ಇವರಿಬ್ಬರು ಗಿಲ್ಲಿ ಜೊತೆಯಲ್ಲಿದ್ರೆ ರಕ್ಷಿತಾಗೆ ತೊಂದರೆ ಎಂದು ಧ್ರುವಂತ್ ಹೇಳುತ್ತಾರೆ.
ಮನೆಯವರ ನಿರ್ಧಾರ ಪ್ರಶ್ನೆ
ಕಾವ್ಯಾ ಶೈವ ಅವರನ್ನು ಕ್ಯಾಪ್ಟನ್ ಆಗಿ ಆಯ್ಕೆ ಮಾಡಿದ ಮನೆಯವರ ನಿರ್ಧಾರವನ್ನು ರಕ್ಷಿತಾ ಪ್ರಶ್ನೆ ಮಾಡಿದರು. ಸೂರಜ್ ಕ್ಯಾಪ್ಟನ್ ಆಗಬಾರದು ಎಂಬ ಉದ್ದೇಶದಿಂದ ಕಾವ್ಯಾ ಅವರನ್ನು ಆಯ್ಕೆ ಮಾಡಲಾಯ್ತು ಎಂದು ಹೇಳಿದರು. ರಕ್ಷಿತಾ ಮಾತುಗಳನ್ನು ಮನೆಯ ಎಲ್ಲಾ ಸದಸ್ಯರು ಒಕ್ಕೊರಲಿನಿಂದ ಖಂಡಿಸಿದರು.
ಇದನ್ನೂ ಓದಿ: BBK 12: ನೋಡಿದ್ದು, ಕೇಳಿದ್ದು ಸುಳ್ಳಾಗಬಹುದು: ಬಿಗ್‌ಬಾಸ್ ಸೀಸನ್ 12ರಲ್ಲಿ ರೋಚಕ ತಿರುವು
ಸುದೀಪ್ ಕ್ಲಾಸ್
ಈ ವೇಳೆ ಮಧ್ಯೆ ಪ್ರವೇಶಿಸಿದ ಸುದೀಪ್, ಎಲ್ಲಾ ವಿಚಾರದಲ್ಲಿಯೂ ನಿಮ್ಮದೇ ಸರಿ ಅನ್ನೋದು ತಪ್ಪು. ಬೇರೆಯವರ ಅಭಿಪ್ರಾಯವನ್ನು ನೀವು ಅವಮಾನಗೊಳಿಸುತ್ತಿದ್ದರು ಎಂದರು. ಈ ಮೂಲಕ ರಕ್ಷಿತಾ ಶೆಟ್ಟಿ ಅವರ ಏಕಪಕ್ಷೀಯ ಹೇಳಿಕೆಗಳನ್ನು ಸುದೀಪ್ ಖಂಡಿಸಿದರು.
ಇದನ್ನೂ ಓದಿ: BBK 12: ಧ್ರುವಂತ್‌ಗೆ ಸವಾಲು ಹಾಕಿದ ರಕ್ಷಿತಾ ಶೆಟ್ಟಿ; ನಗೋದಲ್ಲ, ಆಕೆ ಮರಿ ರಾಕ್ಷಸಿ ಎಂದ ಫ್ಯಾನ್ಸ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

