2000ನೇ ಇಸವಿಯ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ, ಏಂಜಲಿನಾ ಜೋಲಿ ಪುರುಷನೊಬ್ಬನಿಗೆ ವೇದಿಕೆಯಲ್ಲಿ ನೀಡಿದ ಆ ಒಂದು ಲಿಪ್ ಟು ಲಿಪ್ ಕಿಸ್ ದೊಡ್ಡ ವಿವಾದವೇ ಸೃಷ್ಟಿಸಿತು. ಆಕೆ ಕಿಸ್ ಕೊಟ್ಟಿದ್ದು ಯಾರಿಗೆ, ಏನಿದು ವಿವಾದ? ಕತೆ ಇಲ್ಲಿದೆ.
ಇಲ್ಲೊಂದು ಫೋಟೋ ಇದೆ. ನೋಡಿದರೆ, ಯಾರೋ ಪ್ರೇಮಿಗಳು ಮುದ್ದಾಡುತ್ತಿರುವಂತೆ ಕಾಣಬಹುದಲ್ಲವೇ? ಆದರೆ ಅವರಿಬ್ಬರೂ ಪ್ರೇಮಿಗಳಲ್ಲ. ಒಬ್ಬಳು ವಿಶ್ವಖ್ಯಾತ ನಟಿ ಏಂಜಲಿನಾ ಜೋಲಿ. ಜೊತೆಗಿರೋನು ಆಕೆಯ ಅಣ್ಣ ಜೇಮ್ಸ್ ಹವೆನ್. ಜೋಲಿಗೆ ಅಣ್ಣ ಅಂದರೆ ಪರಮಪ್ರೀತಿ. ಆಸ್ಕರ್ ಪ್ರಶಸ್ತಿ ಪಡೆದ ಸಮಾರಂಭದ ವೇಳೆ ಅಣ್ಣನನ್ನು ತಬ್ಬಿಕೊಂಡು ಆಕೆ ಕಿಸ್ ಕೊಟ್ಟ ಕ್ಷಣ ಹೀಗಿತ್ತು. ಆದರೆ ಈ ಕಿಸ್ ಹಾಲಿವುಡ್‌ನಲ್ಲಿ ಗಾಸಿಪ್, ಮಸಾಲಾ ಮಾತುಗಳ ಅಲೆಯನ್ನೇ ಸೃಷ್ಟಿಸಿತು.
ಅದು 2000ನೇ ವರ್ಷ. ಹಾಲಿವುಡ್‌ನ ಅತ್ಯಂತ ಗೌರವಾನ್ವಿತ ವೇದಿಕೆ- ಆಸ್ಕರ್ ಪ್ರಶಸ್ತಿ ಸಮಾರಂಭ. ಆ ರಾತ್ರಿ ಸಿನೆಮಾ ಪ್ರತಿಭೆಯನ್ನು ಗೌರವಿಸುವುದಕ್ಕೆ ಉದ್ದೇಶಿತವಾಗಿತ್ತು. ಆದರೆ, ವೇದಿಕೆಯ ಹಿಂದಿನ ಒಂದು “ಅನಿರೀಕ್ಷಿತ ಕ್ಷಣ” ಮಾತ್ರ ಜಗತ್ತಿನ ಗಮನವನ್ನೇ ಕದ್ದುಕೊಂಡಿತು.
ಆ ರಾತ್ರಿ, ಯುವ ನಟಿ Angelina Jolie ತಾನು ನಟಿಸಿದ Girl, Interrupted ಸಿನಿಮಾದಲ್ಲಿನ ತನ್ನ ಅದ್ಭುತ ಅಭಿನಯಕ್ಕಾಗಿ Best Supporting Actress ಪ್ರಶಸ್ತಿಯನ್ನು ಗೆದ್ದಳು. ಅದು ಕೇವಲ ಒಂದು ಪ್ರಶಸ್ತಿ ಮಾತ್ರ ಅಲ್ಲ- ಜೋಲಿಯನ್ನು ಹಾಲಿವುಡ್‌ನ ಗಂಭೀರ ನಟಿಯಾಗಿ ಸ್ಥಾಪಿಸಿದ ಕ್ಷಣವೂ ಆಗಿತ್ತು. ಆದರೆ, ಮರುದಿನ ಪತ್ರಿಕೆಗಳ ಮೊದಲ ಪುಟದಲ್ಲಿ ಪ್ರಶಸ್ತಿಯಲ್ಲ, ಆ ಒಂದು ಕಿಸ್ ಸುದ್ದಿಯಾಗಿತ್ತು.
ಜೋಲೀ ಸಮಾರಂಭಕ್ಕೆ ತನ್ನ ಅಣ್ಣ James Havenನೊಂದಿಗೆ ಬಂದಿದ್ದಳು. ಇಬ್ಬರೂ ಕೈ ಹಿಡಿದು, ಹತ್ತಿರವಾಗಿ ನಿಂತು ಫೋಟೋಗಳಿಗೆ ಪೋಸ್ ನೀಡುತ್ತಿದ್ದರು. ಅವರ ನಡುವಿನ ಆತ್ಮೀಯತೆ ಎಲ್ಲರ ಗಮನ ಸೆಳೆಯುತ್ತಿತ್ತು. ವೇದಿಕೆಯ ಹಿಂದಕ್ಕೆ ಹೋದಾಗ, ಜೋಲೀ ತನ್ನ ಅಣ್ಣನ ತುಟಿಗಳ ಮೇಲೆ ತುಟಿ ಇಟ್ಟು ಮುತ್ತು ಕೊಟ್ಟ ಕ್ಷಣ ಕ್ಯಾಮೆರಾದಲ್ಲಿ ಸೆರೆಯಾಯಿತು. ಆ ದೃಶ್ಯ ಕ್ಷಣಾರ್ಧದಲ್ಲಿ ಜಗತ್ತಿನಾದ್ಯಂತ ಹರಡಿತು.
ಮೀಡಿಯಾಗಳು ಅದನ್ನು ಸಾಮಾನ್ಯ ಕುಟುಂಬ ಪ್ರೀತಿಯಾಗಿ ನೋಡಲಿಲ್ಲ. ಬದಲಾಗಿ ʼವಿಲಕ್ಷಣ ಆತ್ಮೀಯತೆʼ ಎಂದು ಚಿತ್ರಿಸಿದವು. ತನ್ನ ಪ್ರಶಸ್ತಿ ಸ್ವೀಕಾರ ಭಾಷಣದಲ್ಲಿ ಜೋಲೀ ಹೇಳಿದ ಒಂದು ವಾಕ್ಯ ಮೀಡಿಯಾ ಬೆಂಕಿಗೆ ತುಪ್ಪ ಸುರಿಯಿತು. “ಈ ಕ್ಷಣದಲ್ಲಿ ನಾನು ನನ್ನ ಅಣ್ಣನನ್ನು ತುಂಬ ಪ್ರೀತಿಸುತ್ತಿದ್ದೇನೆ” ಎಂದಳು ಜೋಲಿ. ಈ ಮಾತು ಮತ್ತು ಆ ಮುತ್ತಿನ ದೃಶ್ಯ ಸೇರಿ, ಹಾಲಿವುಡ್‌ನಲ್ಲಿ ಗಾಸಿಪ್ ಚಂಡಮಾರುತವನ್ನು ಎಬ್ಬಿಸಿತು.
ಅಣ್ಣ- ತಂಗಿಯ ಕಿಸ್ ಹೀಗಾ?
ಮಾಧ್ಯಮಗಳಲ್ಲಿ ಪ್ರಶ್ನೆಗಳು ಶುರುವಾದವು. ಇವರಿಬ್ಬರ ಸಂಬಂಧ ಅಷ್ಟೊಂದು ಹತ್ತಿರವೇ? ಯಾವುದೇ ಫ್ಯಾಮಿಲಿಯಲ್ಲಿ ಅಣ್ಣ- ತಂಗಿ ಹೀಗೆ ಕಿಸ್ ಮಾಡುವುದು ಸಾಧ್ಯವಾ? ಇದು ಕೇವಲ ಭಾವನಾತ್ಮಕ ಕ್ಷಣವೇ? ಅಥವಾ ಗಮನ ಸೆಳೆಯಲು ಮಾಡಿದ ಸ್ಟಂಟ್ ಆಗಿತ್ತೇ?
ವರ್ಷಗಳ ನಂತರ, James Haven ನಿಜವನ್ನು ಬಹಿರಂಗಪಡಿಸಿದ. ಈ ಘಟನೆ ನಡೆಯಉ ತುಸು ಮೊದಲು ಅವರಿಬ್ಬರ ತಾಯಿ Marcheline Bertrand ಅವರಿಗೆ ಕ್ಯಾನ್ಸರ್ ಪತ್ತೆಯಾಗಿತ್ತು. ಆ ಸಮಯದಲ್ಲಿ ಇಬ್ಬರೂ ಭಾರೀ ಎಮೋಷನಲ್ ಸ್ಥಿತಿಯಲ್ಲಿ ಇದ್ದರು. “ಅದು ಕೇವಲ ಪ್ರೀತಿ ಮತ್ತು ಎಮೋಷನಲ್ ಸಂಬಂಧದ ಕ್ಷಣವಾಗಿತ್ತು,” ಎಂದು ಅವರು ಹೇಳಿದರು.
ಜೋಲೀ ಕೂಡ ನಂತರ ಈ ವಿವಾದವನ್ನು “ಅರ್ಥವಿಲ್ಲದ, ಕ್ರೂರವಾದ ತಪ್ಪು ಅರ್ಥೈಸುವಿಕೆ” ಎಂದು ಟೀಕಿಸಿದಳು. ಜೋಲಿಗೆ ಸಿಕ್ಕ ಆಸ್ಕರ್ ಪ್ರಶಸ್ತಿ ಅವರ ಅಭಿನಯದ ಮಹತ್ವದ ಸಾಧನೆ. ಆದರೆ, ದೌರ್ಭಾಗ್ಯವಶಾತ್, ಜಗತ್ತು ಅವರ ಪ್ರತಿಭೆಯನ್ನು ಬಿಟ್ಟು ಆ ಒಂದು ಮುತ್ತಿನ ಕ್ಷಣವನ್ನು ಮಾತ್ರ ಹೆಚ್ಚು ಚರ್ಚಿಸಿತು. ಹಾಲಿವುಡ್‌ನಲ್ಲಿ ಇದು ಸಾಮಾನ್ಯ. ಹಲವೊಮ್ಮೆ ನಟಿಯ ಸಾಧನೆಗಿಂತ ಅವರ ವೈಯಕ್ತಿಕ ಕ್ಷಣಗಳೇ ಹೆಚ್ಚು ಸುದ್ದಿಯಾಗುತ್ತದೆ.
ಅಂದ ಹಾಗೆ ಏಂಜಲೀನಾ ಮತ್ತು ಬ್ರಾಡ್ ಪಿಟ್ ದಾಂಪತ್ಯದಲ್ಲಿ ಆರು ಮಕ್ಕಳಿದ್ದಾರೆ - ಮ್ಯಾಡಾಕ್ಸ್, ಪ್ಯಾಕ್ಸ್, ಜಹರಾ, ಶಿಲೋ, ವಿವಿಯೆನ್ ಮತ್ತು ನಾಕ್ಸ್. ಇಬ್ಬರದೂ 12 ವರ್ಷಗಳಿಗಿಂತ ಹೆಚ್ಚು ಕಾಲದ ಲಿವಿಂಗ್ ಟುಗೆದರ್. ಜೋಲೀ ಮತ್ತು ಪಿಟ್ ಆಗಸ್ಟ್ 14, 2014ರಂದು ವಿವಾಹವಾದರು ಮತ್ತು ಏಪ್ರಿಲ್ 12, 2019 ರಂದು ಕಾನೂನುಬದ್ಧವಾಗಿ ವಿಚ್ಛೇದನ ಪಡೆದರು. ಇದರ ಮೊದಲೂ ನಂತರವೂ ಇತರರ ಜತೆ ಇವರ ಪ್ರೇಮ ಜೀವನ ನಡೆದಿತ್ತು.


